ಗನಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗನಾಶ್ ಚಾಕಲೇಟ್ ಮತ್ತು ಕೆನೆಯಿಂದ ತಯಾರಿಸಲಾದ ಒಂದು ಗ್ಲೇಜ಼್, ಐಸಿಂಗ್, ಸಾಸ್, ಅಥವಾ ಪೇಸ್ಟ್ರಿಗಳಿಗಾಗಿ ಹೂರಣ. ಗನಾಶ್ಅನ್ನು ಸಾಮಾನ್ಯವಾಗಿ ಕೆನೆಯನ್ನು ಬಿಸಿಮಾಡಿ ಯಾವುದೇ ಪ್ರಕಾರದ ಕತ್ತರಿಸಿದ ಚಾಕಲೇಟ್ ಮೇಲೆ ಸುರಿದು ತಯಾರಿಸಲಾಗುತ್ತದೆ. ಈ ಮಿಶ್ರಣವನ್ನು, ಬಯಸಿದರೆ ತೀಕ್ಷ್ಣ ಮದ್ಯಗಳು ಅಥವಾ ಸಾರಗಳನ್ನು ಸೇರಿಸಿ, ನಯವಾಗುವವರೆಗೆ ಕಲಕಿಸಲಾಗುತ್ತದೆ ಅಥವಾ ಒಂದಾಗಿಸಲಾಗುತ್ತದೆ. ಗನಾಶ್‍ಗೆ ಹೊಳೆಯುವ ರೂಪ ಮತ್ತು ನಯವಾದ ರಚನೆಯನ್ನು ನೀಡಲು ಬೆಣ್ಣೆಯನ್ನು ಸಾಂಪ್ರದಾಯಿಕವಾಗಿ ಸೇರಿಸಲಾಗುತ್ತದೆ. ಗನಾಶ್ ಯಾವ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ, ಯಾವ ರೀತಿಯ ಚಾಕೊಲೇಟ್ ಬಳಸಲಾಗುತ್ತದೆ, ತಾನು ತಿನ್ನುವ ತಾಪಮಾನವನ್ನು ಅವಲಂಬಿಸಿ ಕ್ರೀಮ್ ಮತ್ತು ಚಾಕೊಲೇಟ್ ಅನುಪಾತವು ಬಯಸಿದ ಸ್ಥಿರತೆ ಪಡೆಯಲು ಬದಲಾಗುತ್ತಿರುತ್ತದೆ. ಸಾಧಾರಣವಾಗಿ, ಎರಡು ಭಾಗಗಳ ಚಾಕೊಲೇಟ್‍ಗೆ ಒಂದು ಭಾಗ ಕೆನೆಯನ್ನು ಹಾಕಿ ಅದನ್ನು ಕೇಕ್ ತುಂಬುವದಕ್ಕೆ ಅಥವಾ ಚಾಕೊಲೇಟ್ ಟ್ರಫಲ್ಸ್ ಮಾಡುವುದಕ್ಕೆ ಒಂದು ಅಡಿಪಾಯವಾಗಿ ಬಳಸಲಾಗುತ್ತದೆ.

"https://kn.wikipedia.org/w/index.php?title=ಗನಾಶ್&oldid=719659" ಇಂದ ಪಡೆಯಲ್ಪಟ್ಟಿದೆ