ಪುರಂದರದಾಸ (ಚಲನಚಿತ್ರ)
ಗೋಚರ
ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ.
ಪುರಂದರದಾಸ |
---|
ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜಪ್ಪ ಚೆಟ್ಟಿಯಾರ್ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು.
ಕಥಾ ಸಾರಾಂಶ
[ಬದಲಾಯಿಸಿ]ನವಕೋಟಿ ನಾರಾಯಣನಾಗಿ, ಜಿಪುಣನಾಗಿದ್ದ ಶ್ರೀನಿವಾಸ ನಾಯಕನಿಗೆ ದೈವ ಪ್ರೇರಣೆಯಾಗಿ ಸಕಲವನ್ನು ದಾನ ಮಾಡಿ, ಭಗವನ್ನಾಮ ಸ್ಮರಣೆಯಲ್ಲಿ ತೊಡಗಿ ಪುರಂದರದಾಸ ಎಂದು ಹೆಸರು ಪಡೆಯುವ ಪ್ರಚಲಿತ ಕತೆ ಈ ಚಲನಚಿತ್ರದ ಕಥಾ ಹಂದರ ಒಳಗೊಂಡಿದೆ.
ನಿರ್ಮಾಣ ಮತ್ತು ಬಿಡುಗಡೆ
[ಬದಲಾಯಿಸಿ]ದೇವಿ ಫಿಲಂಸ್ ಲಾಂಛನದಲ್ಲಿ ತಯಾರಾದ "ಪುರಂದರ ದಾಸ" ಚಿತ್ರ, ೧೬೨ ನಿಮಿಷಗಳಷ್ಟು ಅವಧಿಯದಾಗಿತ್ತು. ೧೪,೨೦೦ ಅಡಿ ಉದ್ದವಿದ್ದ ಈ ಚಲನಚಿತ್ರ ಮೈಸೂರು ಸೆಲೆಕ್ಟ್ ಟಾಕೀಸ್ ಅವರಿಗಾಗಿ, ೧೩ ಅಕ್ಟೋಬರ್, ೧೯೩೭ರಂದು ಸೆನ್ಸಾರ್ ಆಯಿತು.
ಹಾಡುಗಳು
[ಬದಲಾಯಿಸಿ]- ಅತಿ ಮುಡಿಲಲ್ಲ್ಲಿ
- ಬಿರಿದ ಹೂಗಳು
- ಶಾಂತಿಯೆ ಜೀವನ
- ಸುಮ ಮಾಲೆ
- ಕಾಮನು ಕಾಡುವ