ಪೂಜ ವಸ್ತ್ರಾಕರ್

ವಿಕಿಪೀಡಿಯ ಇಂದ
Jump to navigation Jump to search

ಪೂಜ ವಸ್ತ್ರಾಕರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಮೀಡಿಯಂ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮಧ್ಯ ಪ್ರದೇಶ, ಇಂಡಿಯಾ ಗ್ರೀನ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.[೧]


ಆರಂಭಿಕ ಜೀವನ[ಬದಲಾಯಿಸಿ]

ಪೂಜ ವಸ್ತ್ರಾಕರ್ ರವರು ಸೆಪ್ಟಂಬರ್ ೨೫, ೧೯೯೯ರಂದು ಮಧ್ಯ ಪ್ರದೇಶದಲ್ಲಿ ಜನಿಸಿದರು. ಪೂಜ ವಸ್ತ್ರಾಕರ್ ಇವರ ತಂದೆ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್‌‍)ನ ನಿವೃತ್ತ ನೌಕರರಾಗಿದ್ದಾರೆ. ಇವರು ತಮ್ಮ ಹತ್ತನೇ ವಯ್ಯಸ್ಸಿನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡರು. ಇವರಿಗೆ ನಾಲ್ಕು ಸಹೋದರಿಯರು ಮತ್ತು ಇಬ್ಬರು ಸಹೋದರರು ಇದ್ದು, ಇವರು ಏಳು ಒಡಹುಟ್ಟಿದವರಲ್ಲಿ ಕಿರಿಯರು.[೨] ಪೂಜ ತಮ್ಮ ಮನೆಯ ಸುತ್ತಮುತ್ತಲಿನ ಆವರಣದಲ್ಲಿ ಕೆಲ ಹುಡುಗರೊಂದಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ನಂತರ ಇವರು ಕ್ರೀಡಾಂಗಣಕ್ಕೆ ತೆರಳಿ ಕ್ರಿಕೆಟ್ ಆಡಲು ಪ್ರಾರಂಭಿಸಿ ನೆಟ್ ಬ್ಯಾಟಿಂಗ್‌‍ಅನ್ನು ಅಭ್ಯಾಸ ಮಾಡಲು ಆರಂಭಿಸಿದರು. ಈ ಸಮಯದಲ್ಲಿ ತರಬೇತುದಾರ ಇವರನ್ನು ಗುರುತಿಸಿ ಇವರ ಔಪಚಾರಿಕ ತರಬೇತಿಯನ್ನು ಪ್ರಾರಂಭಿಸಿದನರು.[೩]


ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಮಧ್ಯ ಪ್ರದೇಶ, ಇಂಡಿಯಾ ಗ್ರೀನ್ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಮೊದಲಿಗೆ ಇವರು ಬ್ಯಾಟಿಂಗ್‌ನೊಂದಿಗೆ ಗುರುತಿಸಿಕೊಂಡರು. ನಂತರ ಇವರು ಮಧ್ಯಪ್ರದೇಶ ತಂಡವನ್ನು ಸೇರಿಕೊಂಡು ಬೌಲರ್ ಆಗಿ ಗುರುತಿಸಿಕೊಳ್ಳಲಾರಂಭಿಸಿದರು. ತಮ್ಮ ೧೫ನೇ ವಯ್ಯಸ್ಸಿನಲ್ಲೇ ಇವರು ಇಂಡಿಯಾ ಗ್ರೀನ್ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದರು. ೨೦೧೬ರಲ್ಲಿ ಹಿರಿಯ ಮಹಿಳಾ ದೇಶಿ ಕ್ರಿಕೆಟ್ ಪಂದ್ಯದಲ್ಲಿ ಪೂಜ ವಸ್ತ್ರಾಕರ್ ಅವರು ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ, ತಮ್ಮ ಮೊಣಕಾಲು ತಿರುಚಿತು, ಇದರಿಂದ ಇವರು ಶಸ್ತ್ರಚಿಕಿತ್ಸೆಯನ್ನು ಪಡೆಯ ಬೇಕಾಯಿತು. ೨೦೧೮ರ ಚಾಲೆಂಜರ್ ಟ್ರೋಫಿ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಾಸ್ಟ್ರಾಕರ್ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತು.[೪][೫]


ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಬ್ರವರಿ ೦೮, ೨೦೧೮ರಲ್ಲಿ ದಕ್ಷಿಣ ಆಫ್ರಿಕದಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ಪೂಜ ವಸ್ತ್ರಾಕರ್‍ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಫೆಬ್ರವರಿ ೧೩, ೨೦೧೮ರಲ್ಲಿ ದಕ್ಷಿಣ ಆಫ್ರಿಕದಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ಪೂಜ ವಸ್ತ್ರಾಕರ್‍ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬][೭][೮]


ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೦೬ ಪಂದ್ಯಗಳು[೯]
 • ಟಿ-೨೦ ಕ್ರಿಕೆಟ್ : ೧೧ ಪಂದ್ಯಗಳು


ವಿಕೇಟ್‍ಗಳು[ಬದಲಾಯಿಸಿ]

 1. ಟಿ-೨೦ ಕ್ರಿಕೆಟ್‌ನಲ್ಲಿ : ೧೧

ಅರ್ಧ ಶತಕಗಳು[ಬದಲಾಯಿಸಿ]

 1. ಏಕದಿನ ಕ್ರಿಕೆಟ್‌ನಲ್ಲಿ : ೦೧


ಉಲ್ಲೇಖಗಳು[ಬದಲಾಯಿಸಿ]

 1. https://www.cricbuzz.com/profiles/13518/pooja-vastrakar
 2. http://www.bcci.tv/player/5052/Pooja-Vastrakar
 3. http://www.espncricinfo.com/ci/content/video_audio/1140623.html
 4. http://www.espncricinfo.com/story/_/id/22809088/india-bold-resilient-teenager
 5. http://www.espncricinfo.com/decadereview2009/content/squad/883387.html
 6. http://www.espncricinfo.com/series/8674/scorecard/1123205/south-africa-women-vs-india-women-3rd-odi-icc-womens-championship-2017-18-2021
 7. http://www.espncricinfo.com/series/8674/scorecard/1123205/south-africa-women-vs-india-women-3rd-odi-icc-womens-championship-2017-18-2021
 8. http://www.espncricinfo.com/series/18087/scorecard/1123206/south-africa-women-vs-india-women-1st-t20i-ind-w-in-sa-2017-18
 9. http://www.espncricinfo.com/india/content/player/883413.html