ಪ್ಯಾಬ್ಲೋ ಎಸ್ಕೋಬಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಯಾಬ್ಲೋ ಎಸ್ಕೋಬಾರ್
ಪ್ಯಾಬ್ಲೋ ಎಸ್ಕೋಬಾರ್

thumb|ಪಾಬ್ಲೊ ಎಸ್ಕೋಬಾರ್

ಪರಿಚಯ[ಬದಲಾಯಿಸಿ]

ಪ್ಯಾಬ್ಲೋ ಎಸ್ಕೋಬಾರ್ ಕೊಲಂಬಿಯಾದ ಮಾದಕ ದ್ರವ್ಯಗಳ ದೊರೆ ಮತ್ತು ನಾಯಕರಾಗಿದ್ದರು.[೧] ಇವರು ಡಿಸೆಂಬರ್ ೧, ೧೯೪೯ ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.ಈತ ಚಿಕ್ಕ ವಯಸ್ಸಿನಿಂದಲೇ ತನ್ನ ಸ್ನೇಹಿತರು ಮತ್ತು ತನ್ನ ಕುಟುಂಬದವರಿಗೆ ನಾನು ಕೊಲೊಂಬಿಯದ ಅಧ್ಯಕ್ಷನಾಗುತ್ತೇನೆ ಎಂದು ಹೇಳುತ್ತಿದ್ದರು. ಇವರು ಮೊದಲಿನಿಂದ ಸಣ್ಣಪುಟ್ಟ ರಸ್ತೆ ಜಗಳಗಳಲ್ಲಿ ಇರುತ್ತಿದ್ದರು ನಂತರ ವಾಹನ ಕಡಿಯುವ ಕೆಲಸಕ್ಕೆ ಮುಂದಾಗುತ್ತಾರೆ. ೧೯೭೬ ರಲ್ಲಿ ಅವರು ೧೫ ವರ್ಷದ ಮಾರಿಯಾ ವಿಕ್ಟೋರಿಯಾ ಮದುವೆಯಾದರು . ನಂತರ ಇವರಿಗೆ ಜಾನ್ ಪಬ್ಲೊ ಮತ್ತು ಮ್ಯಾನುಯೆಲಾ ಎಂಬ ಮಕ್ಕಳ್ಳು ಹುಟ್ಟುತ್ತಾರೆ .ಎಸ್ಕೋಬರ್ ತನ್ನ ವಿವಾಹೇತರ ಸಂಬಂಧಗಳಿಗೆ ಹೆಸರುವಾಸಿಯಾಗ್ಗಿದ ಮತ್ತು ಅವರು ಹೆಣ್ಣುಮಕ್ಕಳಿಗೆ ಆದ್ಯತೆ ಒಲವು.

ಅಪರಾಧ ವೃತ್ತಿ[ಬದಲಾಯಿಸಿ]

ಈತ ತನ್ನ ಮಾದಕ ದ್ರವ್ಯಗಳ ಸಾಗಾಣಿಕೆಯನ್ನು ೧೯೭೦ ರಲ್ಲಿ ಶುರುಮಾಡುತ್ತಾನೆ.ತನಗೆ ಬೇಕಾದ ಕೋಕಾ ಪೇಸ್ಟ್ ಬಲ್ಗೇರಿಯಾ ಮತ್ತು ಪೆರುವಿನಿಂದ ತಂದು ಅಮೆರಿಕಾದಲ್ಲಿ ಮಾರಾಟ ಮಾಡುತ್ತಿದ್ದನು. ೧೯೭೫ರಲ್ಲಿ ಸ್ಥಳೀಯ ಮೆಡೆಲಿನ್ ಮಾದಕ ದ್ರವ್ಯಗಳ ದೊರೆ ಫ್ಯಾಬಿಯೊ ರೆಸ್ಟ್ರೆಪೊರನ್ನು ಕೊಲೆ ಮಾಡಿಸಿದ ಎಸ್ಕೋಬಾರ್, ಫ್ಯಾಬಿಯೊ ರಾಜ್ಯವನ್ನೆಲ್ಲ ಅಪಹರಿಸಿಕೊಂಡು ತನ್ನ ರಾಜ್ಯವನ್ನು ಬೆಳೆಸಿಕೊಳ್ಳುತ್ತಾನೆ .ಒಂದು ವೇಳೆಯಲ್ಲಿ ಮೆಡೆಲಿನ್ ನಲ್ಲಿ ನಡೆಯುತಿದ್ದ ಕೊಲೆಗಳಿಗೆ ಈತನೇ ನಿಯಂತ್ರಿಸುತ್ತಾನೆ ಇದಲ್ಲದೆ ಅಮೆರಿಕಾಕೆ ಸಾಗುತಿದ್ದ ಕೊಕೇನ್ ಮಾದಕ ದ್ರವ್ಯಗಳ್ಳಲ್ಲಿ ೮೦% ಎಸ್ಕೋಬಾರ್ ರದ್ದೇ ಆಗಿತ್ತು.೧೯೮೨ ರಲ್ಲಿ, ಅವರು ಕೊಲಂಬಿಯಾದ ಕಾಂಗ್ರೆಸ್ ಪಕ್ಷಕ್ಕೆ ಆಯ್ಕೆಯಾದರು ಆರ್ಥಿಕ ಅಪರಾಧ ಮತ್ತು ರಾಜಕೀಯ ಶಕ್ತಿಯು, ಎಸ್ಕೋಬಾರ್ ಉನ್ನತಿಗೆ ಪೂರ್ಣಗೊಂಡಿತು.ಇವನ ಬೆಳವಣಿಗೆಯನ್ನು ಅನೇಕ ಪ್ರಾಮಾಣಿಕ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಪೊಲೀಸ್ ವಿರೋದಿಸಿದರು. ಎಸ್ಕೋಬಾರ್ ತನ್ನ ಶತ್ರುಗಳನ್ನು ವ್ಯವಹರಿಸುವಾಗ ಒಂದು ಅವಕಾಶವಿದ್ದರೆ : ಅವರು " ಪ್ಲಾಟ ಒ ಪ್ಲೊಮೋ " ಈ ಪದವನ್ನು ಉಪಯೋಗಿಸುತ್ತಿದ್ದರು.ಈತ ತನ್ನ ದಾರಿಗೆ ಅಡ್ಡ ನಿಂತ ಪೊಲೀಸ್ ಇತರೆ ವ್ಯಕ್ತಿಗಲ್ಲನ್ನು ಲಂಚ ಕೊಡುತಿದ್ದ. ಲಂಚ ಒಪ್ಪದ್ದಿದ್ದ ಪೊಲೀಸರನ್ನು ಕೊಲ್ಲಲ್ಲು ಅವನು ಹಿಂಜರಿಯುತಿರಲಿಲ್ಲ . ಎಸ್ಕೋಬರ್ ಪೊಲೀಸರ ಹೆಂಡತಿ ಮಕ್ಕಳ್ಳನ್ನು ಕೂಡ ಕೊಲ್ಲಿಸುತಿದ್ದ. ಈತ ಕೊಂದ ವ್ಯಕ್ತಿಗಳ ಲೆಕ್ಕವೇ ಇಲ್ಲ. ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೂ ಕೂಡ ಈತ ಹೆದರುತ್ತಿರಲಿಲ್ಲ ತನ್ನ ದಾರಿಗೆ ಅಡ್ಡ ಬಂದವರನ್ನೆಲ್ಲ ಕೊಲ್ಲುತಿದ್ದ . ೧೯೮೫ ರಲ್ಲಿ ಅಲ್ಲಿಯ ಸುಪ್ರೀಮ್ ಕೋರ್ಟ್ ಮೇಲೆಯೇ ದಾಳಿ ನಡೆಸಿದ್ದರು ಮತ್ತು ೧೯೮೯ ರಲ್ಲಿ ಎಸ್ಕೋಬರ್ ಕೊಲಂಬಿಯ ವಿಮಾನ 203 ಮೇಲೆ ಬಾಂಬ್ ದಾಳಿ ನಡೆಸಿ ನೂರಾರು ಜನರನ್ನು ಕೊಂದನು.

ಸಾಮಾಜಿಕ ಸೇವೆಗಳು[ಬದಲಾಯಿಸಿ]

೧೯೮೦ರಷ್ಟರಲ್ಲಿ ಎಸ್ಕೋಬರ್ ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಇವರಾಗಿದ್ದರುಫೋರ್ಬ್ಸ್ ಮ್ಯಾಗಝಿನ್ ಇವರನ್ನು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಏಳನೆಯವರಾಗಿ ಪ್ರಕಟಿಸಿತ್ತು.[೨] ಇವರ ಸಾಮ್ರಾಜ್ಯ ಸೈನಿಕರು ಅಪರಾಧಿಗಳು ಖಾಸಗಿ ಮೃಗಾಲಯ ಮಹಲುಗಳಿಂದ ಇಡೀ ಕೊಲೊಂಬಿಯ ಹರಡಿತ್ತು .ಔಷಧ ಸಾರಿಗೆಗೆ ಖಾಸಗೀ ವಾಯುನೆಲೆಗಲು ಮತ್ತು ವಿಮಾನಗಳು ಇದ್ದವು ,ಇವರು ಸುಮಾರು ೨೪ ಬಿಲಿಯೊನ್ ಡಾಲರ್ಸ್ ಸಂಪಾದಿಸಿದ್ದರು. ಎಸ್ಕೋಬರ್ ಜನರ ಪ್ರೀತಿ ಗಳಿಸಿದರೆ ಆತ ಕ್ಷೇಮ ಎಂದು ತಿಳಿದಿದ್ದ , ಹಾಗಾಗಿ ಆತನು ಮೆಡೆಲಿನ್ನಲ್ಲಿ ಅನೇಕ ಉದ್ಯಾನವನಗಳು, ಶಾಲೆಗಳು , ಕ್ರೀಡಾಂಗಣಗಳು , ಚರ್ಚುಗಳುನ್ನು ಕಟ್ಟಿಸಿದನು, ಇದಲ್ಲದೆ ಬಡವರಿಗೆ ಮನೆಗಳ್ಳನ್ನು ಕಟ್ಟಿಸಿದ್ದಾರೆ .

ಅಧಿಕಾರದ ಎತ್ತರ[ಬದಲಾಯಿಸಿ]

೧೯೭೬ ರಲ್ಲಿ ಎಸ್ಕೋಬರ್ ಮತ್ತು ತನ್ನ ಸ್ನೇಹಿತರು ತಮ್ಮ ಸಾಗಾಣಿಕೆಯನ್ನು ಮುಗಿಸಿ ಹಿಂದಿರುಗುತಿರುವಾಗ ಪೊಲೀಸರು ಹಿಡಿಯುತ್ತಾರೆ , ಎಸ್ಕೋಬರ್ ತನ್ನ ರಾಜಕೀಯ ಶಕ್ತಿಯಿಂದ ತನ್ನ ಮೇಳದ ಅಪರಾಧವನ್ನು ಮುಚ್ಚಿಹಾಕುತ್ತಾನೆ.ಎಸ್ಕೋಬಾರ್ ಸಂಪತ್ತು ಮತ್ತು ಆತನ ಶಕ್ತಿಯಿಂದಾಗಿ ಕಾಳೊಂಬಿಯಾದ ಪೊಲೀಸರಿಗೆ ಆತನನ್ನು ಇಡಿಯಲು ಆಗುವುದೇಯಿಲ್ಲ, ಪ್ರತಿಸಲ ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಆ ಅಪರಾಧವನ್ನು ಮುಚ್ಚಿಸಿಬಿಡುತಿದ್ದ . ಅಮೆರಿಕಾದ ಪೊಲೀಸರು ಆತನನ್ನು ಹಿಡಿಯಲೇಬೇಕು ಎಂದು ಪಣತೊಟ್ಟಗ ಆತ ತನ್ನ ರಾಜಕೀಯ ಶಕ್ತಿಯಿಂದ ಪರಾರಿಯಾಗುತ್ತಾನೆ. ಕೊನೆಗೆ ಎಸ್ಕೋಬರ್ನನ್ನ ವಶಕ್ಕೆ ಪಡಿಯಲೇಬೇಕು ಎಂದು ,ಪೊಲೀಸರು ಮತ್ತು ಎಸ್ಕೋಬರ್ನ ವಕೀಲರು ಒಂದು ಒಪಂದಕ್ಕೆ ಬರುತ್ತಾರೆ ,ಅದರ ಪ್ರಕಾರ ಎಸ್ಕೋಬರ್ ಜೈಲಿನಲ್ಲಿ ಕಾಲ ಕಳೆಯಲು ಒಪ್ಪಬೇಕೆಂದರೆ , ಅವನದೇ ಆದ ಒಂದು ಜೈಲನ್ನು ಕಟ್ಟಿಸುತ್ತೆವೆ ,ಆತ ಅಮೆರಿಕಾಗೆ ಹೋಗುವುದಿಲ್ಲ ಎಂದು ವಕೀಲರು ಹೇಳುತ್ತಾರೆ . ಆ ಜೈಲಿನಲ್ಲಿ ಸುಂದರವಾದ ಈಜು ಕೋಲ ಆಡಲು ಫುಟ್ಬಾಲ್ ಮೈದಾನ ಇರುತ್ತವೆ ಹಾಗೂ ಆತ ಜೈಲಿನಿಂದಲೆಯೇ ತನ್ನ ಬ್ಯುಸಿನೆಸ್ ಮುಂದುವರಿಸುತನ್ನೇ ,ಆತ ಸತ್ತ ನಂತರ ಈ ಜೈಲನ್ನು ಜನರು ನುಗ್ಗಿ ಎಸ್ಕೋಬರ್ ನ ಹಣಕಾಗಿ ಚೆಲ್ಲಾಪಿಲ್ಲಿ ಮಾಡಿದರು .ಎಸ್ಕೋಬರ್ ತನ್ನ ಸಾಗಾಣಿಕೆಯನ್ನು ಜೈಲಿನೊಳಗಿಂದ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿತ್ತು ,೧೯೯೨ರಲ್ಲಿ ವಿಶ್ವಾಸದ್ರೋಹದ ಜನರನ್ನು ತನ್ನ ಜೈಲಿಗೆ ತಂದು ಕೊಲ್ಲುತಿದನು ಎಂದು ಪೊಲೀಸರಿಗೆ ತಿಳಿದೀತು ನಂತರ ಪೊಲೀಸರು ಎಸ್ಕೋಬರ್ ಸರ್ಕಾರದ ಜೈಲಿಗೆ ಹೊರಡಬೇಕೆಂದು ಹೇಳಿದರು ,ಇದನ್ನು ಒಪ್ಪದ ಎಸ್ಕೋಬರ್ ತಪ್ಪಿಸಿಕೊಳ್ಳುತ್ತಾನೆ . ಅಮೆರಿಕಾದ ಸಹಾಯ ಪಡೆದು ದೊಡ್ಡ ಪ್ರಮಾಣದಲ್ಲಿ ಆತನನ್ನು ಹುಡುಕಲು ಪೊಲೀಸರು ಆರಂಭಿಸಿದರು , ಎರಡು ಗುಂಪುಗಳು ಆತನನ್ನು ಹುಡುಕುತ್ತಿದ್ದರು ,ಒಂದು ಕಾಳೊಂಬಿಯಾದ ಪೊಲೀಸರಾದರೆ ಮತ್ತೊಂದು ಎಸ್ಕೋಬರ್ ಕೊಂಡಿದ್ದ ಜನರ ಕುಟುಂಬದವರು ಮತ್ತು ಆತನ ಶತ್ರುಗಳಿಂದ ತುಂಬಿದವು .

ಪ್ಯಾಬ್ಲೋ ಎಸ್ಕೋಬಾರ್
ಪ್ಯಾಬ್ಲೋ ಎಸ್ಕೋಬಾರ್ ಸಾವು

ಸಾವು ಮತ್ತು ನಂತರದ ಪರಿಣಾಮ[ಬದಲಾಯಿಸಿ]

ಡಿಸೆಂಬರ್ ೨ ೧೯೯೨ ರಲ್ಲಿ ಕಾಳೊಂಬಿಯಾದ ಪೊಲೀಸರು ಅಮೆರಿಕಾದ ಸಹಾಯ ಪಡೆದು ಎಸ್ಕೋಬರ್ ಮೆಡೆಲಿನ್ನ ಮನೆಯಲ್ಲಿ ಅಡಗಿರುವುದು ತಿಳಿಯುತ್ತಾರೆ ,ನಂತರ ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮನೆಗೆ ಹೋದಾಗ ಎಸ್ಕೋಬರ್ ತಿರುಗಿ ಬೀಳುತ್ತಾನೆ ,ಅಲ್ಲಿಂದ ಗುಂಡುಹಾರಿಸಲು ಪೊಲೀಸರು ಶುರುಮಾಡುತ್ತಾರೆ .ಆತ ತನ್ನ ಮನೆಯ ಮೇಲಿನಿಂದ ಹೊಡೊಗಳು ಯತ್ನಿಸಿದಾಗ ಕಾಲಿಗೆ ಗುಂಡನ್ನು ಪೊಲೀಸರು ಹಾರಿಸುತ್ತಾರೆ,ಎಷ್ಟೋ ಜನ ಕೆಳಗೆ ಬಿದ್ದ ಎಸ್ಕೋಬರ್ ಆತ್ಮಹತ್ಯೆ ಮಾಡಿಕೊಂಡ ಎಂದರೆ ಇನ್ನು ಕೆಲವು ಜನ ಪೊಲೀಸರು ಆತನನ್ನು ಕೊಂಡರು ಎನ್ನುತ್ತಾರೆ . ಈಗಲೂ ಕೂಡ ಆ ದೇಶದ ಜನರು ಆತನನ್ನು ನೆನೆಯುತ್ತಾರೆ ,ಈತನ ಕತೆ ಎಷ್ಟೋ ಪುಸ್ತಕಗಳಲ್ಲಿ ವಿಕಿಪೀಡಿಯಾದಲ್ಲಿ ಇವೆ .

ಎಸ್ಕೋಬಾರ್ ನ ನಿಜ ಜೀವನ ಆಧಾರಿತ ದೂರದರ್ಶನ ದಾರಾವಾಹಿ 'ನಾರ್ಕೊಸ್' 28 ಆಗಸ್ಟ್ 2015 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು

ಉಲ್ಲೇಖನ[ಬದಲಾಯಿಸಿ]