ಪೇಮೆಂಟ್ಸ್ ಬ್ಯಾಂಕ್

ವಿಕಿಪೀಡಿಯ ಇಂದ
Jump to navigation Jump to search

"ಪೇಮೆಂಟ್ಸ್‌ ಬ್ಯಾಂಕ್‌" - ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹ ವ್ಯವಸ್ಥೆ. ಇದು ಭಾರತ ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಲ್ಪಿಸಿದ ವ್ಯವಸ್ಥೆಯಾಗಿದೆ. ಮುಖ್ಯವಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ, ಸೂಪರ್ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಒದಗಿಸುವುದು.

ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟುಗಳಿಗೆ ಹಣ ಪಾವತಿಸುವುದಕ್ಕೆ, ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್ ಫೋನ್‌ಗೆ ಅಥವಾ ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಅವಕಾಶವಿದೆ.

ಭಾರತ ದೇಶದಲ್ಲಿ ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡದ ಜನರಿಗೆ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವುದು ಈ ಪೇಮೆಂಟ್ಸ್ ಬ್ಯಾಂಕ್‌ಗಳ ಮುಖ್ಯ ಉದ್ದೇಶವಾಗಿದ್ದು , ಭಾರತೀಯ ರಿಸರ್ವ್ ಬ್ಯಾಂಕ್ ೨೦೧೫ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ, ಪೇಟಿಎಂ, ಏರ್‌ಟೆಲ್ ಮತ್ತು ವೊಡಾಫೋನ್ ಸೇರಿದಂತೆ ೧೧ ಕಂಪೆನಿಗಳಿಗೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಅನುಮತಿ ನೀಡಿದ್ದು ಅವುಗಳಲ್ಲಿ ಸದ್ಯ, ಏರ್‌ಟೆಲ್‌, ಪೇಟಿಎಂ ಮತ್ತು ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿವೆ.

ಆರ್‌ಬಿಐ ಮಾರ್ಗಸೂಚಿ[ಬದಲಾಯಿಸಿ]

  • ಪೇಮೆಂಟ್ಸ್‌ ಬ್ಯಾಂಕ್‌ಗಳು ಠೇವಣಿ ಸಂಗ್ರಹಿಸಬಹುದು. ಸಾಲ ನೀಡುವಂತಿಲ್ಲ
  • ಉಳಿತಾಯ, ಚಾಲ್ತಿ ಖಾತೆಯ ಗರಿಷ್ಠ ಠೇವಣಿ ಮಿತಿ ₹1 ಲಕ್ಷ. ಎಟಿಎಂ, ಡೆಬಿಟ್‌ ಕಾರ್ಡ್ ನೀಡಬಹುದು.
  • ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಒದಗಿಸಬಹುದು.

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನ