ಪ್ರತಾಪ್ ಸಿ. ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಾಪ್ ಸಿ. ರೆಡ್ಡಿ
ಪ್ರತಾಪ್ ಚಂದ್ರ ರೆಡ್ಡಿ(೨೦೧೪)
Born
ಪ್ರತಾಪ್ ಚಂದ್ರ ರೆಡ್ಡಿ

(1933-02-05) ೫ ಫೆಬ್ರವರಿ ೧೯೩೩ (ವಯಸ್ಸು ೯೧)
ಅರಗೊಂಡ, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ (ಇಂದಿನ ಚಿತ್ತೂರು, ಆಂಧ್ರ ಪ್ರದೇಶ, ಭಾರತ)
Alma mater
Occupation
  • ವ್ಯಾಪಾರಿ
Spouseಸುಚರಿತ ರೆಡ್ಡಿ
Children
  • ಪ್ರೀತಾ ರೆಡ್ಡಿ (ಮಗಳು)
  • ಸಂಗೀತಾ ರೆಡ್ಡಿ (ಮಗಳು)
  • ಸುನೀತಾ ರೆಡ್ಡಿ (ಮಗಳು)
  • ಶೋಬನಾ ಕಾಮಿನೇನಿ (ಮಗಳು)
Relatives
  • ರಾಮ್ ಚರಣ್ (ಮೊಮ್ಮಗ)
  • ಅರ್ಮಾನ್ ಇಬ್ರಾಹಿಂ (ಮೊಮ್ಮಗ)
Awardsಪದ್ಮ ವಿಭೂಷಣ (೨೦೧೦)
ಪದ್ಮಭೂಷಣ (೧೯೯೧)

ಪ್ರತಾಪ್ ಚಂದ್ರ ರೆಡ್ಡಿ (ಜನನ ೫ ಫೆಬ್ರವರಿ ೧೯೩೩ ಅರಗೊಂಡಾದಲ್ಲಿ ) ಒಬ್ಬ ಭಾರತೀಯ ಉದ್ಯಮಿ ಮತ್ತು ಹೃದ್ರೋಗ ತಜ್ಞರಾಗಿದ್ದರು. ಅವರು ಭಾರತದಲ್ಲಿ ಮೊದಲ ಕಾರ್ಪೊರೇಟ್ ಆಸ್ಪತ್ರೆಗಳ ಸರಪಳಿಗಳಾದ ಅಪೊಲೊ ಆಸ್ಪತ್ರೆಯನ್ನು ಸ್ಥಾಪಿಸಿದರು.[೧][೨][೩] ಇಂಡಿಯಾ ಟುಡೆ ತನ್ನ ೨೦೧೭ ರ ಭಾರತದ ೫೦ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರಿಗೆ ೪೮ ನೇ ಸ್ಥಾನ ನೀಡಿದೆ.[೪]

ಹಿನ್ನೆಲೆ[ಬದಲಾಯಿಸಿ]

ರೆಡ್ಡಿ ಅವರಿಗೆ ೧೯೯೧ ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಮತ್ತು ೨೦೧೦ ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು. [೫][೬]

ವೈಯಕ್ತಿಕ ಜೀವನ[ಬದಲಾಯಿಸಿ]

ರೆಡ್ಡಿಯವರು ತಮ್ಮ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ:

  • ಪ್ರೀತಾ ರೆಡ್ಡಿ
  • ಸುನೀತಾ ರೆಡ್ಡಿ, ಪಿ. ದ್ವಾರಕಾನಾಥ್ ರೆಡ್ಡಿ ಅವರ ಪತ್ನಿ(ನಿಪ್ಪೋ ಬ್ಯಾಟರಿಸ್ ಮತ್ತು ಡೈನೋರಾ ಟಿವಿಯ ಸ್ಥಾಪಕ ಪಿ. ಅಹೋಬಲ ರೆಡ್ಡಿ ಅವರ ಮಗ)
  • ಸಂಗೀತಾ ರೆಡ್ಡಿ
  • ಶೋಬಾನಾ ಕಾಮಿನೇನಿ, ಅವರ ಮಗಳಾದ ಉಪಾಸನಾ ಅವರು ತೆಲುಗು ಚಿತ್ರರಂಗದ ನಟರಾದ ರಾಮ್ ಚರಣ್ ಅವರನ್ನು ವಿವಾಹವಾಗಿದ್ದಾರೆ.[೭]

ರೆಡ್ಡಿ ಅವರ ಎಲ್ಲಾ ಹೆಣ್ಣುಮಕ್ಕಳು ಅಪೋಲೋ ಆಸ್ಪತ್ರೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೮]

ಪ್ರಶಸ್ತಿಗಳು ಮತ್ತು ಮನ್ನಣೆ[ಬದಲಾಯಿಸಿ]

೨೦೧೦ ರಲ್ಲಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರತಾಪ್ ಸಿ. ರೆಡ್ಡಿರವರು ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು.
  • ೧೯೯೧: ಗೌರವ ಪದ್ಮಭೂಷಣ ಪ್ರಶಸ್ತಿ. [೯]
  • ೨೦೧೦: ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ವಿಭೂಷಣ ಪ್ರಶಸ್ತಿ.[೧೦]
  • ೨೦೧೮: ಅಪೋಲೋ ಹಾಸ್ಪಿಟಲ್ಸ್‌ನಿಂದ ಲಯನ್ಸ್ ಹ್ಯುಮಾನಿಟೇರಿಯನ್ ಪ್ರಶಸ್ತಿಯನ್ನು ನೀಡಲಾಯಿತು.[೧೧]
  • ೨೦೨೨: ಐಎಂಎ ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.[೧೨]

ಉಲ್ಲೇಖಗಳು[ಬದಲಾಯಿಸಿ]

  1. The first 'Apollo Isha Vidya Rural School' at Aragonda!, Apollo Hospitals press release, 25 December 2012, retrieved 2015-04-03
  2. "The Trailblazer". Express Healthcare. January 2009. Retrieved 2015-04-04.
  3. Srikar Muthyala (29 September 2015). "The List of Great Entrepreneurs of India in 2015". MyBTechLife. Archived from the original on 14 January 2016. Retrieved 7 January 2016.
  4. "India's 50 powerful people". India Today. 14 April 2017.
  5. "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 July 2015.
  6. "This Year's Padma Awards announced", Pib Nic, Jan 25, 2010, 25 January 2010
  7. "Dream wedding for Charan, Upasna". The Hindu (in Indian English). 2012-06-15. ISSN 0971-751X. Retrieved 2020-08-14.
  8. Hussain, Shabana (24 November 2014). "Apollo Hospitals' Prathap Reddy grooms daughters for leadership positions". Forbes India. Retrieved 16 November 2016.
  9. "Padma Awards | Interactive Dashboard". www.dashboard-padmaawards.gov.in (in ಇಂಗ್ಲಿಷ್). Archived from the original on 2021-02-02. Retrieved 2021-01-29.
  10. "Padma Awards | Interactive Dashboard". www.dashboard-padmaawards.gov.in (in ಇಂಗ್ಲಿಷ್). Archived from the original on 2021-02-08. Retrieved 2021-01-29.
  11. "Dr. Prathap C Reddy, Chairman, Apollo Hospitals conferred with the Lions Humanitarian Award". Medgate today.
  12. "Dr Prathap C Reddy conferred Lifetime Achievement Award by IMA". Uniindia. Retrieved January 26, 2023.