ಪೆಮಾ ಖಂಡು
ಪೆಮಾ ಖಂಡು | |
---|---|
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ.
| |
ಹಾಲಿ | |
ಅಧಿಕಾರ ಸ್ವೀಕಾರ ೧೭-೭-೨೦೧೬ | |
ಪೂರ್ವಾಧಿಕಾರಿ | ನಬಂ ತುಕಿ;& ಕಲಿಖೊ ಪುಲ್ |
ಉತ್ತರಾಧಿಕಾರಿ | ಹಾಲಿ ಸದಸ್ಯರು |
ಮತಕ್ಷೇತ್ರ | ಮುಕ್ತೊ (ಎಸ್ಟಿ) ಕ್ಷೇತ್ರ |
ಅರುಣಾಚಲ ಪ್ರದೇಶದ ಉಪ ಮುಖ್ಯಮಂತ್ರಿ
| |
ಅಧಿಕಾರ ಅವಧಿ ೧೭-೭-೨೦೧೬ – 9 ಏಪ್ರಿಲ್ 2019 | |
ಉತ್ತರಾಧಿಕಾರಿ | himself |
ಅಧಿಕಾರ ಅವಧಿ ೧೭-೭-೨೦೧೬ – ೯-೪-೨೦೧೯ | |
ಪೂರ್ವಾಧಿಕಾರಿ | himself |
ವೈಯಕ್ತಿಕ ಮಾಹಿತಿ | |
ಜನನ | ೨೧ ಆಗಸ್ಟ್ ೧೯೭೯ |
ರಾಷ್ಟ್ರೀಯತೆ | ಭಾರತ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಧರ್ಮ | ಬೌದ್ಧ |
ಪೆಮಾ ಖಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಜುಲೈ 2016 ರಲ್ಲಿ ಮುಖ್ಯಮಂತ್ರಿಯಾಗಲು ಅವರು ಮತ್ತು ಅವರ ಸರಕಾರವು ಎರಡು ಬಾರಿ ತಮ್ಮ ಪಕ್ಷದ ಸದಸ್ಯತ್ವವನ್ನು ಬದಲಾಯಿಸಿಕೊಂಡಿವೆ; ಸೆಪ್ಟೆಂಬರ್ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ, ಮತ್ತು ಡಿಸೆಂಬರ್ 2016 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಿಂದೆ ಅವರು ಕಾಂಗ್ರೆಸ್ ನಾಯಕ ನಬಾಮ್ ತುಕಿ ಸರಕಾರದಲ್ಲಿ ರಾಜ್ಯದ ರಾಜ್ಯ ಪ್ರವಾಸೋದ್ಯಮ, ನಗರ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು..
ತಂದೆ ದೋರ್ಜಿ ಖಂಡು ಆದರ್ಶ
[ಬದಲಾಯಿಸಿ]37 ವರ್ಷದ ಪೆಮಾ ದೇಶದ ಎರಡನೇ ಅತ್ಯಂತ ಕಿರಿಯ ಮುಖ್ಯಮಂತ್ರಿ. ಚೀನಾ ಗಡಿ ತವಾಂಗ್ ಜಿಲ್ಲೆಯ ಲುಗುತಾಂಗ್ ಬಳಿ 2011 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ತಂದೆ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ನಿಧನರಾದರು.
ವಿದ್ಯಾಭ್ಯಾಸ
[ಬದಲಾಯಿಸಿ]ಕುಟುಂಬದ ಹಿರಿಯ ಮಗ ಪೆಮಾ, ದೆಹಲಿಯ ಪ್ರತಿಷ್ಠಿತ ಹಿಂದೂ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ತನ್ನ ತಂದೆಯ ನಿಧನದ ನಂತರ ರಾಜಕೀಯಕ್ಕೆ ಬರುವ ಮೂಲಕ ಆಡಳಿತದಲ್ಲಿ ಆರಂಭಿಕ ಪ್ರವೇಶ ಮಾಡಿದ್ದರು. ನಂರತದ ಐದು ವರ್ಷಗಳಲ್ಲಿ, ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ಅವರು ಮುಖ್ಯಮಂತ್ರಿ ಅಬ್ಯರ್ಥಿಯಾಗಿ, ಭಿನ್ನಮತೀಯರನ್ನು ಸಮಾಧಾನಗೊಳಿಸಿ ಕಾಂಗ್ರೆಸ್‍ನ್ನು ಮರಳಿ ಅಧಿಕಾರಕ್ಕೆ ತಂದು ಆ ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಾವಣೆ ಮಾಡಿದರು.ಅವರು ಮೊಂಪಾ (Monpa) ಬುಡಕಟ್ಟು ಜನಾಂಗಕ್ಕೆ ಸೇರಿದವರು.
ಜೀವನ
[ಬದಲಾಯಿಸಿ]ತವಾಂಗ್ ಜಿಲ್ಲೆಯ ಗ್ಯಾಂಗ್‌ಖಾರ್ ಗ್ರಾಮದಲ್ಲಿ ಹುಟ್ಟಿ ಬೆಳೆದ ಪೆಮಾ ಅವರು ವಿವಾಹಿತರಾಗಿದ್ದು, ಒಬ್ಬಳು ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. 2000 ಇಸವಿಯ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದ ಪೆಮಾ 2005 ರಲ್ಲಿ ಅರುಣಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 2010 ರಲ್ಲಿ ತವಾಂಗ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ವಿವಿಧ ಸಂಘ–ಸಂಸ್ಥೆಗಳಲ್ಲಿ ಸಕ್ರಿಯ: ಮೃದು ಭಾಷಿಯಾಗಿರುವ ಪೆಮಾ ವಿವಿಧ ದೇಶಗಳನ್ನು ಸುತ್ತುವ ಹವ್ಯಾಸ ಹೊಂದಿದ್ದಾರೆ. ಈಗಾಗಲೇ ಜಪಾನ್, ಥಾಯ್ಲೆಂಡ್, ಮಕಾವ್, ಶ್ರೀಲಂಕಾ, ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಭೂತಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಹಲವು ಸಂಘ–ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಬೋಧಿ ಭಾಷೆ ಮತ್ತು ಸಾಹಿತ್ಯ ಪ್ರಚಾರ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿರುವುದರ ಜತೆಗೆ ಸಾಂಪ್ರದಾಯಿಕ ಹಾಡುಗಳನ್ನು ಜನಪ್ರಿಯಗೊಳಿಸಲು ತವಾಂಗ್ ಮತ್ತು ಪೂರ್ವ ಕಮೆಂಗ್ ಜಿಲ್ಲೆಗಳಲ್ಲಿ ಹಲವು ಪ್ರತಿಭಾ ಪ್ರದರ್ಶನ ಏರ್ಪಡಿಸಿದ್ದಾರೆ.
ಅವಿರೋಧವಾಗಿ ಆಯ್ಕೆ
[ಬದಲಾಯಿಸಿ]ಪೆಮಾ ತವಾಂಗ್ ನಿಂದ ಬಂದವರು. ತನ್ನ ತಂದೆಯ ಮರಣದಿಂದ ಉಂಟಾದ ಸ್ಥಾನವನ್ನು ತುಂಬಲು 2011 ರಲ್ಲಿ ಅರುಣಾಚಲ ಪ್ರದೇಶದ ವಿಧಾನಸಭೆಗೆ ಪ್ರವೇಶಿಸಿಸಿದರು. .ಮುಕ್ತೊ (ಎಸ್ಟಿ) ಕ್ಷೇತ್ರದಿಂದ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಕೂಡಲೇ ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಪುಟ ದರ್ಜೆ ಮಂತ್ರಿಯಾಗಿ ಸರ್ಕಾರದ ಸಚಿವಸಂಪುಟದಲ್ಲಿ ಸೇರಿಸಲಾಯಿತು. ಅವರು ನವೆಂಬರ್ 21, 2011 ನಬಮ್ ತುಕಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ (ಆರ್ಡಬ್ಲುಡಿ) ಮತ್ತು ಪ್ರವಾಸೋದ್ಯಮ ಮಂತ್ರಿಯಾಗಿ ಮತ್ತು ನಂತರ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಮತ್ತು ಕಲೆ & ಸಂಸ್ಕೃತಿ ಇಲಾಖೆಗಳ ರಾಜ್ಯದ ಕ್ಯಾಬಿನೆಟ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.
ನಬಮ್ ತುಕಿ ಸರ್ಕಾರದಲ್ಲಿ
[ಬದಲಾಯಿಸಿ]ಅವರು ಸಾರ್ವತ್ರಿಕ ಚುನಾವಣೆಯ ನಂತರ ಜೂನ್ 1 2014 ರಂದು ನಗರಾಭಿವೃದ್ಧಿ ಸಚಿವರಾಗಿ ನಬಮ್ ತುಕಿ ಸರ್ಕಾರದಲ್ಲಿ ಮರು ಸೇರ್ಪಡೆ ಯಾದರು. ಕಿರಿಯ ಸಿ.ಎಂ. ಹಸನ್ ಫಾರೂಕ್ ಪೆಮಾ ಖಂಡು ಪ್ರಸ್ತುತ ದೇಶದ ಅತಿಕಿರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಆದರೆ ಭಾರತದ ಇತಿಹಾಸದಲ್ಲಿ ಅತಿಕಿರಿಯ ಮುಖ್ಯಮಂತ್ರಿ ಎಂಬ ಗೌರವ ಎಂ.ಒ. ಹಸನ್ ಫಾರೂಕ್ ಹೆಸರಿನಲ್ಲಿದೆ. ಫಾರೂಕ್ ತಮ್ಮ 29ನೇ ವಯಸ್ಸಿನಲ್ಲಿ (1967ರಲ್ಲಿ ) ಪುದುಚೇರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಪೆಮಾ ಖಂಡು ದೇಶದ ಎರಡನೇ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ.[೧][೨]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]