ವಿಷಯಕ್ಕೆ ಹೋಗು

ಪೂರ್ವಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವಜ (ಪೂರ್ವಿಕ) ಎಂದರೆ ಒಬ್ಬರ ತಂದೆ/ತಾಯಿ ಅಥವಾ (ಪುನರಾವರ್ತಿತವಾಗಿ) ಒಬ್ಬ ಹಿಂದಿನ ತಲೆಮಾರಿನವನ ಹೆತ್ತವನು/ಹೆತ್ತವಳು (ಅಂದರೆ ಅಜ್ಜ/ಅಜ್ಜಿ, ಮುತ್ತಜ್ಜ/ಮುತ್ತಜ್ಜಿ ಇತ್ಯಾದಿ). ಯಾವ ವ್ಯಕ್ತಿಯಿಂದ ಒಬ್ಬರು ವಂಶಾನುಗತರಾಗಿರುತ್ತಾರೊ ಆ ವ್ಯಕ್ತಿಯನ್ನು ಪೂರ್ವಜನೆಂದು ಕರೆಯಬಹುದು. ಕಾನೂನಿನಲ್ಲಿ, ಯಾವ ವ್ಯಕ್ತಿಯಿಂದ ಆಸ್ತಿಯು ಉತ್ತರಾಧಿಕಾರವಾಗಿ ಬಂದಿರುತ್ತದೆಯೊ ಆ ವ್ಯಕ್ತಿ.[]

ಒಬ್ಬನು ಮತ್ತೊಬ್ಬನ ಪೂರ್ವಜನಾಗಿದ್ದರೆ ಆ ಇಬ್ಬರು ವ್ಯಕ್ತಿಗಳ ನಡುವೆ ಆನುವಂಶಿಕ ಸಂಬಂಧವಿರುತ್ತದೆ, ಅಥವಾ ಅವರಿಬ್ಬರು ಒಬ್ಬ ಸಮಾನ ಪೂರ್ವಜನನ್ನು ಹಂಚಿಕೊಂಡಿದ್ದರೆ. ವಿಕಾಸಾತ್ಮಕ ಸಿದ್ಧಾಂತದಲ್ಲಿ, ವಿಕಾಸಾತ್ಮಕ ಪೂರ್ವಜನನ್ನು ಹಂಚಿಕೊಂಡ ಜಾತಿಗಳು ಸಮಾನ ವಂಶದವುಗಳಾಗಿವೆ ಎಂದು ಹೇಳಲಾಗುತ್ತದೆ. ಆದರೆ, ವಂಶಾವಳಿಯ ಈ ಪರಿಕಲ್ಪನೆಯು ಕೆಲವು ಬ್ಯಾಕ್ಟೀರಿಯ ಮತ್ತು ಅಡ್ಡಡ್ಡ ಜೀನ್ ವರ್ಗಾವಣೆ ಮಾಡಬಲ್ಲ ಇತರ ಜೀವಿಗಳಿಗೆ ಅನ್ವಯಿಸುವುದಿಲ್ಲ. ಒಬ್ಬ ಸಾಮಾನ್ಯವಾದ ವ್ಯಕ್ತಿಯು ಪುರುಷ ಪೂರ್ವಜರಿಗಿಂತ ದುಪ್ಪಟ್ಟು ಸ್ತ್ರೀ ಪೂರ್ವಜರನ್ನು ಹೊಂದಿರುತ್ತಾನೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಇದು ಬಹುಪತ್ನಿತ್ವ ಸಂಬಂಧಗಳ ಹಿಂದಿನ ಪ್ರಚಲಿತತೆ ಹಾಗೂ ಹೆಣ್ಣು ಅನುಲೋಮ ವಿವಾಹದ ಕಾರಣದಿಂದ ಆಗಿರಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. Websters New World Dictionary. Cleveland and New York: The World Publishing Company. {{cite book}}: Cite has empty unknown parameter: |coauthors= (help)
  2. Tierney, John (5 September 2007). "The Missing Men in Your Family Tree". nytimes.com. Archived from the original on 5 May 2018. Retrieved 5 May 2018.
"https://kn.wikipedia.org/w/index.php?title=ಪೂರ್ವಜ&oldid=972118" ಇಂದ ಪಡೆಯಲ್ಪಟ್ಟಿದೆ