ಪ್ರತಿಬಿಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರತಿಬಿಂಬವು ಭಾರತದ ಕರ್ನಾಟಕ ರಾಜ್ಯದ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಡ್ಯಾಶ್‌ಬೋರ್ಡ್ ಆಗಿದೆ. ಆಡಳಿತದಲ್ಲಿ ದಕ್ಷತೆಯನ್ನು ಸುಧಾರಿಸಲು ಮತ್ತು ಸರ್ಕಾರದ ಪ್ರಗತಿಯನ್ನು ನಾಗರಿಕರಿಗೆ ತಿಳಿಯಲು ಅನುವು ಮಾಡಿಕೊಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಭರವಸೆಗಳ ಕುರಿತು ಇಲಾಖೆಯ ಕಾರ್ಯಕ್ಷಮತೆಯನ್ನು ವರದಿ ಮಾಡಲು, ವಿವರಣೆಯನ್ನು ಅಳೆಯಲು ಸಾಧನಗಳನ್ನು ಒಳಗೊಂಡಿದೆ..

ಇತಿಹಾಸ[ಬದಲಾಯಿಸಿ]

ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ರಿಯಲ್ ಸಮಯ ಕಾರ್ಯನಿರ್ವಾಹಕ ಡ್ಯಾಶ್ಬೋರ್ಡ್ ರಿಯಲ್ ಟೈಮ್ ಆಡಳಿತ ಸೊಸೈಟಿ (RTGS) ಅಡಿಯಲ್ಲಿ ಇ ಪ್ರಗತಿ ಪ್ರೋಗ್ರಾಮ್ ೨೦೧೬ ರಲ್ಲಿ ರಚಿಸಿ, ಆನ್ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಐ.ಒ.ಟಿ ಸಾಧನಗಳ ಮೂಲಕ ನೈಜ ಸಮಯದ ಆಧಾರದ ಮೇಲೆ ಡ್ಯಾಶ್‌ಬೋರ್ಡ್‌ನಲ್ಲಿರುವ ಡೇಟಾವನ್ನು ನವೀಕರಿಸಲಾಗುತ್ತದೆ, ಇದನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ನಿರ್ವಹಿಸಲಾಗುತ್ತದೆ ಮತ್ತು ಇದು ಭಾರತದ ಅತ್ಯುತ್ತಮ ಇ-ಆಡಳಿತ ಉಪಕ್ರಮವೆಂದು ಪರಿಗಣಿಸಲ್ಪಡುತ್ತದೆ. ಸರ್ಕಾರದ ೩೩ ಇಲಾಖೆಗಳು ನಡೆಸಿದ ಕಾರ್ಯಕ್ಷಮತೆ ಸೂಚಕಗಳು ಮತ್ತು ಕೆಲಸವನ್ನು ಇಲ್ಲಿ ನೋಡಬಹುದು. ಪ್ರತಿಬಿಂಬ ಎಂಬ ಶಬ್ದವನ್ನು ಆಂಗ್ಲಭಾಷೆಯ ರಿಫ್ಲೆಕ್ಷನ್ ನಿಂದ ಅನುವಾದಿಸಿ ಇದನ್ನು ಮಾದರಿಯಾಗಿ ೭ ಮಾರ್ಚ್ ೨೦೧೭ ರಂದು ಪ್ರಾರಂಭಿಸಲಾಯಿತು. ಪಾರದರ್ಶಕ, ಜವಾಬ್ದಾರಿಯುತ ಮತ್ತು ಜನಸ್ನೇಹಿ ಸರ್ಕಾರ ಎಂಬ ನಮ್ಮ ಭರವಸೆಯನ್ನು ಈಡೇರಿಸುವಲ್ಲಿ ನಾವು ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ರಾಜ್ಯ ಮತ್ತು ದೇಶದಾದ್ಯಂತದ ಜನರಿಗೆ ಪ್ರತಿಬಿಂಬ ಸಹಾಯ ಮಾಡುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]