ವಿಷಯಕ್ಕೆ ಹೋಗು

ವಿಕಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಾಸ ಎಂದರೆ ಕ್ರಮಾಗತ ಪೀಳಿಗೆಗಳ ಆಚೆಗೆ ಜೈವಿಕ ವಾಸಿಗಳ ಆನುವಂಶಿಕ ಗುಣಲಕ್ಷಣಗಳಲ್ಲಿನ ಬದಲಾವಣೆ.[][] ಈ ಗುಣಲಕ್ಷಣಗಳು ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹೆತ್ತವರಿಂದ ಸಂತತಿಗೆ ವರ್ಗಾಯಿಸಲ್ಪಟ್ಟ ವಂಶವಾಹಿಗಳ ಅಭಿವ್ಯಕ್ತಿಗಳಾಗಿರುತ್ತವೆ. ಯಾವುದೇ ನಿರ್ದಿಷ್ಟ ಜೀವಿಸಮೂಹದಲ್ಲಿ ವ್ಯತ್ಯಯನ, ಆನುವಂಶಿಕ ಪುನಃಸಂಯೋಜನೆ ಹಾಗೂ ಆನುವಂಶಿಕ ಮಾರ್ಪಾಡಿನ ಇತರ ಮೂಲಗಳ ಪರಿಣಾಮವಾಗಿ ವಿಭಿನ್ನ ಗುಣಲಕ್ಷಣಗಳು ಇರುವ ಸಾಧ್ಯತೆ ಇರುತ್ತದೆ.[] (ಲೈಂಗಿಕ ಆಯ್ಕೆ ಸೇರಿದಂತೆ) ನೈಸರ್ಗಿಕ ಆಯ್ಕೆ ಮತ್ತು ಆನುವಂಶಿಕ ಚಲನೆಯಂತಹ ವಿಕಾಸಾತ್ಮಕ ಪ್ರಕ್ರಿಯೆಗಳು ಈ ವ್ಯತ್ಯಯನದ ಮೇಲೆ ಕಾರ್ಯನಿರ್ವಹಿಸಿದಾಗ ವಿಕಾಸ ಸಂಭವಿಸುತ್ತದೆ. ಪರಿಣಾಮವಾಗಿ ಒಂದು ಜೀವಿಸಮೂಹದೊಳಗೆ ನಿರ್ದಿಷ್ಟ ಗುಣಲಕ್ಷಣಗಳು ಹೆಚ್ಚು ಸಾಮಾನ್ಯ ಅಥವಾ ಅಪರೂಪವಾಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Hall & Hallgrímsson 2008, pp. 4–6
  2. "Evolution Resources". Washington, DC: National Academies of Sciences, Engineering, and Medicine. 2016. Archived from the original on 2016-06-03. {{cite web}}: Unknown parameter |dead-url= ignored (help)
  3. Futuyma, Douglas J.; Kirkpatrick, Mark (2017). "Mutation and variation". Evolution (Fourth ed.). Sunderland, Massachusetts: Sinauer Associates, Inc. pp. 79–102. ISBN 978-1-60535-605-1.


"https://kn.wikipedia.org/w/index.php?title=ವಿಕಾಸ&oldid=1252577" ಇಂದ ಪಡೆಯಲ್ಪಟ್ಟಿದೆ