ವಿಷಯಕ್ಕೆ ಹೋಗು

ಪೋಷಣೆ ಮತ್ತು ಗರ್ಭಾವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೋಷಣೆ ಮತ್ತು ಗರ್ಭಾವಸ್ಥೆಯು ಪೋಷಕಾಂಶಗಳ ಸೇವನೆಯನ್ನು ಮತ್ತು ಗರ್ಭಧಾರಣೆಯ ಮೊದಲು ಹಾಗೂ ನಂತರ ಕೈಗೊಳ್ಳುವ ಆಹಾರದ ಯೋಜನೆಯ ಬಗ್ಗೆ ಸೂಚಿಸುತ್ತದೆ. ಭ್ರೂಣದ ಪೋಷಣೆಯು ಗರ್ಭಧಾರಣೆಯ ಸಮಯದಲ್ಲೇ ಪ್ರಾರಂಭವಾಗುತ್ತದೆ. ಈ ಕಾರಣಕ್ಕಾಗಿ ತಾಯಿಯ ಪೋಷಣೆಯು ಗರ್ಭಧಾರಣೆಯ ಮೊದಲು (ಬಹುಶಃ ಹಲವಾರು ತಿಂಗಳುಗಳ ಮೊದಲು) ಹಾಗೂ ಗರ್ಭಾವಸ್ಥೆಯಲ್ಲಿ ಮತ್ತು ಸ್ತನ್ಯಪಾನದ ಉದ್ದಕ್ಕೂ ಮುಖ್ಯವಾಗಿದೆ [೧].

ಕೆಲವು ಪೋಷಕಾಂಶಗಳ ಅಸಮರ್ಪಕ ಅಥವಾ ಅತಿಯಾದ ಪ್ರಮಾಣವು ಭ್ರೂಣದಲ್ಲಿ ವಿರೂಪಗಳು ಅಥವಾ ವೈದ್ಯಕೀಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ಅಂಗವಿಕಲತೆಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರಿಗೆ ಅಪಾಯವನ್ನುಂಟುಮಾಡುತ್ತವೆ. ಸರಿಯಾದ ಪೋಷಣೆಯ ಕೊರತೆಯಿಂದಾಗಿ ಪ್ರಪಂಚದಾದ್ಯಂತ ಅಂದಾಜು ೨೪% ಮಕ್ಕಳು ಜನನದ ಸಮಯದಲ್ಲಿ ಸೂಕ್ತವಾದ ತೂಕಕ್ಕಿಂತ ಕಡಿಮೆ ತೂಕದೊಂದಿಗೆ ಜನಿಸುತ್ತಾರೆ. ಮಧ್ಯಪಾನ ಸೇವನೆ ಅಥವಾ ಹೆಚ್ಚಿನ ಪ್ರಮಾಣದ ಕೆಫೀನ್‌ನಂತಹ ವೈಯಕ್ತಿಕ ಅಭ್ಯಾಸಗಳು ಮಗುವಿನ ಬೆಳವಣಿಗೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. ಇದು ಗರ್ಭಧಾರಣೆಯ ಆರಂಭಿಕ ಹಂತಗಳಲ್ಲಿ ಸಂಭವಿಸುತ್ತದೆ. ಗರ್ಭಾವಸ್ಥೆಯಲ್ಲಿ ಕೆಫೀನ್ ಸೇವನೆಯು ಗರ್ಭಾವಸ್ಥೆಯ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ [೨].

ಲಭ್ಯವಿರುವ ಸಂಶೋಧನೆಯ ಪ್ರಕಾರ ಗರ್ಭಾವಸ್ಥೆಯಲ್ಲಿ ಮೀನು ಸೇವನೆಯು ಅಪಾಯಗಳನ್ನು ಮೀರಿಸುತ್ತದೆ ಆದರೆ ಮೀನಿನ ಪ್ರಕಾರವು ಮುಖ್ಯವಾಗಿರುತ್ತದೆ. ಫೋಲಿಕ್ ಆಮ್ಲವು ವಿಟಮಿನ್ ಫೋಲೇಟ್‌ನ ಸಂಶ್ಲೇಷಿತ ರೂಪವಾಗಿದ್ದು ಇದು ಗರ್ಭಾವಸ್ಥೆಯ ಮೊದಲು ಮತ್ತು ಅನಂತರ ನಿರ್ಣಾಯಕವಾಗಿದೆ [೩].


ಗರ್ಭಧಾರಣೆಯ ಮೊದಲು ಪೌಷ್ಟಿಕಾಂಶದ ಅಗತ್ಯತೆಗಳು[ಬದಲಾಯಿಸಿ]

ಹೆಚ್ಚಿನ ಆಹಾರಕ್ರಮಗಳಂತೆ ಅತಿಯಾದ ಪೂರಕತೆಯ ಸಾಧ್ಯತೆಗಳಿವೆ. ರಾಜ್ಯ ಮತ್ತು ವೈದ್ಯಕೀಯ ಶಿಫಾರಸ್ಸುಗಳೆರಡೂ ತಾಯಂದಿರು ವಿಟಮಿನ್ ಪ್ಯಾಕೇಜಿಂಗ್‌ನಲ್ಲಿ ಶಿಫಾರಸು ಮಾಡಿದ ದೈನಂದಿನ ಭತ್ಯೆಯ ಸೂಚನೆಗಳನ್ನು ಅನುಸರಿಸಬೇಕಾಗಿದೆ. ಪ್ರಸವಪೂರ್ವ ಅವಧಿಯಲ್ಲಿ ಕಬ್ಬಿಣದ ಅಂಶವು ಮಗುವಿನ ಜನನ ತೂಕವನ್ನು ಗಣನೀಯವಾಗಿ ಸುಧಾರಿಸಿ ಕಡಿಮೆ ಜನನ ತೂಕದ ಅಪಾಯವನ್ನು ಕಡಿಮೆ ಮಾಡುತ್ತದೆ [೪].

೧. ಸ್ಪೈನಾ ಬೈಫಿಡಾ ಮತ್ತು ಇತರ ನರ ಕೊಳವೆಯ ದೋಷಗಳ ಬೆಳವಣಿಗೆಯನ್ನು ತಡೆಗಟ್ಟಲು ಗರ್ಭಧಾರಣೆಯ ಮೊದಲು ಫೋಲಿಕ್ ಆಮ್ಲದ ಪೂರೈಕೆಯನ್ನು ಶಿಫಾರಸು ಮಾಡಲಾಗುತ್ತದೆ. ಗರ್ಭಾವಸ್ಥೆಯ ಮೊದಲ ೩ ತಿಂಗಳುಗಳಲ್ಲಿ ದಿನಕ್ಕೆ ಕನಿಷ್ಠ ೦.೪ಮಿಗ್ರಾಂ, ಗರ್ಭಾವಸ್ಥೆಯ ಉದ್ದಕ್ಕೂ ಪ್ರತಿದಿನ ೦.೬ಮಿಗ್ರಾಂ ಮತ್ತು ಹಾಲುಣಿಸುವಾಗ ದಿನಕ್ಕೆ ೦.೫ಮಿಗ್ರಾಂ ತೆಗೆದುಕೊಳ್ಳಬೇಕು. ಜೊತೆಗೆ ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು.

ಗರ್ಭಿಣಿ ಮಹಿಳೆ ಹಣ್ಣು ತಿನ್ನುವುದು

೨. ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಅಯೋಡಿನ್ ಮಟ್ಟವು ತುಂಬಾ ಕಡಿಮೆಯಾಗಿರುತ್ತದೆ. ಥೈರಾಯ್ಡ್‌ನ ಕಾರ್ಯ ಮತ್ತು ಭ್ರೂಣದ ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅವಶ್ಯಕ. ಗರ್ಭಿಣಿಯರು ಅಯೋಡಿನ್ ಹೊಂದಿರುವ ಜೀವಸತ್ವಗಳನ್ನು ಪ್ರಸವಪೂರ್ವ ಅವಧಿಯಲ್ಲಿ ತೆಗೆದುಕೊಳ್ಳಬೇಕು.

೩. ವಿಟಮಿನ್ ಡಿ ಮಟ್ಟವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರೊಂದಿಗೆ ಬದಲಾಗುತ್ತದೆ. ಹೆಚ್ಚಿನ ಅಕ್ಷಾಂಶದ ಪ್ರದೇಶಗಳಲ್ಲಿ ಮಾತ್ರ ಇದು ಅಗತ್ಯವೆಂದು ಭಾವಿಸಲಾಗಿದೆ ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹಲವು ದೇಶಗಳಲ್ಲಿ ವಿಟಮಿನ್ ಡಿ ಕಡಿಮೆ ಮಟ್ಟದ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಈ ಕಾರಣಕ್ಕಾಗಿ ಗರ್ಭಾವಸ್ಥೆಯ ಉದ್ದಕ್ಕೂ ಪ್ರತಿದಿನ ೧೦೦೦ಐಯು ವಿಟಮಿನ್ ಡಿ ಶಿಫಾರಸು ಮಾಡುವ ಚಳುವಳಿಯು ಬೆಳೆಯುತ್ತಿದೆ.

೪. ಹೆಚ್ಚಿನ ಸಂಖ್ಯೆಯ ಗರ್ಭಿಣಿಯರಲ್ಲಿ ವಿಟಮಿನ್ ಬಿ ೧೨ ಕಡಿಮೆ ಮಟ್ಟದಲ್ಲಿರುತ್ತದೆ. ಆದರೆ ಇದನ್ನು ಬಳಸುವುದರಿಂದ ಗರ್ಭಧಾರಣೆಯ ಫಲಿತಾಂಶ ಅಥವಾ ನವಜಾತ ಶಿಶುವಿನ ಆರೋಗ್ಯವನ್ನು ಸುಧಾರಿಸುತ್ತದೆಯೆಂದು ತೋರಿಸಲಾಗಿಲ್ಲ.

೫. ದೀರ್ಘ-ಸರಪಳಿಯ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ನಿರ್ದಿಷ್ಟವಾಗಿ ಡೊಕೊಸಾಹೆಕ್ಸೆನೊಯಿಕ್ ಆಸಿಡ್ (ಡಿಎಚ್‌ಅ) ಮತ್ತು ಐಕೊಸಾಪೆಂಟೆನೊಯಿಕ್ ಆಮ್ಲ (ಇಪಿಅ) ಭ್ರೂಣದ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಸೇವನೆಯನ್ನು ಹೊಂದಿರುವ ತಾಯಂದಿರಲ್ಲಿ ಅವಧಿಪೂರ್ವ ಹೆರಿಗೆ ಮತ್ತು ಕಡಿಮೆ ತೂಕದ ಜನನದ ಅಪಾಯವನ್ನು ತಡೆಯಬಹುದು.

೬. ಪ್ರತ್ಯೇಕವಾಗಿ ಗರ್ಭಾವಸ್ಥೆಯ ಕೊನೆಯ ೬ ತಿಂಗಳ ಅವಧಿಯಲ್ಲಿ ಭ್ರೂಣ ಮತ್ತು ಜರಾಯುವಿನ ಆರೋಗ್ಯಕರ ಬೆಳವಣಿಗೆಗೆ ಕಬ್ಬಿಣದ ಅಗತ್ಯವಿದೆ. ಮೊದಲ ಮತ್ತು ಕೊನೆಯ ೩ ತಿಂಗಳುಗಳು ೧೧ ಗ್ರಾಂ/ಡೆಸಿಲಿಟರ್‌ಗಿಂತ ಹೆಚ್ಚಿನ ಸಾಂದ್ರತೆಯನ್ನು ಉಳಿಸಿಕೊಳ್ಳುತ್ತವೆ ಆದರೆ ಅವುಗಳ ನಡುವಿನ ೩ ತಿಂಗಳುಗಳು ಪ್ರತಿ ಡೆಸಿಲಿಟರ್‌ಗೆ ೧೦.೫ಗ್ರಾಂಗಿಂತ ಹೆಚ್ಚಿನ ಮಟ್ಟವನ್ನು ಹೊಂದಿರುತ್ತವೆ. ಇದು ಗರ್ಭಾವಸ್ಥೆಯ ಮೊದಲು ಹಿಮೋಗ್ಲೋಬಿನ್ ಉತ್ಪಾದನೆಗೆ ಅವಶ್ಯಕವಾಗಿದೆ. ಪ್ರತಿ ೧೦೦ ಮಿಲಿಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ೭ಗ್ರಾಂ ಹಿಮೋಗ್ಲೋಬಿನ್ ಗರ್ಭಧಾರಣೆಗೆ ಇರಲೇಬೇಕಂತಿಲ್ಲ ಆದರೆ ತಾಯಿಯ ರಕ್ತಸ್ರಾವವು ವಿಶ್ವಾದ್ಯಂತ ತಾಯಂದಿರ ಮರಣದ ಪ್ರಮುಖ ಮೂಲವಾಗಿದೆ. ಕೊಕ್ರೇನ್ ವಿಮರ್ಶೆಯ ತೀರ್ಮಾನಗಳ ಪ್ರಕಾರ ಕಬ್ಬಿಣದ ಪೂರೈಕೆಯು ಗರ್ಭಾವಸ್ಥೆಯಲ್ಲಿ ತಾಯಿಯ ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಆದರೆ ಇದರ ಧಾತ್ಮಕ ಪರಿಣಾಮವು ಇತರ ತಾಯಿ ಮತ್ತು ಶಿಶುಗಳ ಮೇಲೆ ಬೀರಿರುವುದು ಸ್ಪಷ್ಟವಾಗಿಲ್ಲ.


ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶದ ಅಗತ್ಯತೆಗಳು[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ವಿಟಮಿನ್ ಮತ್ತು ಖನಿಜ ಶಿಫಾರಸುಗಳನ್ನು ಸ್ಥಾಪಿಸಿವೆ. ಶಿಫಾರಸುಗಳು ಸರಾಸರಿ ಅಗತ್ಯತೆಗಳಿಗಿಂತ ಹೆಚ್ಚಿನ ಸರಾಸರಿ ಅಗತ್ಯತೆಗಳನ್ನು ಹೊಂದಿರುವ ಮಹಿಳೆಯರನ್ನು ಪರಿಹರಿಸಲು ನಿರ್ಧರಿಸಲಾಗಿದೆ. ಕೆಲವು ಪೋಷಕಾಂಶಗಳಿಗೆ ಶಿಫಾರಸನ್ನು ಹೊಂದಿಸಲು ಸಾಕಷ್ಟು ಮಾಹಿತಿ ಇಲ್ಲ, ಆದ್ದರಿಂದ ಸಾಕಷ್ಟು ಸೇವನೆ ಎಂಬ ಪದವು ಸಾಕಷ್ಟು ಕಂಡುಬರುವ ಆಧಾರದ ಮೇಲೆ ಬಳಸಲಾಗುತ್ತದೆ [೫] [೬].

ಪೋಷಕಾಂಶ ಯುಯಸ್ಏ RDA ಯುರೋಪ್ RDA ಘಟಕ
ವಿಟಮಿನ್ ಏ ೯೦೦ ೧೩೦೦ ಮೈಕ್ರೋಗ್ರಾಮ್
ವಿಟಮಿನ್ ಸಿ ೯೦ ೧೫೫ ಮಿಲಿಗ್ರಾಮ್
ವಿಟಮಿನ್ ಡಿ ೧೫ ೧೫ ಮಿಲಿಗ್ರಾಮ್
ವಿಟಮಿನ್ ಕೆ ೧೨೦ ೭೦ ಮಿಲಿಗ್ರಾಮ್
ಅಲ್ಫಾ-ಟೋಕೋಫೆರೋಲ್ ೧೫ ೧೧ ಮಿಲಿಗ್ರಾಮ್
ಥಿಯಾಮಿನ್ ೧.೨ ಮಿಲಿಗ್ರಾಮ್
ರಿಬೋಪ್ಲಾವಿನ್ ೧.೩ ೨.೦ ಮಿಲಿಗ್ರಾಮ್
ನಿಯಾಸಿನ್ ೧೬ ೧೬ ಮಿಲಿಗ್ರಾಮ್
ಪ್ಯಾಂಟೋಥೆನಿಕ್ ಆಸಿಡ್ ಮಿಲಿಗ್ರಾಮ್
ವಿಟಮಿನ್ ಬಿ ೬ ೧.೩ ೧.೮ ಮಿಲಿಗ್ರಾಮ್
ಬಯೊಟಿನ್ ೩೦ ೪೫ ಮೈಕ್ರೋಗ್ರಾಮ್
ಫೋಲೇಟ್ ೪೦೦ ೬೦೦ ಮೈಕ್ರೋಗ್ರಾಮ್
ವಿಟಮಿನ್ ಬಿ ೧೨ ೨.೪ ೫.೦ ಮೈಕ್ರೋಗ್ರಾಮ್
ಕೋಲೀನ್ ೫೫೦ ೫೨೦ ಮಿಲಿಗ್ರಾಮ್
ಕ್ಯಾಲ್ಸಿಯಂ ೧೦೦೦ ೧೦೦೦ ಮಿಲಿಗ್ರಾಮ್
ಕ್ಲೋರೈಡ್ ೨೩೦೦೦ - ಮಿಲಿಗ್ರಾಮ್
ಕ್ರೋಮಿಯಂ ೩೫ - ಮೈಕ್ರೋಗ್ರಾಮ್
ತಾಮ್ರ ೯೦೦ ೧೫೦೦ ಮೈಕ್ರೋಗ್ರಾಮ್
ಫ್ಲೋರೈಡ್ ೨.೯ ಮಿಲಿಗ್ರಾಮ್
ಕಬ್ಬಿಣ ೧೮ ೧೬ ಮಿಲಿಗ್ರಾಮ್
ಮೆಗ್ನೀಷಿಯಂ ೪೨೦ ೩೦೦ ಮಿಲಿಗ್ರಾಮ್
ಮ್ಯಾಂಗನೀಸ್ ೨.೩ ಮಿಲಿಗ್ರಾಮ್
ಮೊಲ್ಯ್ಬ್ದೇನಂ ೪೫ ೬೫ ಮೈಕ್ರೋಗ್ರಾಮ್
ಫಾಸ್ಫರಸ್ ೭೦೦ ೫೫೦ ಮಿಲಿಗ್ರಾಮ್
ಪೊಟ್ಯಾಸಿಯಂ ೪೭೦೦ ೪೦೦೦ ಮಿಲಿಗ್ರಾಮ್
ಸೆಲೆನಿಯಮ್ ೫೫ ೮೫ ಮೈಕ್ರೋಗ್ರಾಮ್
ಸೋಡಿಯಂ ೧೫೦೦ - ಮಿಲಿಗ್ರಾಮ್
ಜಿಂಕ್ ೧೧ ೧೪.೯ ಮಿಲಿಗ್ರಾಮ್
ಅಯೋಡೀನ್ ೧೫೦ ೨೦೦ ಮೈಕ್ರೋಗ್ರಾಮ್


ವಿಟಮಿನ್ ಮತ್ತು ಖನಿಜ ಪೂರಕಗಳ[ಬದಲಾಯಿಸಿ]

ಕಡಿಮೆ ಆದಾಯದ ದೇಶಗಳಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲದೊಂದಿಗೆ ತೆಗೆದುಕೊಳ್ಳಲಾದ ಬಹು ಸೂಕ್ಷ್ಮ ಪೋಷಕಾಂಶಗಳು ಮಹಿಳೆಯರಿಗೆ ಜನ್ಮ ಫಲಿತಾಂಶಗಳನ್ನು ಸುಧಾರಿಸಲು ಸಹಾಯಮಾಡುತ್ತದೆ. ಈ ಪೂರಕಗಳು ಕಡಿಮೆ ತೂಕದ ಶಿಶುಗಳು, ಗರ್ಭಾವಸ್ಥೆಯ ಅವಧಿಯ ಮೊದಲೇ ಜನಿಸಿದ ಶಿಶುಗಳು ಮತ್ತು ಸತ್ತ ಶಿಶುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರು ಅಪೌಷ್ಟಿಕತೆಯನ್ನು ತಡೆಗಟ್ಟಲು ಆಹಾರದ ಶಿಕ್ಷಣ, ಸಮತೋಲಿತ ಶಕ್ತಿ ಮತ್ತು ಪ್ರೋಟೀನ್ ಪೂರಕಗಳನ್ನು ಉಪಯೋಗಿಸಿಕೊಳ್ಳಬೇಕು. ಪ್ರಸವಪೂರ್ವ ಜೀವಸತ್ವಗಳು ಸಾಮಾನ್ಯವಾಗಿ ಫೋಲಿಕ್ ಆಮ್ಲ, ಅಯೋಡಿನ್, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಡಿ, ಸತು ಮತ್ತು ಕ್ಯಾಲ್ಸಿಯಂ ಇವುಗಳನ್ನು ಮಲ್ಟಿ-ವಿಟಮಿನ್‌ಗಳಲ್ಲಿ ಕಂಡುಬರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಗರ್ಭಾವಸ್ಥೆಯಲ್ಲಿ ತಾಯಿಯ ಪೌಷ್ಠಿಕಾಂಶದ ಸೇವನೆಯು ಮಕ್ಕಳಲ್ಲಿ ಅಲರ್ಜಿಯ ಕಾಯಿಲೆಗಳು ಮತ್ತು ಆಸ್ತಮಾದ ಬೆಳವಣಿಗೆಯ ವಿರುದ್ಧ ಪ್ರಭಾವ ಬೀರುತ್ತದೆ ಮತ್ತು ಪ್ರಾಯಶಃ ರಕ್ಷಣಾತ್ಮಕ ಪರಿಣಾಮಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ತಾಯಿಯು ವಿಟಮಿನ್ ಡಿ, ವಿಟಮಿನ್ ಇ ಮತ್ತು ಸತುವುಗಳನ್ನು ತನ್ನ ಆಹಾರದಲ್ಲಿ ಸೇರಿಸಿದಾಗ ಅದು ಬಾಲ್ಯದಲ್ಲಿ ಉಬ್ಬಸದಿಂದ ರಕ್ಷಿಸುತ್ತದೆ.

ಫೋಲಿಕ್ ಆಮ್ಲ[ಬದಲಾಯಿಸಿ]

ಫೋಲಿಕ್ ಆಮ್ಲವು ವಿಟಮಿನ್ ಫೋಲೇಟ್‌ನ ಸಂಶ್ಲೇಷಿತ ರೂಪವಾಗಿದ್ದು ಗರ್ಭಧಾರಣೆಯ ಮುಂಚೆ ಹಾಗೂ ನಂತರದ ನಿರ್ಣಾಯಕವಾಗಿದೆ. ಫೋಲಿಕ್ ಆಮ್ಲದ ಕೊರತೆಯು ನರ ಕೊಳವೆಯ ದೋಷಗಳಿಗೆ ಕಾರಣವಾಗಬಹುದು. ಹೆರಿಗೆಗೆ ೩ ತಿಂಗಳ ಮೊದಲು ಗರ್ಭಿಣಿಯರು ಫೋಲಿಕ್ ಆಮ್ಲವನ್ನು ಸೇವಿಸುವುದರ ಕಾರಣದಿಂದ ೦.೪ಮಿಗ್ರಾಂ ಫೋಲಿಕ್ ಆಮ್ಲವನ್ನು ಹೊಂದಿರುವ ಮಹಿಳೆಯರು ನರ ಕೊಳವೆಯ ದೋಷಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದರು.

ವಿಟಮಿನ್ ಇ ಮತ್ತು ವಿಟಮಿನ್ ಸಿ[ಬದಲಾಯಿಸಿ]

ಗರ್ಭಿಣಿಯರಿಗೆ ನೀಡಲಾಗುವ ವಿಟಮಿನ್ ಇ ಮತ್ತು ವಿಟಮಿನ್ ಸಿ ಸಂಯೋಜನೆಯು ಸತ್ತ ಶಿಶು ಜನನ, ನವಜಾತಿ ಶಿಶುಗಳ ಮರಣ, ಅವಧಿಪೂರ್ವ ಜನನ, ಪ್ರಿಕ್ಲಾಂಪ್ಸಿಯಾದ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗುವುದಿಲ್ಲ. ಆಂಟಿಆಕ್ಸಿಡೆಂಟ್ ವಿಟಮಿನ್‌ಗಳನ್ನು ಪಥ್ಯದ ಪೂರಕಗಳಾಗಿ ಗರ್ಭಾವಸ್ಥೆಯಲ್ಲಿ ಸೇವಿಸುವುದರಿಂದ ತುಂಬ ಪ್ರಯೋಜನೆಗಳಿವೆ.

ವಿಟಮಿನ್ ಬಿ೧೨[ಬದಲಾಯಿಸಿ]

ವಿಟಮಿನ್ ಬಿ೧೨ಗಾಗಿ ಅಮೇರಿಕಾ ಶಿಫಾರಸು ಮಾಡಲಾದ ಆಹಾರದ ಭತ್ಯೆಯ ಪ್ರಕಾರ ಗರ್ಭಧಾರಣೆಯ ಸಮಯದಲ್ಲಿ ದಿನಕ್ಕೆ ೨.೬ ಮೈಕ್ರೋಗ್ರಾಮ್ ಮತ್ತು ಹಾಲುಣಿಸುವ ಸಮಯದಲ್ಲಿ ದಿನಕ್ಕೆ ೨.೮ ಮೈಕ್ರೋಗ್ರಾಮ್ ವಿಟಮಿನ್ ಬಿ೧೨ವನ್ನು ತಾಯಂದಿರು ಸೇವಿಸಬೇಕಾಗಿದೆ. ರಕ್ತದಲ್ಲಿ ವಿಟಮಿನ್ ಬಿ೧೨ ಕಡಿಮೆಯಿರುವುದರ ಕಾರಣದಿಂದ ಗರ್ಭಪಾತ, ನವಜಾತ ಶಿಶುವಿನ ಕಡಿಮೆ ತೂಕ ಮತ್ತು ಅವಧಿಪೂರ್ವ ಜನನದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಜರಾಯು ಬಿ೧೨ ಅನ್ನು ಕೇಂದ್ರೀಕರಿಸುವುದರಿಂದ ನವಜಾತ ಶಿಶುಗಳು ತಮ್ಮ ರಕ್ತದಲ್ಲಿ ತಮ್ಮ ತಾಯಂದಿರಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ೧೨ ಅನ್ನು ಹೊಂದಿರುತ್ತವೆ. ಗರ್ಭಾವಸ್ಥೆಯಲ್ಲಿ ತಾಯಿ ಏನು ಸೇವಿಸುತ್ತಾಳೆ ಎಂಬುದು ತನ್ನ ಯಕೃತ್ತಿನ ಅಂಗಾಂಶವನ್ನು ಸಂಗ್ರಹಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ ಏಕೆಂದರೆ ಹೀರಿಕೊಳ್ಳಲ್ಪಟ್ಟ ವಿಟಮಿನ್ ಅಂಶವು ಜರಾಯುವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತದೆ.

ಆಹಾರ ಸುರಕ್ಷತೆ[ಬದಲಾಯಿಸಿ]

ಅಭಿವೃದ್ಧಿಶೀಲ ಭ್ರೂಣಕ್ಕೆ ಹಾನಿಕಾರಕ ಪದಾರ್ಥಗಳು ಅಥವಾ ಬ್ಯಾಕ್ಟೀರಿಯಾಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಲು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳ ಬಗ್ಗೆ ಗಮನ ಹರಿಸಲು ಸಲಹೆ ನೀಡಲಾಗುತ್ತದೆ. ಇದು ಲಿಸ್ಟೇರಿಯಾ, ಟಾಕ್ಸೊಪ್ಲಾಸ್ಮಾಸಿಸ್ ಮತ್ತು ಸಾಲ್ಮೊನೆಲ್ಲಾದಂತಹ ಸಂಭಾವ್ಯ ಹಾನಿಕಾರಕ ರೋಗಕಾರಕಗಳನ್ನು ಒಳಗೊಂಡಿರುತ್ತದೆ. ರೆಟಿನಾಲ್ ಸೇವನೆಯು ಜನ್ಮ ದೋಷಗಳು ಮತ್ತು ಅಸಹಜತೆಗಳಿಗೆ ಸಂಬಂಧಿಸಿದೆ.

ನೀರು ಸೇವನೆ[ಬದಲಾಯಿಸಿ]

ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕವು ಸುಮಾರು ೧೨ ಕಿಲೋಗ್ರಾಮ್ ಹೆಚ್ಚಾಗುತ್ತದೆ. ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ಗರ್ಭಿ‌ಣಿಯರಿಗೆ ದಿನಕ್ಕೆ ಸಾಮಾನ್ಯ ಸೇವನೆಗಿಂತ ೩೦೦ ಮಿಲಿಲೀಟರ್ ಹೆಚ್ಚು ನೀರನ್ನು ಕುಡಿಯಬೇಕೆಂದು ಶಿಫಾರಸು ಮಾಡಿದ್ದಾರೆ.

ಕೆಫೀನ್[ಬದಲಾಯಿಸಿ]

ಗರ್ಭಾವಸ್ಥೆಯಲ್ಲಿ ಕೆಫೀನ್ ಸೇವನೆಯು ಗರ್ಭಾವಸ್ಥೆಯ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಜನನ ತೂಕದ ಅಪಾಯವನ್ನು ಹೆಚ್ಚಿಸುತ್ತದೆ. ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗತಜ್ಞರ ಅಮೇರಿಕನ್ ಕಾಂಗ್ರೆಸ್ ಅವರ ಪ್ರಕಾರ ಗರ್ಭಿಣಿಯರು ದಿನಕ್ಕೆ ೨೦೦ ಮಿಗ್ರಾಂ ವರೆಗೆ ಕೆಫೀನ್ ಸೇವನೆ ಮಾಡುವುದರಿಂದ ಭ್ರೂಣದ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗರ್ಭಾವಸ್ಥೆಯಲ್ಲಿ ಹೆಚ್ಚು ಕೆಫೀನ್ ಸೇವನೆಯು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಪ್ರಮುಖ ನಕಾರಾತ್ಮಕ ಗರ್ಭಧಾರಣೆಯ ಫಲಿತಾಂಶಗಳು, ಉದಾಹರಣೆಗೆ ಸತ್ತ ಜನನ ಅಥವಾ ಕಡಿಮೆ ಜನನ ತೂಕ.

ಮಧ್ಯಪಾನ[ಬದಲಾಯಿಸಿ]

ಗರ್ಭವಾಸ್ಥೆಯಲ್ಲಿ ತಾಯಿಯು ಮಧ್ಯಪಾನ ಮಾಡುವುದರಿಂದ ಭ್ರೂಣವು ಕೆಲವು ಮಧ್ಯದ ಅಸ್ವಸ್ಥತೆಗಳನ್ನು ಪ್ರದರ್ಶಿಸುತ್ತದೆ. ಈ ಸ್ಥಿತಿಯ ತೀವ್ರ ಸ್ವರೂಪವನ್ನು ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದರಿಂದ ಭ್ರೂಣವು- ಕಡಿಮೆ ಎತ್ತರ, ಕಡಿಮೆ ದೇಹದ ತೂಕ, ಕಡಿಮೆ ತಲೆಯ ಗಾತ್ರ, ಕಳಪೆ ಸಮನ್ವಯ, ಕಡಿಮೆ ಬುದ್ಧಿವಂತಿಕೆ, ನಡವಳಿಕೆ ಸಮಸ್ಯೆಗಳು, ಶ್ರವಣ ದೋಷ ಮತ್ತು ದೃಷ್ಟಿ ಸಮಸ್ಯೆಗಳನ್ನು ಪ್ರದರ್ಶಿಸಬಹುದು. ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ ಸಾಮಾನ್ಯವಾಗಿ ಗರ್ಭಿಣಿ ಮಹಿಳೆ ದಿನಕ್ಕೆ ನಾಲ್ಕು ಪಾನೀಯಗಳನ್ನು ಸೇವಿಸಿದಾಗ ಸಂಭವಿಸುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ೨೦೧೫ರಲ್ಲಿ ಸಂಪ್ರದಾಯವಾದಿ ಶಿಫಾರಸುಗಳನ್ನು ಸ್ಥಾಪಿಸಿತು: "ಗರ್ಭಾವಸ್ಥೆಯಲ್ಲಿ ಯಾವುದೇ ಪ್ರಮಾಣದ ಮಧ್ಯಪಾನ ಸೇವನೆಯನ್ನು ಸುರಕ್ಷಿತವೆಂದು ಪರಿಗಣಿಸಬಾರದು; ಗರ್ಭವಾಸ್ಥೆಯ ಸಮಯದಲ್ಲಿ ಯಾವುದೇ ತಿಂಗಳಲ್ಲಿ ಮಧ್ಯಪಾನ ಸೇವನೆ ಸುರಕ್ಷಿತವಲ್ಲ; ಬಿಯರ್, ವೈನ್ ಮತ್ತು ಮದ್ಯದಂತಹ ಎಲ್ಲಾ ರೀತಿಯ ಮಧ್ಯಪಾನ, ಇದೇ ರೀತಿಯ ಅಪಾಯವನ್ನು ಉಂಟುಮಾಡುತ್ತದೆ; ಮತ್ತು ಅತಿಯಾಗಿ ಕುಡಿಯುವುದರಿಂದ ಅಭಿವೃದ್ಧಿಶೀಲ ಭ್ರೂಣಕ್ಕೆ ಡೋಸ್-ಸಂಬಂಧಿತ ಅಪಾಯವನ್ನು ಉಂಟುಮಾಡುತ್ತದೆ.

ಮೀನು ಮತ್ತು ಒಮೆಗಾ-೩ ಕೊಬ್ಬಿನಾಮ್ಲ[ಬದಲಾಯಿಸಿ]

ಗರ್ಭಾವಸ್ಥೆಯಲ್ಲಿ ಮೀನು ಸೇವನೆಯನ್ನು ಯುರೋಪಿಯನ್, ಆಸ್ಟ್ರೇಲಿಯನ್, ಮತ್ತು ಅಮೇರಿಕನ್ ಮಾರ್ಗಸೂಚಿಗಳು ಪ್ರೋತ್ಸಾಹಿಸುತ್ತವೆ. ಇದರ ಕಾರಣವೇನೆಂದರೆ- ಸಾಲ್ಮನ್ ಮತ್ತು ಟ್ಯೂನ ಮೀನುಗಳಂತಹ ಕೊಬ್ಬು-ಒಳಗೊಂಡಿರುವ ಮೀನುಗಳು ಐಕೋಸಾಪೆಂಟೆನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲವನ್ನು ಹೊಂದಿರುತ್ತವೆ. ಇವುಗಳನ್ನು ಲಾಂಗ್ ಚೈನ್, ಒಮೆಗಾ-೩, ಪೊಲ್ಯೂನ್ಸತುರಟೆಡ್ ಕೊಬ್ಬಿನಾಮ್ಲಗಳು ಎಂದು ಕರೆಯಲಾಗುತ್ತದೆ ಮತ್ತು ಭ್ರೂಣದ ನರಗಳ ಬೆಳವಣಿಗೆಗೆ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಅದಲ್ಲದೆ ಮೀನುಗಳು ವಿಟಮಿನ್ ಎ, ಡಿ ಮತ್ತು ಬಿ೧೨ ಮತ್ತು ಅಯೋಡಿನ್‌ನ ಉತ್ತಮ ಮೂಲಗಳಾಗಿವೆ.


ಗರ್ಭಧಾರಣೆಯ ನಂತರ ಪೌಷ್ಟಿಕಾಂಶದ ಅಗತ್ಯತೆಗಳು[ಬದಲಾಯಿಸಿ]

ಹೆರಿಗೆಯ ನಂತರ ತಾಯಿಗೆ ಸರಿಯಾದ ಪೋಷಣೆ ಬಹಳ ಮುಖ್ಯ. ತಾಯಿ ಚೇತರಿಸಿಕೊಳ್ಳಲು ಮತ್ತು ತನ್ನ ಮಗುವಿಗೆ ಹಾಲುಣಿಸಲು ಸಾಕಷ್ಟು ಆಹಾರ ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಒಂದು ಲೀಟರ್ ರಕ್ತದಲ್ಲಿ ೭೦ ಮೈಕ್ರೋಗ್ರಾಮ್‌ಗಿಂತ ಕಡಿಮೆ ಫೆರ್ರಿಟಿನ್ ಹೊಂದಿರುವ ಮಹಿಳೆಯರು ಕಬ್ಬಿಣವನ್ನು ತಮ್ಮ ಆಹಾರದ ಮೂಲಕ ಸೇವಿಸಬೇಕು ಇಲ್ಲದಿದ್ದರೆ ಅವರಲ್ಲಿ ಕಬ್ಬಿಣದ ಕೊರತೆಯಿದ್ದುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರ ರಕ್ತಹೀನತೆಯನ್ನು ಅನುಭವಿಸುತ್ತಾರೆ. ಹಾಲುಣಿಸುವ ಸಮಯದಲ್ಲಿ ನೀರು ಸೇವನೆ ಹೆಚ್ಚಾಗಿರಬೇಕು. ಮಾನವನ ಹಾಲು ೮೮% ನೀರನ್ನು ಹೊಂದಿರುತ್ತದೆ ಆದ್ದರಿಂದ ಹಾಲುಣಿಸುವ ಮಹಿಳೆಯರು ತಮ್ಮ ನೀರಿನ ಸೇವನೆಯನ್ನು ದಿನಕ್ಕೆ ೩೦೦ರಿಂದ ೩೦೦೦ ಮಿಲಿಲೀಟರ್ ವರೆಗೂ ಹೆಚ್ಚಾಗಿ ಸೇವಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. https://www.cdc.gov/cancer/dcpc/prevention/childhood.htm
  2. https://books.google.com/books?id=E7BKtTKqAQcC&q=pregnancy+books
  3. https://www.ncbi.nlm.nih.gov/pmc/articles/PMC4377896
  4. https://www.ncbi.nlm.nih.gov/pmc/articles/PMC3689887
  5. https://web.archive.org/web/20180911225459/http://www.nationalacademies.org/hmd/~/media/Files/Activity%20Files/Nutrition/DRI-Tables/5Summary%20TableTables%2014.pdf?la=en
  6. https://www.efsa.europa.eu/sites/default/files/assets/DRV_Summary_tables_jan_17.pdf