ಪೂರ್ಣಿಮಾ ಸಿನ್ಹಾ
This article needs additional citations for verification. (December 2018) |
ಪೂರ್ಣಿಮಾ ಸಿನ್ಹಾ | |
---|---|
ಜನನ | ಕೊಲ್ಕತ್ತ, ಬ್ರಿಟಿಷ್ ಭಾರತ | ೧೨ ಅಕ್ಟೋಬರ್ ೧೯೨೭
ಮರಣ | 11 July 2015 ಬೆಂಗಳೂರು, ಭಾರತ | (aged 87)
ವಾಸಸ್ಥಳ | ಶಾಂತಿನಿಕೇತನ, ಭಾರತ |
ರಾಷ್ಟ್ರೀಯತೆ | ಭಾರತ |
ಕಾರ್ಯಕ್ಷೇತ್ರ | ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರ |
ಸಂಸ್ಥೆಗಳು | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು |
ಅಭ್ಯಸಿಸಿದ ವಿದ್ಯಾಪೀಠ |
|
ಡಾಕ್ಟರೇಟ್ ಸಲಹೆಗಾರರು | ಸತ್ಯೇಂದ್ರನಾಥ ಬೋಸ್ |
ಪ್ರಸಿದ್ಧಿಗೆ ಕಾರಣ | ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ |
ಸಂಗಾತಿ | ಸೂರಜಿತ್ ಚಂದ್ರ ಸಿನ್ಹಾ |
ಮಕ್ಕಳು | ಸುಕನ್ಯಾ ಸಿನ್ಹಾ, ಸುಪೂರ್ಣ ಸಿನ್ಹಾ |
ಡಾ. ಪೂರ್ಣಿಮಾ ಸಿನ್ಹಾ (೧೨ ಅಕ್ಟೋಬರ್ ೧೯೨೭ - ೧೧ ಜುಲೈ ೨೦೧೫) ಅವರು ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆಯರಲ್ಲಿ ಒಬ್ಬರು.[೧] ಜೇಡಿಮಣ್ಣಿನ ಖನಿಜಗಳ ಕ್ಷ-ಕಿರಣ ಸ್ಫಟಿಕಶಾಸ್ತ್ರ ಕ್ಷೇತ್ರದಲ್ಲಿ ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಯುಗದಲ್ಲಿ ಪ್ರಗತಿಪರ ಕುಟುಂಬದಲ್ಲಿ ಬೆಳೆದರು. ಹಾಗಾಗಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಭೌತಶಾಸ್ತ್ರದ ಅಧ್ಯಯನವನ್ನು ಮುಂದುವರಿಸುತ್ತಾರೆ. ಹಾಡುಗಾರಿಕೆ, ಚಿತ್ರಕಲೆ ಮತ್ತು ಬರವಣಿಗೆಯಂತಹ ಕಲಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಸಾಧ್ಯವಾಯಿತು.
ಆರಂಭಿಕ ಜೀವನ
[ಬದಲಾಯಿಸಿ]೧೨ ಅಕ್ಟೋಬರ್ ೧೯೨೭ ರಂದು ಪೂರ್ಣಿಮಾ ಅವರು ಸಾಂವಿಧಾನಿಕ ವಕೀಲರಾಗಿದ್ದ ಡಾ. ನರೇಸ್ ಚಂದ್ರ ಸೇನ್-ಗುಪ್ತಾ ಅವರ ಕಿರಿಯ ಮಗಳಾಗಿ ಪ್ರಗತಿಪರ ಕುಟುಂಬದಲ್ಲಿ ಜನಿಸಿದರು. ನರೇಸ್ ಚಂದ್ರ ಸೇನ್-ಗುಪ್ತಾರವರು ಅರವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಹಾಗೂ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಮಹಿಳಾ ಶಿಕ್ಷಣದ ಬಗ್ಗೆ ಬರೆದಿದ್ದಾರೆ. ಅವರು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ನಂಬಿದ್ದರು. ಪೂರ್ಣಿಮಾ ಅವರು ವಿಶ್ವಭಾರತಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರಖ್ಯಾತ ಮಾನವಶಾಸ್ತ್ರಜ್ಞ ಪ್ರೊಫೆಸರ್ ಸೂರಜಿತ್ ಚಂದ್ರ ಸಿನ್ಹಾ ಅವರನ್ನು ವಿವಾಹವಾದರು. ಅವರು ಭಾರತದಲ್ಲಿ ಬುಡಕಟ್ಟು ಜನರನ್ನು ಬೆಳೆಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಗಮನಾರ್ಹ ಕೊಡುಗೆ ನೀಡಿದ್ದಾರೆ. [೧] [೨]> ಅವರ ಪುತ್ರಿಯರಾದ ಸುಪೂರ್ಣ ಸಿನ್ಹಾ ಅವರು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಸುಕನ್ಯಾ ಸಿನ್ಹಾ ಅವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೌತಶಾಸ್ತ್ರಜ್ಞರಾಗಿದ್ದಾರೆ. [೧] [೨] ಪೂರ್ಣಿಮಾ ಅವರು ತನ್ನ ಪತಿಯೊಂದಿಗೆ, ಬುಡಕಟ್ಟು ಮಕ್ಕಳಿಗಾಗಿ ಶಾಂತಿನಿಕೇತನದಲ್ಲಿ ಮೇಳ ಮೇಷ ಆರ್ ಪಾಠಶಾಲಾ ಎಂಬ ಅನೌಪಚಾರಿಕ ಶಾಲೆಯನ್ನು ಸಹ ಪ್ರಾರಂಭಿಸಿದರು.
ಶಿಕ್ಷಣ ಮತ್ತು ವೃತ್ತಿ
[ಬದಲಾಯಿಸಿ]ಪೂರ್ಣಿಮಾ ಅವರ ಆರಂಭಿಕ ಶಿಕ್ಷಣವು ಕೋಲ್ಕತ್ತಾದ ಬಾಲಕಿಯರ ಲೇಕ್ ಸ್ಕೂಲ್‌ನಲ್ಲಿ ಪ್ರಾರಂಭವಾಯಿತು, ಇದನ್ನು ಅವರ ಹಿರಿಯ ಸಹೋದರಿ ಸುಶಾಮಾ ಸೆನ್‍ಗುಪ್ತಾರವರು ಸ್ಥಾಪಿಸಿದ್ದರು. ನಂತರ ಅವರು ಅಸುತೋಷ್ ಕಾಲೇಜ್, ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ಅಂತಿಮವಾಗಿ ಪ್ರತಿಷ್ಠಿತ ರಾಜಬಜಾರ್ ಸೈನ್ಸ್ ಕಾಲೇಜ್, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಇವರು ೧೯೫೬ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಿದ ಮೊದಲ ಮಹಿಳೆ. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಪ್ರೊಫೆಸರ್ ಸತ್ಯೇಂದ್ರ ನಾಥ್ ಬೋಸ್ ಅವರ ಆಶ್ರಿತರಾಗಿದ್ದು ವಿಜ್ಞಾನಿಯಾಗಿ ಅನೇಕ ಮಾನದಂಡಗಳನ್ನು ಸ್ಥಾಪಿಸಿದರು ಮತ್ತು ಕಲಾವಿದರಾಗಿ, ಬರಹಗಾರರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಸ್ವಂತ ಕಲಾತ್ಮಕ ಆಸಕ್ತಿಗಳು ವೈವಿಧ್ಯಮಯವಾಗಿವೆ. ಇವರು ಯಾಮಿನಿ ಗಂಗೂಲಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ ಮತ್ತು ಪ್ರಸಿದ್ಧ ವರ್ಣಚಿತ್ರಕಾರ ಗೋಪಾಲ್ ಘೋಷ್ ಅವರಿಂದ ಚಿತ್ರಕಲೆಗಳನ್ನು ಕಲಿತಿದ್ದಾರೆ. ಪಂಡಿತ್ ಜ್ಞಾನ ಪ್ರಕಾಶ್ ಘೋಷ್ ಅವರಿಂದ ತಬಲಾ ಪಾಠವನ್ನೂ ಕಲಿತಿದ್ದಾರೆ. ಇವರ ಇತರ ಪ್ರತಿಭೆಗಳಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆ ಸೇರಿವೆ. [೧] ವಿಜ್ಞಾನದಲ್ಲಿ ಪೂರ್ಣಿಮಾ ಅವರ ವೃತ್ತಿಜೀವನವು ಹಲವು ದಶಕಗಳನ್ನು ವ್ಯಾಪಿಸಿದೆ. ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರದಲ್ಲಿ ಅವರು ಡಾಕ್ಟರೇಟ್ ಗಳಿಸಿದರು. ಅವರು ೧೯೫೬-೫೭ ರಲ್ಲಿ ಪ್ರಾಧ್ಯಾಪಕ ಸತ್ಯೇಂದ್ರ ನಾಥ್ ಬೋಸ್ ಅವರ ಮಾರ್ಗದರ್ಶನದಲ್ಲಿ ರಾಜಬಜಾರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಇವರು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. [೧]
ಪ್ರೊಫೆಸರ್ ಸತ್ಯೇಂದ್ರ ನಾಥ್ ಬೋಸ್ ಅವರನ್ನು ಸೇರುವ ಪ್ರಾರಂಭದಲ್ಲಿ, ಅವರು ಎರಡನೇ ಮಹಾಯುದ್ಧದ ನಂತರ ಕಲ್ಕತ್ತಾದ ಫುಟ್‌ಪಾತ್‌ಗಳಲ್ಲಿ ತುಣುಕುಗಳಂತೆ ಮಾರಾಟವಾದ ಹೆಚ್ಚುವರಿ ಸೇನಾ ಉಪಕರಣಗಳನ್ನು ಹುಡುಕಿದರು. ಪೂರ್ಣಿಮಾ ಸಿನ್ಹಾ ಅವರು ತಮ್ಮ ಡಾಕ್ಟರೇಟ್ ಸಂಶೋಧನೆಗೆ ಅಗತ್ಯವಾದ ಕ್ಷ-ಕಿರಣ ಉಪಕರಣಗಳನ್ನು ನಿರ್ಮಿಸಲು ಬಿಡಿಭಾಗಗಳನ್ನು ಹುಡುಕುತ್ತಿದ್ದರು. ೧೯೫೩ ರ ಸುಮಾರಿಗೆ ಜಗತ್ತಿನ ಇತರ ಭಾಗದಲ್ಲಿ ಡಿಎನ್ಎ ರಚನೆಯನ್ನು ಬಿಚ್ಚಿಡಲು ಕ್ಷ-ಕಿರಣ ತಂತ್ರಗಳನ್ನು ಅನ್ವಯಿಸಲಾಗಿತ್ತು. ಆಕೆಯ ಸಂಶೋಧನೆಗೆ ಅಸ್ಸಾಂ ಆಯಿಲ್ ಕಂಪನಿಯು ಧನಸಹಾಯ ನೀಡಿತು (ಆ ಯುಗದಲ್ಲಿ ಸಂಶೋಧನೆ-ಉದ್ಯಮ ಸಹಯೋಗವು ಅಸ್ತಿತ್ವದಲ್ಲಿರಲಿಲ್ಲ). ಅವರು ಅದನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಭಾರತದಾದ್ಯಂತದ ವಿವಿಧ ರೀತಿಯ ಜೇಡಿಮಣ್ಣನ್ನು ಅಧ್ಯಯನ ಸಹ ಮಾಡಿದರು. ನಂತರ, ಡಾ ಸಿನ್ಹಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ 'ಆರಿಜಿನ್ ಆಫ್ ಲೈಫ್' ಯೋಜನೆಯಲ್ಲಿ ಬಯೋಫಿಸಿಕ್ಸ್ ವಿಭಾಗಕ್ಕೆ ಸೇರಿದರು. ಮತ್ತು ಇದು ಅವರ ಕೆಲಸದ ಜೊತೆಗೆ ಸಂಪರ್ಕವನ್ನು ಹೊಂದಿತ್ತು. ಅವರು ಜೇಡಿಮಣ್ಣಿನ ಕ್ಷ-ಕಿರಣ ರಚನೆಯನ್ನು ಡಿಎನ್ಎ ಮಾದರಿಗಳೊಂದಿಗೆ ಜ್ಯಾಮಿತೀಯವಾಗಿ ಹೋಲಿಸಿದರು ಮತ್ತು ಸಂಪರ್ಕವನ್ನು ಕಂಡುಹಿಡಿದರು.
ಪ್ರಕಟಣೆಗಳು
[ಬದಲಾಯಿಸಿ]ಅವರು ಇಂಗ್ಲಿಷ್ ಮತ್ತು ಬಂಗಾಳಿ ಎರಡೂ ಭಾಷೆಗಳಲ್ಲಿ ಅನೇಕ ವಿಷಯಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಸತ್ಯೇಂದ್ರ ನಾಥ್ ಬೋಸ್ ಸ್ಥಾಪಿಸಿದ ಬಂಗಿಯಾ ಬಿಜ್ಞಾನ್ ಪರಿಷತ್ (ಬಂಗಾಳ ಸೈನ್ಸ್ ಅಸೋಸಿಯೇಷನ್) ಪ್ರಕಟಿಸಿದ ಬಂಗಾಳಿ ಭಾಷೆಯ ವೈಜ್ಞಾನಿಕ ನಿಯತಕಾಲಿಕೆ ಜ್ಞಾನ್ ಒ ಬಿಜ್ಞಾನ್ (ಜ್ಞಾನ ಮತ್ತು ವಿಜ್ಞಾನ) ಗೆ ಅವರು ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಇತ್ತೀಚೆಗೆ ಬಂಗಿಯಾ ಬಿಜ್ಞಾನ್ ಪರಿಷತ್ತು ಬೆಂಗಾಲಿ ಭಾಷೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. [೧] ಅವರು ೧೯೯೦ ರಲ್ಲಿ ಎರ್ವಿನ್ ಶ್ರೋಡಿಂಗರ್ ಅವರ ಮೈಂಡ್ ಅಂಡ್ ಮ್ಯಾಟರ್ ಅನ್ನು [೧] ಬಂಗಾಳಿ ಭಾಷೆಗೆ ಅನುವಾದಿಸಿದರು. ಅವರು ೧೯೭೦ ರಲ್ಲಿ ಎನ್ ಅಪ್ರೋಚ್ ಟು ದ ಸ್ಟಡಿ ಆಫ್ ಇಂಡಿಯನ್ ಮ್ಯೂಸಿಕ್ [೩] ಎಂಬ ಪುಸ್ತಕವನ್ನು ಬರೆದರು. ಮತ್ತು ಪಶ್ಚಿಮ ಬಂಗಾಳದ ಪುರುಲಿಯದ ಬುಡಕಟ್ಟು ಪ್ರದೇಶಗಳಲ್ಲಿ ಮಾನವಶಾಸ್ತ್ರದ ಕ್ಷೇತ್ರ ಅಧ್ಯಯನದ ಸಮಯದಲ್ಲಿ ಅವರ ಪತಿ ಮತ್ತು ಅವರು ಕ್ಷೇತ್ರದಲ್ಲಿ ಮಾಡಿದ ಜಾನಪದ ಸಂಗೀತದ ಧ್ವನಿಮುದ್ರಣಗಳ ಆಧಾರದ ಮೇಲೆ ಜಾನಪದ ಸಂಗೀತದ ಬಗ್ಗೆ ಲೇಖನಗಳನ್ನು ಬರೆದರು. ಅವರು ೧೯೮೮ ರಲ್ಲಿ ಅಂಡಮಾನ್ ದ್ವೀಪಗಳ ತಮ್ಮ ಕ್ಷೇತ್ರ ಪ್ರವಾಸವನ್ನು ಆಧರಿಸಿ ೨೦೦೫ ರಲ್ಲಿ ದಿ ಜರ್ನಲ್ ಆಫ್ ಏಷಿಯಾಟಿಕ್ ಸೊಸೈಟಿಯಲ್ಲಿ 'ಜರಾವಾ ಸಾಂಗ್ಸ್ ಮತ್ತು ವೇದಿಕ್ ಚಾಂಟ್: ಎ ಕಂಪಾರಿಸನ್ ಆಫ್ ಮೆಲೋಡಿಕ್ ಪ್ಯಾಟರ್ನ್' [೪] ಎಂಬ ವಿಶ್ಲೇಷಣಾತ್ಮಕ ಲೇಖನವನ್ನು ಬರೆದರು.
ಅವರು ಸತ್ಯೇಂದ್ರ ನಾಥ್ ಬೋಸ್ ಅವರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ಅವರ ಮೇಲಿನ ಕೃತಿಗಳು:
- ಬಿಜ್ಞಾನ್ ಸಾಧನರ್ ಧಾರಯ್ ಸತ್ಯೇಂದ್ರನಾಥ್ ಬೋಸ್, ವಿಶ್ವ ವಿದ್ಯಾ ಸಂಗ್ರಹದಿಂದ ಪ್ರಕಟವಾದ ಪುಸ್ತಕ.
- ಅಮರ್ ಕಥಾ, ಬಂಗಿಯಾ ಬಿಜ್ಞಾನ್ ಪರಿಷತ್ತು ಪ್ರಕಟಿಸಿದ ಪುಸ್ತಕ.
ಇತರ ಆಸಕ್ತಿಗಳು
[ಬದಲಾಯಿಸಿ]ಹಾಡುಗಾರಿಕೆ, ಚಿತ್ರಕಲೆ, ಬರವಣಿಗೆ ಮತ್ತು ಪುಸ್ತಕಗಳನ್ನು ಓದುವುದು ಇವರ ಹವ್ಯಾಸವಾಗಿತ್ತು. ಅವರು ಮನೆಯಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ದೊಡ್ಡ, ಅಪರೂಪದ ಸಂಗ್ರಹವನ್ನು ಹೊಂದಿದ್ದರು. ೮೦ ನೇ ವಯಸ್ಸಿನಲ್ಲಿ, ಅವರು ಜನರನ್ನು ಭೇಟಿಯಾಗುವುದು, ಸಂಭಾಷಿಸವುದನ್ನು ಮುಂದುವರಿಸಿದರು. [೧] ಅವರು ಸೆಂಟ್ರಲ್ ಗ್ಲಾಸ್ ಮತ್ತು ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‍ಗೆ ಸೇರಿದಾಗ, ಡಾ ಸಿನ್ಹಾ ಅವರು ಮಣ್ಣಿನ ಖನಿಜಗಳು ಮತ್ತು ಸೆರಾಮಿಕ್ ಬಣ್ಣಗಳ ಮೇಲೆ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರು ಕಲಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಿದ ವಸ್ತುವನ್ನು ರೂಪಿಸಿದರು ಮತ್ತು ಕ್ಲೇ ಮಾಡೆಲಿಂಗ್ ಕಲಿತರು. ತನ್ನ ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳದಿದ್ದಾಗ, ಡಾ ಸಿನ್ಹಾ ಅವರು ವಿಜ್ಞಾನ ಪುಸ್ತಕಗಳನ್ನು ಬಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. [೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ "Biographical article". Retrieved 6 ಏಪ್ರಿಲ್ 2014.
- ↑ ೨.೦ ೨.೧ "Women In Science - IAS" (PDF). Retrieved 6 ಏಪ್ರಿಲ್ 2014.
- ↑ Sinha, Purnima (1970). An Approach to the Study of Indian Music (in ಇಂಗ್ಲಿಷ್). Indian Publications.
- ↑ "The Forgotten Scientist Who Broke The Glass Ceiling For Indian Women in Physics". The Better India (in ಅಮೆರಿಕನ್ ಇಂಗ್ಲಿಷ್). 15 ನವೆಂಬರ್ 2019. Retrieved 10 ಮೇ 2020.
- ↑ "The first woman physicist to get a PhD from Calcutta University!". Get Bengal (in ಇಂಗ್ಲಿಷ್). 11 ಫೆಬ್ರವರಿ 2020. Retrieved 24 ಜೂನ್ 2021.
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Short description matches Wikidata
- Articles needing additional references from December 2018
- Articles with invalid date parameter in template
- All articles needing additional references
- Use dmy dates from December 2018
- Use Indian English from December 2018
- All Wikipedia articles written in Indian English
- ಭಾರತದ ವಿಜ್ಞಾನಿಗಳು
- ಭಾರತದ ಮಹಿಳಾ ವಿಜ್ಞಾನಿಗಳು
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ