ಪೆರಾಜೆ ಮೂಲೆಮಜಲು

ವಿಕಿಪೀಡಿಯ ಇಂದ
Jump to navigation Jump to search

ಮೂಲೆಮಜಲು ಪೆರಾಜೆ ಉಲ್ಲಾಕುಳು ದೈವಗಳ ಮೂಲಸ್ಥಳ.

ಇತಿಹಾಸ[ಬದಲಾಯಿಸಿ]

ಆರಂಭದಲ್ಲಿ ಉಲ್ಲಾಕುಳು ಬಂದು ನೆಲೆಯಾದ ಕಾರಣದಿಂದಾಗಿ ಅದು ಮೂಲೆಮಜಲೆಂದು ಹೆಸರು ಪಡೆದಿದೆ. ಈ ಸ್ಥಳದ ಕುರಿತಾದ ಸ್ಥಳ ಪುರಾಣ ಗೌಡರ ಮೂಲ, ಬಲ್ಲಾಳರ ಕುರಿತಾದ ಐತಿಹಾಸಿಕ ಸಂಗತಿಗಳೊಂದಿಗೆ ಅಂತರ್ಗತವಾಗಿದೆ. ಮೂಲೆಮಜಲು ಎನ್ನುವಲ್ಲಿ ಉಲ್ಲಾಕುಳುಗಳ ಮೂಲಸ್ಥಾನ ಈಗ ಇಲ್ಲ, ಬೇರೆ ಕಡೆ ಸ್ಥಾನಾಂತರಗೊಂಡಿದೆ. ಉಲ್ಲಾಕುಳು ಮೂರ್ತಿಗಳು ಶಾಸ್ಥಾವು ದೇವಲದ ಆವರಣದಲ್ಲಿದೆ. ಪಂಚಲೋಹದ ಮೂರ್ತಿಗಳು ಕಂಚಿನ ಲೋಹಕ್ಕೆ ಬದಲಾಗಿದೆ. ಪೆರಾಜೆಯನ್ನು ಆಳಿದ ಬಲ್ಲಾಳ್ತಿಯನ್ನು ಚೋಮ ಬಲ್ಲಳ್ತಿಯೆಂದು ಹೇಳಲಾಗುತ್ತದೆ. ಇವಳು ದೇಶಕೋಡಿ ಎಂಬಲ್ಲಿ ವಾಸವಾಗಿದ್ದಳು. ಬಲ್ಲಾಳರ ಕಾಲದಲ್ಲಿ ಪ್ರಸರಣವಾಗಿ ನೆಲೆಯಾದ ಉಲ್ಲಾಕುಳು ಇಲ್ಲಿನ 'ಮಾಡ'ದಲ್ಲಿ ನೇಮಾಚರಣೆ ಪಡೆದರು. ಉಲ್ಲಾಕುಳುಗಳ ತಂಗಿ ದೈವ 'ದೆಯ್ಯಾರ್' ಎಂದು ಕರೆದುಕೊಂಡಿದ್ದಾಳೆ. ಈ ದೈವದ ಆರಾಧನಾ ಸ್ಥಳವಾಗಿ ಪಯಸ್ವಿನಿ ಹೊಳೆಯ ದಡದಲ್ಲಿ 'ದೆಯ್ಯಾರ್ ಬರಿ' ಎಂಬ ಚಾವಡಿ ಸ್ಥಾನವಾಗಿದೆ. ಉಲ್ಲಾಕುಳುಗಳ ಮೂಲಸ್ಥಾನ 'ಮಾಡ' ಬಲ್ಲಾಳರ ಬೀಡಿನ ಮೂಲೆಮಜಲಿನಲ್ಲಿತ್ತು.

ವೈಶಿಷ್ಟ್ಯಗಳು[ಬದಲಾಯಿಸಿ]

ಬಲ್ಲಾಳರ ಕೊಟ್ಟಾರದಲ್ಲಿ ಕಾರ್ಯ ಸೇವಕರಾಗಿ ಸೇರಿದ ಗೌಡ ಮನೆತನ, ಮೂಲದಲ್ಲಿ ಹೊರಗಿನಿಂದ ವಲಸಿಗರಾದವರಿದ್ದಾರೆ. ಈ ಮನೆತನದ ಮೂಲ ಪುರುಷನನ್ನು 'ಕಿನ್ನ'ಯ್ಯನೆಂದು ಈ ಮನೆತನದ ಈಗಿನವರು ನೆನೆಸಿಕೊಳ್ಳುತ್ತಾರೆ. ಬಲ್ಲಾಳ್ತಿಯರು ನಿಸ್ಸಂತತಿಯಾದ ಬಳಿಕ ಬಲ್ಲಾಳರ ಆಸ್ತಿ ಈ ಗೌಡರಿಗೆ ಹಸ್ತಾಂತರವಾಗುತ್ತದೆ.[೧]

ಹಿನ್ನೆಲೆ[ಬದಲಾಯಿಸಿ]

ಮೂಲದಲ್ಲಿ ಪೆರಾಜೆಯ ಉಲ್ಲಾಕುಳು ಬಲ್ಲಾಳರ ದೈವಗಳಾಗಿ ಆರಾಧನೆ ಹೊಂದಿದ ದೈವಗಳಾಗಿವೆ. ತರುವಾಯ ಮೂಲೆಮಜಲು ಗೌಡರಿಗೆ ಹಸ್ತಾಂತರವಾಗಿದೆ. ಪುರಾಣ ಪ್ರಕಾರ ಪೆರಾಜೆಯಿಂದ ಉಲ್ಲಾಕುಳು ತಲಕಾವೇರಿಗೆ ಪಟ್ಟಿ ಮೂಲಕ ಹೋಗುತ್ತಾರೆ. ಹೋಗುವಾಗ ತಮ್ಮ ತಂಗಿ ದಯ್ಯಾರೆಯನ್ನು ಕರೆದುಕೊಂಡು ಹೋಗುವುದು ತಪ್ಪು ಅಭಿಪ್ರಾಯಕ್ಕೆ ಎಡೆಯಾಗುತ್ತದೆಯೆಂದು, ಬಿಟ್ಟು ಹೋಗುತ್ತಾರೆ. ಹಾಗೆ ಬಿಟ್ಟು ಹೋದ ತಂಗಿ ನೆಲೆಯಾದ ಸ್ಥಳವೇ 'ದೆಯ್ಯಾರ್ ಬರಿ' ಚಾವಡಿಯೆಂದು ಗುರುತಿಸಿಕೊಂಡಿದೆ. ಕರಿಭೂತ ಶಾಸ್ತಾವು ಕ್ಷೇತ್ರ ಪೆರಾಜೆಯಲ್ಲಿ ನೆಲೆಯಾಗಿ ಆರಾಧನೆಯಾಗುವ ದೈವವಾಗಿದೆ. ಈ ದೈವದ ಪುರಾಣವು ಶಿಷ್ಟ ಪುರಾಣ ನಿಷ್ಪನ್ನವಾಗಿದೆ. ಒಂದೊಮ್ಮೆ ಶಿವ ಪಾರ್ವತಿಯರು ಬೇಡ-ಬೇಡತಿಯರಾಗಿ ಬೇಟೆಯಾಡುವ ಸಲುವಾಗಿ ಪೂಮಲೆ ಬೆಟ್ಟಕ್ಕೆ ಬರುತ್ತಾರೆ. ಆಗವರು ಅಲ್ಲಿಂದ ದಕ್ಷಿಣಾಭಿಮುಕವಾಗಿ ವೀಕ್ಷಿಸಿದಾಗ ಪೆರಾಜೆಯಲ್ಲಿ ಜನರು ವಿರೋಧಿಗಳಿಂದ ಕಷ್ಟಕ್ಕೊಳಗಾಗಿದ್ದು ಗೋಚರಿಸುತ್ತದೆ. ಆಗ ಶಿವನು ಬಾಣವೊಂದನ್ನು/ತ್ರಿಶೂಲವನ್ನು ಎಸೆಯುತ್ತಾನೆ. ಅದು ಶಾಸ್ತಾವು ಸ್ತಾನದ ಎದುರು ಬೀಳುತ್ತದೆ. ಬೆಟ್ಟದಿಂದಿಳಿದು ಬಂದು ನೋಡುವಾಗ ಅದು ಶಾಸ್ತಾರನ ನೆಲೆಯಲ್ಲಿರುವುದು ಗೋಚರಿಸುತ್ತದೆ. ಊರ ಸಮಸ್ಯೆ ನಿವಾರಣೆಯಾಗುತ್ತದೆ. ಮುಂದೆ ಮಗ ಶಾಸ್ತಾರನ ರಕ್ಷಣೆಗಾಗಿ ಶಿವಪಾರ್ವತಿಯರು ಕರಿ ದೈವ ಮತ್ತು ಕೋಮಾಲಿ/ರಿ ದೈವಗಳಾಗಿ ನೆಲೆಯಾಗುತ್ತಾರೆ.[೨] [೩]

ಉಲ್ಲೇಖಗಳು[ಬದಲಾಯಿಸಿ]

  1. https://pincode.net.in/KARNATAKA/KODAGU/P/PERAJE
  2. ಸ್ಥಳ ನಾಮಗಳು ಮತ್ತು ಐತಿಹಗಳು (೨೦೧೬), ಸಂ.ಪೂವಪ್ಪ ಕಣಿಯೂರು, ಕನ್ನಡ ಸಂಘ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ, ಪುಟ ಸಂಖ್ಯೆ-೧೫,೧೬
  3. http://www.onefivenine.com/india/villages/Kodagu/Madikeri/Peraje