ಪೃಥ್ವಿ ಏರ್ ಡಿಫೆನ್ಸ್ ವೆಹಿಕಲ್ (ಪಿಎಡಿ) (ಭಾರತ)
ಗೋಚರ
ಪೃಥ್ವಿ ಏರ್ ಡಿಫೆನ್ಸ್ ವೆಹಿಕಲ್ (ಪಿಎಡಿ) (PAD) | |
---|---|
ನಮೂನೆ | Exo-atmospheric Anti-ballistic missile |
ಮೂಲ ಸ್ಥಳ | India |
ಕಾರ್ಯನಿರ್ವಹಣಾ ಇತಿಹಾಸ | |
ಸೇವೆಯಲ್ಲಿ | Induction Phase |
ನಿರ್ಮಾಣ ಇತಿಹಾಸ | |
ನಿರ್ಮಾರ್ತೃ | Defence Research and Development Organisation |
ಉತ್ಪಾದಿತ | 26 November 2006 |
ವಿವರಗಳು | |
Detonation mechanism |
Proximity |
ಎಂಜಿನ್ | Two Stage |
Propellant | Liquid fuel propelled first stage with two propellants and oxidisers, solid fuel propelled second stage with gas thruster. |
ಕಾರ್ಯವ್ಯಾಪ್ತಿ | 2,000 km (1,200 mi) |
ಉಡ್ಡಯನದ ಎತ್ತರ | 80 km (50 mi)[೧] |
ವೇಗ | Mach 5+ |
ಮಾರ್ಗದರ್ಶಕ ವ್ಯವಸ್ಥೆ |
Inertial Navigation System Ground-based mid-course correction Active radar homing (Terminal phase) |
ಉಡ್ಡಯನ ನೌಕೆ | Tatra TEL 8 × 8 |
ಪೃಥ್ವಿ ರಕ್ಷಣಾ ವಾಹಕ ವ್ಯವಸ್ಥೆ (ಪಿಎಡಿ) ಅಥವಾ ಪೃಥ್ವಿ ಡಿಫೆನ್ಸ್ ವೆಹಿಕಲ್’(ಪಿಡಿವಿ)
[ಬದಲಾಯಿಸಿ]- The Indian Ballistic Missile Defence Programme
- ಭಾರತೀಯ ಕ್ಷಿಪಣಿ ರಕ್ಷಣಾ ಕಾರ್ಯಕ್ರಮ ಅಭಿವೃದ್ಧಿಯು ಕ್ಷಿಪಣಿ ದಾಳಿಯಿಂದ ರಕ್ಷಿಸಲು ಮತ್ತು ಬಹು ಪದರದ ಪ್ರಕ್ಷೇಪಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ವಿಚಾರವಾಗಿದೆ. ಅದರಲ್ಲೂ ಪ್ರಮುಖವಾಗಿ, ಪಾಕಿಸ್ತಾನ್ ಕ್ಷಿಪಣಿ ಬೆದರಿಕೆ ಸುಳಿವಿನಲ್ಲಿ ಇದರ ಅಗತ್ಯ ಉಂಟಾಯಿತು. ಇದು ಭೂಮಿ ಮತ್ತು ಸಮುದ್ರದ ಆಧಾರಿತ ಎರಡು ಹಂತದ ಕ್ಷಿಪಣಿಗಳ- ಪ್ರತಿಬಂಧ ಉಳ್ಳದ್ದು. ಅವುಗಳೆಂದರೆ ಪೃಥ್ವಿ ಏರ್ ಡಿಫೆನ್ಸ್ (ಪಿಎಡಿ) ಕ್ಷಿಪಣಿ,; ಎತ್ತರದ ವಾಯು ರಕ್ಷಣಾ (ಎಎಡಿ ಮತ್ತು) ಸುಧಾರಿತ ಕಡಿಮೆ ಎತ್ತರದ ತಡೆಗೆ ಕ್ಷಿಪಣಿ ಒಳಗೊಂಡಿರುವ ಎರಡು ಶ್ರೇಣೀಕೃತ ವ್ಯವಸ್ಥೆ. (ಎರಡು ಶ್ರೇಣೀಕೃತ ರಕ್ಷಣೆ-ಗುರಾಣಿ); ಇದರಲ್ಲಿ 5,000 ಕಿಲೋಮೀಟರ್ ದೂರ ಉಡಾವಣೆಯ ಯಾವುದೇ ಒಳಬರುವ ಕ್ಷಿಪಣಿಯನ್ನು ಪ್ರತಿಬಂಧಿಸಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯು ಆರಂಭಿಕ ಎಚ್ಚರಿಕೆ ಕೊಡುವುದು ಮತ್ತು ಟ್ರ್ಯಾಕಿಂಗ್ ರೆಡಾರ್ಗಳು (ಮಾರ್ಗ ಸೂಚಿ ವ್ಯವಸ್ಥೆ) ಒಂದು ಅತಿಕ್ರಮಣ ಸಂಕೀರ್ಣ ವ್ಯವಸ್ಥೆ (ನೆಟ್ವರ್ಕ್). ಹಾಗೆಯೇ ಆದೇಶ ಮತ್ತು ನಿಯಂತ್ರಣ ನಿರ್ದೇಶಕಗಳನ್ನು (ಪೋಸ್ಟಗಳನ್ನು) ಒಳಗೊಂಡಿದೆ. [೨]
- ಆ ಪಿಎಡಿ ನವೆಂಬರ್ 2006 ರಲ್ಲಿ, ಪ್ಯಾಡ್ ಕ್ಷಿಪಣಿ ಪರೀಕ್ಷೆಯನ್ನು ನಡೆಸಿತು. 2007 ರ ಡಿಸೆಂಬರ್ನಲ್ಲಿ ಆಟೋಮ್ಯಾಟಿಕ್ ಆಕ್ಟಿವೇಷನ್ ಡಿವೈಸ್-(ಎಎಡಿ) ಪರೀಕ್ಷೆ ನಡೆಯಿತು, ಭಾರತವು ಯುನೈಟೆಡ್ ಸ್ಟೇಟ್ಸ್, ರಷ್ಯಾ, ಮತ್ತು ಇಸ್ರೇಲ್ ನಂತರ, ಒಂದು ಖಂಡಾಂತರ ನಿರೋಧಕ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿ ಹೊಂದಿದ ನಾಲ್ಕನೇ ರಾಷ್ಟ್ರವಾಯಿತು. ಈ ವ್ಯವಸ್ಥೆ ಯು ಹಲವಾರು ಪರೀಕ್ಷೆಗಳಿಗೆ ಒಳಗಾಯಿತು ಆದರೆ ವ್ಯವಸ್ಥೆಯ ಅಧಿಕೃತವಾಗಿ ಕಾರ್ಯಾರಂಭ ಮಾಡಲು ಇನ್ನೂ 2017 ಫೆಬ್ರವರಿ ವರೆಗೆ ಕಾಯಬೇಕಾಯಿತು.[೩]
ಪೃಥ್ವಿ ಡಿಫೆನ್ಸ್ ವೆಹಿಕಲ್’ (ಪಿಡಿವಿ)
[ಬದಲಾಯಿಸಿ]- 12 Feb, 2017
- ಭಾರತದತ್ತ ಶತ್ರು ದೇಶಗಳು ಹಾರಿಸುವ ಖಂಡಾಂತರ ಕ್ಷಿಪಣಿಯನ್ನು ಸುಮಾರು ಎರಡು ಸಾವಿರ ಕಿ.ಮೀ ದೂರದಲ್ಲೇ ಗುರುತಿಸಿ, ಧ್ವಂಸ ಮಾಡುವ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ (ಪಿಡಿವಿ) ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ೧೧-೨-೨೦೧೭ರ ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ‘ಬೆಳಿಗ್ಗೆ 7.45ಕ್ಕೆ ಬಂಗಾಳ ಕೊಲ್ಲಿಯ ಅಜ್ಞಾತ ದ್ವೀಪವೊಂದರ ಬಳಿ ಲಂಗರು ಹಾಕಿದ್ದ ಹಡಗಿನ ಮೂಲಕ ಒಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಅದನ್ನು ಗುರುತಿಸಿದ ಇನ್ಫ್ರಾರೆಡ್ ಉಪಗ್ರಹವು, ಸಂವಹನ ಉಪಗ್ರಹಕ್ಕೆ ಆ ಬಗ್ಗೆ ಸಂಕೇತ ರವಾನಿಸಿತು. ಸಂವಹನ ಉಪಗ್ರಹವು ಆ ಸಂಕೇತವನ್ನು ಪಿಡಿವಿಗೆ ರವಾನಿಸಿತು. ತಕ್ಷಣವೇ ಕಾರ್ಯಪ್ರವೃತ್ತವಾದ ಪಿಡಿವಿ ಪೃಥ್ವಿ ಕ್ಷಿಪಣಿಯನ್ನು ಉಡಾವಣೆ ಮಾಡಿತು. ನಂತರ ಪೃಥ್ವಿ ಕ್ಷಿಪಣಿ ಗುರಿ ಕ್ಷಿಪಣಿಯನ್ನು ಆಗಸದಲ್ಲೇ ಧ್ವಂಸ ಮಾಡಿತು. ಈ ವ್ಯವಸ್ಥೆ ಸೇವೆಗೆ ನಿಯೋಜಿತವಾಗಲು ಸಿದ್ಧವಿದೆ’ ಎಂದು ಡಿಆರ್‌ಡಿಒ ತಿಳಿಸಿದೆ. ಹೀಗೆ ಖಂಡಾಂತರ ನಿರೋಧಕ ಕ್ಷಿಪಣಿ ವ್ಯವಸ್ಥೆ ಯಶಸ್ವಿಯಾಯಿತು.[೪]
ಕ್ಷಿಪಣಿ ಲಾಂಚರ್: ಬೆಳಗಾವಿಯಲ್ಲಿ ತಯಾರಿ
[ಬದಲಾಯಿಸಿ]- ಒಡಿಶಾದಲ್ಲಿ ಪರೀಕ್ಷಾರ್ಥವಾಗಿ ಶನಿವಾರ ಹಾರಾಟ ನಡೆಸಿದ ಕ್ಷಿಪಣಿಯ ಲಾಂಚರ್ ನಗರದ ಸರ್ವೊಕಂಟ್ರೊಲ್ಸ್ ಏರೊಸ್ಪೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ತಯಾರಾಗಿದೆ. ‘ನಗರದ ಉದ್ಯಮಬಾಗ್ ಹಾಗೂ ಹತ್ತರಗಿ ಬಳಿ ಕಂಪೆನಿಯ ತಯಾರಿಕಾ ಘಟಕಗಳಿವೆ. ಹೈಡ್ರಾಲಿಕ್ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದಿಂದ, ಕ್ಷಿಪಣಿ ನೆಗೆತಕ್ಕೆ ಅಗತ್ಯವಾದ ಲಾಂಚರ್ ಅನ್ನು ಆರು ತಿಂಗಳಲ್ಲಿ ಸಿದ್ಧಪಡಿಸಲಾಗಿದೆ’ ಎಂದು ಕಂಪೆನಿಯ ಅಧಿಕಾರಿ ಸತೀಶ ಪಾಟೀಲ ತಿಳಿಸಿದ್ದಾರೆ. ತಂತ್ರಜ್ಞ ವಿಜಯ ಪ್ರಭು ಮಾರ್ಗದರ್ಶನದಲ್ಲಿ ಜ್ಯೋತಿಬಾ ಸೊನುಲ್ಕರ್, ಪರಶುರಾಮ ಪೋತೆ, ಸಂತೋಷ ಗುರವ, ಇತರರು ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರು.
ವಿವರ
[ಬದಲಾಯಿಸಿ]- ಸ್ವದೇಶಿನಿರ್ಮಿತ ಅಡ್ಡತಡೆ ಕ್ಷಿಪಣಿ, ಪೃಥ್ವಿ ರಕ್ಷಣಾ ವಾಹನ (ಪಿಡಿವಿಹೆಸರಿನ,) ವು ಸೂಪರ್ಸಾನಿಕ್ ವೇಗದಲ್ಲಿ ಚಲಿಸುತ್ತದೆ ಮತ್ತು ಹೊರ-ವಾತಾವರಣದ ಪ್ರದೇಶದಲ್ಲಿ 120 ಕಿ.ಮೀ ಗೂ ಹೆಚ್ಚು ಎತ್ತರದ ಗುರಿಗಳನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ. ಈ ಅಡ್ಡತಡೆ ಕ್ಷಿಪಣಿ ಶತ್ರು ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪ (ಹಿಂದೆ ವೀಲರ್ ದ್ವೀಪ)ದಿಂದ, ಸುಮಾರು ಬೆಳಿಗ್ಗೆ 7. ಗಂಟೆ 45ನಿಮಿಷಗಳ ಸಮಯದಲ್ಲಿ ಸಂಕೀರ್ಣ--IV ರಿಂದ ಉಡಾಯಿಸಲಾಯಿತು.. ಅದನ್ನು ಬಂಗಾಳ ಕೊಲ್ಲಿಯ ಪಾರಾದೀಪ್ ಕರಾವಳಿಯ ಸುಮಾರು 70 ಕಿಮೀ ದೂರದ ಆಸರೆ ಯುದ್ಧನೌಕೆಯಿಂದ ಹಾರಿದ ಅಣಕು ಗುರಿಯೆಡೆಗೆ ಉಡಾಯಿಸಲಾಗಿತ್ತು; ಅದು ಗರಿಯನ್ನು ಕರಾರುವಾಕ್ಕಾಗಿ ತಲುಪಿ ಗುರಿಯಿಟ್ಟ ಕ್ಷಿಪಣಿಯನ್ನು ನಾಶಮಾಡಿದೆ.
ಹಿನ್ನೆಲೆ
[ಬದಲಾಯಿಸಿ]- 2006ರಲ್ಲಿ ಇದರ ಮೊದಲ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಆ ಬಳಿಕ ಈವರೆಗೂ 12 ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಬಹುತೇಕ ಯಶಸ್ವಿಯಾಗಿವೆ. 5 ಸಾವಿರ ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯವಿರುವ ಪ್ರಬಲ ಕ್ಷಿಪಣಿಗಳನ್ನು ಕೂಡ ಆಕಾಶದಲ್ಲೇ ಹೊಡೆದುರುಳಿಸುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಪ್ರಸ್ತುತ ಅಮೆರಿಕ, ರಷ್ಯಾ ಹಾಗೂ ಇಸ್ರೇಲ್, ಚೀನಾ ದೇಶಗಳ ಬಳಿ ಮಾತ್ರವಿದ್ದು, ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಇಂತಹ ವ್ಯವಸ್ಥೆ ಅಳವಡಿಸಿಕೊಂಡ ರಾಷ್ಟ್ರಗಳ ಪಟ್ಟಿಗೆ ಭಾರತ ಐದನೇ ರಾಷ್ಟ್ರವಾಗಿ ಸೇರ್ಪಡೆಯಾಗಲಿದೆ.
- ಚೀನಾ ಹಾಗೂ ಪಾಕಿಸ್ತಾನದಿ೦ದ ನಿರ೦ತರವಾಗಿ ಭದ್ರತಾ ಆತ೦ಕ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ರಕ್ಷಣೆಗಾಗಿ ಸ್ವದೇಶಿ ತ೦ತ್ರಜ್ಞಾನ ಹೊ೦ದಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆ ರೂಪಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ರೂಪುಗೊಂಡಿರುವ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯ ಪರೀಕ್ಷೆ ಭಾನುವಾರ ನಡೆಸಲಾಗಿತ್ತು. ಈ ಪರೀಕ್ಷೆ ಪೂರ್ಣ ಯಶಸ್ವಿಯಾಗಿದ್ದು, ಭಾರತದತ್ತ ಹಾರಿಸಿದ ಪೃಥ್ವಿ ಕ್ಷಿಪಣಿಯನ್ನು ಆಗಸದಲ್ಲಿಯೇ ಹೊಡೆದುರುಳಿಸುವ ಮೂಲಕ ತನ್ನ ಸಾಮರ್ಥ್ಯವೇನು ಎಂಬುದನ್ನು ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಸಾಬೀತು ಪಡಿಸಿದೆ.
- ಶನಿವಾರ ಬೆಳಗ್ಗೆ ಬ೦ಗಾಳಕೊಲ್ಲಿಯಲ್ಲಿ ಪರೀಕ್ಷೆಗೆಂದೇ ನಿಯೋಜಿಸಲಾಗಿದ್ದ ಹಡಗಿನಿ೦ದ ಪೃಥ್ವಿ ಕ್ಷಿಪಣಿಯನ್ನು ಭಾರತದತ್ತ ಗುರಿ ಮಾಡಿಸಿ ಉಡಾಯಿಸಲಾಗಿತ್ತು. ಮತ್ತೊಂದೆಡೆ ಒಡಿಶಾ ಕಡಲ ತೀರದ ಅಬ್ದುಲ್ ಕಲಾ೦ ದ್ವೀಪದಲ್ಲಿರುವ ಅಡ್ವಾನ್ಸ್ ಡ್ ಏರ್ ಡಿಫೆನ್ಸ್ ನ ರಾಡಾರ್ ಮೂಲಕ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಕ್ಷಿಪಣಿಯನ್ನು ಭಾರತದತ್ತ ನುಗ್ಗಿ ಬರುತ್ತಿದ್ದ ಪೃಥ್ವಿ ಕ್ಷಿಪಣಿಗೆ ಗುರಿ ಮಾಡಿ ಉಡಾಯಿಸಲಾಯಿತು. ಉಡಾವಣೆಯಾದ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ನಿಗದಿತ ವೇಗದಲ್ಲಿ, ನಿಗದಿತ ಸಮಯದಲ್ಲಿ ಗುರಿಯತ್ತ ಮುನ್ನುಗ್ಗಿ ಪೃಥ್ವಿ ಕ್ಷಿಪಣಿಯನ್ನು ಕ್ಷಣಾರ್ಧದಲ್ಲೇ ಆಗಸದಲ್ಲಿಯೇ ಛಿದ್ರಗೊಳಿಸಿತು. ಆ ಮೂಲಕ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ತನ್ನ ಸಾಮರ್ಧ್ಯವನ್ನು ಇಡೀ ವಿಶ್ವಕ್ಕೇ ತೋರ್ಪಡಿಸಿದೆ ಎಂದು ರಕ್ಷಣಾ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
- ಸುಮಾರು 7.5 ಮೀಟರ್ ಉದ್ದವಿರುವ ಇ೦ಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯು, ನ್ಯಾವಿಗೇಷನ್ ವ್ಯವಸ್ಥೆ, ಅತ್ಯಾಧುನಿಕ ಕ೦ಪ್ಯೂಟರ್, ಮೊಬ್ಯೆಲ್ ಲಾ೦ಚರ್, ಸುರಕ್ಷಿತ ಡೇಟಾ ಲಿ೦ಕ್, ಅತ್ಯಾಧುನಿಕ ರಾಡಾರ್ ಮತ್ತಿತರ ತ೦ತ್ರಜ್ಞಾನಗಳನ್ನು ಹೊ೦ದಿದೆ. ಇವುಗಳ ಸಹಾಯದಿಂದ ಭಾರತದತ್ತ ನುಗ್ಗಿ ಬರುವ ಕ್ಷಿಪಣಿಗಳನ್ನು ಗುರುತಿಸಿ ಅವುಗಳು ಗುರಿ ತಲುಪುವ ಮುನ್ನವೇ ಆಗಸದಲ್ಲಿಯೇ ಛಿದ್ರಗೊಳಿಸುವ ಸಾಮರ್ಥ್ಯ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಗಿದೆ.[೫][೬]
ನೋಡಿ
[ಬದಲಾಯಿಸಿ]ಅಗ್ನಿ-೧ ~ | ಪೃಥ್ವಿ-೨ ~ | ಅಗ್ನಿ-೪~ | ಅಗ್ನಿ-೫~ | ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ |
ಎಚ್ಎಎಲ್ ತೇಜಸ್~ | ಹೆಚ್ಎಎಲ್ ತೇಜಸ್~ | ಎಚ್ಎಎಲ್ ತೇಜಸ್ ~ | ಭಾರತೀಯ ಸೈನ್ಯ |
ಹತ್ತು ಪ್ರಮುಖ ಅಂಶಗಳು
[ಬದಲಾಯಿಸಿ]- ಪೃಥ್ವಿ ರಕ್ಷಣಾ ವಾಹನ, ಅಡ್ಡಿ ದೇಶೀಯವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ, 97 ಕಿಮೀ ಎತ್ತರದಲ್ಲಿ ಗುರಿ ಕ್ಷಿಪಣಿ ನಾಶಪಡಿಸಿದೆ.
- *ವಿಶ್ವದ ಒಂದು ಅತ್ಯುತ್ತಮ ವರ್ಗದ ಮಾಡಲು ಎನ್ನಲು ಅದರ 10 ಅಂಶಗಳು ವಸ್ತುಗಳು.
- 1. ಪೃಥ್ವಿ ರಕ್ಷಣಾ ವಾಹನ ಅಡ್ಡಿ ಕ್ಷಿಪಣಿ ಭೂಮಿಯ ವಾತಾವರಣದ ಹೊರಗೆ ಸುಮಾರು 2,000 ಕಿ.ಮೀ ಶ್ರೇಣಿಯ ಒಳಬರುವ ಕ್ಷಿಪಣಿ ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಭಾರತ ಒಂದು ದೃಢವಾದ ಪ್ರಕ್ಷೇಪಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮಾಡಲು ಹೊಂದಿದ ವಿಶ್ವದ ಐದನೇ ರಾಷ್ಟ್ರ. ಇತರ ರಾಷ್ಟ್ರಗಳು, ಯು.ಎಸ್. ರಷ್ಯಾ, ಇಸ್ರೇಲ್ ಮತ್ತು ಚೀನಾ ಇವೆ.
- 2. ಅಡ್ಡಿ ಪಿಡಿವಿ ಎರಡು ಹಂತದ ಗುರಿ ಕ್ಷಿಪಣಿ ಮತ್ತು ಎರಡು ಹಂತದ ಗುರಿ ಸಾಧನೆ ಹೊಂದಿದೆ; ಕ್ರಿಯಾಯೊಜನೆಗೆ (ಮಿಷನ್‍ಗೆ) ಇದಕ್ಕಾಗಿ ವಿಶೇಷವಾದ ಮೋಟಾರ್ ಅಭಿವೃದ್ಧಿ ಪಡಿಸಿ ಅಳವಡಿಸಲಾಗಿತ್ತು.
- 3. ಸ್ವಯಂಚಾಲಿತ ಕಾರ್ಯಾಚರಣೆಯಲ್ಲಿ, ರೇಡಾರ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ , ಗುರಿ ಕ್ಷಿಪಣಿ ಪತ್ತೆ ತನ್ನ ಪಥವನ್ನು ಗುರುತಿಸುವುಸು; ಮತ್ತು ಅಡ್ಡಿ ಕ್ಷಿಪಣಿಗೆ ಗುರಿಯಮೇಲೆ ಧಾಳಿಮಾಡಲು ತಿಳಿಸುವುದು.
- 4 ಅಡ್ಡಿ ಯಾ ಪ್ರತಿಬಂಧ ಕ್ಷಿಪಣಿ ಮೈಕ್ರೋ ಸಂಚಾರ ವ್ಯವಸ್ಥೆ (ಈಣಶ) ಮೂಲಕ ಹೆಚ್ಚಿನ ನಿಖರತೆಯನ್ನು ಹೊಂದಿದೆ. ನೌಕಾಯಾನಶಾಸ್ತ್ರ ವ್ಯವಸ್ಥೆ (ಐಎನ್ಎಸ್)ಯ ಮಾರ್ಗದರ್ಶನ ಮತ್ತು ಬೆಂಬಲದಿಂದ ಧಾಳಿಯ ಪಾಯಿಂಟ್ ಕಡೆಗೆ ಸರಿಯಾಗಿ ತೆರಳಿದೆ.
- 5)ಕ್ಷಿಪಣಿ ವಾತಾವರಣ ದಾಟಿದ ನಂತರ ಶಾಖರಕ್ಷಣೆಯ ಗುರಾಣಿ ಅಂದರೆ ಅತಿಗೆಂಪು ಕವಾಟವು ಬಲಿವಸ್ತುವಿಗೆ ಗುರಿ ಸ್ಥಳ ನೋಡಲು ತೆರೆಯಿತು. (ಐಆರ್) ಅನ್ವೇಷಿಕಸಹಾಯದಿಂದ ಗುಮ್ಮಟ ಮಿಷನ್ ಕಂಪ್ಯೂಟರ್ ಗುರಿ ಸ್ಥಳ ಸೂಚಿಸುತ್ತಿತ್ತು.. ಜಡತ್ವಕ್ಕೆ ಸಂಬಂಧಿಸಿದ ಮಾರ್ಗದರ್ಶಕ ಮತ್ತು ಐಆರ್ ನ ಸಹಾಯದಿಂದ, ಕ್ಷಿಪಣಿ ಪ್ರತಿಬಂಧ ಗುರಿ ತಲುಪಿದೆ.
- 6. ಪ್ರತಿಬಂಧಕ್ಕೆ ಒಳಪಡುವ ವಸ್ತು ಪತ್ತೆಗೆ, ಇಡೀ ಕ್ರಿಯೆ ಸಂಪೂರ್ಣವಾಗಿ ಸ್ವಯಂಚಾಲಿತವಾಗಿತ್ತು. ಮತ್ತು ಯಾವುದೇ ಮಾನವ ಹಸ್ತಕ್ಷೇಪ ಇರಲಿಲ್ಲ. ಈ ಪಿವಿಡಿ (ಅಡ್ಡಿ ಪ್ರತಿ ದಾಳಿ) ಯೋಜನೆ ಭಾರತ ಅಭಿವೃದ್ಧಿ ಮತ್ತು ವ್ಯವಸ್ಥೆಯು ಅದರ ನಗರಗಳನ್ನು ರಕ್ಷಿಸುವ ಒಂದು ಭಾಗವಾಗಿದೆ.
- 7. ಇಂತಹ ಎತ್ತರದಲ್ಲಿ ಒಳಬರುವ ಕ್ಷಿಪಣಿಯನ್ನು ಅಡ್ಡಗಟ್ಟಿ ಹೊಡೆದರೆ ಅವಶೇಷಗಳ ನೆಲಕ್ಕೆ ಬೀಳುವುದಿಲ್ಲ; ಲಾಭ ಎಂದರೆ ಬೀಳುವಿಕೆಯಿಂದ ಯಾವುದೇ ಮೇಲಾಧಾರ ಹಾನಿ ಆಗುವುದಿಲ್ಲ.
- 8. ಡಿಆರ್ಡಿಒ ಯಶಸ್ವಿಯಾಗಿ ಎರಡೂ ಹೊರವಾತಾವರಣದ ಮತ್ತು ಒಳ ವಾತಾವರಣದ (ಎಂಡೋ-ವಾತಾವರಣದ) (ವಾತಾವರಣದ ಹೊರಗಿರುವ) ಅಡ್ಡಿ ಖಂಡಾಂತರ ಕ್ಷಿಪಣಿಗಳ ಕೆಲಸದ ಪರೀಕ್ಷೆ ನೆಡೆಸಿದೆ. ಪೃಥ್ವಿ ಏರ್ ರಕ್ಷಣಾ (ಒಇ.ಎ.ಡಿ.) ಇಂಟರ್ಸೆಪ್ಟರ್ ಕ್ಷಿಪಣಿ ಈಗಾಗಲೇ ಸುಧಾರಿತ ವಾಯು ರಕ್ಷಣಾ (ಆಡ್) ಇಂಟರ್ಸೆಪ್ಟರ್ ಕ್ಷಿಪಣಿ 50 ಕಿಮೀ, 80 ಕಿಮೀ ದೂರದ ಗುರಿ ಸಾಧನೆ ಹಾಗೂ, 30 ಕಿಮೀ 15 ಕಿಮೀ ಎತ್ತರದಲ್ಲಿ ಗುರಿ ನಾಶ ಮತ್ತು ಎತ್ತರದಲ್ಲಿ ತನ್ನ ಕೊಲ್ಲುವ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.
- 9. ಕಳೆದ ಮೂರು ವರ್ಷಗಳಲ್ಲಿ ಈ ಅಡ್ಡಿ ಕ್ಷಿಪಣಿ 12 ನೆಯ ಪರೀಕ್ಷೆ ಮತ್ತು ಪಿಡಿವಿಯ ಎರಡನೇ ಟೆಸ್ಟ್ ಆಗಿತ್ತು. ಕ್ಷಿಪಣಿ ಮೊದಲ ಟೆಸ್ಟ್ ಏಪ್ರಿಲ್ 27, 2014 ರಲ್ಲಿ ನಡೆದಿತ್ತು. . ಮುಂಚೆ ಎಂಡೋ-ವಾತಾವರಣದ ಪ್ರದೇಶದಲ್ಲಿ 11 ಪರೀಕ್ಷೆಗಳನ್ನು ನಡೆಸಲಾಯಿತು (30 ಕಿ.ಮೀ ಎತ್ತರದಲ್ಲಿ ಕೆಳಗೆ) )., ಎಂಟು (80 ಕಿಮೀ ಎತ್ತರದಲ್ಲಿ ಮೇಲೆ ನಡೆಸಲಾಯಿತು ಮತ್ತು ಮೂರು ಎಕ್ಸೊ ವಾತಾವರಣದಲ್ಲಿ ನಡೆಸಲಾಗಿದೆ.
- 10.ಒಟ್ಟಾರೆ ಒಂಬತ್ತು ಪರೀಕ್ಷೆಗಳು ಯಶಸ್ವಿಯಾಗಿವೆ. [೭]
ಹೊರ ಸಂಪರ್ಕ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ http://frontierindia.net/india-to-test-layered-missile-defence |title=India to test Layered Missile Defence – Frontier India – News, Analysis, Opinion – Frontier India – News, Analysis, Opinion |publisher=Frontier India |accessdate=2 August 2012}}
- ↑ India developing new missiles Towards destroying hostile missiles". The Hindu. 3 December 2006 .
- ↑ "India's Ballistic Missile Defence system: All you need to know - Times of India The Times of India. Retrieved 12 February 2017
- ↑ ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ ಸಿದ್ಧ;ಪ್ರಜಾವಾಣಿ ವಾರ್ತೆ;12 Feb, 2017
- ↑ What makes Prithvi missile interceptor one of the best in the world: Here are 10 reason
- ↑ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ
- ↑ What makes Prithvi missile interceptor one of the best in the world: Here are 10 reason