ವಿಷಯಕ್ಕೆ ಹೋಗು

ಪ್ರಭಾಕರ ಬಲ್ವಂತ್ ದಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಭಾಕರ್ ಬಲವಂತ ದಾನಿ (1908 - 1965) (ಇವರನ್ನು ಪಿಬಿ ದಾನಿ ಅಥವ ಭಯ್ಯಾಜಿ ದಾನಿ ಎಂದೂ ಸಹ ಕರೆಯುತ್ತಾರೆ) ಭಾರತದಲ್ಲಿನ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರ್.ಎಸ್.ಎಸ್) ಸದಸ್ಯರಾಗಿದ್ದರು. ಇವರು ಸಂಸ್ಥೆಯ ಪ್ರಚಾರಕರಾಗಿ (ಪ್ರಚಾರಕರಾಗಿ, ವೈಯಕ್ತಿಕ ಸಂಪರ್ಕ, ಸಭೆಗಳು ಮತ್ತು ಸಾರ್ವಜನಿಕ ಉಪನ್ಯಾಸಗಳ ಮೂಲಕ ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಹರಡುವಲ್ಲಿ ತೊಡಗಿಸಿಕೊಂಡಿದ್ದರು). ಇವರು ಆರ್‌ಎಸ್‌ಎಸ್‌ನ ಹಿರಿಯ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಮಧ್ಯಭಾರತದಲ್ಲಿ ಆರ್‌ಎಸ್‌ಎಸ್ ವಿಚಾರವನ್ನು ಹರಡುವಲ್ಲಿ ಗುರುತರವಾದ ಪಾತ್ರವನ್ನು ವಹಿಸಿದರು.

ದಾನಿ, 1908 ರಲ್ಲಿ ಬಾಂಬೆ ರಾಜ್ಯದ ನಾಗ್ಪುರ ಜಿಲ್ಲೆಯ ಉಮ್ರೆಡ್ನಲ್ಲಿ ಜನಿಸಿದರು. ಇವರು ಶ್ರೀಮಂತ ಜಮೀನುದಾರನ ಮಗನಾಗಿದ್ದರು. ಇವರು ಆರ್‌ಎಸ್‌ಎಸ್ ರಚನೆಯಾದ ಸ್ವಲ್ಪ ಸಮಯದಲ್ಲಿ ಅಂದರೆ 1925 ರಲ್ಲಿ ಸ್ವಯಂಸೇವಕರಾದರು. ಆರ್‌ಎಸ್‌ಎಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಅವರಿಂದ ಪ್ರಾರಂಭಿಸಲ್ಪಟ್ಟ ಮೊದಲ ಪ್ರಚಾರಕರ (ಪ್ರಚಾರಕರು) ವರ್ಗದಲ್ಲಿ ಒಬ್ಬರಾಗಿದ್ದರು. []

ದಾನಿ ಅವರು ಒಂದು ದಶಕಕ್ಕೂ ಮಿಗಿಲಾಗಿ ಅರ್ ಎಸ್ ಎಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು, ವಿಶೇಷವಾಗಿ ಭಾರತದ ಸ್ವಾತಂತ್ರ್ಯದ ನಿರ್ಣಾಯಕ ಸಮಯದಲ್ಲಿ ಮತ್ತು ಅರ್ ಎಸ್ ಎಸ್ ನ 1948 ರ ನಿಷೇಧದ ಸಮಯದಲ್ಲಿ. ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ 1965 ರಲ್ಲಿ ನಿಧನರಾದರು.

ಕ್ರಿಯಾಶೀಲತೆ

[ಬದಲಾಯಿಸಿ]

ವಿಶ್ವವಿದ್ಯಾನಿಲಯದ ಸಂಸ್ಥಾಪಕ ಮತ್ತು ಹಿಂದೂ ಮಹಾಸಭಾದ ನಾಯಕರಾದ ಮದನ್ ಮೋಹನ್ ಮಾಳವಿಯಾ ಅವರ ಅನುಮೋದನೆಯೊಂದಿಗೆ1930 ರ ದಶಕದ ಆರಂಭದಲ್ಲಿ ಹೆಡ್ಗೆವಾರ್ ಅವರು ದಾನಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಪ್ರಚಾರಕರಾಗಿ ಕಳುಹಿಸಿದರು. ಹೆಡ್ಗೆವಾರ್ ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯಲು ಮತ್ತು ವಿದ್ಯಾರ್ಥಿಗಳ ಸ್ಥಳೀಯ ಭಾಷೆಗಳನ್ನು ಕಲಿಯಲು ದಾನಿಗೆ ಸಲಹೆ ನೀಡಿದರು. ಇದರಿಂದಾಗಿ ಎಲ್ಲಾ ಪ್ರದೇಶಗಳ ವಿದ್ಯಾರ್ಥಿಗಳನ್ನು ಆರ್‌ಎಸ್‌ಎಸ್‌ಗೆ ಸೇರಿಸಿಕೊಳ್ಳಬಹುದಾಗಿತ್ತು. [] ದಾನಿಯಿಂದ ನೇಮಕಗೊಂಡ ಜನರಲ್ಲಿ MS ಗೋಲ್ವಾಲ್ಕರ್(ಗುರೂಜಿ) ಎಂಬ ಯುವ ಉಪನ್ಯಾಸಕರೂ ಸಹ ಇದ್ದರು, ಮುಂದೆ ಗುರೂಜಿ ಅರ್ ಎಸ್ ಎಸ್ ನ ಮುಖ್ಯಸ್ಥರಾದರು.

ದಾನಿ ಅವರು 1940-46ರ ಅವಧಿಯಲ್ಲಿ ಮಧ್ಯಭಾರತದ ಪ್ರಾಂತ ಪ್ರಚಾರಕರಾಗಿ (ಪ್ರಾಂತೀಯ ಪ್ರಚಾರಕ) ಕೆಲಸ ಮಾಡಿದರು. ಅವರು ಇಂದೋರ್‌ನ ಪ್ರಧಾನ ಕಛೇರಿಯಿಂದ ಕೆಲಸ ಮಾಡುತಿದ್ದರು. 1942 ರಲ್ಲಿ ಖಾಂಡ್ವಾದಲ್ಲಿ ನಡೆದ ಅಧಿಕಾರಿಗಳ ತರಬೇತಿ ಶಿಬಿರ(ಸಂಘ ಶಿಕ್ಷಾ ವರ್ಗ)ದಲ್ಲಿ ಅವರು ಮೊದಲ ಪ್ರಚಾರಕರ ತಂಡವನ್ನು ನೇಮಿಸಿದರು. ಅವರಲ್ಲಿ ಉಜ್ಜಯಿನಿಗೆ ಹೋದ ಮನೋಹರ್ ರಾವ್ ಮೋಘೆ, ಕುಶಾಭೌ ಠಾಕ್ರೆ ಮತ್ತು ಹರಿಭಾವು ವಾಕಂಕರ್ ರವರು ಕ್ರಮವಾಗಿ ಮಂದಸೌರ್ - ರತ್ಲಾಮ್ ವಿಭಾಗಕ್ಕೆ ಹೋದರು. ಕುಕ್ಷಿಗೆ ಮತ್ತು ಇಂದೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮೋರೇಶ್ವರ ರಾವ್ ಗಾದ್ರೆ ಅವರನ್ನು ಪ್ರಚಾರಕರನ್ನಾಗಿ ನೇಮಿಸಿದರು. ಈ ಪ್ರಚಾರಕರು ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಆರಂಭಿಕ ಅರ್ ಎಸ್ ಎಸ್ ವಿಚಾರವನ್ನು ಪಸರಿಸಿದರು. 1946 ರ ಹೊತ್ತಿಗೆ, ಹೆಡ್ಗೆವಾರ್ ಅವರ ಗುರಿಯಂತೆ, ದಾನಿ ಅವರ ತಂಡವು ಮಧ್ಯಭಾರತದ 3% ನಗರದ ಜನಸಂಖ್ಯೆ ಮತ್ತು 1% ಗ್ರಾಮೀಣ ಜನರನ್ನು ಅರ್ ಎಸ್ ಎಸ್ ವಿಚಾರಧಾರೆಗೆ ಸೇರಿಸಿದರು. [] ಉಜ್ಜಯಿನಿ ಪ್ರದೇಶದಲ್ಲಿ, 1950 ರ ಹೊತ್ತಿಗೆ ಸುಮಾರು ಅರವತ್ತು ಶಾಖಾಗಳು ಇದ್ದವು. ಇಂದೋರ್ ಪ್ರದೇಶದಲ್ಲಿ ಸರಿ ಸುಮಾರು ನೂರು ಮಂದಿ ಇದ್ದರು. []

1948 ರಲ್ಲಿ ಮಹಾತ್ಮಾ ಗಾಂಧಿ ಹತ್ಯೆಯ ನಂತರ ಆರ್‌ಎಸ್‌ಎಸ್ ನಿಷೇಧಿಗೂಂಡಿತು ಹಾಗು ಗೋಳ್ವಾಲ್ಕರ್ ಅವರನ್ನು ಜೈಲಿಗೆ ಹಾಕಿದರು. ಆರ್‌ಎಸ್‌ಎಸ್ ನಿಷೇಧದವನ್ನು ಪ್ರತಿಭಟಿಸಲು ಸತ್ಯಾಗ್ರಹಗಳನ್ನು ಮಾಡಿತು. ಸತ್ಯಾಗ್ರಹಕ್ಕಾಗಿ ಬಂಧಿತರಾದ 1,995 ಸ್ವಯಂಸೇವಕರಲ್ಲಿ 498 ಮಂದಿ ಉಜ್ಜಯಿನಿ ಜಿಲ್ಲೆಯಿಂದ, 488 ಇಂದೋರ್ ಜಿಲ್ಲೆಯಿಂದ ಮತ್ತು 209 ಶಾಜಾಪುರ ಜಿಲ್ಲೆಯವರು. ಮಧ್ಯ ಭಾರತದಲ್ಲಿ ದಾನಿ ಮತ್ತು ಅವರ ತಂಡ ಹಾಕಿದ ಬಲವಾದ ಅಡಿಪಾಯವು ನಂತರ ಈ ಪ್ರದೇಶದಿಂದ ಜನಸಂಘದ ಉದಯಕ್ಕೆ ಕಾರಣವಾಯಿತು. []

ದಾನಿ ಅವರನ್ನು 1946 ರಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ( ಸರ್ಕಾರ್ಯವಾಹ ) ನೇಮಿಸಲಾಯಿತು, ಅವರು 1956 ರವರೆಗೆ ಹಾಗೂ ಮುಂದುವರಿದು 1962 ರಿಂದ 1965 ರವರೆಗೆ ಸೇವೆ ಸಲ್ಲಿಸಿದರು. ನಿಷೇಧ ಮತ್ತು ಬಂಧನಗಳ ನಂತರ, ಅವರು ಸರ್ದಾರ್ ಪಟೇಲ್ ಅವರೊಂದಿಗೆ ಸಹೋದ್ಯೋಗಿಗಳಾದ ಏಕನಾಥ್ ರಾನಡೆ ಮತ್ತು ಬಾಳಾಸಾಹೇಬ್ ದೇವರಸ್ ಅವರೊಂದಿಗೆ ನಿಷೇಧವನ್ನು ತೆಗೆದುಹಾಕಲು ಮಾತುಕತೆ ನಡೆಸಿದರು. ಈ ಮೂವರು ಪಟೇಲರ ಅಗ್ರಹದಂತೆ ಆರ್‌ಎಸ್‌ಎಸ್‌ಗೆ ಸಂವಿಧಾನವನ್ನು ಬರೆದರು. ಅದು ನಿಷೇಧವನ್ನು ತೆಗೆದುಹಾಕಲು ಪೂರ್ವ ಷರತ್ತಾಗಿತ್ತು. ಪ್ರಾಯೋಗಿಕವಾಗಿ, ಸಂವಿಧಾನದಲ್ಲಿ ಹಾಕಲಾದ ಪ್ರಜಾಸತ್ತಾತ್ಮಕ ಕ್ರಮಗಳು ಎಂದಿಗೂ ಯಾವುದೇ ಪರಿಣಾಮವನ್ನು ಬೀರಲಿಲ್ಲ ಏಕೆಂದರೆ ಯಾವುದೇ ಚುನಾವಣೆಗಳ ಅಗತ್ಯವಿಲ್ಲದೇ ಅಭ್ಯರ್ಥಿಗಳ ನಿಖರವಾದ ಸಂಖ್ಯೆಯನ್ನು ಎಲ್ಲಾ ಹುದ್ದೆಗಳಿಗೆ ನಾಮನಿರ್ದೇಶನ ಮಾಡಲಾಯಿತು. []

ಟಿಪ್ಪಣಿಗಳು

[ಬದಲಾಯಿಸಿ]
  1. Jaffrelot 1996, p. 47.
  2. Jaffrelot 1996, pp. 65–66.
  3. Jaffrelot 1996, p. 136.
  4. Jaffrelot 2011, pp. 250.
  5. Jaffrelot 1996, pp. 137–138.
  6. Jaffrelot 1996, pp. 89–90.


ಗ್ರಂಥಸೂಚಿ

[ಬದಲಾಯಿಸಿ]

 

  • Jaffrelot, Christophe (2011). Religion, Caste, and Politics in India. C Hurst & Co. ISBN 978-1849041386.
  • Jaffrelot, Christophe (1996). The Hindu Nationalist Movement and Indian Politics. C. Hurst & Co. Publishers. ISBN 978-1850653011.

[[ವರ್ಗ:೧೯೦೮ ಜನನ]] [[ವರ್ಗ:ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಚಾರಕರು]] [[ವರ್ಗ:ಮರಣ]]