ನೈಸರ್ಗಿಕ ವಿಕೋಪ
ಗೋಚರ
(ಪ್ರಕೃತಿ ವಿಕೋಪ ಇಂದ ಪುನರ್ನಿರ್ದೇಶಿತ)
ಮಾನವನ ಜೀವ ಅಥವಾ ಸಾಮಾಜಿಕ ಚಟುವಟಿಕೆಗಳಿಗೆ ಹಾನಿ ಉಂಟುಮಾಡುವ ನೈಸರ್ಗಿಕ ಪ್ರಕ್ರಿಯೆಗಳು ನೈಸರ್ಗಿಕ ವಿಪತ್ತುಗಳು ಅಥವಾ ನೈಸರ್ಗಿಕ ವಿಕೋಪಗಳು. ಮಾನವನ ಚಟುವಟಿಕೆಗಳ ಮೇಲೆ ಪ್ರಭಾವ ಬೀರದಿದ್ದರೆ, ಇವೇ ಪ್ರಕ್ರಿಯೆಗಳು ವಿಪತ್ತುಗಳೆಂದೆನಿಸಿಕೊಳ್ಳುವುದಿಲ್ಲ.
ಕಾರಣೀಭೂತ ಪ್ರಕ್ರಿಯೆಗಳು
[ಬದಲಾಯಿಸಿ]ನೈಸರ್ಗಿಕ ವಿಪತ್ತುಗಳು ವಿವಿಧ ಭೂಪದರಗಳಿಂದ, ಹವಾಮಾನ ಪರಿಸ್ಥಿತಿಗಳಿಂದ, ಇತರ ಜೀವಿಗಳಿಂದ, ಇತ್ಯಾದಿ ಕಾರಣಗಳಿಂದ ಉಗಮಿಸಬಹುದು. ಕೆಲವೊಮ್ಮೆ ವಿವಿಧ ಪ್ರಕ್ರಿಯೆಗಳು ಒಟ್ಟಾಗಬಹುದು. ಉದಾಹರಣೆಗೆ ಸಮುದ್ರ ತಳದ ಭೂಕಂಪದಿಂದ ತ್ಸುನಾಮಿ ಉಂಟಾಗಬಹುದು.
ನೈಸರ್ಗಿಕ ವಿಪ್ಪತ್ತಿನ ಪ್ರಕಾರಗಳು
[ಬದಲಾಯಿಸಿ]
|
|
|
|
ಉದಾಹರಣೆಗಳು
[ಬದಲಾಯಿಸಿ]ಹೈಟಿಯಲ್ಲಿ ಚಂಡಮಾರುತ
[ಬದಲಾಯಿಸಿ]- 8 Oct, 2016
- ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯಲ್ಲಿ ಭೀಕರ ಮ್ಯಾಥ್ಯೂ ಚಂಡಮಾರುತ ಅನಾಹುತ ಸೃಷ್ಟಿಸಿದ್ದು, ಸುಮಾರು 300 ಮಂದಿ ಸಾವಿಗೀಡಾಗಿದ್ದಾರೆ. ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಭಾರಿ ಅನಾಹುತ ಉಂಟುಮಾಡಿದೆ. ಕೆರಿಬಿಯನ್ ದ್ವೀಪರಾಷ್ಟ್ರ ಮಿಯಾಮಿಯ ಹೈಟಿಯಲ್ಲಿ ಭೀಕರ ಮ್ಯಾಥ್ಯೂ ಚಂಡಮಾರುತ ಅನಾಹುತ ಸೃಷ್ಟಿಸಿದ್ದು, ಸುಮಾರು 300 ಮಂದಿ ಸಾವಿಗೀಡಾಗಿದ್ದಾರೆ. ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಭಾರಿ ಅನಾಹುತ ಉಂಟುಮಾಡಿದೆ.
- ಚಂಡಮಾರುತದಿಂದ ಸೌತ್ ಕೆರೋಲಿನಾ ಮತ್ತು ಫ್ಲಾರಿಡಾದಲ್ಲಿ ತುಂಬ ಹಾನಿಯಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈ ಪ್ರದೇಶಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿವೆ. ಹಿಂದೆ 2007ರಲ್ಲಿ ಇಲ್ಲಿ ಇಂಥ ಚಂಡಮಾರುತ ಬೀಸಿತ್ತು. ಈ ಬಾರಿ ಫ್ಲಾರಿಡಾ, ಬಹಾಮಾ, ಜಾರ್ಜಿಯಾ, ಜಾಕ್‌ಸೋನ್‌ವಿಲೆ, ಸವನ್ಹಾ ಹಾಗೂ ಸೌತ್ ಕೆರೊಲಿನಾದಲ್ಲಿ ಲಕ್ಷಾಂತರ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
- ಈಗಾಗಲೇ ಹೈಟಿ, ಜಮೈಕಾ, ಕ್ಯೂಬಾಕ್ಕೆ ಅಪ್ಪಳಿಸಿರುವ ಮ್ಯಾಥ್ಯೂ ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.ಚಂಡಮಾರುತದಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಮರಗಳು ರಸ್ತೆಗುರುಳಿದ್ದು, ವಿದ್ಯುತ್ ಕಡಿತಗೊಂಡಿದೆ. ಗ್ರಾಮ, ಪಟ್ಟಣಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
- ಫೋಟೊ:[೧] Archived 2016-10-08 ವೇಬ್ಯಾಕ್ ಮೆಷಿನ್ ನಲ್ಲಿ.[೧]
ಫ್ಲೊರಿಡಾದಲ್ಲಿ ಚಂಡಮಾರುತ
[ಬದಲಾಯಿಸಿ]- 8 Oct, 2016
- ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯಲ್ಲಿ ಅನಾಹುತ ಸೃಷ್ಟಿಸಿ 400 ಮಂದಿಯನ್ನು ಬಲಿ ಪಡೆದಿರುವ ಭೀಕರ ಮ್ಯಾಥ್ಯೂ ಚಂಡಮಾರುತ ಫ್ಲಾರಿಡಾದ ಕರಾವಳಿಗೆ ಅಪ್ಪಳಿಸಿದ್ದು, ನಾಲ್ವರನ್ನು ಬಲಿ ಪಡೆದಿದೆ.ಹೈಟಿಗೆ 130 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ್ದ ಚಂಡಮಾರುತಕ್ಕೆ ಸತ್ತವರ ಸಂಖ್ಯೆ 300ರಿಂದ 400ರ ಗಡಿ ದಾಟಿದೆ. 30 ಸಾವಿರಕ್ಕೂ ಹೆಚ್ಚು ಮನೆಗಳ ಸರ್ವನಾಶ ಮಾಡಿರುವ ಮ್ಯೂಥ್ಯೂ, ಫ್ಲಾರಿಡಾದ ಕರಾವಳಿಗೆ 175 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ್ದು, ಅಲ್ಲಿ ನಾಲ್ವರನ್ನು ಬಲಿ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದ್ದು, ಇಡೀ ರಾತ್ರಿ ಕಿತ್ತುಹೋದ ಮನೆಯಲ್ಲೇ ಕಾಲ ನೂಕಿರುವ ವೃದ್ದ ಮಹಿಳೆ ಸೇರಿದಂತೆ ಹಲವು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.[೨]
- 9 Oct, 2016;ಹೈಟಿಯಲ್ಲಿ ಮ್ಯಾಥ್ಯೂ ಚಂಡಮಾರುತ ಸಂಬಂಧಿತ ಘಟನೆಗಳಲ್ಲಿ ಬಲಿಯಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 900 ಮುಟ್ಟಿದೆ.ಇನ್ನೂ ಹಲವು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
- Oct 10, 2016ಚಂಡಮಾರುತದ ಸತ್ತವರ 1,000 ಜನರು ಏರಿದೆ.[೩]
- ಮಳೆ ನೀರು, ಪ್ರವಾಹದ ನೀರು ಸುಲಭವಾಗಿ ಹರಿದು ಹೋಗದ ಕಾರಣ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಹಲವೆಡೆ ಕಾಲರಾದಿಂದ ಕೆಲವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಎಲ್ಲೆಡೆ ಕಾಲರಾ ಹರಡುವ ಅಪಾಯ ಇದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.
- ಚಂಡಮಾರುತಕ್ಕೆ ದೇಶದ ಬಹುತೇಕ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿಗಳ ಮನೆಗಳ ಚಾವಣಿಗಳು ಹಾರಿ ಹೋಗಿವೆ. ಅಲ್ಲದೆ ಕೆಸರಿನಲ್ಲಿ ಹೂತು ಹೋಗಿವೆ. ಹೀಗಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಕೇವಲ 65 ಸಾವಿರ ಜನರಿಗಷ್ಟೇ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕಾಗುತ್ತಿದೆ ಎಂದು ಮೂಲಗಳುತಿಳಿಸಿವೆ[೪]
ಇಂಡೋನೇಷ್ಯಾದಲ್ಲಿ ಭೂಕಂಪ
[ಬದಲಾಯಿಸಿ]- 54 ಮಂದಿ ಸಾವು
- ಇಂಡೋನೇಷ್ಯಾದ ಅಕೆಹ್ ಪ್ರಾಂತ್ಯದಲ್ಲಿ ಬುಧವಾರ ಭೂಕಂಪ ಸಂಭವಿಸಿದ್ದು, 54 ಮಂದಿ ಸಾವಿಗೀಡಾಗಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.5 ರಷ್ಟು ದಾಖಲಾಗಿದ್ದು, ಕಟ್ಟಡಗಳು ಕುಸಿದು ಹಾನಿಯಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಸೀದಿ ಹಾಗೂ ವ್ಯಾಪಾರಿ ಮಳಿಗೆಗಳ ಕಟ್ಟಡಗಳು ಕುಸಿದಿವೆ. ಘಟನೆಯಲ್ಲಿ 54 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.[೫]
ಶ್ರೀಲಂಕಾದಲ್ಲಿ ಪ್ರವಾಹ
[ಬದಲಾಯಿಸಿ]- ಶ್ರೀಲಂಕಾದಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆ ಹಾಗೂ ಭೂ ಕುಸಿತದಿಂದಾಗಿ 100 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಿ.೨೬-೫-೨೦೧೭ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ 100 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ 500 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, 60 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
- ಪ್ರಧಾನಿ ನರೇಂದ್ರ ಮೋದಿ ಸಂತಾಪ: ನಾವು ಶ್ರೀಲಂಕಾದ ಸಹೋದರ– ಸಹೋದರಿಯರ ನೆರವಿಗೆ ಕೂಡಲೇ ಧಾವಿಸುತ್ತೇವೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗಾಗಿ ಭಾರತ ಸರ್ಕಾರ ನೌಕಾ ಪಡೆ ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.[೬]
- ಸಾವಿನ ಸಂಖ್ಯೆ ೧೭೭ಕ್ಕೆ ಏರಿದೆ.[೭]
- 15 ಜಿಲ್ಲೆಗಳಲ್ಲಿ ಜನರ ಬದುಕನ್ನು ಮಳೆಯು ಮೂರಾಬಟ್ಟೆ ಮಾಡಿದೆ. ಸುಮಾರು 112 ಮಂದಿ ನಾಪತ್ತೆಯಾಗಿದ್ದಾರೆ. ಕಳೆದ 2003 ರ ಅನಂತರ ನಡೆದಿರುವ ನೈಸರ್ಗಿಕ ಘೋರ ದುರಂತ ಇದಾಗಿದೆ.[೮]
ಮಳೆಯಿಂದ 141 ಸಾವು, 4500 ಕ್ಕೂ ಹೆಚ್ಚು ಮಂದಿ ನಿರಾಶ್ರಿತರು
[ಬದಲಾಯಿಸಿ]- 15 Jun, 2017
- ಬಾಂಗ್ಲಾದೇಶದ ಈಶಾನ್ಯ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತಕ್ಕೆ ಸುಮಾರು 141 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, 4,500ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ[೯]
ಭಾರೀ ಬೆಂಕಿ: 62 ಮಂದಿ ಸಾವು, ಹಲವರಿಗೆ ಗಾಯ
[ಬದಲಾಯಿಸಿ]- 18 Jun, 2017;
- ಮಧ್ಯ ಪೋರ್ಚುಗಲ್‌ನಲ್ಲಿ ಕಾಡಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು, 24 ಜನ ಸಾವಿಗೀಡಾಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಹುತೇಕ ಮಂದಿ ಕಾರುಗಳಲ್ಲಿಯೇ ಮೇತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಬಳಿಕ, ಸುಮಾರು 500 ಅಗ್ನಿಶಾಮಕ ಮತ್ತು 160 ವಾಹನಗಳನ್ನು ಬೆಂಕಿ ನಿಯಂತ್ರಿಸಲು ಕಳುಹಿಸಲಾಗಿದೆ.[೧೦]
- ದಿ.19 Jun, 2017ಕ್ಕೆ,ಮಧ್ಯ ಪೋರ್ಚುಗಲ್‌ನಲ್ಲಿ ಬೃಹತ್ ಕಾಳ್ಗಿಚ್ಚಿಗೆ ಸುಮಾರು 62 ಮಂದಿ ಆಹುತಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹುತೇಕರು ಕಾರುಗಳಲ್ಲಿ ಸಾಗುವಾಗ ತಮ್ಮನ್ನು ಸುತ್ತುವರಿದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಒಳಗೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಕೆಲವರು ದಟ್ಟ ಹೊಗೆಯಿಂದ ಸಾವಿಗೀಡಾಗಿದ್ದಾರೆ. ಪೆಡ್ರೊಗಾವ್ ಗ್ರ್ಯಾಂಡ್ ಎಂಬ ಪ್ರದೇಶಕ್ಕೆ ಸಮೀಪದ ಕಣಿವೆಯಲ್ಲಿ ಶನಿವಾರ ಮಧ್ಯಾಹ್ನ ಕಾಣಿಸಿಕೊಂಡ ಕಾಳ್ಗಿಚ್ಚು, ಕ್ಷಿಪ್ರಗತಿಯಲ್ಲಿ ಸಾವಿರಾರು ಕಿಲೊ ಮೀಟರ್‌ವರೆಗೆ ವ್ಯಾಪಿಸಿದೆ. ಬೆಂಕಿ ನಂದಿಸಲು 300 ಅಗ್ನಿಶಾಮಕ ವಾಹನ, 900 ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಬೆಂಕಿಯ ಜ್ವಾಲೆ ನಾಲ್ಕು ದಿಕ್ಕುಗಳಿಂದ ವೇಗವಾಗಿ ಹಬ್ಬುತ್ತಿದ್ದು, ಹತ್ತಿರದ ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ‘ಇತ್ತೀಚಿನ ವರ್ಷಗಳಲ್ಲಿಯೇ ದೇಶ ಕಂಡ ಅತ್ಯಂತ ದೊಡ್ಡ ಕಾಳ್ಗಿಚ್ಚು ದುರಂತ ಇದು’ ಎಂದು ಪ್ರಧಾನಿ ಆ್ಯಂಟೊನಿಯೊ ಕೋಸ್ಟಾ ಹೇಳಿದ್ದಾರೆ.
- ಫ್ರಾನ್ಸ್ ಮೂರು ಹಾಗೂ ಸ್ಪೇನ್ ಎರಡು ಅಗ್ನಿಶಾಮಕ ವಿಮಾನಗಳನ್ನು ಒದಗಿಸಿವೆ. ಐರೋಪ್ಯ ಒಕ್ಕೂಟ ಸಹ ಇಂತಹ ವಿಮಾನಗಳನ್ನು ಒದಗಿಸಲು ಮುಂದೆ ಬಂದಿದೆ.[೧೧]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಹೈಟಿಯಲ್ಲಿ 300 ಮಂದಿ ಬಲಿ". Archived from the original on 2016-10-08. Retrieved 2016-10-08.
- ↑ ಫ್ಲಾರಿಡಾ ಕರಾವಳಿಗೆ ಅಪ್ಪಳಿಸಿದ ಮ್ಯಾಥ್ಯೂ;
- ↑ http://timesofindia.indiatimes.com/world
- ↑ .http://www.prajavani.net/news/article/2016/10/09/444078.html
- ↑ 6.5 ತೀವ್ರತೆ;ಇಂಡೋನೇಷ್ಯಾದಲ್ಲಿ ಭೂಕಂಪ: 54 ಮಂದಿ ಸಾವು;ಎಎಫ್‌ಪಿ;7 Dec, 2016
- ↑ ಶ್ರೀಲಂಕಾ ಪ್ರವಾಹ 100ಕ್ಕೂ ಹೆಚ್ಚು ಸಾವು: ಪ್ರಧಾನಿ ನರೇಂದ್ರ ಮೋದಿ ಸಂತಾಪ;27 May, 2017
- ↑ SL floods: Indian Navy teams deployed; death toll rises to 177Press Trust of India, Colombo, May 29 2017, 18:30 IST
- ↑ ಉದಯವಾಣಿ, May 29, 2017
- ↑ http://www.prajavani.net/news/article/2017/06/15/499127.html
- ↑ http://www.prajavani.net/news/article/2017/06/18/499815.html
- ↑ http://www.prajavani.net/news/article/2017/06/19/499979.html