ಪೌಲಾ ಅಬ್ದುಲ್
ಪೌಲಾ ಅಬ್ದುಲ್ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Paula Julie Abdul |
ಮೂಲಸ್ಥಳ | San Fernando, California, U.S. |
ಸಂಗೀತ ಶೈಲಿ | Pop, R&B |
ವೃತ್ತಿ | Singer, choreographer, dancer, television personality, actress |
ಸಕ್ರಿಯ ವರ್ಷಗಳು | 1978–present |
Labels | Virgin (1987–1996) Mercury (1997) [೧] Concord (2008) Filament (2009–present) |
ಅಧೀಕೃತ ಜಾಲತಾಣ | www.PaulaAbdul.com |
ಪೌಲಾ ಜೂಲಿ ಅಬ್ದುಲ್ (pronounced /ˈæbduːl/; ಜನನ: 1962ರ ಜೂನ್ 19ರಂದು)[೨] ಅಮೆರಿಕಾದ ಓರ್ವ ಪಾಪ್ ಗಾಯಕಿ, ಧ್ವನಿಮುದ್ರಣ ನಿರ್ಮಾತೃ, ನರ್ತಕಿ, ನೃತ್ಯಸಂಯೋಜಕಿ, ನಟಿ ಮತ್ತು ದೂರದರ್ಶನದ ಪ್ರಸಿದ್ಧ ವ್ಯಕ್ತಿಯಾಗಿದ್ದಾಳೆ.
1980ರ ದಶಕದಲ್ಲಿ, ಲಾಸ್ ಏಂಜಲೀಸ್ ಲೇಕರ್ಸ್‌ಗಾಗಿ ಪ್ರೋತ್ಸಾಹ ನೀಡುವ ಮುಂದಾಳುವಿನ (ಚೀರ್‌ಲೀಡರ್) ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್, ಬಹುಜನ ಬಯಸುವ ನೃತ್ಯಸಂಯೋಜಕಿಯ ಸ್ಥಾನಕ್ಕೆ ಏರಿದಳು. 1980ರ ದಶಕದ ಅಂತ್ಯ ಮತ್ತು 1990ರ ದಶಕದ ಆರಂಭದಲ್ಲಿ, ಪಾಪ್-R&B ಪ್ರಚಂಡ ಯಶಸ್ಸುಗಳ ಒಂದು ಸರಮಾಲೆಯನ್ನು ದಾಖಲಿಸುವುದಕ್ಕೆ ಮುಂಚಿತವಾಗಿದ್ದ ಸಂಗೀತದ ವಿಡಿಯೋ ಯುಗದ ಉತ್ತುಂಗದ ಕಾಲದಲ್ಲಿ ಅವಳಿಂದ ಈ ಸಾಧನೆ ಹೊರಹೊಮ್ಮಿತು. ಬಿಲ್‌ಬೋರ್ಡ್‌ನ 100 ಉತ್ತೇಜಕ ಗೀತೆಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿದ್ದ ಅವಳ ಆರು ಸಂಖ್ಯೆಯ ಏಕಗೀತೆಯ ಧ್ವನಿಮುದ್ರಿಕೆಗಳು, ಆ ಪಟ್ಟಿಯಲ್ಲಿ #1ನೇ ಶ್ರೇಯಾಂಕಕ್ಕೆ ತಲುಪಿದ್ದ ಒಂಟಿ-ಗಾಯನದ ಗಾಯಕಿಯರ ಪೈಕಿಯ ಐದನೇ ಸಮಾನ ಸ್ಥಾನವನ್ನು ಪಡೆಯುವಲ್ಲಿ ಅವಳಿಗೆ ಅನುವುಮಾಡಿಕೊಟ್ಟವು.[೩] "ಆಪೋಸಿಟ್ಸ್ ಅಟ್ರಾಕ್ಟ್"ಗಾಗಿ "ಅತ್ಯುತ್ತಮ ಸಂಗೀತದ ವಿಡಿಯೋ - ಕಿರುಸ್ವರೂಪ" ವರ್ಗದಲ್ಲಿ ಒಂದು ಗ್ರಾಮಿ ಪ್ರಶಸ್ತಿಯನ್ನು ಅವಳು ಗೆದ್ದುಕೊಂಡಳು. ಅಷ್ಟೇ ಅಲ್ಲ, "ಮಹೋನ್ನತ ನೃತ್ಯಸಂಯೋಜನೆಗಾಗಿರುವ ಪ್ರೈಮ್‌ಟೈಮ್ ಎಮಿ ಪ್ರಶಸ್ತಿ"ಯನ್ನು ಅವಳು ಎರಡು ಬಾರಿ ಗೆದ್ದುಕೊಂಡಳು. 1988ರಲ್ಲಿ ಹಾಡುಗಾರಿಕೆಯ ಪ್ರಪಂಚಕ್ಕೆ ತನ್ನ ಪಾದಾರ್ಪಣವಾದಾಗಿನಿಂದ, ಅಬ್ದುಲ್ ವಿಶ್ವಾದ್ಯಂತ ಸರಿಸುಮಾರು 54 ದಶಲಕ್ಷ ಗೀತಸಂಪುಟಗಳನ್ನು ಮಾರಾಟಮಾಡಿದ್ದಾಳೆ.[ಸೂಕ್ತ ಉಲ್ಲೇಖನ ಬೇಕು]
ತನ್ನ ಆರಂಭಿಕ ಯಶಸ್ಸಿನ ಅವಧಿಯ ನಂತರ, ತನ್ನ ವೃತ್ತಿಪರ ಜೀವನ ಹಾಗೂ ವೈಯಕ್ತಿಕ ಜೀವನಗಳಲ್ಲಿ ಒಂದರ ಹಿಂದೆ ಒಂದರಂತೆ ಬಂದ ಹಿನ್ನಡೆಗಳು ಅಥವಾ ಅಡ್ಡಿ-ಆತಂಕಗಳಿಗೆ ಅವಳು ಈಡಾಗಬೇಕಾಯಿತು. 2000ದ ದಶಕದಲ್ಲಿ ಅಮೆರಿಕನ್ ಐಡಲ್ ಎಂಬ ದೂರದರ್ಶನ ಸರಣಿಯಲ್ಲಿ ಓರ್ವ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಾಗ ಅವಳ ಹಿನ್ನಡೆಗಳು ದೂರವಾದವು ಮತ್ತು ಸದರಿ ಕಾರ್ಯಕ್ರಮದಿಂದ ಆಕೆಯು ಬಿಟ್ಟುಹೋಗುವುದಕ್ಕೆ ಮುಂಚಿನ ಎಂಟು ವರ್ಷಗಳ ಕಾಲದವರೆಗೆ ಆಕೆ ತನ್ನ ಪುನರುಜ್ಜೀವನಗೊಂಡ ಕೀರ್ತಿ ಹಾಗೂ ಯಶಸ್ಸನ್ನು ಕಂಡುಕೊಂಡಳು. ಅಲ್ಲಿಂದೀಚೆಗೆ, ಇತರ TV ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುವಿಕೆಗಳನ್ನು ಅಬ್ದುಲ್ ಪರಿಗಣಿಸಿಕೊಂಡು ಬಂದಿದ್ದು, ಹೊಸತೊಂದು ಗೀತಸಂಪುಟದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ.[೪][೫]
ಹಿನ್ನೆಲೆ
[ಬದಲಾಯಿಸಿ]ಲಾಸ್ ಏಂಜಲೀಸ್ನ ಸ್ಯಾನ್ ಫೆರ್ನಾಂಡೊ ವ್ಯಾಲಿಯಲ್ಲಿ ಅಬ್ದುಲ್ ಜನಿಸಿದಳು. ಇವಳ ತಾಯಿ ಲೊರ್ರೇನ್ (ಜನ್ಮನಾಮ: ರೈಕಿಸ್) ಓರ್ವ ಸಂಗೀತ ಕಛೇರಿಯ ಪಿಯಾನೋ ವಾದಕಿಯಾಗಿದ್ದು, ಚಲನಚಿತ್ರ ನಿರ್ದೇಶಕ ಬಿಲ್ಲಿ ವೈಲ್ಡರ್‌ನ ಸಹಾಯಕಿಯಾಗಿ ಒಮ್ಮೆ ಕೆಲಸ ಮಾಡಿದ್ದಳು. ಅಬ್ದುಲ್‌ಳ ತಂದೆ ಹ್ಯಾರಿ ಅಬ್ದುಲ್, ಹಿಂದೆ ಓರ್ವ ಜಾನುವಾರು ವ್ಯಾಪಾರಿಯಾಗಿದ್ದ ಮತ್ತು ಮರಳು ಹಾಗೂ ಜಲ್ಲಿಕಲ್ಲು ವ್ಯವಹಾರವೊಂದರ ಮಾಲೀಕನಾಗಿದ್ದ. ಓರ್ವ ಸಿರಿಯಾದ ಯೆಹೂದಿಯಾಗಿದ್ದ ಅವಳ ತಂದೆ, ಸಿರಿಯಾದ ಅಲೆಪ್ಪೊದಲ್ಲಿ ಜನಿಸಿ ಬ್ರೆಜಿಲ್‌ನಲ್ಲಿ ಬೆಳೆದು, ತರುವಾಯ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋದ; ಅಬ್ದುಲ್‌ಳ ತಾಯಿಯೂ ಸಹ ಯೆಹೂದ್ಯ ಮತದವಳಾಗಿದ್ದು, ಮೂಲತಃ ಮನಿಟೋಬಾದ ವಿನ್ನಿಪೆಗ್ ಎಂಬ ಪ್ರದೇಶಕ್ಕೆ ಸೇರಿದವಳಾಗಿದ್ದಳು. ಅವಳ ಮೂಲಕವೇ ಅಬ್ದುಲ್‌ಗೆ ಕೆನಡಾದ ಪೌರತ್ವ ದೊರಕಿತು.
ಓರ್ವ ಅತ್ಯಾಸಕ್ತಿಯ ನರ್ತಕಿಯಾಗಿದ್ದ ಅಬ್ದುಲ್, ಜೀನ್ ಕೆಲ್ಲಿಯಿಂದ ಮನರಂಜನಾ ಉದ್ಯಮದ ವೃತ್ತಿಜೀವನವೊಂದರ ಕಡೆಗೆ ಪ್ರೇರೇಪಿಸಲ್ಪಟ್ಟು ಸಿಂಗಿಂಗ್ ಇನ್ ದಿ ರೇನ್ ಎಂಬ ಶ್ರೇಷ್ಠ ಚಲನಚಿತ್ರದಲ್ಲಿ ಕಾಣಿಸಿಕೊಂಡಳು. ಡೆಬ್ಬೀ ಅಲ್ಲೆನ್, ಫ್ರೆಡ್ ಆಸ್ಟೇರ್, ಮತ್ತು ಬಾಬ್ ಫೋಸ್ಸೆ ಇವರೇ ಮೊದಲಾದವರು ಅವಳ ಈ ವೃತ್ತಿಜೀವನಕ್ಕೆ ಪ್ರೇರಣೆ ನೀಡಿದರು.[೬][not in citation given]
ಎರಡು ವರ್ಷ ವಯಸ್ಸಿನವಳಿರುವಾಗ ಫುಟ್‌ಬಾಲ್ ಕ್ರೀಡೆಯ ಪಾಠಗಳನ್ನು ಕಲಿಯಲು ಶುರುಮಾಡಿದ ಅಬ್ದುಲ್, ಅದರಲ್ಲಿ ಒಂದು ಸ್ವಾಭಾವಿಕವಾದ ಪ್ರತಿಭೆಯನ್ನು ತೋರಿಸಿದಳು. ಅವಳು ಬೆಳೆಯುತ್ತಿರುವಾಗ, ರಕ್ಷಣಾ ಸಾಮರ್ಥ್ಯ, ಆಕ್ರಮಣಶೀಲತೆ ಹಾಗೂ ಗೋಲುರಕ್ಷಕನ ತಂತ್ರಗಾರಿಕೆಯ ಕುರಿತಾದ ತರಗತಿಗಳಲ್ಲಿ ಪಾಲ್ಗೊಂಡಳು. ವ್ಯಾನ್ ನಯ್ಸ್ ಹೈಸ್ಕೂಲ್‌ಗೆ ಸೇರಿಕೊಂಡ ಆಕೆ, ಅಲ್ಲಿ ಓರ್ವ ಪ್ರೋತ್ಸಾಹ ನೀಡುವ ಮುಂದಾಳು ಹಾಗೂ ಓರ್ವ ಗೌರವ ವಿದ್ಯಾರ್ಥಿನಿಯಾಗಿದ್ದಳು. 15 ವರ್ಷ ವಯಸ್ಸಿನವಳಾಗಿದ್ದಾಗ, ಪಾಮ್ ಸ್ಪ್ರಿಂಗ್ಸ್ ಸಮೀಪದಲ್ಲಿದ್ದ ನೃತ್ಯ ಶಿಬಿರವೊಂದಕ್ಕೆ ಸೇರಿಕೊಳ್ಳಲು ಅವಳು ಒಂದು ವಿದ್ಯಾರ್ಥಿ ವೇತನವನ್ನು ಸ್ವೀಕರಿಸಿದಳು, ಮತ್ತು 1978ರಲ್ಲಿ ಜೂನಿಯರ್ ಹೈಸ್ಕೂಲ್ ಎಂಬ ಒಂದು ಕಡಿಮೆ-ಬಂಡವಾಳದ, ಸ್ವತಂತ್ರ, ಸಂಗೀತ ಪ್ರಧಾನ ಚಲನಚಿತ್ರದಲ್ಲಿ ಕಾಣಿಸಿಕೊಂಡಳು.
ನಾರ್ತ್‌ರಿಜ್‌ನಲ್ಲಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಬ್ದುಲ್ ಪ್ರಸಾರ ಕಾರ್ಯದ ವಿಷಯವನ್ನು ಅಧ್ಯಯನ ಮಾಡಿದಳು. ಅವಳ ಮೊದಲ ವರ್ಷದ (ಹೊಸವಿದ್ಯಾರ್ಥಿ) ಅವಧಿಯಲ್ಲಿ, ಲೇಕರ್ ಗರ್ಲ್ಸ್ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದ ಲಾಸ್ ಏಂಜಲೀಸ್ ಲೇಕರ್ಸ್ NBA ಬ್ಯಾಸ್ಕೆಟ್‌ಬಾಲ್ ತಂಡದ ಪ್ರೋತ್ಸಾಹ ನೀಡುವ ಮುಂದಾಳತ್ವ ಪಡೆಗೆ ಸಂಬಂಧಿಸಿದಂತೆ 700 ಅಭ್ಯರ್ಥಿಗಳ ಒಂದು ಗುಂಪಿನಿಂದ ಅವಳು ಆರಿಸಲ್ಪಟ್ಟಳು. ಮೂರು ತಿಂಗಳೊಳಗಾಗಿ ಅವಳು ಪ್ರಧಾನ ನೃತ್ಯಸಂಯೋಜಕಿಯಾಗಿ ಮಾರ್ಪಟ್ಟಳು. ತನ್ನ ನೃತ್ಯ ಸಂಯೋಜನೆ ಹಾಗೂ ನರ್ತನದ ವೃತ್ತಿಜೀವನದ ಕಡೆಗೆ ಹೆಚ್ಚಿನ ಗಮನವನ್ನು ನೀಡುವ ಸಲುವಾಗಿ, ಆರು ತಿಂಗಳ ನಂತರ ಅವಳು ವಿಶ್ವವಿದ್ಯಾಲಯವನ್ನು ಬಿಟ್ಟಳು.
ವೃತ್ತಿ ಜೀವನ
[ಬದಲಾಯಿಸಿ]ನೃತ್ಯ ಮತ್ತು ನೃತ್ಯ ಸಂಯೋಜನೆಯ ಯುಗ (1982–1986)
[ಬದಲಾಯಿಸಿ]ದಿ ಜಾಕ್‌ಸನ್ಸ್ ವಾದ್ಯವೃಂದದಿಂದ ಅಬ್ದುಲ್ ಪತ್ತೆಹಚ್ಚಲ್ಪಟ್ಟು ಬೆಳಕಿಗೆ ಬಂದಳು. ವಾದ್ಯವೃಂದದ ಕೆಲವೊಂದು ಸದಸ್ಯರು ಲಾಸ್ ಏಂಜಲೀಸ್ ಲೇಕರ್‌ನ ಆಟವೊಂದರಲ್ಲಿ ಅವಳನ್ನು ಗಮನಿಸಿದ ನಂತರ ಇದು ಸಂಭವಿಸಿತ್ತು.[೭] ಸದರಿ ವಾದ್ಯವೃಂದದ "ಟಾರ್ಚರ್" ಎಂಬ ಹೆಸರಿನ ಏಕಗೀತೆಯ ಧ್ವನಿಮುದ್ರಿಕೆಯ ವಿಡಿಯೋ ಆವೃತ್ತಿಗೆ ನೃತ್ಯ ಸಂಯೋಜನೆ ಮಾಡಲು ಅವಳು ಒಪ್ಪಂದವೊಂದಕ್ಕೆ ಸಹಿಹಾಕಿದಳು.[೮] ಈ ಕುರಿತಾದ ಕ್ಷಣಗಳನ್ನು ನಂತರದಲ್ಲಿ ಅಬ್ದುಲ್ ನೆನಪಿಸಿಕೊಳ್ಳುತ್ತಾ, "ಹೇಗೆ ನೃತ್ಯಮಾಡುವುದು ಎಂಬುದನ್ನು ಜಾಕ್‌ಸನ್ಸ್ ತಂಡದವರಿಗೆ ಹೇಗೆ ಹೇಳುವುದು ಎಂಬುದೇ ನನ್ನ ಏಕೈಕ ಸಮಸ್ಯೆಯಾಗಿತ್ತು. ಏನೆಲ್ಲಾ ವಾಡಿಕೆಯ ಅನುಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ಅವರಿಗೆ ನಾನು ಹೇಗೆ ಹೇಳುತ್ತಿದ್ದೆ ಎಂದು ಊಹಿಸಿಕೊಳ್ಳಿ. ನಾನು ಚಿಕ್ಕವಳಾಗಿದ್ದೆ ಮತ್ತು ಗಾಬರಿಗೊಂಡಿದ್ದೆ. ಆ ಹಂತವನ್ನು ಹೇಗೆ ದಾಟಿಕೊಂಡು ಬಂದೆ ಎಂದು ನನಗೇ ನಂಬಲಾಗುತ್ತಿಲ್ಲ" ಎಂದು ಹೇಳಿದಳು.[೯] ಸದರಿ ವಿಡಿಯೋದಲ್ಲಿನ ಯಶಸ್ವೀ ನೃತ್ಯ ಸಂಯೋಜನೆಯು, ಅಬ್ದುಲ್ ಪಾಲಿಗೆ ಅಂದು ಹೊಸ ವೃತ್ತಿಜೀವನವಾಗಿದ್ದ ಸಂಗೀತದ ವಿಡಿಯೋಗಳಲ್ಲಿನ ನೃತ್ಯಸಂಯೋಜಕಿಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಅನುವುಮಾಡಿಕೊಟ್ಟಿತು.[೧೦] ಜಾಕ್‌ಸನ್ಸ್ ವಾದ್ಯವೃಂದದ ವಿಕ್ಟರಿ ಪ್ರವಾಸಕ್ಕೆ ಸಂಬಂಧಿಸಿದ ನೃತ್ಯಸಂಯೋಜಕಿಯಾಗಿ ಅಬ್ದುಲ್ ಆಯ್ಕೆಗೊಂಡಿದ್ದ ವಿಡಿಯೋದ ಯಶಸ್ಸೂ ಸಹ ಇದಕ್ಕೆ ಕಾರಣವಾಗಿತ್ತು.[೧೦]
1980ರ ದಶಕದಾದ್ಯಂತ ಹಲವಾರು ಗಾಯಕ-ಗಾಯಕಿಯರಿಗೆ ಸಂಬಂಧಿಸಿದ ವಿಡಿಯೋಗಳಿಗೆ ಅಬ್ದುಲ್ ನೃತ್ಯಸಂಯೋಜನೆಯನ್ನು ಮಾಡಿದಳು. ಜನೆಟ್ ಜಾಕ್ಸನ್ಳ ಕಂಟ್ರೋಲ್ ವಿಡಿಯೋದ ಅವಧಿಯಲ್ಲಿ ಅವಳಿಗಾಗಿ ನೃತ್ಯ ಸಂಯೋಜಿಸಿದ ಅನೇಕ ವಿಡಿಯೋಗಳೂ ಇದರಲ್ಲಿ ಸೇರಿದ್ದವು. 1995ರಲ್ಲಿ, ಪೌಲಾ ಅಬ್ದುಲ್'ಸ್ ಗೆಟ್ ಅಪ್ ಅಂಡ್ ಡಾನ್ಸ್! ಎಂಬ ಶೀರ್ಷಿಕೆಯ ಒಂದು ನೃತ್ಯ ತಾಲೀಮಿನ ವಿಡಿಯೋವನ್ನು ಅಬ್ದುಲ್ ಬಿಡುಗಡೆ ಮಾಡಿದಳು. 2003ರಲ್ಲಿ DVD ಸ್ವರೂಪದಲ್ಲಿ ಮರು-ಬಿಡುಗಡೆಗೊಂಡ ಈ ವಿಡಿಯೋ, ಒಂದು ವೇಗದ-ಗತಿಯ ಹಿಪ್-ಹಾಪ್ ಶೈಲಿಯ ತಾಲೀಮನ್ನು ಒಳಗೊಂಡಿತ್ತು. 1998ರಲ್ಲಿ ಕಾರ್ಡಿಯೋ ಡಾನ್ಸ್ ಎಂಬ ಶೀರ್ಷಿಕೆಯ ಎರಡನೇ ವಿಡಿಯೋವೊಂದನ್ನು ಅವಳು ಬಿಡುಗಡೆ ಮಾಡಿದಳು (DVD ಸ್ವರೂಪದಲ್ಲಿ ಇದು 2000ನೇ ಇಸವಿಯಲ್ಲಿ ಮರು-ಬಿಡುಗಡೆಯಾಯಿತು). 2005ರ ಡಿಸೆಂಬರ್‌ನಲ್ಲಿ, ಕಾರ್ಡಿಯೋ ಚೀರ್ ಎಂಬ ಶೀರ್ಷಿಕೆಯನ್ನು ಹೊಂದಿದ್ದ, ಪ್ರೋತ್ಸಾಹ ನೀಡುವ ಮುಂದಾಳತ್ವದ/ಯುಕ್ತತೆಯ/ನೃತ್ಯದ DVD ಸರಣಿಯೊಂದನ್ನು ಅಬ್ದುಲ್ ಬಿಡುಗಡೆ ಮಾಡಿದಳು. ಪ್ರೋತ್ಸಾಹ ನೀಡುವ ಮುಂದಾಳತ್ವ ಹಾಗೂ ನೃತ್ಯದೊಂದಿಗೆ ತೊಡಗಿಸಿಕೊಂಡಿರುವ ಮಕ್ಕಳು ಹಾಗೂ ಹದಿಹರೆಯದ ಹುಡುಗಿಯರಿಗಾಗಿ ಇದನ್ನು ಮಾರುಕಟ್ಟೆಗೆ ಬಿಡಲಾಗಿದೆ.
ಚಲನಚಿತ್ರ ರಂಗದಲ್ಲಿಯೂ ಅಬ್ದುಲ್ ನೃತ್ಯಸಂಯೋಜನೆಯನ್ನು ಮಾಡಿದ್ದು, ಬಿಗ್ ಚಿತ್ರದಲ್ಲಿನ ಟಾಮ್ ಹ್ಯಾಂಕ್ಸ್‌ನ ಪಾತ್ರವನ್ನು ಒಳಗೊಂಡಿರುವ ಒಂದು ದೈತ್ಯ ಕೀಲಿಮಣೆಗೆ (ಕೀಬೋರ್ಡ್) ಸಂಬಂಧಿಸಿದ ಸನ್ನಿವೇಶಗಳನ್ನು ಅವಳು ಸಂಯೋಜಿಸಿದ್ದಾಳೆ. ಅವಳ ಕಾರ್ಯ ನಿರ್ವಹಣೆಯಿರುವ ಇನ್ನಿತರ ಚಲನಚಿತ್ರಗಳೆಂದರೆ, ಕಮಿಂಗ್ ಟು ಅಮೆರಿಕಾ , ಆಕ್ಷನ್ ಜಾಕ್‌ಸನ್ , ಜೆರ್ರಿ ಮ್ಯಾಗೈರ್, ದಿ ರನಿಂಗ್ ಮ್ಯಾನ್, ಅಮೆರಿಕನ್ ಬ್ಯೂಟಿ (1999 ಚಲನಚಿತ್ರ), ಕಾಂಟ್ ಬೈ ಮಿ ಲವ್ (ಚಲನಚಿತ್ರ) , ಮತ್ತು ಆಲಿವರ್ ಸ್ಟೋನ್‌ನ, ದಿ ಡೋರ್ಸ್. [೧೧] ದೂರದರ್ಶನದಲ್ಲಿ ಅವಳು ತೊಡಗಿಸಿಕೊಂಡಿರುವ ಉದಾಹರಣೆಗಳಲ್ಲಿ ದಿ ಟ್ರೇಸಿ ಉಲ್‌ಮನ್ ಷೋ, ಅಮೆರಿಕಾದ ಸಂಗೀತ ಪ್ರಶಸ್ತಿಗಳು, ಅಕಾಡೆಮಿ ಪ್ರಶಸ್ತಿಗಳು ಸೇರಿವೆ. ಅಷ್ಟೇ ಅಲ್ಲ, 2005–2006 NFL ಋತುವಿನ ಅವಧಿಯಲ್ಲಿ ಬಿತ್ತರಗೊಂಡ ಜನಪ್ರಿಯವಾದ ಬರ್ಗರ್ ಕಿಂಗ್ ದೂರದರ್ಶನ ಜಾಹೀರಾತುಗಳ ಒಂದು ಸರಮಾಲೆಯಲ್ಲಿ ಕಂಡುಬಂದಂತೆ ದಿ ಕಿಂಗ್ಸ್ ಟಚ್‌ಡೌನ್ ಸೆಲೆಬ್ರೇಷನ್‌ನಂಥ ಹಲವಾರು ಜಾಹೀರಾತುಗಳಲ್ಲಿಯೂ ಅವಳು ತನ್ನ ಕೊಡುಗೆಯನ್ನು ಸಲ್ಲಿಸಿದ್ದಾಳೆ.[೧೧]
ಫಾರೆವರ್ ಯುವರ್ ಗರ್ಲ್ ಯುಗ (1987–1990)
[ಬದಲಾಯಿಸಿ]1987ರಲ್ಲಿ, ಒಂದು ಹಾಡುಗಾರಿಕೆಯ ಪ್ರಾತ್ಯಕ್ಷಿಕೆ ಅಥವಾ ಪ್ರದರ್ಶಕ ಬೋಧನೆಯನ್ನು ತಯಾರಿಸಲು ಅಬ್ದುಲ್ ತನ್ನ ಉಳಿತಾಯದ ಹಣವನ್ನು ಬಳಸಿಕೊಂಡಳು. ಅವಳದು ಅಷ್ಟೇನೂ ನುರಿತಿಲ್ಲದ ಧ್ವನಿಯಾಗಿದ್ದರೂ ಸಹ, ವೀಕ್ಷಣೆಗೆ-ಸಂಬಂಧಿಸಿದ, MTV-ಪ್ರೇರಿತ, ಪಾಪ್ ಸಂಗೀತ ಉದ್ಯಮಕ್ಕೆ ಅವಳ ಅಸಾಧಾರಣ ಮಟ್ಟದ ನೃತ್ಯಗಾರಿಕೆಯು ಮಾರಬಲ್ಲ ಸರಕು ಎಂದು ಸಾಬೀತಾಯಿತು.
1988ರಲ್ಲಿ, ಫಾರೆವರ್ ಯುವರ್ ಗರ್ಲ್ ಎಂಬ ತನ್ನ ಪಾಪ್-ಪಾದಾರ್ಪಣೆಯ ಗೀತಸಂಪುಟವನ್ನು ಅಬ್ದುಲ್ ಬಿಡುಗಡೆ ಮಾಡಿದಳು. ಬಿಲ್‌ಬೋರ್ಡ್ 200 ಗೀತಸಂಪುಟ ಮಾರಾಟದ ಕೋಷ್ಟಕದಲ್ಲಿ #1ನೇ ಸ್ಥಾನವನ್ನು ದಕ್ಕಿಸಿಕೊಳ್ಳಲು ಸದರಿ ಗೀತಸಂಪುಟವು 62 ವಾರಗಳನ್ನು ತೆಗೆದುಕೊಂಡಿತಲ್ಲದೇ, ಅದು ಗೀತಸಂಪುಟವೊಂದಕ್ಕೆ ಸಂಬಂಧಿಸಿದ #1 ಸ್ಥಾನಕ್ಕೆ ಮುಂಚಿನ ಮಾರುಕಟ್ಟೆಯಲ್ಲಿದ್ದ ಸುದೀರ್ಘ ಅವಧಿ ಎನಿಸಿಕೊಂಡಿತು ಮತ್ತು ಆ ಸ್ಥಾನದಲ್ಲಿ 10 ವಾರಗಳವರೆಗೆ ಉಳಿದುಕೊಂಡಿತ್ತು. ಸದರಿ ಗೀತಸಂಪುಟವು 1989ರ ವಸಂತಋತು ಹಾಗೂ ಬೇಸಿಗೆಯಲ್ಲಿ ಅಂತಿಮವಾಗಿ ಮಲ್ಟಿ-ಪ್ಲ್ಯಾಟಿನಂ ಕೀರ್ತಿಗೆ ಪಾತ್ರವಾಯಿತು. ಅಷ್ಟೇ ಅಲ್ಲ, ಇದು ಅಮೆರಿಕಾದ ಐದು ಅಗ್ರಗಣ್ಯ ಮೂರು-ಏಕಗೀತೆಯ ಧ್ವನಿಮುದ್ರಿಕೆಗಳನ್ನು ಉತ್ಪಾದಿಸಿತು, ಅವುಗಳ ಪೈಕಿ ನಾಲ್ಕು #1ರ ಸ್ಥಾನದಲ್ಲಿ ಗುರುತಿಸಿಕೊಂಡವು (ಮೂರು 1989ರಲ್ಲಿ ಮತ್ತು ಒಂದು 1990ರಲ್ಲಿ). ಆ ಐದು ಅಗ್ರಗಣ್ಯ ಧ್ವನಿಮುದ್ರಿಕೆಗಳೆಂದರೆ: "ಸ್ಟ್ರೈಟ್ ಅಪ್", "ಫಾರೆವರ್ ಯುವರ್ ಗರ್ಲ್", "ಕೋಲ್ಡ್ ಹಾರ್ಟೆಡ್", "(ಇಟ್ಸ್ ಜಸ್ಟ್) ದಿ ವೇ ದಟ್ ಯು ಲವ್ ಮಿ", ಮತ್ತು ಆಪೋಸಿಟ್ಸ್ ಅಟ್ರಾಕ್ಟ್". ಷಟ್ ಅಪ್ ಅಂಡ್ ಡಾನ್ಸ್ ಎಂಬ ಒಂದು ರೀಮಿಕ್ಸ್ ಗೀತಸಂಪುಟವೂ ಸಹ ಬಿಡುಗಡೆಯಾಯಿತು ಮತ್ತು ಬಿಲ್‌ಬೋರ್ಡ್‌ನ ಗೀತಸಂಪುಟದ ಕೋಷ್ಟಕದಲ್ಲಿ #7ನೇ ಸ್ಥಾನವನ್ನು ಅದು ಪಡೆಯಿತು. ಇದು ಇಲ್ಲಿಯವರೆಗಿನ ಅತ್ಯಂತ ಯಶಸ್ವೀ ರೀಮಿಕ್ಸ್ ಗೀತಸಂಪುಟಗಳ ಪೈಕಿ ಒಂದಾಗಿದೆ. "ಆಪೋಸಿಟ್ಸ್ ಅಟ್ರಾಕ್ಟ್"ಗೆ ಸಂಬಂಧಿಸಿದ ಗ್ರಾಮಿ ಪ್ರಶಸ್ತಿ-ವಿಜೇತ ವಿಡಿಯೋದಲ್ಲಿ MC ಸ್ಕ್ಯಾಟ್ ಕ್ಯಾಟ್ ಎಂಬ ಒಂದು ಜೀವಂತವೆನಿಸುವ ಬೆಕ್ಕು ಕಾಣಿಸಿಕೊಂಡಿತ್ತು. ಕ್ಲಬ್ MTV ಪ್ರವಾಸವೊಂದಕ್ಕೂ ತೆರಳಿದ ಅಬ್ದುಲ್, ಅಲ್ಲಿ ತನ್ನ ಗೀತಸಂಪುಟದಿಂದ ಆಯ್ದ ಗೀತೆಗಳನ್ನು ಪ್ರಸ್ತುತಪಡಿಸಿದಳು. ಈ ಪ್ರವಾಸದಲ್ಲಿ ಇನ್ನೂ ಅನೇಕ ಪ್ರದರ್ಶನಗಳು ಕಂಡುಬಂದವು.
ಫಾರೆವರ್ ಯುವರ್ ಗರ್ಲ್ ಗೀತಸಂಪುಟದಲ್ಲಿ ಓರ್ವ ಹಿಮ್ಮೇಳದ ಹಾಡುಗಾರ್ತಿಯಾಗಿದ್ದ ವೆಟ್ಟೆ ಮೆರೀನ್ ಎಂಬಾಕೆಯು 1990ರ ದಶಕದ ಆರಂಭದಲ್ಲಿ, ಗೀತಸಂಪುಟದಲ್ಲಿರುವ "ಕೋ-ಲೀಡ್ ವೋಕಲ್ಸ್" ಎಂಬ ಹಾಡನ್ನು ಹಾಡಿರುವುದು ತಾನು ಎಂದು ಪ್ರತಿಪಾದಿಸಿ, ಪರಿಹಾರಕ್ಕಾಗಿ ಪೌಲಾ ಮತ್ತು ವರ್ಜಿನ್ ರೆಕಾರ್ಡ್ಸ್ ಮೇಲೆ ದಾವೆ ಹೂಡಿದಳು. ಒಂದು ತಿಂಗಳಷ್ಟು ಅವಧಿಯ ನ್ಯಾಯಾಲಯದ ನಡೆವಳಿಗಳ ನಂತರ ಅಬ್ದುಲ್ ಮತ್ತು ವರ್ಜಿನ್ ಸದರಿ ಪ್ರಕರಣವನ್ನು ಗೆದ್ದರು.[೧೨]
ಸ್ಪೆಲ್‌ಬೌಂಡ್ ಯುಗ (1991–1994)
[ಬದಲಾಯಿಸಿ]1991ರಲ್ಲಿ ಬಂದ, ಅಬ್ದುಲ್‌ಳ ನಂತರದ ಗೀತಸಂಪುಟವಾದ ಸ್ಪೆಲ್‌ಬೌಂಡ್ , ಪ್ರಚಂಡ ಯಶಸ್ಸಿನ ಗೀತೆಗಳ ಒಂದು ಸರಮಾಲೆಯನ್ನೇ ಒಳಗೊಂಡಿತ್ತು, ಹಾಗೂ ವಿಶ್ವಾದ್ಯಂತ ಇದರ 13 ದಶಲಕ್ಷ ಪ್ರತಿಗಳು ಮಾರಾಟಗೊಂಡವು. ಸ್ಪೆಲ್‌ಬೌಂಡ್ ನ ಮೊದಲ ಏಕಗೀತೆಯಾದ "ರಷ್, ರಷ್" ಎಂಬುದು ಒಂದು ಗೀತರೂಪಕವಾಗಿದ್ದು, ನಿರಂತರವಾಗಿ ಐದು ವಾರಗಳವರೆಗೆ ಬಿಲ್‌ಬೋರ್ಡ್‌ನ 100 ಉತ್ತೇಜಕ ಗೀತೆಗಳ ಕೋಷ್ಟಕದಲ್ಲಿ ಅಗ್ರಸ್ಥಾನವನ್ನು ಗಳಿಸಿತು. ಇದು ತನ್ನ ಸಂಗೀತದ ವಿಡಿಯೋಗೆ ಹಾಗೂ ಜೇಮ್ಸ್ ಡೀನ್ ಪಾತ್ರದಲ್ಲಿ ಕಿಯಾನು ರೀವ್ಸ್ ಕಾಣಿಸಿಕೊಂಡಿದ್ದ ರೆಬೆಲ್ ವಿಥೌಟ್ ಎ ಕಾಸ್ ಸ್ವರಶ್ರೇಣಿಗೆ ಸಂಬಂಧಿಸಿದಂತೆ ಗಮನ ಸೆಳೆದಿತ್ತು. ಗೀತಸಂಪುಟಕ್ಕೆ ಸೇರಿದ್ದ ಎರಡನೇ ಬಿಡುಗಡೆಯಾದ "ಪ್ರಾಮಿಸ್ ಆಫ್ ಎ ನ್ಯೂ ಡೇ" ಕೂಡಾ ನಂ. 1 ಸ್ಥಾನವನ್ನು ಮುಟ್ಟಿತು. ಇದನ್ನು ಅನುಸರಿಸಿಕೊಂಡು ಅತಿಶ್ರೇಷ್ಠ 10 ಗೀತೆಗಳಲ್ಲಿ ಸ್ಥಾನ ಪಡೆದುಕೊಂಡ "ಬ್ಲೋಯಿಂಗ್ ಕಿಸಸ್ ಇನ್ ದಿ ವಿಂಡ್" ಎಂಬ ಪ್ರಚಂಡ ಯಶಸ್ಸಿನ ಗೀತೆ ಹಾಗೂ ಅತಿಶ್ರೇಷ್ಠ 20 ಗೀತೆಗಳಲ್ಲಿ ಸ್ಥಾನ ಪಡೆದುಕೊಂಡ "ವೈಬಿಯಾಲಜಿ" ಮತ್ತು "ವಿಲ್ ಯೂ ಮ್ಯಾರಿ ಮಿ?" ಎಂಬ ಪ್ರಚಂಡ ಯಶಸ್ಸಿನ 2 ಗೀತೆಗಳು ಬಂದವು.[೧೩] ಅವಳ ಪ್ರಥಮ ಪ್ರವೇಶದ ಗೀತಸಂಪುಟದಲ್ಲಿ ಕೇಳಲ್ಪಟ್ಟಿದ್ದ ನೃತ್ಯ-ಉದ್ದೇಶಿತ ಸೂತ್ರದ ಬಹುಭಾಗವನ್ನು ಸ್ಪೆಲ್‌ಬೌಂಡ್ ಗೀತಸಂಪುಟವು ಉಳಿಸಿಕೊಂಡಿತು. "U" ಎಂಬ ಧ್ವನಿಪಥವು ಪೌಲಾಗೋಸ್ಕರವೇ ರಾಜಕುಮಾರನಿಂದ ಬರೆಯಲ್ಪಟ್ಟಿತು.
"ಅಂಡರ್ ಮೈ ಸ್ಪೆಲ್ ಟೂರ್" ಎಂಬ ಯೋಜನೆಯ ಮೂಲಕ ಈ ಗೀತಸಂಪುಟಕ್ಕೆ ಅಬ್ದುಲ್ ಪ್ರಚಾರ ನೀಡಿ ಉತ್ತೇಜಿಸಿದಳು. ಇದು ಅಭಿಮಾನಿಗಳಿಗಾಗಿ MTV ಸ್ಪರ್ಧೆಯೊಂದರಿಂದ ಹೆಸರಿಸಲ್ಪಟ್ಟಿತ್ತು. ತಾಲೀಮಿನ ಅವಧಿಯಲ್ಲಿ ಸಂಭವಿಸಿದ ಒಂದು ಅಪಘಾತದಿಂದಾಗಿ ಈ ಪ್ರವಾಸವು ಹೆಚ್ಚೂಕಮ್ಮಿ ರದ್ದುಗೊಂಡಿತ್ತು. ನಿಗದಿತ ಕಾರ್ಯಸೂಚಿಯಂತೆ ಪ್ರವಾಸವು ಪ್ರಾರಂಭವಾಗಿ, 1991ರ ಅಕ್ಟೋಬರ್‌ನಿಂದ 1992ರ ಬೇಸಿಗೆ ಕಾಲದವರೆಗೆ ನಡೆಯಿತು. 1991ರಲ್ಲಿ , ಜಾಹೀರಾತು ವಲಯವನ್ನು ಅಪ್ಪಿಕೊಂಡ ಅಬ್ದುಲ್,
ಜನಪ್ರಿಯವಾದ ಡಯೆಟ್ ಕೋಕ್ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಳು. ಅವಳ ಆರಾಧ್ಯದೈವವಾದ ಓರ್ವ ಯುವ ಜೀನ್ ಕೆಲ್ಲಿಯ ಡಿಜಿಟಲ್ ಬಿಂಬದೊಂದಿಗೆ ಅವಳು ನೃತ್ಯಮಾಡಿದ್ದು ಈ ಜಾಹೀರಾತಿನ ಮುಖ್ಯ ಅಂಶವಾಗಿತ್ತು.
ಹೆಡ್ ಓವರ್ ಹೀಲ್ಸ್ ಯುಗ (1995–1996)
[ಬದಲಾಯಿಸಿ]1995ರ ಹೊತ್ತಿಗೆ, ಬ್ಯುಲಿಮಿಯಾ ನರ್ವೋಸಾ ಎಂದು ಕರೆಯಲಾಗುವ ಆಹಾರ ಸೇವನೆಯಲ್ಲಿನ ಅಸಮರ್ಪಕತೆಯ ಸಮಸ್ಯೆಯೊಂದಿಗಿನ ತನ್ನ ಹೋರಾಟದಿಂದ ಪೌಲಾ ಅಬ್ದುಲ್ ಚೇತರಿಸಿಕೊಂಡಿದ್ದಳು ಮತ್ತು ಹೆಡ್ ಓವರ್ ಹೀಲ್ಸ್ ಎಂಬ ತನ್ನ ಹೊಸ ಗೀತಸಂಪುಟದೊಂದಿಗೆ ವ್ಯಾಪಕ ಪ್ರಚಾರದ ನೆಲೆಗೆ ಮರಳಲು ಅವಳು ಸಿದ್ಧತೆ ನಡೆಸಿದಳು. ಸದರಿ ಗೀತಸಂಪುಟವು ಸಮ್ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತು, ಮತ್ತು ಇದರ ಏಕಗೀತೆಗಳು ರೇಡಿಯೋದಲ್ಲಿ ಸಾಧಾರಣ ಮಟ್ಟದ ಯಶಸ್ಸನ್ನು ಪಡೆದವು. ಗೀತಸಂಪುಟದ ಮೊದಲ ಏಕಗೀತೆಯಾದ "ಮೈ ಲವ್ ಈಸ್ ಫಾರ್ ರಿಯಲ್"ನಲ್ಲಿ R&B ಹಾಗೂ ಮಧ್ಯ ಪ್ರಾಚ್ಯದ ಸಾಂಪ್ರದಾಯಿಕ ಸಂಗೀತವಾದ್ಯಗಳ ಒಂದು ಬೆಸುಗೆಯನ್ನು ಮಾಡಲಾಗಿತ್ತು, ಹಾಗೂ ಓಫ್ರಾ ಹಝಾ ಎಂಬ ಯೆಮನಿ-ಇಸ್ರೇಲೀ ಗಾಯಕಿಯೊಂದಿಗೆ ಇದನ್ನು ಪ್ರಸ್ತುತಪಡಿಸಲಾಗಿತ್ತು. ಇದರ ಜೊತೆಯಿರುವ ಲಾರೆನ್ಸ್ ಆಫ್ ಅರೇಬಿಯಾ -ಪ್ರೇರಿತ ಸಂಗೀತದ ವಿಡಿಯೋವನ್ನು, ಕ್ಲೂಲೆಸ್ ಚಲನಚಿತ್ರದ ಒಂದು ಪೀಠಿಕೆಯಂತೆ ವಿಶ್ವಾದ್ಯಂತದ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು. ಕ್ಲಬ್ಬುಗಳಲ್ಲಿ ಇದು ಪ್ರಚಂಡ ಯಶಸ್ಸನ್ನು ದಾಖಲಿಸಿತು (ಬಿಲ್‌ಬೋರ್ಡ್‌ನ ಉತ್ತೇಜಕ ನೃತ್ಯ ಸಂಗೀತ/ಕ್ಲಬ್ ಸಂಗೀತದ ಕೋಷ್ಟಕದಲ್ಲಿ #1ನೇ ಸ್ಥಾನದಲ್ಲಿ ಇದು ನೆಲೆಗೊಂಡಿತ್ತು), ಸದರಿ ಏಕಗೀತೆಯು ಬಿಲ್‌ಬೋರ್ಡ್‌ನ 100 ಉತ್ತೇಜಕ ಗೀತೆಗಳ ಕೋಷ್ಟಕದಲ್ಲಿ #28ನೇ ಸ್ಥಾನದಲ್ಲೇ ನಿಂತುಬಿಟ್ಟಿತು. ಮುಖ್ಯವಾಹಿನಿಯ ಸಂಗೀತ ಕೋಷ್ಟಕದಲ್ಲಿನ ಯಶಸ್ಸಿನ ಕೊರತೆಯ ಹೊರತಾಗಿಯೂ, ಸದರಿ ಏಕಗೀತೆಯು MTV ವಿಡಿಯೋ ಸಂಗೀತದ ಹಲವಾರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು.
"ಕ್ರೇಝಿ ಕೂಲ್" ಎಂಬ ಎರಡನೇ ಏಕಗೀತೆಯು U.S.ನಲ್ಲಿ ಅಲ್ಪ ಪ್ರಮಾಣದ ಯಶಸ್ಸನ್ನು ಸಂಪಾದಿಸಿದರೂ, ನೃತ್ಯ ಸಂಬಂಧಿತ ಕೋಷ್ಟಕಗಳಲ್ಲಿ #13ನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. "ಏನ್ಟ್ ನೆವರ್ ಗೊನ್ನಾ ಗಿವ್ ಯು ಅಪ್" ಎಂಬುದು ಮೂರನೆಯ ಹಾಗೂ ಅಂತಿಮ ಏಕಗೀತೆಯಾಗಿ ಹೊರಹೊಮ್ಮಿತಾದರೂ, 100 ಉತ್ತೇಜಕ ಗೀತೆಗಳ ಕೋಷ್ಟಕದಲ್ಲಿ ಸ್ಥಾನಗಿಟ್ಟಿಸುವಲ್ಲಿ ಅದು ವಿಫಲಗೊಂಡಿತು. ಇಂದಿನವರೆಗೂ ಹೆಡ್ ಓವರ್ ಹೀಲ್ಸ್ ಸಂಪುಟವು ವಿಶ್ವಾದ್ಯಂತ 3 ದಶಲಕ್ಷ ಪ್ರತಿಗಳಷ್ಟು ಮಾರಾಟಗೊಂಡಿದ್ದು, ಇದು ಅಬ್ದುಲ್‌ಳ
ಸ್ಟುಡಿಯೋ ಗೀತಸಂಪುಟಗಳ ಮಾರಾಟದ ಪೈಕಿಯ ಅತ್ಯಂತ ಕಡಿಮೆ ಮಾರಾಟ ಸಂಖ್ಯೆಯಾಗಿದೆ.
ಮರ್ಕ್ಯುರಿಯ ಪುನರಾಗಮನದ ಪ್ರಯತ್ನ (1997–2001)
[ಬದಲಾಯಿಸಿ]ಹೆಡ್ ಓವರ್ ಹೀಲ್ಸ್ ಗೀತಸಂಪುಟದ ಕಡಿಮೆ ಪ್ರಮಾಣದ ಮಾರಾಟದ ನಂತರ ಮತ್ತು ತನ್ನ ವೈಯಕ್ತಿಕ ಸಮಸ್ಯೆಗಳನ್ನು ಜಯಿಸಿಕೊಂಡ ನಂತರ, ಅಬ್ದುಲ್ ಸಂಗೀತ ಉದ್ಯಮದಿಂದ ಒಂದು ಅಲ್ಪವಿರಾಮವನ್ನು ತೆಗೆದುಕೊಂಡಳು. 2000ನೇ ಇಸವಿಯಲ್ಲಿ, ಅಬ್ದುಲ್‌ಳ ...Paula Abdul: Greatest Hits CDಯು ವರ್ಜಿನ್ ರೆಕಾರ್ಡ್ಸ್‌ನಿಂದ ಬಿಡುಗಡೆ ಮಾಡಲ್ಪಟ್ಟಿತು (ಅಷ್ಟು ಹೊತ್ತಿಗಾಗಲೇ ವರ್ಜಿನ್ ರೆಕಾರ್ಡ್ಸ್‌ನೊಂದಿಗೆ ಅಬ್ದುಲ್ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ). ಪ್ರಚಂಡ ಯಶಸ್ಸನ್ನು ಪಡೆದಿದ್ದ ಅವಳ ಎಲ್ಲಾ ಏಕಗೀತೆಗಳು ಮತ್ತು ಇತರ ಗಮನಾರ್ಹ ಧ್ವನಿಪಥಗಳನ್ನು ಇದು ಒಳಗೊಂಡಿತ್ತು. "ಬೆಂಡ್ ಟೈಮ್ ಬ್ಯಾಕ್ 'ರೌಂಡ್" ಎಂಬ ಹಾಡನ್ನು
ಮೊದಲು ಬೆವರ್ಲಿ ಹಿಲ್ಸ್ 90210 ಎಂಬ ಯಶಸ್ವೀ ದೂರದರ್ಶನ ಸರಣಿಗೆ ಸಂಬಂಧಿಸಿದ 1992ರ ಧ್ವನಿಪಥದಲ್ಲಿ ಮಾತ್ರವೇ ಕೇಳಲಾಗುತ್ತಿತ್ತು. ಈ ಗೀತಸಂಪುಟವು ವ್ಯಾವಹಾರಿಕ ಯಶಸ್ಸನ್ನು ದಾಖಲಿಸಲಿಲ್ಲ; ಆದಾಗ್ಯೂ ವಿಶ್ವಾದ್ಯಂತ ಇದರ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಪ್ರತಿಗಳು ಮಾರಾಟಗೊಂಡವು.
1997ರಲ್ಲಿ, ಮರ್ಕ್ಯುರಿ ರೆಕಾರ್ಡ್ಸ್ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಸಹಿಹಾಕಿದ ಅಬ್ದುಲ್, ಅಮೆರಿಕನ್ ಐಡಲ್ ಸ್ಪರ್ಧೆಯ ಸಹವರ್ತಿ ತೀರ್ಪುಗಾರಳಾದ ಕಾರಾ ಡಿಯೋಗಾರ್ಡಿ ಜೊತೆಯಲ್ಲಿ ಸೇರಿಕೊಂಡು "ಸ್ಪಿನ್ನಿಂಗ್ ಅರೌಂಡ್"ಗೆ ಸಾಹಿತ್ಯವನ್ನು ಒದಗಿಸಿದಳು. ಇದೊಂದು ನೃತ್ಯ-ಪಾಪ್ ಧ್ವನಿಪಥವಾಗಿದ್ದು, ಅವಳ ಹೊಸ ಗೀತಸಂಪುಟದ ಆಚೆಗಿನ ಒಂದು ಅಗ್ರಗಣ್ಯ ಏಕಗೀತೆಯಾಗುವ ಉದ್ದೇಶವನ್ನು ಹೊಂದಿತ್ತು. ಈ ಗೀತಸಂಪುಟವು ಎಂದಿಗೂ ಕೈಗೂಡಲಿಲ್ಲ ಮತ್ತು "ಸ್ಪಿನ್ನಿಂಗ್ ಅರೌಂಡ್"ನ್ನು ಕೈಲೀ ಮಿನೋಗ್‌ಳಿಗೆ ಒಂದು ಏಕಗೀತೆಯಾಗಿ ನೀಡಲಾಯಿತು. ಈ ಗೀತೆಯು ಅತ್ಯಂತ ಯಶಸ್ವಿಯಾಯಿತು ಮತ್ತು ಅಬ್ದುಲ್‌ಗಾಗಿ ಬಳಸುವ ಉದ್ದೇಶದಿಂದ ಈ ಗೀತೆಯನ್ನು ಸೃಷ್ಟಿಲಾಗಿತ್ತಾದ್ದರಿಂದ ಮಿನೋಗ್‌ಳ ವೃತ್ತಿಜೀವನವನ್ನು ಇದು ಪುನರಾರಂಭಿಸಿತು, ಮತ್ತು ಹಲವಾರು ದೇಶಗಳಲ್ಲಿ ಇದು #1ನೇ ಸ್ಥಾನವನ್ನು ಅಲಂಕರಿಸಿತು. ನಂತರ 1997ರಲ್ಲಿ,
ವೆಚ್ಚ ಕಡಿತಮಾಡುವ ದೃಷ್ಟಿಯಿಂದ ಮರ್ಕ್ಯುರಿ ಸಂಸ್ಥೆಯು ಹಲವಾರು ಕಲಾವಿದರನ್ನು ತೆಗೆದುಹಾಕಿತು. ಹೀಗೆ ತೆಗೆದುಹಾಕಿದವರ ಪೈಕಿ ಅಬ್ದುಲ್ ಸೇರಿದ್ದಳು.
ಅಮೆರಿಕನ್ ಐಡಲ್ (2002–2009)
[ಬದಲಾಯಿಸಿ]2002ರಲ್ಲಿ, ಅಮೆರಿಕನ್ ಐಡಲ್ ಎಂಬ ರಿಯಾಲಿಟಿ ದೂರದರ್ಶನದ ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂರು ತೀರ್ಪುಗಾರರ ಪೈಕಿ ಒಬ್ಬಳಾಗಿ ಅಬ್ದುಲ್ ಕಾಣಿಸಿಕೊಂಡಳು. ತೀರ್ಪುಗಾರರ ಪಟ್ಟಿಯಲ್ಲಿದ್ದ ಸಹವರ್ತಿ ತೀರ್ಪುಗಾರರಾದ ಸೈಮನ್ ಕೋವೆಲ್ ಮತ್ತು ರ್ಯಾಂಡಿ ಜಾಕ್‌ಸನ್ (2009ರಲ್ಲಿ ಈ ಗುಂಪನ್ನು ಕಾರಾ ಡಿಯೋಗಾರ್ಡಿ ಸೇರಿಕೊಂಡಳು) ಜೊತೆಯಲ್ಲಿ ಅಬ್ದುಲ್ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗಿತ್ತು. ಯುವ ಹವ್ಯಾಸೀ ಗಾಯಕರ ಒಂದು ದೊಡ್ಡ ಗುಂಪಿನ ಪ್ರತಿಭೆಯ ಮೌಲ್ಯಮಾಪನ ಮಾಡುವುದು, ಧ್ವನಿಪರೀಕ್ಷೆಯ ಹಲವಾರು ಸುತ್ತುಗಳ ನಂತರ ಅವರಲ್ಲಿ ಬಹುತೇಕರನ್ನು ಹೊರಹಾಕುವುದು, ಮತ್ತು ನಂತರದಲ್ಲಿ ಅಮೆರಿಕಾದ ದೂರದರ್ಶನ ವೀಕ್ಷಕರ ಮತಾಭಿಪ್ರಾಯದ ಅನುಸಾರ ಅಂತಿಮ ಸ್ಪರ್ಧಿಗಳನ್ನು ತೀರ್ಮಾನಿಸುವುದು ಈ ತೀರ್ಪುಗಾರರ ಕರ್ತವ್ಯವಾಗಿತ್ತು. ಸದರಿ ಅಂತಿಮ ಸ್ಪರ್ಧಿಗಳು ನಂತರ ಬರುವ ಪ್ರತಿಯೊಂದು ಸುತ್ತಿಗೂ ಮುಂದುವರಿಯುತ್ತಾ, ಕೊನೆಗೆ ಅಂತಿಮ ವಿಜಯಿಯನ್ನು ಹೊರತುಪಡಿಸಿದ ಉಳಿದೆಲ್ಲರೂ ಸ್ಪರ್ಧೆಯಿಂದ ಹೊರಹಾಕಲ್ಪಡುವುದು ಇಲ್ಲಿನ ವಿಶೇಷತೆಯಾಗಿತ್ತು. ಓರ್ವ ಸಹಾನುಭೂತಿಯ ಹಾಗೂ ಮರುಗುವ ತೀರ್ಪುಗಾರಳಾಗಿ ಅಬ್ದುಲ್ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಳು. ಸ್ಪರ್ಧಿಗಳ ಪ್ರತಿಭಾ ಪ್ರದರ್ಶನ ಸಾಮರ್ಥ್ಯದ ಕುರಿತು ತನ್ನ ಮೌಲ್ಯನಿರ್ಣಯಗಳನ್ನು ವ್ಯಕ್ತಪಡಿಸುವಾಗ ಅನೇಕವೇಳೆ ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿದ್ದ ಸಹವರ್ತಿ ತೀರ್ಪುಗಾರನಾದ ಸೈಮನ್ ಕೋವೆಲ್‌ಗೆ ಹೋಲಿಸಿದಾಗ ಅವಳು ವಿಶೇಷವಾಗಿ ಸ್ನೇಹಮಯಿಯಾಗಿ ಅಥವಾ ಕರುಣಾಳುವಾಗಿ ಕಾಣಿಸುತ್ತಿದ್ದಳು. ಕೋವೆಲ್‌ನ ಅತಿರೇಕದ ತೀರ್ಮಾನದ ಶೈಲಿಯು ಅನೇಕ ಯುವ ಸ್ಪರ್ಧಿಗಳಿಗೆ ಹೃದಯ ವಿದ್ರಾವಕವಾಗಿ ಪರಿಣಮಿಸುತ್ತಿರುವುದು ಅವಳ ಅರಿವಿಗೆ ಬಂದಾಗ, ಅಬ್ದುಲ್ ತುಂಬಾ ಗಾಬರಿಗೊಂಡಿದ್ದಳು ಹಾಗೂ ಸದರಿ ಪ್ರದರ್ಶನ ಕಾರ್ಯಕ್ರಮವನ್ನು ತೊರೆಯಲು ತೀರ್ಮಾನಿಸಿದಳು. ಅವರ ಅಭಿಪ್ರಾಯಭೇದಗಳು ಅನೇಕ ವೇಳೆ ಅತೀವವಾದ ಬಿಸಿಯೇರಿದ ವಾಗ್ವಾದಗಳಿಗೆ ಹಾಗೂ ಮುಖಾಮುಖಿಗಳಿಗೆ ಕಾರಣವಾಗುತ್ತಿತ್ತಾದರೂ, ಸದರಿ ಪ್ರದರ್ಶನ ಕಾರ್ಯಕ್ರಮವನ್ನು ಬಿಟ್ಟುಹೋಗದಂತೆ ಅಬ್ದುಲ್‌ಳ ಮನವೊಲಿಸುವಲ್ಲಿ ತಾನು ಮಹತ್ವದ ಪಾತ್ರವನ್ನು ವಹಿಸಿದುದಾಗಿ ಕೋವೆಲ್ ಹೇಳುತ್ತಾನೆ.[೧೪]
ಈಗ ದೂರದರ್ಶನದ ಓರ್ವ ವಿಶ್ವಾಸಾರ್ಹ ಪ್ರಸಿದ್ಧವ್ಯಕ್ತಿಯಾಗಿರುವ ಅಬ್ದುಲ್,
ಎಂಟರ್‌ಟೈನ್‌ಮೆಂಟ್ ಟುನೈಟ್ ಗೆ ಸಂಬಂಧಿಸಿದಂತೆ ವರದಿಗಾರಳಾಗಿ ಕಾರ್ಯನಿರ್ವಹಿಸುವ ಒಂದು ಎರಡನೇ ಕಾರ್ಯಭಾರವನ್ನು ಒಪ್ಪಿಕೊಂಡಿದ್ದಾಳೆ. ಹೆಚ್ಚೂಕಮ್ಮಿ ಪ್ರತಿಯೊಂದು ಸಾಧನೆ ಅಥವಾ ಕಾರ್ಯಕ್ಷಮತೆಯಲ್ಲಿ ಏನಾದರೊಂದು ಗುಣಾತ್ಮಕ ಅಂಶವನ್ನು ಕಂಡುಹಿಡಿಯುವುದಕ್ಕೆ ಸಂಬಂಧಿಸಿದ ಅವಳ ಜಾಣ್ಮೆ, ಯಾರ ಶೈಲಿಯನ್ನು ತಾನು ನಿಜವಾಗಿಯೂ ಇಷ್ಟಪಡುತ್ತಾಳೋ ಅವರನ್ನು ಭಾವನಾತ್ಮಕ ಲೇಪದೊಂದಿಗೆ ಹೊಗಳುವ ಅವಳ ಪರಿ, ಮತ್ತು ಬೆರಳುಗಳನ್ನು-ಹೊರಭಾಗಕ್ಕೆ-ಬಗ್ಗಿಸಿ ಚಪ್ಪಾಳೆ ತಟ್ಟುವ ಅವಳ ಅನನ್ಯ ಶೈಲಿ ಇವುಗಳೆಲ್ಲವೂ, ಧ್ವನಿ ಪರೀಕ್ಷೆಗಳ ಸಮಯದಲ್ಲಿ ಅವಳು ಕುಡಿದಿರುತ್ತಾಳೆ ಎಂಬ ಕೆಲವರ ನಂಬಿಕೆಗೆ ನೀರೆರೆದಿವೆ. ಈ ಗಾಳಿಸುದ್ದಿಯು ವಿಡಂಬನೆಯ ವಿಷಯವಾಗಿ ಮಾರ್ಪಟ್ಟಿದೆ. ಅದರಲ್ಲೂ ವಿಶೇಷವಾಗಿ ಸಾಟರ್ಡೆ ನೈಟ್ ಲೈವ್ ಸಮಯದಲ್ಲಿ ಅಮಿ ಪೋಹ್ಲರ್‌ನಿಂದ ಮಾಡಲ್ಪಟ್ಟ ಹಾಸ್ಯಮಯ ವರ್ಣನೆಗಳು ಮತ್ತು MADtv ಯಲ್ಲಿನ ನಿಕೋಲ್ ಪಾರ್ಕರ್‌ಳ ವಿಡಂಬನೆಗಳು ಇದಕ್ಕೆ ಉದಾಹರಣೆಗಳಾಗಿವೆ. ಪ್ರತಿಯೊಂದು ಪ್ರತಿಭಾ ಪ್ರದರ್ಶನಕ್ಕೂ ಧನಾತ್ಮಕ ಅಭಿಪ್ರಾಯವನ್ನು ನೀಡುವ ಅವಳ ಈ ಸಾಮರ್ಥ್ಯವು, ಆಕೆ ರಚನಾತ್ಮಕವಾದ ಟೀಕೆಯನ್ನು ಮಾಡಲಾಗದ ಓರ್ವ ದುರ್ಬಲ ತೀರ್ಪುಗಾರ್ತಿ ಎಂದು ಕೆಲವೊಂದು ಜನರು ಅಭಿಪ್ರಾಯಪಡಲು ಕಾರಣವಾಗಿದೆ.
"ಅಮೆರಿಕಾವು ನಿಮ್ಮನ್ನು ಪ್ರೀತಿಸುತ್ತದೆ!", "ನೀವು ವಿಶ್ವಾಸಾರ್ಹರಾಗಿದ್ದೀರಿ!" ಅಥವಾ "ಇದು ನಿಮ್ಮ ಅತ್ಯುತ್ತಮ ಪ್ರಸ್ತುತಿಯಾಗಿರಲಿಲ್ಲ" ಎಂಬಂಥ ವ್ಯಾಖ್ಯಾನಗಳೊಂದಿಗೆ ಐಡಲ್ ಸ್ಪರ್ಧೆಯ ಸ್ಪರ್ಧಿಗಳನ್ನು ಹೊಗಳುವಾಗ ಇಲ್ಲವೇ ಟೀಕಿಸುವಾಗ, ಅದೇ ಚರ್ವಿತ ಚರ್ವಣವಾದ ಮತ್ತು ಸಿದ್ಧಪಡಿಸಿದಂತಿರುವ ಅಥವಾ ಸಂದರ್ಭೋಚಿತವಾದ ವಾಕ್ಸರಣಿಗಳ ಕಡೆಗೆ ವಾಲುವ ಅಬ್ದುಲ್‌ಳ ಶೈಲಿಯು ಟೀಕೆಗೊಳಗಾಗಿದೆ. ಸಾಟರ್ಡೆ ನೈಟ್ ಲೈವ್, ದಿ ಸಿಂಪ್ಸನ್ಸ್, ಮತ್ತು Mad TV ಸೇರಿದಂತೆ ಅಮೆರಿಕಾದ ಹಲವಾರು ಹಾಸ್ಯ ಕಾರ್ಯಕ್ರಮಗಳು, ಅಬ್ದುಲ್‌ಳ ಓರ್ವ ಕಪಟವೇಷಧಾರಿಯನ್ನು ಒಳಗೊಂಡಂತೆ ವಿಡಂಬನೆಗಳನ್ನು ಮಾಡುವಾಗ ಈ ಆಕರ್ಷಕ-ಮಾತುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡಿವೆ. ಅಷ್ಟೇ ಅಲ್ಲ, ಚಪ್ಪಾಳೆ ತಟ್ಟುವಾಗ ಅಬ್ದುಲ್ ತೋರಿಸುವ ರೂಢಿಯಲ್ಲಿಲ್ಲದ "ತೋಳನ್ನು-ತೂಗಾಡಿಸುವ" ಒಂದು ಶೈಲಿಯನ್ನೂ ಅವು ಅಣಕ ಮಾಡುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಅಮೆರಿಕನ್ ಐಡಲ್ ಸ್ಪರ್ಧೆಯಲ್ಲಿ ಕಡೇಪಕ್ಷ ಮತ್ತೆ ಮೂರು ವರ್ಷಗಳವರೆಗೆ ಓರ್ವ ತೀರ್ಪುಗಾರಳಾಗಿ ಉಳಿಯಲು ಅಬ್ದುಲ್ ಒಪ್ಪಂದಕ್ಕೆ ಸಹಿಹಾಕಿದ್ದಾಳೆಂದು 2006ರ ಮಾರ್ಚ್ 28ರಂದು ಫಾಕ್ಸ್ ಪ್ರಕಟಿಸಿತು. ಅದೇ ವರ್ಷದ ನಂತರದಲ್ಲಿ,
ಅಮೆರಿಕನ್ ಐಡಲ್ ಸ್ಪರ್ಧೆಯ ಸಹವರ್ತಿ ತೀರ್ಪುಗಾರನಾದ ಸೈಮನ್ ಕೋವೆಲ್, ದಿ X ಫ್ಯಾಕ್ಟರ್ ಎಂಬ ಇದೇ ಥರದ ತನ್ನ UK ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಮೂರನೇ ಸರಣಿಗೆ ಸಂಬಂಧಿಸಿದಂತೆ ಪೂರ್ವಭಾವಿ ಧ್ವನಿಪರೀಕ್ಷೆಗಳ ಪೈಕಿ ಕೆಲವಕ್ಕೆ ಓರ್ವ ಅತಿಥಿ ತೀರ್ಪುಗಾರಳಾಗಿ ಭಾಗವಹಿಸುವಂತೆ ಅವಳಿಗೆ ಆಹ್ವಾನ ನೀಡಿದ. ಅಂತಿಮವಾಗಿ ಜಯಶಾಲಿಯಾಗಿ ಹೊರಹೊಮ್ಮಿದ ಲಿಯೋನಾ ಲೆವಿಸ್ ಎಂಬಾಕೆಯ ಆರಂಭಿಕ ಧ್ವನಿಪರೀಕ್ಷೆಯಲ್ಲಿ ಅಬ್ದುಲ್ ಹಾಜರಿದ್ದಳು.
2007ರ ಮೇ ತಿಂಗಳ 14ರಿಂದ 18ರವರೆಗಿನ ವಾರದಲ್ಲಿ (ಋತು 6ರ ಮುಕ್ತಾಯ ಭಾಗಕ್ಕೆ ಒಂದು ವಾರ ಮುಂಚಿತವಾಗಿ), "ಚಿವಾವಾ ಜಾತಿಯ ತನ್ನ ನಾಯಿಮರಿಯ ಮೇಲೆ ಮುಗ್ಗರಿಸಿ ಬೀಳುವುದನ್ನು ತಪ್ಪಿಸಲು" ಅಬ್ದುಲ್ ಪ್ರಯತ್ನಿಸಿದಾಗ, ಅವಳು ತನ್ನ ಮೂಗುಮುರಿದುಕೊಂಡಳು.
ಮೇ 22ರ ಪ್ರತಿಭಾ ಪ್ರಸ್ತುತಿಯ ದಿನ ಹಾಗೂ ಮೇ 23ರ ಮುಕ್ತಾಯ ಭಾಗದ ದಿನದಂದು ಅವಳು ಕಾರ್ಯಕ್ರಮದಲ್ಲಿ ಹಾಜರಿದ್ದಳು.
ಅಮೆರಿಕನ್ ಐಡಲ್ ಸ್ಪರ್ಧೆಗೆ ಸಂಬಂಧಿಸಿದ ಅಬ್ದುಲ್‌ಳ ಉಡುಗೆ-ತೊಡುಗೆಗಳ ಸಂಗ್ರಹವು ಕಂಠಹಾರಗಳು, ಉಂಗುರಗಳು, ಕಡಗಗಳು, ಮತ್ತು ಕಿವಿಯುಂಗುರಗಳನ್ನು ಹಲವು ಬಾರಿ ಒಳಗೊಳ್ಳುತ್ತವೆ. ಈ ಸಂಗ್ರಹಗಳನ್ನು ಅವಳೇ ವಿನ್ಯಾಸಗೊಳಿಸಿದ್ದು, ಗಿರಾಕಿಯ ಆದೇಶಾನುಸಾರ-ವಿನ್ಯಾಸಗೊಳಿಸಲಾದ ಆಭರಣಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅನೇಕ ಬಾರಿ ನೀಡುವುದು ಅವಳ ವಿಶೇಷತೆ.
2007ರಲ್ಲಿ, ಪೌಲಾ ಅಬ್ದುಲ್ ಜ್ಯುವೆಲ್ರಿಯು QVCಯಲ್ಲಿ ಗ್ರಾಹಕರೆಡೆಗಿನ ತನ್ನ ರಾಷ್ಟ್ರವ್ಯಾಪಿ ಪ್ರಥಮ ಪ್ರವೇಶವನ್ನು ಆರಂಭಿಸಿತು. "ತೀವ್ರ ಆಸ್ಥೆಯೊಂದಿಗೆ ವಿನ್ಯಾಸಗೊಳಿಸಲಾದ ಸೊಗಸುಗಾರಿಕೆಯ ಆಭರಣಗಳು" ಎಂಬ ಅಡಿಬರಹವನ್ನು ಇದರೊಂದಿಗೆ ನೀಡಿದ್ದು ವಿಶೇಷವಾಗಿತ್ತು.[೧೫] QVCಯಲ್ಲಿನ ಪೌಲಾಳ ಮೊದಲ ಬಾರಿಯ ಕಾಣಿಸುವಿಕೆಯಿಂದಾಗಿ, 34,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ನಮೂನೆಗಳನ್ನು ಒಳಗೊಂಡಿದ್ದ ಅವಳ ಮೊದಲ ಆಭರಣ ಸಂಗ್ರಹದ ಪೈಕಿ 15 ಮಾರಾಟವಾಗಿಹೋದವು.[೧೬] 2009ರ ಜುಲೈ 18ರಂದು ಲಾಸ್ ಏಂಜಲೀಸ್ ಟೈಮ್ಸ್ ಜೊತೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಪೌಲಾಳ ವ್ಯವಸ್ಥಾಪಕ ಡೇವಿಡ್ ಸೊನೆನ್‌ಬರ್ಗ್ ಪತ್ರಿಕೆಯೊಂದಿಗೆ ಮಾತನಾಡುತ್ತಾ, "ಅವಳು ‘ಐಡಲ್’ ಸ್ಪರ್ಧೆಗೆ ಮರಳುವುದರ ಕುರಿತು ಕಂಡುಬರದಿರುವುದು ವಿಷಾದಕರ ಸಂಗತಿಯಾಗಿದೆ" ಎಂದು ನುಡಿದ.[೧೭] ಪೌಲಾ ಮತ್ತು ಸದರಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ನಡುವಣ ಸ್ಥಗಿತಗೊಂಡಿದ್ದ ಮಾತುಕತೆಗಳ ಒಂದು ಫಲಶೃತಿಯಾಗಿ ಈ ಅಭಿಪ್ರಾಯವು ಹೊರಹೊಮ್ಮಿತ್ತು. ನಂತರ ತನ್ನ ಟ್ವಿಟ್ಟರ್ ಪುಟದಲ್ಲಿ ಈ ಕುರಿತು ತನ್ನ ಅಭಿಮಾನಿಗಳಿಂದ ಬಂದ ಬೆಂಬಲದ ಮಹಾಪೂರದ ಸಂದೇಶಗಳಿಗೆ ಪೌಲಾ ಈ ರೀತಿ ಪ್ರತಿಕ್ರಿಯಿಸಿದಳು: "ನನ್ನೆಡೆಗೆ ಅನುಕಂಪ, ಪ್ರೀತಿ, ಮತ್ತು ಅದಕ್ಕೆ ಎಂದೂ ಅಳಿಯದ ಬೆಂಬಲವನ್ನು ತೋರಿಸುತ್ತಿರುವ ಅಸಂಖ್ಯಾತ ದನಿಗಳನ್ನು ಓದುತ್ತಾ ನನಗೆ ನಿಜಕ್ಕೂ ಕಣ್ತುಂಬಿ ಬಂದಿದೆ. ದೇವರು ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ!. ಒಂದು ವೇಳೆ ಇದು ನಿಮಗಲ್ಲದೇ ಹೋಗಿದ್ದಿದ್ದರೆ, ಈ ನಿರ್ದಿಷ್ಟ ಕಾಲ ಮತ್ತು ಸನ್ನಿವೇಶವು ಒಂದು ಅತ್ಯಂತ ಕೆಟ್ಟ ಅನುಭವವಾಗಿ ಮಾರ್ಪಡುತ್ತಿತ್ತು”. ಹಲವಾರು ಒಪ್ಪಂದದ ಮಾತುಕತೆಗಳ ನಂತರ, 2009ರ ಆಗಸ್ಟ್ 4ರಂದು, ಐಡಲ್ ಸ್ಪರ್ಧೆಗೆ ಅದರ ಒಂಬತ್ತನೇ ಋತುವಿಗೆ ಸಂಬಂಧಿಸಿದಂತೆ ಅಲ್ಲಿಗೆ ತಾನು ಮರಳುವುದಿಲ್ಲ ಎಂದು ಅಬ್ದುಲ್ ದೃಢೀಕರಿಸಿದಳು.[೧೮] ಪ್ರತಿ ವ್ಯಕ್ತಿಗೆ 5 ದಶಲಕ್ಷ $ನಷ್ಟು ಹಣವನ್ನು ಅಬ್ದುಲ್ ಗಳಿಸುತ್ತಾ ಬಂದಿದ್ದಾಳೆಂಬ ಮತ್ತು ಸದರಿ ಕಾರ್ಯಕ್ರಮಕ್ಕೆ ಮರಳಲು 20 ದಶಲಕ್ಷ $ನಷ್ಟು ಹಣವನ್ನು ನಿರೀಕ್ಷಿಸುತ್ತಿದ್ದಾಳೆಂದು ತಿಳಿದುಬಂದಿದೆ ಎಂಬ ವರದಿಗಳನ್ನು ದಿ ಟೈಮ್ಸ್ ಉಲ್ಲೇಖಿಸಿತು.[೧೯]
ಡಾನ್ಸಿಂಗ್ ವಿತ್ ದಿ ಸ್ಟಾರ್ಸ್ ಕಾರ್ಯಕ್ರಮದ ಒಂಬತ್ತನೇ ಋತುವಿನಲ್ಲಿ ಭಾಗವಹಿಸದೇ ಇರುವುದರಿಂದಾಗಿ, ಐಡಲ್ ಕಾರ್ಯಕ್ರಮಕ್ಕೆ ಮರಳಲು ಅಬ್ದುಲ್ ಮಾತುಕತೆಗಳನ್ನು ನಡೆಸುತ್ತಿದ್ದಾಳೆ ಎಂದು 2009ರ ಆಗಸ್ಟ್ 18ರಂದು ವರದಿಯಾಯಿತು.[೨೦] ಎರಡು ದಿನಗಳ ನಂತರ, ಅಬ್ದುಲ್‌ಳ ವ್ಯವಸ್ಥಾಪಕನು ಹೇಳಿಕೆಯೊಂದನ್ನು ನೀಡಿ, ಫಾಕ್ಸ್‌ನೊಂದಿಗೆ ಈ ರೀತಿಯ ಯಾವುದೇ ಮಾತುಕತೆಗಳು ನಡೆದಿಲ್ಲ, ಆದರೆ ಅಂಥ ಯಾವುದೇ ಸಾಧ್ಯತೆಗಳನ್ನು ಅವರು ತಳ್ಳಿಹಾಕುತ್ತಿಲ್ಲ ಎಂದು ತಿಳಿಸಿದ.[೨೧]
ಐಡಲ್ ಸ್ಪರ್ಧಾ ಕಾರ್ಯಕ್ರಮವನ್ನು ಬಿಟ್ಟುಹೋಗುತ್ತಿರುವುದಕ್ಕೆ ಹಣ ಕಾರಣವಲ್ಲ ಎಂದು ಸಮರ್ಥಿಸಿದ ಅಬ್ದುಲ್, ತನ್ನ ತತ್ತ್ವಗಳಿಗೆ ಬದ್ಧಳಾಗಬೇಕಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದಳು.[೨೨]
ಐಡಲ್ ಸ್ಪರ್ಧೆಯಲ್ಲಿ ಅಬ್ದುಲ್ ವಹಿಸುತ್ತಿದ್ದ ತೀರ್ಪುಗಾರಳ ಪಾತ್ರದ ಉತ್ತರಾಧಿಕಾರಿಯಾಗಿ ಎಲೆನ್ ಡೆಜೆನೆರೆಸ್‌ಳನ್ನು 2009ರ ಸೆಪ್ಟೆಂಬರ್ 9ರಂದು ನೆಲೆಗೊಳಿಸಲಾಯಿತು.[೨೩]
ಎರಡನೇ ಪುನರಾಗಮನ (2007–2009)
[ಬದಲಾಯಿಸಿ]...Greatest Hits: Straight Up! ಎಂಬ ಶೀರ್ಷಿಕೆಯನ್ನುಳ್ಳ ಅವಳ ಮಹೋನ್ನತ-ಗೀತೆಗಳ ಎರಡನೇ CDಯನ್ನು ವರ್ಜಿನ್ ಕಂಪನಿಯು 2007ರ ಮೇ 8ರಂದು ಬಿಡುಗಡೆ ಮಾಡಿತು. ಈ ಗೀತಸಂಪುಟವು ವರ್ಜಿನ್ ರೆಕಾರ್ಡ್ಸ್‌ನಿಂದ ಒಟ್ಟುಗೂಡಿಸಲ್ಪಟ್ಟಿತು. ಈ ಸಂಸ್ಥೆಯೊಂದಿಗೆ ಅಬ್ದುಲ್ ಓರ್ವ ಧ್ವನಿಮುದ್ರಿಸುವ ಕಲಾವಿದೆಯಾಗಿ ಎಂದಿಗೂ ಸಹಿಹಾಕಿರಲಿಲ್ಲ. ಇದೇ ವೇಳೆಗೆ, #1 ಸ್ಥಾನದ ಏಕಗೀತೆಗಳಿಂದ ಐಟ್ಯೂನ್ಸ್‌ವರೆಗಿದ್ದ ಅವಳ ಎಲ್ಲಾ ಆರು ಗೀತೆಗಳಿಗೆ ಸಂಬಂಧಿಸಿದ ಸಂಗೀತದ ವಿಡಿಯೋಗಳನ್ನು ಅವರು ಬಿಡುಗಡೆ ಮಾಡಿದರು.
ಅಬ್ದುಲ್‌ಳನ್ನು ಅವಳ ದಿನವಹಿ ಜೀವನದ ಮೂಲಕ ಅನುಸರಿಸುವ, ಹೇ ಪೌಲಾ ಎಂಬ ರಿಯಾಲಿಟಿ ದೂರದರ್ಶನ ಸರಣಿಯೊಂದನ್ನು ಬ್ರೇವೋ ಪ್ರಕಟಿಸಿತು. ಈ ಸರಣಿಯು ಸ್ಕಾಟ್ ಸ್ಟೆರ್ನ್‌ಬರ್ಗ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟು, 2007ರ ಜೂನ್ 28ರಂದು ಮೊದಲ ಪ್ರದರ್ಶನವನ್ನು ಕಂಡಿತು.[೨೪] ಸದರಿ ಕಾರ್ಯಕ್ರಮದಲ್ಲಿ ಚಿತ್ರಿಸಲ್ಪಟ್ಟಿರುವ ಪೌಲಾಳ ನಡವಳಿಕೆಯನ್ನು, ಹಾಸ್ಯಗಾರ ರೋಸೀ ಒ'ಡೊನೆಲ್[೨೫] 'ಹುಚ್ಚಾಬಟ್ಟೆ' ನಡವಳಿಕೆ ಎಂದು ವರ್ಣಿಸಿದರೆ, ಅಸಂಖ್ಯಾತ ಅಭಿಮಾನಿಗಳು ಹಾಗೂ ಟೀಕಾಕಾರರು ಹೀಯಾಳಿಸಿದರು.
ಪೌಲಾ ಸದ್ಯಕ್ಕೆ "ಸೆಕ್ಸಿ ಥಾಟ್ಸ್" ಎಂಬ ಹೆಸರುಳ್ಳ, ತನ್ನದೇ ಸ್ವಂತ ತಯಾರಿಕೆಯ ಸುಗಂಧದ್ರವ್ಯವನ್ನು ಬಿಡುಗಡೆ ಮಾಡುವ ಕುರಿತು ಸಿದ್ಧತೆ ನಡೆಸಿದ್ದಾಳೆ.[ಸೂಕ್ತ ಉಲ್ಲೇಖನ ಬೇಕು] 2008ರ ಜನವರಿಯಲ್ಲಿ, "ಡಾನ್ಸ್ ಲೈಕ್ ದೇರ್ ಈಸ್ ನೋ ಟುಮಾರೋ" ಎಂಬ ಏಕಗೀತೆಯೊಂದಿಗೆ, ಸುಮಾರು 13 ವರ್ಷಗಳಲ್ಲಿ ಮೊದಲ ಬಾರಿಗೆ ಸಂಗೀತದ ಕೋಷ್ಟಕಗಳಿಗೆ ಪೌಲಾ ಮರಳಿದಳು. ಈ ಗೀತೆಯು ರ್ಯಾಂಡಿ ಜಾಕ್‌ಸನ್'ಸ್ ಮ್ಯೂಸಿಕ್ ಕ್ಲಬ್ ವಾಲ್ಯೂಮ್ 1 ಎಂಬ ಗೀತಸಂಪುಟದಲ್ಲಿನ ಮೊದಲ ಧ್ವನಿಪಥವಾಗಿದೆ. ಆನ್ ಏರ್ ವಿತ್ ರೈಯಾನ್ ಸೀಕ್ರೆಸ್ಟ್ ನಲ್ಲಿ ಈ ಹಾಡು ಪ್ರಥಮ ಪ್ರವೇಶವನ್ನು ಕಂಡಿತು.[೨೬] ಪೌಲಾಳಿಗೆ ಸಂಬಂಧಿಸಿದಂತೆ ಪುನರಾಗಮನದ ಒಂದು ಸಾಧಾರಣ ಯಶಸ್ಸನ್ನು ದಾಖಲಿಸಿದ ಈ ಹಾಡು, ಬಿಲ್‌ಬೋರ್ಡ್‌ನ 100 ಉತ್ತೇಜಕ ಗೀತೆಗಳ ಕೋಷ್ಟಕದಲ್ಲಿ #62ನೇ ಸ್ಥಾನವನ್ನೂ, ಬಿಲ್‌ಬೋರ್ಡ್ ಉತ್ತೇಜಕ ನೃತ್ಯ ಕ್ಲಬ್ ಸಂಗೀತದ ಕೋಷ್ಟಕದಲ್ಲಿ #2ನೇ ಸ್ಥಾನವನ್ನೂ ಗಳಿಸಿಕೊಂಡಿತು.
ಪೌಲಾಳ MTV ಪ್ರದರ್ಶನವಾದ "RAH!" 2009ರ ಜನವರಿಯಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತು. 90-ನಿಮಿಷಗಳ ಈ ವಿಶೇಷ ಕೃತಿಯು, ಪ್ರೋತ್ಸಾಹ ನೀಡುವ ಮುಂದಾಳತ್ವವನ್ನು ಕುರಿತಾದ ಕಾಲೇಜಿಗೆ ಸಂಬಂಧಿಸಿದ ಐದು ಪಡೆಗಳನ್ನು ಒಳಗೊಂಡಿತ್ತು. ಈ ತಂಡಗಳು ಸವಾಲುಗಳ ಒಂದು ಸರಣಿಯಲ್ಲಿ ಸ್ಪರ್ಧಿಸಿದವು ಮತ್ತು ಅದರಲ್ಲಿನ ಜಯಶಾಲಿಗೆ ಪೌಲಾಳಿಂದ ಕಿರೀಟ ತೊಡಿಸುವ ವ್ಯವಸ್ಥೆ ಮಾಡಲಾಗಿತ್ತು.[೨೭] ಈ ಪ್ರದರ್ಶನ ಕಾರ್ಯಕ್ರಮದಲ್ಲಿ ಪೌಲಾಳ ಇತ್ತೀಚಿನ ಏಕಗೀತೆಯಾದ "ಬೂಮ್‌ಬಾಕ್ಸ್"ನ ಒಂದು ತುಣುಕು, ಕೈಲೀ ಮಿನೋಗ್‌ಳ ಹಾಡಿನ ಒಂದು ರಕ್ಷಾಕವಚ ಇವೂ ಸಹ ಪ್ರಥಮ ಪ್ರದರ್ಶನವನ್ನು ಕಂಡವು. 2009ರ ಮೇ 5ರಂದು, ರೈಯಾನ್ ಸೀಕ್ರೆಸ್ಟ್ ರೇಡಿಯೋದ KIIS-FM ಕಾರ್ಯಕ್ರಮದಲ್ಲಿ, "ಐಯಾಮ್ ಜಸ್ಟ್ ಹಿಯರ್ ಫಾರ್ ದಿ ಮ್ಯೂಸಿಕ್" ಎಂಬ ತನ್ನ ಹೊಸ ಹಾಡಿನ (ಮೂಲತಃ ಕೈಲೀ ಮಿನೋಗ್‌ಳ ಒಂಬತ್ತನೇ ಗೀತಸಂಪುಟವಾದ ಬಾಡಿ ಲಾಂಗ್ವೇಜ್‌ಗೆ ಸೇರಿದ ಒಂದು ಬಿಡುಗಡೆಯಾಗದಿದ್ದ ಹಾಡು) ಪ್ರಥಮ ಪರಿಚಯವನ್ನು ಪೌಲಾ ಮಾಡಿದಳು. 2009ರ ಮೇ 6ರಂದು, ಅಮೆರಿಕನ್ ಐಡಲ್ ಸ್ಪರ್ಧೆಯ ಫಲಿತಾಂಶಗಳ ಕಾರ್ಯಕ್ರಮದಲ್ಲಿ ಪೌಲಾ ತನ್ನ ಹೊಸ ಹಾಡನ್ನು ಪ್ರಸ್ತುತಪಡಿಸಿದಳು. 2009ರ ಮೇ 8ರಂದು, "ಐಯಾಮ್ ಜಸ್ಟ್ ಹಿಯರ್ ಫಾರ್ ದಿ ಮ್ಯೂಸಿಕ್" ಗೀತೆಯನ್ನು US ಐಟ್ಯೂನ್ಸ್ ಭಂಡಾರಕ್ಕೆ ಪೌಲಾ ಬಿಡುಗಡೆ ಮಾಡಿದಳು.
ಐಡಲ್ ನಂತರದ ಯುಗ (2009ರಿಂದ ಇಂದಿನವರೆಗೆ)
[ಬದಲಾಯಿಸಿ]ಸೆಪ್ಟೆಂಬರ್‌ನಲ್ಲಿ ನಡೆದ 2009ರ VH1 ದಿವಾಸ್ ಕಾರ್ಯಕ್ರಮದ ನೇರ ನಿರೂಪಣೆಯನ್ನು ಪೌಲಾ ನೆರವೇರಿಸಿದಳು. "ಸ್ಟ್ರೈಟ್ ಅಪ್", "ಕೋಲ್ಡ್ ಹಾರ್ಟೆಡ್", "ಆಪೋಸಿಟ್ಸ್ ಅಟ್ರಾಕ್ಟ್", ಮತ್ತು "ಫಾರೆವರ್ ಯುವರ್ ಗರ್ಲ್" ಇವೇ ಮೊದಲಾದ ತನ್ನ ಪ್ರಚಂಡ ಯಶಸ್ಸಿನ ನಂ.1 ಗೀತೆಗಳ ಒಂದು ಮಿಶ್ರಗೀತೆಯನ್ನೂ ಸಹ ಈ ಸಂದರ್ಭದಲ್ಲಿ ಅವಳು ಪ್ರಸ್ತುತಪಡಿಸಿದಳು. ಐಡಲ್ ಸ್ಪರ್ಧಾಕಾರ್ಯಕ್ರಮದಲ್ಲಿ ತನ್ನ ಬದಲಿಗೆ ತೀರ್ಪುಗಾರ್ತಿಯ ಸ್ಥಾನವನ್ನು ಅಲಂಕರಿಸಿದ ಎಲೆನ್ ಡೆಜೆನೆರೆಸ್ ಕುರಿತಾಗಿಯೂ ಈ ಕಾರ್ಯಕ್ರಮದಲ್ಲಿ ಪೌಲಾ ತಮಾಷೆ ಮಾಡಿದಳು. ಇದಕ್ಕೆ ಮಾಧ್ಯಮದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಿಕ್ಕಿತು.
ವರದಿಗಾರರ ಪ್ರಕಾರ, U.K.ಯಲ್ಲಿ ಪ್ರಚಂಡ ಯಶಸ್ಸು ಗಳಿಸಿದ ಪ್ರತಿಭಾ ಪ್ರದರ್ಶನದ ಕಾರ್ಯಕ್ರಮವಾದ X ಫ್ಯಾಕ್ಟರ್‌ನ ಅಮೆರಿಕಾದ ಆವೃತ್ತಿಗಾಗಿ ಸೈಮನ್ ಕೋವೆಲ್ ಜೊತೆಯಲ್ಲಿ ಪೌಲಾಳನ್ನೂ ಓರ್ವ ತೀರ್ಪುಗಾರ್ತಿಯಾಗಿ ಕರೆತರುವುದನ್ನು ದೃಢಪಡಿಸಲಾಗಿದೆ.[೨೮] ಕೋವೆಲ್ ಸದರಿ ಕಾರ್ಯಕ್ರಮದ ನಿರ್ಮಾಣವನ್ನು ಮಾಡಲಿದ್ದಾನೆ. ಬೇಸಿಗೆ ಮತ್ತು ಶರತ್ಕಾಲದ ಅವಧಿಯಲ್ಲಿ, ಅಮೆರಿಕನ್ ಐಡಲ್ ಕಾರ್ಯಕ್ರಮವು ಇಲ್ಲದಿರುವಾಗ, ಫಾಕ್ಸ್‌ನಲ್ಲಿ ಈ ಕಾರ್ಯಕ್ರಮವು ಪ್ರಸಾರವಾಗಲಿದೆ.[೨೯]
ವೈಯಕ್ತಿಕ ಜೀವನ
[ಬದಲಾಯಿಸಿ]ಎಮಿಲಿಯೋ ಎಸ್ಟೆವೆಝ್ ಎಂಬಾತನ ಜೊತೆಗೆ ಅಬ್ದುಲ್‌ಳ ಮದುವೆ ನಡೆಯಿತು. ಅವರ ವೈವಾಹಿಕ ಜೀವನ 1992ರ ಏಪ್ರಿಲ್ 29ರಿಂದ 1994ರ ಮೇ ತಿಂಗಳವರೆಗೆ ಮಾತ್ರವೇ ಸಾಗಿತು. 2005ರ ಜೂನ್ 19ರಂದು ಪೀಪಲ್ ನಿಯತಕಾಲಿಕ[ಸೂಕ್ತ ಉಲ್ಲೇಖನ ಬೇಕು]ದೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಅಬ್ದುಲ್ ಮಾತನಾಡುತ್ತಾ, ಮಕ್ಕಳನ್ನು ಹೊಂದುವುದಕ್ಕೆ ಸಂಬಂಧಿಸಿದಂತೆ ತಮ್ಮ ಮದುವೆ ಮುರಿಯಿತು ಎಂದು ಹೇಳಿಕೊಂಡಳು; ಅವಳಿಗೆ ಮಕ್ಕಳು ಬೇಕಿದ್ದವು, ಆದರೆ ಎಸ್ಟೆವೆಝ್‌ಗೆ (ಈತ ಮುಂಚೆಯೇ ಹೊಂದಿದ್ದ ಸಂಬಂಧವೊಂದರಿಂದ ಅಷ್ಟುಹೊತ್ತಿಗಾಗಲೇ ಇಬ್ಬರು ಮಕ್ಕಳನ್ನು ಹೊಂದಿದ್ದ) ಬೇಕಿರಲಿಲ್ಲ ಎಂಬುದು ಈ ಸಂದರ್ಭದಲ್ಲಿ ತಿಳಿದುಬಂತು. ನಂತರ 1996ರಲ್ಲಿ ಬ್ರಾಡ್ ಬೆಕರ್‌ಮನ್ ಎಂಬ ಕ್ರೀಡಾ-ಉಡುಗೆಯ ವಿನ್ಯಾಸಕಾರನನ್ನು ಆಕೆ ಮದುವೆಯಾದಳು. ಅವರು 1998ರಲ್ಲಿ ವಿಚ್ಛೇದನವನ್ನು ಪಡೆದರು.
1994ರಲ್ಲಿ ಚಿಕಿತ್ಸೆ ಪಡೆದ ಮೇಲೆ ತಿನ್ನುವಿಕೆಯಲ್ಲಿನ ತನ್ನ ಅಸಮರ್ಪಕತೆಯ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ, ಆಕೆ NEDAಗೆ ಸಂಬಂಧಿಸಿದ ಓರ್ವ ಕ್ರೀಡಾಮಹಿಳೆಯಾಗಿ ಮಾರ್ಪಟ್ಟಳು, ಹಾಗೂ ಪ್ರೊಫೈಲ್ಸ್ ಇನ್ ಲಿವಿಂಗ್ ಎಂಬ ಪ್ರಶಸ್ತಿಯನ್ನು 2005ರ ಅಂತ್ಯದ ವೇಳೆಗೆ ಅವಳಿಗೆ ಪ್ರದಾನಮಾಡಲಾಯಿತು. ಆಮೇಲೆ ಅವಳು 2006ರಲ್ಲಿ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಧ್ವನಿಮುದ್ರಿಸಿಕೊಳ್ಳುವ ಮೂಲಕ ತನ್ನ ಕೆಲಸವನ್ನು ಮುಂದುವರಿಸಿದಳು.
ತೀವ್ರವಾದ ನೋವನ್ನು ಉಂಟುಮಾಡುವ, ರಿಫ್ಲೆಕ್ಸ್ ಸಿಂಪಾಥೆಟಿಕ್ ಡಿಸ್ಟ್ರೊಫಿ (CRPS) ಎಂದು ಕರೆಯಲಾಗುವ, ನರಗಳಿಗೆ ಸಂಬಂಧಿಸಿದ ಒಂದು ಅಪರೂಪದ ಕಾಯಿಲೆಯಿಂದ ತಾನು ನರಳುತ್ತಿರುವುದಾಗಿ 2005ರ ಏಪ್ರಿಲ್‌ನಲ್ಲಿ ಅವಳು ಬಹಿರಂಗಪಡಿಸಿದಳು.[೩೦]
ಯೆಹೂದಿಮತವನ್ನು[೩೧] ಪೌಲಾ ಅನುಸರಿಸುತ್ತಾಳೆ ಮತ್ತು ತನ್ನ ಪರಂಪರೆಯ ಕುರಿತಾಗಿ ಅವಳಿಗೆ ಹೆಮ್ಮೆಯಿದೆ. ಈ ಕುರಿತು ಹಿಂದೊಮ್ಮೆ ಅವಳು ಹೀಗೆ ಹೇಳಿದ್ದಳು, "ನನ್ನ ತಂದೆ ಒಬ್ಬ ಸಿರಿಯಾದ ಯೆಹೂದಿಯಾಗಿದ್ದು, ಅವನ ಕುಟುಂಬವು ಬ್ರೆಜಿಲ್‌ಗೆ ವಲಸೆ ಬಂದಿತು.
ನನ್ನ ತಾಯಿಯು ಕೆನಡಾದವಳಾಗಿದ್ದು, ಯೆಹೂದ್ಯ ಮತದ ಮೂಲಗಳನ್ನು ಹೊಂದಿದ್ದಳು. ಒಂದು ನಿಜವಾದ ಅರ್ಥದ ರಜೆಗಾಗಿ ಇಸ್ರೇಲ್‌ಗೆ ಬರಬೇಕೆಂಬುದು ನನ್ನ ಕನಸು." 2006ರ ನವೆಂಬರ್‌ನಲ್ಲಿ, ಇಸ್ರೇಲೀ ಪ್ರವಾಸೋದ್ಯಮ ಸಚಿವನಾದ ಐಸಾಕ್ ಹೆರ್ಜೋಗ್ ಅವಳನ್ನು ಇಸ್ರೇಲ್‌ಗೆ ಆಹ್ವಾನಿಸಿದ. ಒಂದು ಅಪ್ಪುಗೆಯೊಂದಿಗೆ ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್, "ನಾನು ಬರುತ್ತೇನೆ; ಒಂದು ಕನಸು ನನಸಾಗುವಲ್ಲಿ ನೀವು ನನಗೆ ನೆರವಾಗಿರುವಿರಿ" ಎಂಬ ಮಾತನ್ನೂ ಸೇರಿಸಿದಳು.[೩೨]
2006ರ ಪ್ರೇಮಿಗಳ ದಿನದಂದು, ಪ್ರೇಮ ಮತ್ತು ಸಂಬಂಧಗಳ ಕುರಿತಾದ ಒಂದು ಪರಮಾವಧಿಯ ವಿಶೇಷ ಸಂದರ್ಭದ ಅಂಗವಾಗಿ ಡಾ. ಫಿಲ್ ಕಾರ್ಯಕ್ರಮದಲ್ಲಿ ಅಬ್ದುಲ್ ಕಾಣಿಸಿಕೊಂಡಳು. ಎರಡು ದಿನಾಂಕಗಳಂದು ಅವಳನ್ನು ನಿಗದಿಗೊಳಿಸಲಾಗಿತ್ತು ಮತ್ತು ಫಿಲ್ ಮೆಕ್‌ಗ್ರಾ ಅವಳಿಗೆ ಸಲಹೆಯನ್ನು ನೀಡಿದ್ದ.
ಓರ್ವ ಶ್ವಾನಪ್ರೇಮಿಯೂ ಆಗಿರುವ ಪೌಲಾ, ಪ್ರಸ್ತುತ 2009ರ ಮೇ ತಿಂಗಳಲ್ಲಿ ರಾಷ್ಟ್ರೀಯ ಮಾರ್ಗದರ್ಶಿ ಶ್ವಾನ ಮಾಸದ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾಳೆ ಮತ್ತು ಅಂಧತ್ವದ ಸಮಸ್ಯೆಯನ್ನು ಹೊಂದಿರುವ ಜನರು ಮಾರ್ಗದರ್ಶಿ ಶ್ವಾನಗಳ ನೆರವಿನಿಂದ ಹೆಚ್ಚು ಸ್ವಾತಂತ್ರ್ಯವನ್ನು ಹೊಂದುವಂತಾಗಲು ಅವರಿಗೆ ನೆರವಾಗುವಲ್ಲಿ ಡಿಕ್ ವ್ಯಾನ್ ಪ್ಯಾಟನ್‌ನ ಜೊತೆಗೂಡಿದ್ದಾಳೆ.[೩೩]
ತನಗಿಂತ 12 ವರ್ಷಗಳಷ್ಟು ಚಿಕ್ಕವನಾದ J.T. ಟೊರ್ರೆಗಿಯಾನಿ[೩೪] ಎಂಬ ಹೆಸರಿನ ಓರ್ವ ಹೊಟೇಲು ಮಾಲಿಕನೊಂದಿಗೆ ತಾನು ಡೇಟಿಂಗ್ ಪ್ರಾರಂಭಿಸಿರುವುದಾಗಿ 2007ರ ಜುಲೈ ಮಧ್ಯಭಾಗದಲ್ಲಿ ಅಬ್ದುಲ್ ಘೋಷಿಸಿದಳು.[೩೫] ಆಕ್ಸೆಸ್ ಹಾಲಿವುಡ್ ಜೊತೆಯಲ್ಲಿ ಮಾತನಾಡುತ್ತಾ ಅವಳು ಹೀಗೆ ಹೇಳಿದಳು: "ಅವನೊಬ್ಬ ಒಳ್ಳೆಯ ಹುಡುಗ. ವಿಷಯಗಳು ಅಂದುಕೊಂಡಂತೆಯೇ ಉತ್ತಮವಾಗಿ ಸಾಗುತ್ತಿವೆ. ಸದ್ಯಕ್ಕೆ ಇದು ಚೆನ್ನಾಗಿಯೇ ಕಾಣುತ್ತಿದೆ. ಯಾರೋ ಒಬ್ಬರಿಗೆ ನಾನು ನೋಡುತ್ತಲೂ ಇರಲಿಲ್ಲ ಮತ್ತು ವಾಡಿಕೆಯಂತೆ ಅದೇ ನಡೆದುಹೋಗುತ್ತದೆ. "[೩೬] ತಂತಮ್ಮ ಬಿಡುವಿರದ ಕೆಲಸಗಳನ್ನು ಕಾರಣಗಳಾಗಿ ಮುಂದುಮಾಡುವ ಮೂಲಕ ಪೌಲಾ ಮತ್ತು JT 2008ರ[೩೭] ಜೂನ್‌ನಲ್ಲಿ ವಿಚ್ಛೇದನಗೊಂಡರು.
ವಿವಾದಗಳು
[ಬದಲಾಯಿಸಿ]ಕೋರೆ ಕ್ಲಾರ್ಕ್
[ಬದಲಾಯಿಸಿ]2005ರ ಮೇ ತಿಂಗಳಲ್ಲಿ, ABCಯ ಸುದ್ದಿ ನಿಯತಕಾಲಿಕವಾದ ಪ್ರೈಮ್‌ಟೈಮ್ ಲೈವ್ , ಅಮೆರಿಕನ್ ಐಡಲ್ ಸ್ಪರ್ಧೆಯ 2ನೇ ಋತುವಿನ ಸ್ಪರ್ಧಿಯಾದ ಕೋರೆ ಕ್ಲಾರ್ಕ್ ಎಂಬಾತ ಮಾಡಿದ ಸಮರ್ಥನೆಗಳನ್ನು ವರದಿಮಾಡಿತು. ಆ ಋತುವಿನ ಅವಧಿಯಲ್ಲಿ ತನ್ನ ಹಾಗೂ ಅಬ್ದುಲ್ ನಡುವೆ ಅನುರಾಗವು ಮೂಡಿತ್ತೆಂದೂ, ಮತ್ತು ಸದರಿ ಸ್ಪರ್ಧೆಯಲ್ಲಿ ಹೇಗೆ ಯಶಸ್ಸು ಗಳಿಸಬೇಕೆಂಬುದರ ಬಗ್ಗೆ ಅವಳು ತನಗೆ ತರಬೇತು ನೀಡಿದಳು ಎಂದೂ ಆತ ಸಮರ್ಥನೆಗಳನ್ನು ನೀಡಿದ್ದ. CDಯೊಂದನ್ನು ಆತ ಮಾರುಕಟ್ಟೆ ಮಾಡುತ್ತಿದ್ದಾಗ ಮತ್ತು ವ್ಯವಹಾರವೊಂದನ್ನು ಕುದುರಿಸಲು ಪ್ರಯತ್ನಿಸುತ್ತಿದ್ದಾಗಿನ ಸಮಯದಲ್ಲಿ ಕ್ಲಾರ್ಕ್ ಮುಂದೆ ಬಂದ ಎಂಬ ವಾಸ್ತವಾಂಶವು ಕೆಲವೊಬ್ಬರ ಕಣ್ಣಿಗೆ ಅನುಮಾನಾಸ್ಪದವಾಗಿ ಕಂಡಿತ್ತು. ಆದರೆ, ಅಬ್ದುಲ್ ಜೊತೆಗಿನ ತನ್ನ ಸಂಬಂಧದ ಕಾರಣದಿಂದಾಗಿ ತನ್ನ ವೃತ್ತಿಜೀವನವು ಪೂರ್ವಗ್ರಹಕ್ಕೀಡಾಗಿತ್ತು ಹಾಗೂ ತನ್ನ ಹೆಸರನ್ನು ನಿಚ್ಚಳಗೊಳಿಸುವ ಉದ್ದೇಶದಿಂದಾಗಿ ಸದರಿ ಮಾಹಿತಿಯೊಂದಿಗೆ ತಾನು ಮುಂದಡಿಯಿಡಬೇಕಾಯಿತು ಎಂದು ಕ್ಲಾರ್ಕ್ ಇದಕ್ಕೆ ಸಮರ್ಥನೆಯನ್ನು ನೀಡಿದ. ಹೆಚ್ಚಿನ ಅಂಶಕ್ಕೆ ಸಂಬಂಧಿಸಿದಂತೆ, ಕ್ಲಾರ್ಕ್ ಮಾಡಿದ ಆಪಾದನೆಗಳ ಕುರಿತಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿಲು ಅಬ್ದುಲ್ ನಿರಾಕರಿಸಿದಳು. ಗೊಂದಲದ ತುತ್ತತುದಿಯಲ್ಲಿರುವಾಗ ಸನ್ನಿವೇಶವನ್ನು ಹಗುರಗೊಳಿಸುವ ದೃಷ್ಟಿಯಿಂದ ಸಾಟರ್ಡೆ ನೈಟ್ ಲೈವ್ ಎಂಬ ಲಘು ವಿಡಂಬನೆಯ ಕೃತಿಯಲ್ಲಿ ಅಬ್ದುಲ್ ಕಾಣಿಸಿಕೊಂಡಳು.[೩೮] ತನಿಖೆಯೊಂದನ್ನು ಫಾಕ್ಸ್ ಪ್ರಾರಂಭಿಸುವ ಸಮಯದಲ್ಲೇ ಓಪ್ರಾಹ್ ವಿನ್‌ಫ್ರೇ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಂದ ಅಸಂಖ್ಯಾತ ಬೆಂಬಲದ ಕರೆಗಳನ್ನು ಅಬ್ದುಲ್ ಸ್ವೀಕರಿಸಿದಳು; ಬಾರ್ಬರಾ ವಾಲ್ಟರ್ಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ABCಯ ದಿ ವ್ಯೂ ನ ಒಂದು ಸಂಚಿಕೆಯ ಅವಧಿಯಲ್ಲಿ ಕ್ಯಾಮೆರಾಗಿ ಎದುರಲ್ಲಿ ತನ್ನ ಅಭಿಪ್ರಾಯಗಳನ್ನು ಹೇಳುತ್ತಾ, ಒಂದು ಸುದ್ದಿಕತೆಯ ಸೋಗಿನಡಿಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಕ್ಲಾರ್ಕ್‌ನ ಕ್ಷುಲ್ಲಕ ಸಮರ್ಥನೆಗಳನ್ನು ವರದಿಮಾಡುವ ಕಾರ್ಯತಂತ್ರವೊಂದರ ಒಂದು ಭಾಗವಾಗಿದ್ದಕ್ಕೆ ತನಗೆ ವಿಷಾದವಾಗುತ್ತಿದೆ ಎಂದು ತಿಳಿಸಿದಳು. ತಾನು ಕೈಗೊಂಡ ತನಿಖೆಗೆ "ಸ್ಪರ್ಧೆಯಲ್ಲಿನ ಕ್ಲಾರ್ಕ್‌ನ ಕಾರ್ಯಕ್ಷಮತೆಗೆ ಕ್ಲಾರ್ಕ್ ಮತ್ತು ಅಬ್ದುಲ್ ನಡುವಿನ ಸಂಹವನೆ-ಸಂಬಂಧಗಳು ಯಾವುದೋ ರೀತಿಯಲ್ಲಿ ಸಹಾಯವಾಯಿತು ಎಂಬುದರ ಕುರಿತಾಗಿ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿಲ್ಲವಾದ್ದರಿಂದ" ಅವಳು ಸದರಿ ಸ್ಪರ್ಧಾಕಾರ್ಯಕ್ರಮಕ್ಕೆ ಮರಳಲಿದ್ದಾಳೆ ಎಂದು ಫಾಕ್ಸ್ ನೆಟ್‌ವರ್ಕ್ 2005ರ ಆಗಸ್ಟ್‌ನಲ್ಲಿ ದೃಢಪಡಿಸಿತು.[೩೯]
ಕಾನೂನು ಸಂಬಂಧಿ ವಿವಾದಗಳು
[ಬದಲಾಯಿಸಿ]2004ರ ಡಿಸೆಂಬರ್ 20ರಂದು, L.A. ಪ್ರದೇಶದ ಮುಕ್ತಮಾರ್ಗದಲ್ಲಿ ಅಬ್ದುಲ್ ತನ್ನ ಮರ್ಸಿಡಿಸ್ ಕಾರನ್ನು ಓಡಿಸುತ್ತಿರುವಾಗ, ಪಥಗಳನ್ನು ಬದಲಿಸುವಂತಾಗಿ ಮತ್ತೊಂದು ವಾಹನಕ್ಕೆ ಡಿಕ್ಕಿಹೊಡೆದಳು. ಸೆಲ್‌ಫೋನ್ ಕ್ಯಾಮೆರಾವನ್ನು ಬಳಸಿಕೊಂಡು ಸದರಿ ವಾಹನದ ಚಾಲಕ ಹಾಗೂ ಅದರ ಪ್ರಯಾಣಿಕ ಛಾಯಾಚಿತ್ರವೊಂದನ್ನು ತೆಗೆದರು ಮತ್ತು ಕಾರಿನ ಪರವಾನಗಿ ಫಲಕಸಂಖ್ಯೆಯನ್ನು ಬರೆದುಕೊಂಡರು. ಇದರ ಜಾಡುಹಿಡಿದು ಹೋದಾಗ ಅದು ಅಬ್ದುಲ್‌ಳ ಕಡೆಗೆ ಬೆರಳುಮಾಡಿ ತೋರಿಸಿತು. 2005ರ ಮಾರ್ಚ್ 24ರಂದು, ಅಬ್ದುಲ್‌ಗೆ 900 $ನಷ್ಟು ದಂಡವನ್ನು ವಿಧಿಸಲಾಯಿತು ಮತ್ತು ಲಾಸ್ ಏಂಜಲೀಸ್‌ನಲ್ಲಿನ ಡಿಕ್ಕಿ ಹೊಡೆಸಿ ಪರಾರಿಯಾಗುವ ತಪ್ಪು ನಡವಳಿಕೆಯ ವಾಹನ ಚಾಲನೆಗೆ ಫಲಿತಾಂಶವನ್ನು ಪ್ರಶ್ನಿಸದಿರುವ ಹೃತ್ಪೂರ್ವಕ ಮನವಿ ಬಂದನಂತರ 24 ತಿಂಗಳ ಅವಧಿಯ ಅನೌಪಚಾರಿಕ ಬಂಧ ವಿಮೋಚನೆಯನ್ನು ಅವಳಿಗೆ ವಿಧಿಸಲಾಯಿತು. ಈ ದಂಡಗಳ ಜೊತೆಗೆ, ಮತ್ತೊಂದು ಕಾರಿಗೆ ಆದ ಹಾನಿಯನ್ನು ತುಂಬಿಕೊಡುವ ಸಲುವಾಗಿ 775 $ನಷ್ಟು ಹಣವನ್ನು ಪಾವತಿಸಬೇಕೆಂದೂ ಸಹ ಅವಳಿಗೆ ಆದೇಶಿಸಲಾಯಿತು.[೪೦]
2006ರ ಏಪ್ರಿಲ್ 4ರಂದು, ಹಾಲಿವುಡ್‌ನ ಆರಕ್ಷಕ ಠಾಣೆಯೊಂದರಲ್ಲಿ ವರದಿಯೊಂದನ್ನು ಸಲ್ಲಿಸಿದ ಅಬ್ದುಲ್, ಏಪ್ರಿಲ್ 2ರಂದು ಬೆಳಗಿನ ಜಾವ ಸುಮಾರು 1 ಗಂಟೆಯ ವೇಳೆಯಲ್ಲಿ ನಡೆದ ಖಾಸಗಿ ಸಂತೋಷಕೂಟದಲ್ಲಿನ ಒಂದು ಉದ್ದೇಶಪೂರ್ವಕ ಆಕ್ರಮಣದ ಬಲಿಪಶು ತಾನಾಗಿದ್ದೆ ಎಂದು ಸಮರ್ಥಿಸಿದಳು ಎಂಬುದಾಗಿ L.A.P.D. ಆರಕ್ಷಕ ವಕ್ತಾರನಾದ ಲೆ. ಪಾಲ್ ವೆರ್ನಾನ್ ಎಂಬಾತ ತಿಳಿಸಿದ. "ಅಬ್ದುಲ್‌ಳ ಪ್ರಕಾರ, ಸಂತೋಷಕೂಟದಲ್ಲಿದ್ದ ವ್ಯಕ್ತಿ ಅವಳೊಂದಿಗೆ ವಾದಕ್ಕಿಳಿದ, ಅವಳ ಕೈಹಿಡಿದೆಳೆದು ಗೋಡೆಯೆಡೆಗೆ ಬೀಸಿತಳ್ಳಿದ. ಇದರಿಂದ ಅವಳಿಗೆಗೆ ಒಂದು ಬಲವಾದ ಪೆಟ್ಟಾಯಿತು ಹಾಗೂ ಬೆನ್ನುಮೂಳೆಯಲ್ಲಿ ಗಾಯಗಳಾದವು" ಎಂಬುದು ವೆರ್ನಾನ್‌ನ ವಿವರಣೆಯಾಗಿತ್ತು.[೪೧]
ಮಾದಕವಸ್ತು ವ್ಯಸನದ ಆಪಾದನೆಗಳು
[ಬದಲಾಯಿಸಿ]ಅಮೆರಿಕನ್ ಐಡಲ್ ಸ್ಪರ್ಧಾಕಾರ್ಯಕ್ರಮದ ಸಂಚಿಕೆಗಳ ಅವಧಿಯಲ್ಲಿ ಅಬ್ದುಲ್ ತೋರಿಸುತ್ತಿದ್ದಳು ಎಂದು ಕೆಲವರಿಂದ ವರ್ಣಿಸಲ್ಪಟ್ಟ "ಹುಚ್ಚಾಬಟ್ಟೆ ನಡವಳಿಕೆ"ಯ[೩೦] ಕಾರಣದಿಂದಾಗಿ ಅವಳ ಕುರಿತಾದ ಮಾದಕವಸ್ತು ವ್ಯಸನ ಆಪಾದನೆಗಳು ಹುಟ್ಟಿಕೊಂಡವು. ಈ ಆಪಾದನೆಗಳನ್ನು ಸಮಾಚಾರದ ಫಲಕಗಳಲ್ಲಿ ಓದಿದ ನಂತರ 2005ರ ಏಪ್ರಿಲ್‌ನಲ್ಲಿ ಪೀಪಲ್ ನಿಯತಕಾಲಿಕದೊಂದಿಗೆ ಮಾತನಾಡಿದ ಅಬ್ದುಲ್, ತನ್ನ 17ನೇ ವಯಸ್ಸಿನಲ್ಲಿ "ಪ್ರೋತ್ಸಾಹ ನೀಡುವ ಮುಂದಾಳತ್ವದ ಅಪಘಾತ"ವೊಂದರ ನಂತರ ಬಹಳ ವರ್ಷಗಳವರೆಗೆ ತಾನು ತೀವ್ರಸ್ವರೂಪದ ನೋವಿನಿಂದ ನರಳಿದುದಾಗಿಯೂ ಮತ್ತು ತನಗೆ ರಿಫ್ಲೆಕ್ಸ್ ಸಿಂಪಾಥೆಟಿಕ್ ಡಿಸ್ಟ್ರೊಫಿ (RSD) ಎಂಬ ಸಮಸ್ಯೆಯಿದೆ ಎಂದು ವೈದ್ಯಕೀಯ ತಪಾಸಣೆಯ ಮೂಲಕ 2004ರ ನವೆಂಬರ್‌ನಲ್ಲಿ ತಿಳಿದುಬಂತೆಂದೂ ಹೇಳಿಕೊಂಡಳು.[೩೦] ಎನ್‌ಬ್ರೆಲ್ ಎಂಬ ಉರಿಯೂತ ಪ್ರತಿರೋಧಕ ಔಷಧಿಯೂ ಸೇರಿದಂತೆ ಚಿಕಿತ್ಸಾಕ್ರಮದಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ತಾನೀಗ ನೋವಿನಿಂದ ಮುಕ್ತಳಾಗಿರುವುದಾಗಿ ಅಬ್ದುಲ್ ಹೇಳಿದ್ದಾಳೆ.[೩೦]
2007ರ ಜನವರಿಯಲ್ಲಿ ಈ ಬಗೆಯ ಆಪಾದನೆಗಳು ಮತ್ತೊಮ್ಮೆ ಹುಟ್ಟಿಕೊಂಡವು. ಅಬ್ದುಲ್ ತನ್ನ ಕುರ್ಚಿಯಲ್ಲಿ ತೂಗಾಡುತ್ತಿರುವಂತೆ ಕಂಡುಬರುವ ಮತ್ತು ಒಂದಷ್ಟು ಸಂದರ್ಶನಗಳ ಅವಧಿಯಲ್ಲಿ ಅಸ್ಪಷ್ಟವಾಗಿ ಮಾತನಾಡುತ್ತಿರುವಂತೆ ಕಂಡುಬರುವ ವಿಡಿಯೋಗಳು ಅಂತರ್ಜಾಲದಲ್ಲಿ ಪ್ರಸಾರವಾಗಲು ಪ್ರಾರಂಭಿಸಿದ್ದೇ ಈ ಆಪಾದನೆಗಳು ಮತ್ತೊಮ್ಮೆ ಹುಟ್ಟಿಕೊಳ್ಳಲು ಕಾರಣವಾದವು.[೪೨] ಅಬ್ದುಲ್‌ಳ ಸಾರ್ವಜನಿಕ ಸಂಪರ್ಕಾಧಿಕಾರಿಯು ಈ ಕುರಿತು ಮಾತನಾಡುತ್ತಾ, ಆ ಸಂದರ್ಶನಗಳ ಧ್ವನಿಮುದ್ರಣದ ಸಮಯದಲ್ಲಿ ತಲೆದೋರಿದ್ದ ಬಳಲಿಕೆ ಹಾಗೂ ತಾಂತ್ರಿಕ ಅಡಚಣೆಗಳಿಂದಾಗಿ ಸದರಿ ವಿಡಿಯೋ ಆ ರೀತಿಯಲ್ಲಿ ಕಂಡುಬಂದಿದೆ ಎಂದು ಸಮರ್ಥನೆ ನೀಡಿದ.[೪೨] ಸಂದರ್ಶನಗಳಿಗೆ ಪೂರ್ವಭಾವಿಯಾಗಿ ಒಂದು ವಿಡಿಯೋ ಕ್ಯಾಮೆರಾದೊಂದಿಗೆ ಅಬ್ದುಲ್‌ಳನ್ನು ಅನುಸರಿಸಿದ್ದ ಬ್ರೇವೋವಿನ ಹೇ ಪೌಲಾ ಕಾರ್ಯಕ್ರಮದಲ್ಲಿ ಈ ಕುರಿತು ವಿವರಣೆ ನೀಡಲಾಯಿತು. ಆ ಸಮಯದಲ್ಲಿ ಅಬ್ದುಲ್ ಮಲಗಿಕೊಂಡಿರಲಿಲ್ಲ; ಪ್ರಾಯಶಃ ಒಂದು ಲಘುಸ್ವರೂಪದ ನಿದ್ರಾಹೀನತೆಯಿಂದ ಅವಳು ಬಳಲುತ್ತಿದ್ದಳು ಎನಿಸುತ್ತದೆ ಎಂಬ ವಿಷಯವನ್ನು ಅಲ್ಲಿ ಬಹಿರಂಗಪಡಿಸಲಾಯಿತು.
2007ರ ಫೆಬ್ರುವರಿಯಲ್ಲಿ, ಅಬ್ದುಲ್ ಯುಎಸ್ ವೀಕ್ಲಿ ಯೊಂದಿಗೆ ಮಾತನಾಡುತ್ತಾ, ತಾನು ಎಂದಿಗೂ ಮದ್ಯಪಾನ ಮಾಡಿಲ್ಲ ಅಥವಾ ಕಾನೂನುಬಾಹಿರವಾದ ಮಾದಕವಸ್ತುಗಳನ್ನು ಸೇವಿಸಿಲ್ಲ ಎಂದು ಹೇಳಿ, ಈ ಕುರಿತಾದ ಆಪಾದನೆಗಳನ್ನು "ಸುಳ್ಳುಗಳು" ಎಂದು ಕರೆದಳು.[೪೩]
2007ರ ಮಾರ್ಚ್‌ನಲ್ಲಿ, ಲೇಟ್ ಷೋ ವಿತ್ ಡೇವಿಡ್ ಲೆಟರ್‌ಮನ್ ನಲ್ಲಿ ಒಮ್ಮೆ ಕಾಣಿಸಿಕೊಂಡಾಗ, ತಾನು "ಅನ್ಯಗ್ರಹದ ಜೀವಿಗಳಿಂದ ಅಪಹರಿಸಲ್ಪಟ್ಟಿದ್ದ" ಕಾರಣದಿಂದಾಗಿ ತನ್ನ ಸೂಕ್ಷ್ಮವಾಗಿ ಪರೀಕ್ಷಿಸಲ್ಪಟ್ಟ ನಡವಳಿಕೆಯು ಉಂಟಾಗಿದೆ ಎಂದು ಅಬ್ದುಲ್ ತಮಾಷೆಮಾಡಿದಳು.
2000ದ ದಶಕದ ಅಂತ್ಯದಲ್ಲಿ ನೀಡಲಾದ ಹಲವಾರು ಸಂದರ್ಶನಗಳಲ್ಲಿ ಪೌಲಾ ಮಾತನಾಡುತ್ತಾ, 1992ರ ಒಂದು ಕಾರು ಅಪಘಾತದ ನಂತರ ಮತ್ತು 1993ರಲ್ಲಿ ನಡೆದ ಒಂದು ವಿಮಾನಾಪಘಾತದ ನಂತರ ದೇಹವನ್ನೇ ದುರ್ಬಲಗೊಳಿಸುವ ನೋವು ತನ್ನಲ್ಲಿ ಉಳಿದುಕೊಂಡಿತೆಂದೂ ಮತ್ತು ಈ ಕಾರಣದಿಂದಾಗಿ ಬೆನ್ನುಮೂಳೆಗೆ ಸಂಬಂಧಿಸಿದ 15 ಶಸ್ತ್ರಚಿಕಿತ್ಸೆಗಳಿಗೆ ಈಡಾಗಬೇಕಾಗಿ ಬಂದು, ಹಲವಾರು ವರ್ಷಗಳವರೆಗೆ ನೋವಿನ ಔಷಧಿಯ ಮೇಲೆ ತಾನು ಅವಲಂಬಿತಳಾಗುವಂತಾಯಿತೆಂದೂ ತಿಳಿಸಿದಳು.[೪೪]
2009ರ ಮೇ ತಿಂಗಳಲ್ಲಿ, ಲೇಡೀಸ್' ಹೋಮ್ ಜರ್ನಲ್ ನಿಯತಕಾಲಿಕವು ತನ್ನ ವೆಬ್‌ಸೈಟ್‌ನಲ್ಲಿ ಅಬ್ದುಲ್ ಕುರಿತಾದ ಲೇಖನವೊಂದನ್ನು ಪ್ರಕಟಿಸಿತು. ತನಗೆ ಶಿಫಾರಸು ಮಾಡಲಾಗಿರುವ ನೋವಿನ ಔಷಧಿಗಳ ಮೇಲಿನ ಶಾರೀರಿಕ ಅವಲಂಬನೆಯಿಂದ ಚೇತರಿಸಿಕೊಳ್ಳಲು, ಹಿಂದಿನ ವರ್ಷದಲ್ಲಿ ಲಾ ಕೋಸ್ಟಾ ರೆಸಾರ್ಟ್ ಅಂಡ್ ಸ್ಪಾ ಎಂಬಲ್ಲಿಗೆ ತಾನು ಭೇಟಿನೀಡಿದ್ದಾಗಿ ಅಬ್ದುಲ್ ತನ್ನೊಂದಿಗೆ ಹೇಳಿಕೊಂಡಿದ್ದಳು ಎಂಬುದು ಈ ಲೇಖನದ ಸಾರಾಂಶವಾಗಿತ್ತು.[೪೫] ಅವಳಿಗಾದ ಗಾಯಗಳು ಹಾಗೂ ಅವಳ RSD ರೋಗನಿದಾನದ ಕಾರಣದಿಂದಾಗಿ ಶಿಫಾರಸು ಮಾಡಲ್ಪಟ್ಟ ಈ ಔಷಧಿಗಳಲ್ಲಿ ಒಂದು ನೋವುನಿವಾರಕ ಮುಲಾಮುಪಟ್ಟಿ, ನರದ ಔಷಧಿ, ಮತ್ತು ಒಂದು ಸ್ನಾಯುಶಾಮಕ ಇವೆಲ್ಲವೂ ಸೇರಿದ್ದವು. ಸದರಿ ಔಷಧಿಗಳಿಂದಾಗಿ ಕೆಲವೊಮ್ಮೆ ತಾನು "ವಿಚಿತ್ರವಾಗಿ ಆಡುವಂತಾಗುತ್ತಿತ್ತು" ಮತ್ತು ತನ್ನ ಚೇತರಿಕೆಯ ಸಮಯದಲ್ಲಿ ಶಾರೀರಿಕ ನಿರ್ವರ್ತನ ಚಿಹ್ನೆಗಳಿಂದ ತಾನು ನರಳಿದುದಾಗಿ ಅಬ್ದುಲ್ ಹೇಳಿದಳು ಎಂದೂ ಸಹ ಸದರಿ ಲೇಖನವು ತಿಳಿಸಿತ್ತು.[೪೫]
ಇಷ್ಟಾಗಿಯೂ, ನಂತರ ಅದೇ ವಾರದಲ್ಲಿ ಡೆಟ್ರಾಯಿಟ್ ರೇಡಿಯೋ ಕೇಂದ್ರವಾದ WKQIದೊಂದಿಗಿನ ಸಂದರ್ಶನವೊಂದರಲ್ಲಿ ಸದರಿ ಲೇಖನವು ನಿಖರವಾಗಿಲ್ಲ ಎಂದು ಹೇಳಿ ಅದನ್ನು ಅಬ್ದುಲ್ ನಿರಾಕರಿಸಿದಳು. ತಾನು ಯಾವತ್ತೂ ಆರೋಗ್ಯ ಪುನಃಸ್ಥಾಪನಾ ಕ್ಲಿನಿಕ್ ಒಂದಕ್ಕೆ ಭೇಟಿನೀಡಿಲ್ಲವೆಂದೂ ಮತ್ತು ಮಾದಕವಸ್ತುವಿನ ದುರುಪಯೋಗದ ಸಮಸ್ಯೆಯೊಂದನ್ನು ತಾನು ಯಾವತ್ತೂ ಹೊಂದಿರಲಿಲ್ಲವೆಂದೂ ಇದೇ ಸಂದರ್ಭದಲ್ಲಿ ಸದರಿ ರೇಡಿಯೋ ಕೇಂದ್ರಕ್ಕೆ ಅವಳು ತಿಳಿಸಿದಳು.[೪೬]
ಪ್ರವಾಸಗಳು
[ಬದಲಾಯಿಸಿ]ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- ಸ್ಟುಡಿಯೋ ಗೀತಸಂಪುಟಗಳು
- 1988: ಫಾರೆವರ್ ಯುವರ್ ಗರ್ಲ್
- 1991: ಸ್ಪೆಲ್‌ಬೌಂಡ್
- 1995: ಹೆಡ್ ಓವರ್ ಹೀಲ್ಸ್
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಚಲನಚಿತ್ರ ಮತ್ತು ದೂರದರ್ಶನ
ವರ್ಷ | ಚಲನಚಿತ್ರ[೪೭] | ಪಾತ್ರ | ಟಿಪ್ಪಣಿಗಳು | |
---|---|---|---|---|
1978 | ಜೂನಿಯರ್ ಹೈಸ್ಕೂಲ್ | ಷೆರಿ | ||
1987 | ಕಾಂಟ್ ಬೈ ಮಿ ಲವ್ | ನರ್ತಕಿ | ಉಲ್ಲೇಖಿಸಲ್ಪಡಲಿಲ್ಲ | |
1997 | ಟಚ್ಡ್ ಬೈ ಈವಿಲ್ | ಎಲ್ಲೆ ಕೊಲಿಯರ್ | TV ಚಲನಚಿತ್ರ | |
1998 | ದಿ ವೇಯ್ಟಿಂಗ್ ಗೇಮ್ | ಆಮಿ ಫ್ಯೂನ್‌ಟೆಸ್ | TV ಚಲನಚಿತ್ರ | |
"ಸಬ್ರಿನಾ ದಿ ಟೀನೇಜ್ ವಿಚ್ (TV ಸರಣಿ)" | ಸ್ವತಃ ಅವಳೇ | 1 ಕಂತು | ||
1999 | ದಿ ವೆಯಾನ್ಸ್ ಬ್ರದರ್ಸ್ | ಸಾಶಾ | 1 ಕಂತು | |
ಮಿ. ರಾಕ್ 'ಎನ್' ರೋಲ್: ದಿ ಅಲನ್ ಫ್ರೀಡ್ ಸ್ಟೋರಿ | ಡೆನೀಸ್ ವಾಲ್ಟನ್ | TV ಚಲನಚಿತ್ರ | ||
ಫ್ಯಾಮಿಲಿ ಗೈ | ಸ್ವತಃ ಅವಳೇ | 2 ಕಂತುಗಳು | ||
2002–2009 | ಅಮೆರಿಕನ್ ಐಡಲ್ | ತೀರ್ಪುಗಾರ್ತಿ | ||
2004 | ದಟ್ಸ್ ಸೋ ರೇವನ್ | ಗುಪ್ತಚರ್ಯ ತೀರ್ಪುಗಾರ್ತಿ | 1 ಕಂತು | |
2005 | Romy and Michele: In the Beginning | ಸ್ವತಃ ಅವಳೇ | TV ಚಲನಚಿತ್ರ | |
ಲೆಸ್ ದ್ಯಾನ್ ಪರ್ಫೆಕ್ಟ್ | ಕ್ಯಾಥ್ಲೀನ್ | 1 ಕಂತು | ||
ರೊಬೋಟ್ಸ್ | ಗಡಿಯಾರ | ಕಿರುಪಾತ್ರ | ||
2007 | ಹೇ ಪೌಲಾ | ಸ್ವತಃ ಅವಳೇ | 7 ಕಂತುಗಳು, ಕಾರ್ಯಕಾರಿ ನಿರ್ಮಾಪಕಿಯಾಗಿ ಕೂಡಾ | |
2009 | RAH! ಪೌಲಾ ಅಬ್ದುಲ್'ಸ್ ಚೀರ್‌ಲೀಡಿಂಗ್ ಬೌಲ್ | ಸ್ವತಃ ಅವಳೇ | ನಿರೂಪಕಿ | |
ಬ್ರೂನೋ | ಸ್ವತಃ ಅವಳೇ | ಉಲ್ಲೇಖಿಸಲ್ಪಡಲಿಲ್ಲ | ||
2008 | ಹೊಟೇಲ್ ಬ್ಯಾಬಿಲನ್ ಗೆಸ್ಟ್ | |||
2009 | ಡ್ರಾಪ್ ಡೆಡ್ ದಿವಾ | ಸ್ವತಃ ಅವಳೇ |
ನೃತ್ಯಸಂಯೋಜಕಿಯಾಗಿ
ವರ್ಷ | ಚಲನಚಿತ್ರ | ಟಿಪ್ಪಣಿಗಳು |
---|---|---|
1983 | ಪ್ರೈವೇಟ್ ಸ್ಕೂಲ್ | |
1986 | ಎ ಸ್ಮೋಕಿ ಮೌಂಟೇನ್ ಕ್ರಿಸ್‌ಮಸ್ | |
1987 | ದಿ ಟ್ರೇಸಿ ಉಲ್‌ಮನ್ ಷೋ | 1989ರ ಎಮಿ ಪ್ರಶಸ್ತಿಯನ್ನು ಗೆದ್ದಿತು ; "ನೃತ್ಯ ಸಂಯೋಜನೆಯಲ್ಲಿನ ಮಹೋನ್ನತ ಸಾಧನೆ"ಗಾಗಿ ಇದು ಮೀಸಲಾಗಿತ್ತು |
ಕಾಂಟ್ ಬೈ ಮಿ ಲವ್ | ||
ದಿ ರನಿಂಗ್ ಮ್ಯಾನ್ | ||
1988 | ಆಕ್ಷನ್ ಜಾಕ್‌ಸನ್ | |
ಬಿಗ್ | ||
ಕಮಿಂಗ್ ಟು ಅಮೆರಿಕಾ | ||
1989 | ಷೀ ಈಸ್ ಔಟ್ ಆಫ್ ಕಂಟ್ರೋಲ್ | |
ಡಾನ್ಸ್ ಟು ವಿನ್ | ||
ದಿ ಕರಾಟೆ ಕಿಡ್, ಪಾರ್ಟ್ III | ||
1990 | 17ತ್ ಅಮೆರಿಕನ್ ಮ್ಯೂಸಿಕ್ ಅವಾರ್ಡ್ಸ್ | 1990ರ ಎಮಿ ಪ್ರಶಸ್ತಿಯನ್ನು ಗೆದ್ದಿತು ; "ನೃತ್ಯ ಸಂಯೋಜನೆಯಲ್ಲಿನ ಮಹೋನ್ನತ ಸಾಧನೆ"ಗಾಗಿ ಇದು ಮೀಸಲಾಗಿತ್ತು |
1991 | ದಿ ಡೋರ್ಸ್ | ವಾಲ್ ಕಿಲ್ಮರ್‌ನ ನೃತ್ಯಸಂಯೋಜಕಿ |
1996 | ಜೆರ್ರಿ ಮ್ಯಾಗೈರ್ | |
1999 | ಅಮೆರಿಕನ್ ಬ್ಯೂಟಿ | |
2001 | ಬ್ಲ್ಯಾಕ್ ನೈಟ್ | |
2002 | ದಿ ಮಾಸ್ಟರ್ ಆಫ್ ಡಿಸ್‌ಗೈಸ್ |
"ರೋಸಸ್" ಸಂಗೀತದ ವಿಡಿಯೋ ಸ್ವತಃ ಅವಳನ್ನು ಹೊರಗಿಟ್ಟಿತು
ಇವನ್ನೂ ನೋಡಿ
[ಬದಲಾಯಿಸಿ]- ಲಿಸ್ಟ್ ಆಫ್ ಆರ್ಟಿಸ್ಟ್ಸ್ ಹೂ ರೀಚ್ಡ್ ನಂಬರ್ ಒನ್ ಆನ್ ದಿ ಹಾಟ್ 100 (U.S.)
- ಲಿಸ್ಟ್ ಆಫ್ ಆರ್ಟಿಸ್ಟ್ಸ್ ಹೂ ರೀಚ್ಡ್ ನಂಬರ್ ಒನ್ ಆನ್ ದಿ U.S. ಅಡಲ್ಟ್ ಕಾಂಟೆಂಪರರಿ ಚಾರ್ಟ್
- ಲಿಸ್ಟ್ ಆಫ್ ಆರ್ಟಿಸ್ಟ್ಸ್ ಹೂ ರೀಚ್ಡ್ ನಂಬರ್ ಒನ್ ಆನ್ ದಿ U.S. ಡಾನ್ಸ್ ಚಾರ್ಟ್
- ಲಿಸ್ಟ್ ಆಫ್ ಆರ್ಟಿಸ್ಟ್ಸ್ ಹೂ ರೀಚ್ಡ್ ನಂಬರ್ ಒನ್ ಆನ್ ದಿ ಆಸ್ಟ್ರೇಲಿಯನ್ ಸಿಂಗಲ್ಸ್ ಚಾರ್ಟ್
- ಲಿಸ್ಟ್ ಆಫ್ ನಂಬರ್ ಒನ್ ಡಾನ್ಸ್ ಹಿಟ್ಸ್ (ಯುನೈಟೆಡ್ ಸ್ಟೇಟ್ಸ್)
- ಲಿಸ್ಟ್ ಆಫ್ ನಂಬರ್-ಒನ್ ಹಿಟ್ಸ್ (ಯುನೈಟೆಡ್ ಸ್ಟೇಟ್ಸ್)
ಆಕರಗಳು
[ಬದಲಾಯಿಸಿ]- ↑ "Paula Abdul Signs with Mercury Records". Rolling Stone. 1997-10-31. Archived from the original on 2007-08-07. Retrieved 2008-12-09.
- ↑ "ಪೌಲಾ ಅಬ್ದುಲ್ - ಲವ್ ಟು ನೋ ಸೆಲೆಬ್ರಿಟಿ". Archived from the original on 2011-07-13. Retrieved 2010-04-19.
- ↑ Bronson, Frea (2008-10-09). "Chart Beat: T.I., James Taylor, Kellie Pickler". Billboard. Archived from the original on 2008-10-11. Retrieved 2009-03-18.
- ↑ "Paula Abdul Confirms New Album, Tour Are in the Works". Rolling Stone. 2008-02-21. Archived from the original on 2008-06-19. Retrieved 2008-06-11.
- ↑ "Paula Abdul Plotting Comeback Album". Billboard.com. 2008-03-07. Retrieved 2008-06-11.
- ↑ A&E ಜೀವನಚರಿತ್ರೆ
- ↑ Graff, Gary (ನವೆಂಬರ್ 21, 1991"Abdul's Dues: Paid a Lot of Them in 3 Years, But They Haven't Slowed Her Rise". Chicago Tribune. Archived from the original on 2012-01-07. Retrieved ಮೇ 3, 2009.
{{cite web}}
: Check date values in:|accessdate=
and|date=
(help); Italic or bold markup not allowed in:|publisher=
(help) ). - ↑ "Abdul Delivers More Than the Same Old Song and Dance". San Jose Mercury News. ಆಗಸ್ಟ್ 11, 1989. Retrieved ಮೇ 3, 2009.
{{cite web}}
: Check date values in:|accessdate=
and|date=
(help); Italic or bold markup not allowed in:|publisher=
(help) - ↑ Hunt, Dennis (ಫೆಬ್ರವರಿ 12, 1989"Paula Abdul Scores with New Singing Career and Debut Album". Los Angeles Times. Archived from the original on 2010-08-17. Retrieved ಮೇ 3, 2009.
{{cite web}}
: Check date values in:|accessdate=
and|date=
(help); Italic or bold markup not allowed in:|publisher=
(help) ). - ↑ ೧೦.೦ ೧೦.೧ Oldenburg, Ann (ಮೇ 4, 2005"Idol Scandal Could Hurt, Not Help, the Show". USA Today. Retrieved ಮೇ 3, 2009.
{{cite web}}
: Check date values in:|accessdate=
and|date=
(help); Italic or bold markup not allowed in:|publisher=
(help) ). - ↑ ೧೧.೦ ೧೧.೧ ಪೌಲಾ ಅಬ್ದುಲ್‌ಳ ಅಧಿಕೃತ ವೆಬ್‌ಸೈಟ್ Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ.. PaulaAbdul.com. 2008ರ ಫೆಬ್ರವರಿ 24ರಂದು ಮರುಸಂಪಾದಿಸಲಾಯಿತು.
- ↑ "ಪೌಲಾ ಅಬ್ದುಲ್ ಡಿಡ್ ಲೀಡ್ ಆನ್ 'ಫಾರೆವರ್ ಯುವರ್ ಗರ್ಲ್': ಜ್ಯೂರಿ – ಸಂಕ್ಷಿಪ್ತ ಲೇಖನ". Archived from the original on 2012-07-08. Retrieved 2012-07-08.
- ↑ Billboard.com
- ↑ ಕೋವೆಲ್, S (2003): ಐ ಡೋಂಟ್ ಮೀನ್ ಟು ಬಿ ರೂಡ್, ಬಟ್... , ಪುಟ 116–117, ರ್ಯಾಂಡಮ್ ಹೌಸ್. ISBN 978-0-7679-1741-4
- ↑ ಪೌಲಾ ಅಬ್ದುಲ್ ಜ್ಯುವೆಲ್ರಿ ಹೋಮ್‌ಪೇಜ್ ಆನ್ QVC, 2007ರ ಮೇ 13ರಂದು ಮರುಸಂಪಾದಿಸಲಾಯಿತು.
- ↑ "GuyoutBrothers.com ಆಭರಣ ಉದ್ಯಮದ ಸುದ್ದಿ". Archived from the original on 2011-07-22. Retrieved 2010-04-19.
- ↑ ಪೌಲಾ ಅಬ್ದುಲ್ ‘ಹರ್ಟ್,’ ‘ಆಂಗ್ರಿ,’ ಮೇ ನಾಟ್ ರಿಟರ್ನ್ ಟು ‘ಐಡಲ್’, 2009ರ ಜುಲೈ 20ರಂದು ಮರುಸಂಪಾದಿಸಲಾಯಿತು.
- ↑ ಪೌಲಾ ಅಬ್ದುಲ್: "ಐ ಹ್ಯಾವ್ ಡಿಸೈಡೆಡ್ ನಾಟ್ ಟು ರಿಟರ್ನ್ ಟು ಐಡಲ್", 2009ರ ಆಗಸ್ಟ್ 4ರಂದು ಮರುಸಂಪಾದಿಸಲಾಯಿತು.
- ↑ Bone, James (August 5, 2009). "'Paula Abdul quits American Idol'". The Times. Archived from the original on 2011-06-15. Retrieved 2009-08-05.
- ↑ "ಪೌಲಾ ಅಬ್ದುಲ್ ನೆಗೋಷಿಯೇಟಿಂಗ್ ಎ ರಿಟರ್ನ್ ಟು 'ಐಡಲ್'". Archived from the original on 2009-10-19. Retrieved 2010-04-19.
- ↑ ಎಕ್ಸ್‌ಕ್ಲುಸಿವ್: ಪೌಲಾ ಅಬ್ದುಲ್'ಸ್ ಮ್ಯಾನೇಜರ್: "ದೇರ್ ಹ್ಯಾವ್ ಬೀನ್ ನೋ ಡಿಸ್ಕಷನ್ಸ್ ವಾಟ್ ಸೋ ಎವೆರ್ ಎಬೌಟ್ 'ಐಡಲ್'"
- ↑ "ಪೌಲಾ ಅಬ್ದುಲ್ ಸೇಸ್ ಲೀವಿಂಗ್ ಐಡಲ್ ವಾಸ್ ನಾಟ್ ಎಬೌಟ್ ಮನಿ". Archived from the original on 2009-09-02. Retrieved 2010-04-19.
- ↑ ಎಲೆನ್ ಡೆಜೆನೆರೆಸ್ ರೀಪ್ಲೇಸಿಂಗ್ ಪೌಲಾ ಅಬ್ದುಲ್ ಆನ್ ಐಡಲ್
- ↑ "MovieWeb.com News". Archived from the original on 2007-01-15. Retrieved 2010-04-19.
- ↑ "NationalLedger.com". Archived from the original on 2007-09-27. Retrieved 2010-04-19.
- ↑ ಪೌಲಾ, ರ್ಯಾಂಡಿ & ರೈಯಾನ್ ಅನ್‌ವೇಲ್ ಹರ್ ನ್ಯೂ ಸಿಂಗಲ್ Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ. 2008ರ ಜನವರಿ 18ರಂದು ಮರುಸಂಪಾದಿಸಲಾಯಿತು
- ↑ ಅಬ್ದುಲ್'ಸ್ ರಾಹ್! Archived 2009-01-14 ವೇಬ್ಯಾಕ್ ಮೆಷಿನ್ ನಲ್ಲಿ.ಚೀರ್‌ಲೀಡಿಂಗ್ ಬೌಲ್ Archived 2009-01-14 ವೇಬ್ಯಾಕ್ ಮೆಷಿನ್ ನಲ್ಲಿ., 2009ರ ಜನವರಿ 13ರಂದು ಮರುಸಂಪಾದಿಸಲಾಯಿತು.
- ↑ "ಅಬ್ದುಲ್ ಸೈನ್ಸ್ ಆನ್ ಆಸ್ ಜಡ್ಜ್ ಆನ್ ನ್ಯೂ ಷೋ X ಫ್ಯಾಕ್ಟರ್". Archived from the original on 2010-04-29. Retrieved 2010-04-19.
- ↑ THRfeed.com
- ↑ ೩೦.೦ ೩೦.೧ ೩೦.೨ ೩೦.೩ ಅಬ್ದುಲ್ ಸೇಸ್ ಆಡ್ ಬಿಹೇವಿಯರ್ ನಾಟ್ ಡ್ರಗ್ ರಿಲೇಟೆಡ್, USA ಟುಡೆ, 2005-04-20. 2005-04-20ರಂದು ಮರುಸಂಪಾದಿಸಲಾಯಿತು
- ↑ Gershon Veroba (2007). [೧] (YouTube video). Bel Air, California: Gershon Veroba.
{{cite AV media}}
: External link in
(help)|title=
- ↑ "Israeli minister, American Idol". 2006-11-17. Retrieved 2009-02-11.
- ↑ "Paula Abdul & Guide Dogs". 2009-05-07. Archived from the original on 2010-08-16. Retrieved 2009-05-07.
- ↑ ಪೌಲಾ ಅಬ್ದುಲ್ ಫೈನಲಿ ರಿಸ್ಟೋರ್ಸ್ ಹರ್ ಲವ್ ಲೈಫ್ Archived 2012-01-19 ವೇಬ್ಯಾಕ್ ಮೆಷಿನ್ ನಲ್ಲಿ., ಆಲ್ ಹೆಡ್‌ಲೈನ್ ನ್ಯೂಸ್ , 2007-07-19. 2007-07-19ರಂದು ಮರುಸಂಪಾದಿಸಲಾಯಿತು
- ↑ ದಿ ವ್ಯೂ, 2007ರ ಜುಲೈ 19ರಂದು ಬಿತ್ತರವಾದ ಕಂತು
- ↑ ಆಕ್ಸೆಸ್ ಹಾಲಿವುಡ್, 2007ರ ಜುಲೈ 18ರಂದು ಬಿತ್ತರವಾದ ಕಂತು
- ↑ Garcia, Jennifer (2008-06-20). "Paula Abdul's Ex Blames Work for Breakup". People. Archived from the original on 2018-09-16. Retrieved 2009-03-18.
- ↑ AP., ಅಬ್ದುಲ್ ಪೋಕ್ಸ್ ಫನ್ ಅಟ್ ಸೆಕ್ಸ್ ಸ್ಕ್ಯಾಂಡಲ್ ಆನ್ ‘SNL’ Archived 2009-04-06 ವೇಬ್ಯಾಕ್ ಮೆಷಿನ್ ನಲ್ಲಿ., MSNBC.com (2005-05-11), 2007-02-12ರಂದು ಮರುಸಂಪಾದಿಸಲಾಯಿತು
- ↑ AP., ಆಫ್ಟರ್ ಪ್ರೋಬ್, ಪೌಲಾ ಅಬ್ದುಲ್ ಟು ರಿಮೈನ್ ಆನ್ ‘ಐಡಲ್’, MSNBC.com (2005-08-24), 2007-02-12ರಂದು ಮರುಸಂಪಾದಿಸಲಾಯಿತು.
- ↑ AP., 'ಐಡಲ್' ಜಡ್ಜ್ ಫೈನ್ಡ್ ಫಾರ್ ಹಿಟ್-ಅಂಡ್-ರನ್ Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ., CBSnews.com, 2005-03-24, 2007-02-10ರಂದು ಮರುಸಂಪಾದಿಸಲಾಯಿತು.
- ↑ AP, ಪೌಲಾ ಅಬ್ದುಲ್ ಟೆಲ್ಸ್ ಪೊಲೀಸ್ ಷೀ ವಾಸ್ ಅಸಾಲ್ಟೆಡ್, MSN.com, 2006-04-06, 2007-02-10ರಂದು ಮರುಸಂಪಾದಿಸಲಾಯಿತು.
- ↑ ೪೨.೦ ೪೨.೧ ಪೌಲಾ ಅಬ್ದುಲ್ ಸೀನ್ ಸ್ಲರ್ರಿಂಗ್ ಇನ್ TV ಇಂಟರ್‌ವ್ಯೂ Archived 2009-03-01 ವೇಬ್ಯಾಕ್ ಮೆಷಿನ್ ನಲ್ಲಿ., ರಾಯಿಟರ್ಸ್ , MSNBC.com ಮೂಲಕ, 2007-01-15, 2007-04-09ರಂದು ಮರುಸಂಪಾದಿಸಲಾಯಿತು.
- ↑ ಪೌಲಾ ಅಬ್ದುಲ್ ಕ್ಲೇಮ್ಸ್ ಷೀ ಈಸ್ 'ಸ್ಕ್ವೀಕಿ ಕ್ಲೀನ್' Archived 2008-04-12 ವೇಬ್ಯಾಕ್ ಮೆಷಿನ್ ನಲ್ಲಿ., ಅಸೋಸಿಯೇಟೆಡ್ ಪ್ರೆಸ್ , MSNBC.com ಮೂಲಕ, 2007-02-13, 2007-02-15ರಂದು ಮರುಸಂಪಾದಿಸಲಾಯಿತು
- ↑ "Comeing Clean About Drugs". TheInsider.com. Retrieved May 6, 2009.
- ↑ ೪೫.೦ ೪೫.೧ ಪೌಲಾ ಅಬ್ದುಲ್ ರಿವೀಲ್ಸ್ ಸ್ಟ್ರಗಲ್ ವಿತ್ ಪ್ರಿಸ್ಕ್ರಿಪ್ಷನ್ ಪೇನ್‌ಕಿಲ್ಲರ್ಸ್ Archived 2009-05-07 ವೇಬ್ಯಾಕ್ ಮೆಷಿನ್ ನಲ್ಲಿ., ಪೀಪಲ್ , 2009-05-05, 2009-05-06ರಂದು ಮರುಸಂಪಾದಿಸಲಾಯಿತು
- ↑ "Paula Abdul Denies Report She Abused Painkillers; Magazine Stands by Story". TVGuide.com. Archived from the original on 2012-01-28. Retrieved 2009-05-08.
- ↑ IMDb.com
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಅಬ್ದುಲ್
- ಟೆಂಪ್ಲೇಟು:Amg name
- ಪೌಲಾ ಅಬ್ದುಲ್‌ಳ ಹೊಸ ಗೀತಸಂಪುಟಕ್ಕಾಗಿರುವ ಅವಳ ಅಧಿಕೃತ ವೇಬ್ಸೈಟ್
- ಪೌಲಾ ಅಬ್ದುಲ್ ಜೊತೆಗಿನ ಒಂದು ನೇರ ಸಂದರ್ಶನ
- MySpaceನಲ್ಲಿನ ಪೌಲಾ ಅಬ್ದುಲ್
- ಟ್ವಿಟ್ಟರ್ನಲ್ಲಿನ ಪೌಲಾ ಅಬ್ದುಲ್
ಟೆಂಪ್ಲೇಟು:The X Factor ಟೆಂಪ್ಲೇಟು:EmmyAward Choreography 1976-2000
- Pages using the JsonConfig extension
- CS1 errors: markup
- CS1 errors: dates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: external links
- Pages using ISBN magic links
- Articles with hCards
- Articles with unsourced statements from November 2009
- All articles with unsourced statements
- Articles with unsourced statements from March 2009
- Articles with unsourced statements from February 2008
- Articles with unsourced statements from March 2008
- Articles with hatnote templates targeting a nonexistent page
- Commons category link is on Wikidata
- ಪೌಲಾ ಅಬ್ದುಲ್
- 1980ರ ಗಾಯಕ-ಗಾಯಕಿಯರು
- 1990ರ ಗಾಯಕ-ಗಾಯಕಿಯರು
- ಅಮೆರಿಕಾದ ಪ್ರೋತ್ಸಾಹ ನೀಡುವ ಮುಂದಾಳುಗಳು
- ಅಮೆರಿಕಾದ ನೃತ್ಯಸಂಯೋಜಕರು
- ಅಮೆರಿಕಾದ ನೃತ್ಯ ಸಂಗೀತಗಾರರು
- ಅಮೆರಿಕಾದ ನರ್ತಕರು
- ಅಮೆರಿಕಾದ ಚಲನಚಿತ್ರ ನಟರು
- ಆದರಕ್ಕೆ ಪಾತ್ರರಾದ ಅಮೆರಿಕಾದ ಸಹಭಾಗಿಗಳು
- ಅಮೆರಿಕಾದ ಸಂಗೀತ ವಿಮರ್ಶಕರು
- ಅಮೆರಿಕಾದ ಪಾಪ್ ಗಾಯಕರು
- ಅಮೆರಿಕಾದ ರಿದಮ್ ಅಂಡ್ ಬ್ಲೂಸ್ನ ಗಾಯಕರು
- ಅಮೆರಿಕಾದ ದೂರದರ್ಶನ ನಟರು
- ಅಮೆರಿಕಾದ ದೂರದರ್ಶನ ನಿರ್ಮಾಪಕರು
- ಬ್ರೆಜಿಲ್ ದೇಶದ ಮೂಲದ ಅಮೆರಿಕಾದ ಜನರು
- ಕೆನಡಾದ-ಅಮೆರಿಕಾದ ಯೆಹೂದಿಗಳು
- ಕಾನ್ಕಾರ್ಡ್ ರೆಕಾರ್ಡ್ಸ್ನ ಕಲಾವಿದರು
- ಎಮಿ ಪ್ರಶಸ್ತಿ ವಿಜೇತರು
- ಇಂಗ್ಲಿಷ್-ಭಾಷೆಯ ಗಾಯಕರು
- ಗ್ರ್ಯಾಮಿ ಪ್ರಶಸ್ತಿ ವಿಜೇತರು
- ಐಡಲ್ ಸರಣಿ ತೀರ್ಪುಗಾರರು
- ಯೆಹೂದಿ ನಟರು
- ಯೆಹೂದೀ ಅಮೆರಿಕಾದ ಸಂಗೀತಗಾರರು
- ಯೆಹೂದಿ ಗಾಯಕರು
- ಕ್ಯಾಲಿಫೋರ್ನಿಯಾದ ಸಂಗೀತಗಾರರು
- ಅಮೆರಿಕಾದ ದೂರದರ್ಶನದ ರಿಯಾಲಿಟಿ ಸರಣಿಗಳಲ್ಲಿ ಭಾಗವಹಿಸಿದವರು
- ಸ್ಯಾನ್ ಫೆರ್ನಾಂಡೊ ಕಣಿವೆಗೆ ಸೇರಿದ ಜನರು
- ಸಿಫಾರ್ಡಿ ಯೆಹೂದಿಗಳು
- ಸಿರಿಯಾದ ಅಮೆರಿಕಾದ ಯೆಹೂದಿಗಳು
- ದಿ X ಫ್ಯಾಕ್ಟರ್ ತೀರ್ಪುಗಾರರು
- ವರ್ಜಿನ್ ರೆಕಾರ್ಡ್ಸ್ನ ಕಲಾವಿದರು
- 1962ರ ಜನನಗಳು
- ಸಮಕಾಲೀನ ಜನರು
- ಚಲನಚಿತ್ರ ನಟಿಯರು
- ಪಾಶ್ಚಾತ್ಯ ಶಾಸ್ತ್ರೀಯ ಸಂಗೀತಗಾರರು