ಪ್ರಫಿಟ್ರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಫಿಟ್ರಲ್ ಅಥವಾ ಕ್ರೀಮ್ ಪಫ಼್ ಕಡೆದ ಕೆನೆ, ಪೇಸ್ಟ್ರಿ ಕೆನೆ, ಕಸ್ಟರ್ಡ್, ಅಥವಾ ಐಸ್ ಕ್ರೀಂನ ವಿಶಿಷ್ಟ ಸಿಹಿ ಹೂರಣವಿರುವ ಒಂದು ಫ಼್ರೆಂಚ್ ಶೂ ಪೇಸ್ಟ್ರಿ ಉಂಡೆ. ಪಫ಼್‍ಗಳನ್ನು ಗನಾಶ್, ಕ್ಯಾರಮೆಲ್, ಅಥವಾ ಪುಡಿ ಸಕ್ಕರೆಯ ಸಿಂಪಡಿಕೆಯಿಂದ ಅಲಂಕರಿಸಬಹುದು ಅಥವಾ ಅಲಂಕಾರರಹಿತವಾಗಿ ಬಿಡಬಹುದು. ಚೀಸ್, ತಿಳ್ಳು ಮಾಡಲಾದ ಮಾಂಸಗಳು, ಮುಂತಾದ ಹೂರಣ ತುಂಬಿದ ಉಪ್ಪುಖಾರದ ಪ್ರಫಿಟ್ರಲ್‍ಗಳನ್ನೂ ತಯಾರಿಸಲಾಗುತ್ತದೆ.