ವಿಷಯಕ್ಕೆ ಹೋಗು

ಅಗ್ನಿ-೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗ್ನಿ-೪
ನಮೂನೆ ಮಧ್ಯಮ ವ್ಯಾಪ್ತಿಯ ಗುರುತ್ವಾಕರ್ಷಣ ಕ್ಷಿಪಣಿ
ಮೂಲ ಸ್ಥಳ ಭಾರತ
ಕಾರ್ಯನಿರ್ವಹಣಾ ಇತಿಹಾಸ
ಸೇವೆಯಲ್ಲಿ 2014
ಬಳಕೆದಾರ ಭಾರತೀಯ ಸಶಸ್ತ್ರ ಪಡೆಗಳು
ನಿರ್ಮಾಣ ಇತಿಹಾಸ
ವಿನ್ಯಾಸ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ)
ನಿರ್ಮಾರ್ತೃ ಭಾರತ್ ಡೈನಮಿಕ್ಸ್
ವಿವರಗಳು
ಭಾರ 17000 ಕೆ.ಜಿ.[]
ಉದ್ದ 20 ಮೀಟರ್[]

ಸಿಡಿತಲೆ ತಂತ್ರಕುಶಲ ಬೈಜಿಕ (~15,000 ಟನ್‍ನಿಂದ ~250,000 ಟನ್‍ವರೆಗೆ), ಸಾಂಪ್ರದಾಯಿಕ, ಉಷ್ಣಒತ್ತಡದ

ಎಂಜಿನ್ ಎರಡು ಹಂತದ ದೃಢ ನೋದಕ ಇಂಜಿನ್
ಕಾರ್ಯವ್ಯಾಪ್ತಿ 4000 ಕಿ.ಮಿ.[][]
ಉಡ್ಡಯನದ ಎತ್ತರ 900 ಕಿ.ಮಿ.
ಮಾರ್ಗದರ್ಶಕ
ವ್ಯವಸ್ಥೆ
ರಿಂಗ್ ಲೇಸರ್ ಗೈರೊ - ಐಎನ್ಎಸ್ (ಜಡತ್ವದ ಸಂಚಾರ ವ್ಯವಸ್ಥೆ), ಐಚ್ಛಿಕವಾಗಿ ಜಿಪಿಎಸ್/ಐಆರ್ಎನ್ಎಸ್ಎಸ್ ಇಂದ ಹೆಚ್ಚಿಸಬಹುದು. ಸಂಭಾವ್ಯ ರೇಡಾರ್ ದೃಶ್ಯ ಅನ್ಯೋನ್ಯಾವಲಂಬನದಿಂದ ಅಂತ್ಯದ ಮಾರ್ಗದರ್ಶನ
ಉಡ್ಡಯನ ನೌಕೆ 8 x 8 ಟೆಲಾರ್ (ಸಾಗಕ ಸ್ಥಾಪಕ ಲಾಂಚರ್) ರೇಲ್ ಚರ ಲಾಂಚರ್
ಕ್ಷಿಪಣಿ : ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ

ಭಾರತದ ಕ್ಷಿಪಣಿಗಳು

[ಬದಲಾಯಿಸಿ]

ಅಗ್ನಿ-೧ ಅಗ್ನಿ-೨ ಅಗ್ನಿ-೩ ಅಗ್ನಿ-೪ ಅಗ್ನಿ-೫ ಪೃಥ್ವಿ-೧ ಪೃಥ್ವಿ-೨ ದೂರಗಾಮಿ ಪ್ರಕ್ಷೇಪಕ ಕ್ಷಿಪಣಿಗಳು: ಕಿರುವ್ಯಾಪ್ತಿ ಕ್ಷಿಪಣಿಗಳು : ಸಾಗರಿಕ ಕ್ಷಿಪಣಿ

ಅಗ್ನಿ-೪ ರ ಪ್ರಯೋಗ ಪರೀಕ್ಷೆ

[ಬದಲಾಯಿಸಿ]
  • 3 Jan, 2017
  • ಒಡಿಶಾದ ಬಾಲಸೋರ್‌ ನಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, 4 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಖಂಡಾಂತರ ಕ್ಷಿಪಣಿ ‘ಅಗ್ನಿ–4’ರ ಕೊನೆಯ ಪರೀಕ್ಷೆ ಯಶಸ್ವಿಯಾಗಿದೆ. ‘ಅಗ್ನಿ–5’ ಕ್ಷಿಪಣಿಯ ಯಶಸ್ವಿ ಪರೀಕ್ಷೆಯ ಬೆನ್ನಲ್ಲೇ ನಡೆದ ಈ ಉಡಾವಣೆ ಭಾರತದ ರಕ್ಷಣಾ ವ್ಯವಸ್ಥೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಮಾಹಿತಿ ವಿವರ

[ಬದಲಾಯಿಸಿ]
  • ಪ್ರಮುಖ ಮಾಹಿತಿಹಳು
ಎತ್ತರ = 20 ಮೀಟರ್
ಭಾರ = 17 ಟನ್,
ಅಣ್ವಸ್ತ್ರ ಸಿಡಿತಲೆ ಒಯಗಯುವ ಸಾಮರ್ತ್ಯ = 1000 ಕೆಜಿ.
ದೂರ ಕ್ರಮಣ ಸಾಮರ್ಥ್ಯ = 4000 ಕಿಮೀ.
  • ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದಲ್ಲಿ ದಿ. 2-1-2017 ಸೋಮವಾರ ಬೆಳಿಗ್ಗೆ 11.55ಕ್ಕೆ ಉಡಾವಣೆ.
  • ಉಡಾವಣೆಗೆ ಸಂಚಾರಿ ಉಡಾವಣಾ ವಾಹನದ (ಮೊಬೈಲ್‌ ಲಾಂಚರ್‌) ಬಳಕೆ.
  • ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
  • ರಿಂಗ್‌ ಲೇಸರ್‌ ಜೈರೊ ಬೇಸ್ಡ್‌ ಇನರ್ಷಿಯಲ್‌ ನೇವಿಗೇಷನ್‌ ಸಿಸ್ಟಮ್‌ (ಆರ್‌ಐಎನ್‌ಎಸ್) ಮತ್ತು ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್‌ಎಸ್‌) ಅಳವಡಿಸಲಾಗಿದ್ದು, ನಿಖರವಾಗಿ ಗುರಿ ತಲುಪಬಲ್ಲದು.
  • ‘ಅಗ್ನಿ–4’ ಕ್ಷಿಪಣಿಯ ಅಭಿವೃದ್ಧಿ ಹಂತದಲ್ಲಿ ನಡೆದ ಆರನೇ ಪರೀಕ್ಷೆ ಇದು.
  • ಈ ಕ್ಷಿಪಣಿಯ 5ನೇ ಪರೀಕ್ಷೆ 2015ರ ನವೆಂಬರ್‌ 9 ರಂದು ನಡೆದಿತ್ತು.
  • ರಕ್ಷಣಾ ಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಹಾದಿ ಸುಗಮ.
  • ಅಗ್ನಿ–1, ಅಗ್ನಿ–2 ಮತ್ತು ಅಗ್ನಿ–3 ಕ್ಷಿಪಣಿಗಳನ್ನು ಈಗಾಗಲೇ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.
  • (ಆಧಾರ:ಡಿಆರ್‌ಡಿಒ ಮೂಲಗಳು)

‘ಅಗ್ನಿ–5’

[ಬದಲಾಯಿಸಿ]
  • 5 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ‘ಅಗ್ನಿ-೫’ ಕ್ಷಿಪಣಿಯ ಅಭಿವೃದ್ಧಿ ಹಂತದ ಪರೀಕ್ಷೆ ಡಿ. 26 ರಂದು ನಡೆದಿತ್ತು. ಚೀನಾ ಸೇರಿದಂತೆ ಏಷ್ಯಾದ ಬಹುತೇಕ ಭಾಗವನ್ನು ಇದು ತಲುಪಬಲ್ಲದು. ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಎಲ್ಲ ಉದ್ದೇಶಗಳು ಈಡೇರಿವೆ.[]

ಅಗ್ನಿ ೨-೩-೪-೫ ರ ವ್ಯಾಪ್ತಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Subramanian, T.S. (15 November 2011). "Agni - IV successfully test fired". The Hindu. Chennai, India. Retrieved 15 November 2011.
  2. "India Test Fires Long Range Strategic Missile Agni-IV". The Outlook India. 19 September 2012. Archived from the original on 22 September 2012. Retrieved 19 September 2012. {{cite news}}: Unknown parameter |deadurl= ignored (help)
  3. "Long range strategic missile Agni-IV test-fired". The Hindu. Chennai, India. 19 September 2012.
  4. "'ಅಗ್ನಿ–4' ಖಂಡಾಂತರ ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ;ಪ್ರಜಾವಾಣಿ ವಾರ್ತೆ;3 Jan, 2017". Archived from the original on 2017-01-03. Retrieved 2017-01-03.

ಉಲ್ಲೇಖ

[ಬದಲಾಯಿಸಿ]
"https://kn.wikipedia.org/w/index.php?title=ಅಗ್ನಿ-೪&oldid=1201342" ಇಂದ ಪಡೆಯಲ್ಪಟ್ಟಿದೆ