ವಿಷಯಕ್ಕೆ ಹೋಗು

ಪೊಟ್ಟಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿಶ್‍ವಾಶರ್ ಗುಳಿಗೆಯನ್ನು ಹೊಂದಿರುವ ಪೊಟ್ಟಣ

ಪೊಟ್ಟಣವು ಕಾಗದ, ಲೋಹದ ತೆಳುಹಾಳೆ, ಪ್ಲಾಸ್ಟಿಕ್ ಪೊರೆ ಅಥವಾ ಬೇರೊಂದು ಬಗೆಯ ಪ್ಯಾಕಿಂಗ್ ವಸ್ತುವಿನಿಂದ ತಯಾರಿಸಲಾದ ಸಣ್ಣ ಚೀಲವಾಗಿರುತ್ತದೆ. ಇದನ್ನು ಹಲವುವೇಳೆ ಆಹಾರಗಳು ಅಥವಾ ಕೆಚಪ್ ಅಥವಾ ಶಾಂಪೂವಿನಂತಹ ಗ್ರಾಹಕ ಸರಕುಗಳ ಏಕಬಳಕೆಯ ಪರಿಮಾಣಗಳನ್ನು ಹಾಕಲು ಬಳಸಲಾಗುತ್ತದೆ. ಪೊಟ್ಟಣದ ಒಂದು ಭಾಗದಲ್ಲಿ ಸಣ್ಣ ಸೀಳು ಅಥವಾ ಛಿದ್ರವನ್ನು ಮಾಡಿ ಸಾಮಾನ್ಯವಾಗಿ ಪೊಟ್ಟಣಗಳನ್ನು ತೆಗೆಯಲಾಗುತ್ತದೆ, ಮತ್ತು ನಂತರ ಒಳಗಿರುವ ವಸ್ತುವನ್ನು ಹಿಸುಕಲಾಗುತ್ತದೆ.

ಪೊಟ್ಟಣಗಳಲ್ಲಿ ವಿತರಿಸಲಾದ ವ್ಯಂಜನಗಳಲ್ಲಿ ಕೆಚಪ್, ಮಸ್ಟರ್ಡ್, ಮೇಯನೇಸ್, ಸ್ಯಾಲಡ್ ಕ್ರೀಮ್, ಎಚ್‍ಪಿ ಸಾಸ್, ರೆಲಿಶ್, ಟಾರ್ಟಾರ್ ಸಾಸ್, ವಿನಿಗರ್ ಮತ್ತು ಸೋಯಾ ಸಾಸ್ ಸೇರಿವೆ. ಇವು ತಿನ್ನಲು ಸಿದ್ಧವಾದ ಪ್ಯಾಕ್ ಮಾಡಿದ ಆಹಾರದ ಜೊತೆಗೆ ಸಣ್ಣ ಪ್ರಮಾಣದ ವ್ಯಂಜನವನ್ನು ವಿತರಿಸುವ ಸರಳ ಮತ್ತು ಕಡಿಮೆ ವೆಚ್ಚದ ರೀತಿಯನ್ನು ಒದಗಿಸುತ್ತವೆ ಮತ್ತು ತ್ವರಿತ ಆಹಾರ ರೆಸ್ಟೊರೆಂಟ್‍ಗಳಲ್ಲಿ ಸಾಮಾನ್ಯವಾಗಿವೆ.

ಹೆಚ್ಚಿನ ಓದಿಗೆ

[ಬದಲಾಯಿಸಿ]
"https://kn.wikipedia.org/w/index.php?title=ಪೊಟ್ಟಣ&oldid=971281" ಇಂದ ಪಡೆಯಲ್ಪಟ್ಟಿದೆ