ವಿಷಯಕ್ಕೆ ಹೋಗು

ಪುಳಿಯೋಗರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಳಿಯೋಗರೆ

ಪುಳಿಯೋಗರೆ (ಪುಳಿ ಎಂಬುದರ ಅರ್ಥ ಹುಳಿಯಾದುದು) ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ, ಮತ್ತು ಕರ್ನಾಟಕಗಳಲ್ಲಿ ಒಂದು ಸಾಮಾನ್ಯವಾದ ಅನ್ನದ ಖಾದ್ಯವಾಗಿದೆ. ಇದರಲ್ಲಿ ಮುಖ್ಯವಾಗಿ ಹುಣಸೆ ಅಥವಾ ಮುರುಗಲ ಹಣ್ಣನ್ನು (ಕೋಕಂ) ಮುಖ್ಯ ಪದಾರ್ಥಗಳ ಪೈಕಿ ಒಂದಾಗಿ ಬಳಸಲಾಗುತ್ತದೆ.

ಪುಳಿಯೋಗರೆಯನ್ನು ಎಣ್ಣೆಯಲ್ಲಿ ಬೇಯಿಸಿದ ಹುಣಸೆ ಹಾಗೂ ಬೆಲ್ಲದಿಂದ ತಯಾರಿಸಿ, ಸಂಬಾರ ಪದಾರ್ಥಗಳು ಹಾಗೂ ಕರಿಬೇವಿನ ಎಲೆಗಳೊಂದಿಗೆ ಅನ್ನದಲ್ಲಿ ಮಿಶ್ರಣಮಾಡಲಾಗುತ್ತದೆ. ಇದು ಎರಡು ದಿನಗಳವರೆಗೆ ತಾಜಾ ಆಗಿ ಉಳಿಯುತ್ತದೆ. ಹಾಗಾಗಿ, ಅನೇಕ ದಕ್ಷಿಣ ಭಾರತೀಯ ಪ್ರಯಾಣಿಕರು ತಯಾರಿಸಿದ ಪುಳಿಯೋಗರೆಯನ್ನು ದೀರ್ಘ ಪ್ರಯಾಣಗಳ ಸಮಯದಲ್ಲಿ ತಮ್ಮೊಂದಿಗೆ ಒಯ್ಯುತ್ತಾರೆ.

ಧಾರ್ಮಿಕ ಅಂಶಗಳು[ಬದಲಾಯಿಸಿ]

ಪುಳಿಯೋಗರೆಯನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳು ಹಾಗೂ ಹಬ್ಬದ ದಿನಗಳಂದು ತಯಾರಿಸಲಾಗುತ್ತದೆ. ಇದನ್ನು ಬಹುತೇಕ ದಕ್ಷಿಣ ಭಾರತೀಯ ದೇವಸ್ಥಾನಗಳು ಹಾಗೂ ದಕ್ಷಿಣ ಭಾರತೀಯ ಮನೆಗಳಲ್ಲಿ ದೇವರಿಗೆ ಪ್ರಸಾದದ ಭಾಗವಾಗಿ ಅರ್ಪಿಸಲಾಗುತ್ತದೆ; ದೇವಸ್ಥಾನಗಳಲ್ಲಿ ಭಕ್ತರು ಇದನ್ನು ದರ್ಶನದ ನಂತರ ಪಡೆಯಲು ಸಾಲುಗಟ್ಟುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Puliyogare