ವಿಷಯಕ್ಕೆ ಹೋಗು

ಪುಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಟ್ಟು ದಕ್ಷಿಣ ಭಾರತದ ರಾಜ್ಯಗಳಲ್ಲಿ, ಮುಖ್ಯವಾಗಿ ಕೇರಳದಲ್ಲಿ, ಮತ್ತು ತಮಿಳುನಾಡು ಹಾಗೂ ಕರ್ನಾಟಕದ ಭಾಗಗಳಲ್ಲಿ, ಜೊತೆಗೆ ಶ್ರೀಲಂಕಾದಲ್ಲಿಯೂ ತಿನ್ನಲ್ಪಡುವ ಒಂದು ಬೆಳಗಿನ ತಿಂಡಿಯಾಗಿದೆ.[][] ಮಲಯಾಳಂನಲ್ಲಿ ಪುಟ್ಟು ಪದದ ಅರ್ಥ "ಪಾಲು ಮಾಡಿದ್ದು/ಭಾಗ ಮಾಡಿದ್ದು" ಎಂದು. ರುಬ್ಬಿದ ನೆನೆಸಿದ ಅಕ್ಕಿಯ ಉರುಳೆಯಾಕಾರದ ಚೂರುಗಳನ್ನು ಹಬೆಯಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಮೇಲೆ ತೆಂಗಿನಕಾಯಿ ತುರಿಯ ಪದರ ಇರಬಹುದು. ಕೆಲವೊಮ್ಮೆ ಪುಟ್ಟು ಒಳಗೆ ಸಿಹಿ ಅಥವಾ ಉಪ್ಪುಖಾರದ ಹೂರಣವಿರುತ್ತದೆ. ಪುಟ್ಟುವನ್ನು ಬಿಸಿಯಾಗಿ ತಾಳೆ ಸಕ್ಕರೆ ಅಥವಾ ಬಾಳೆ ಹಣ್ಣಿನಂತಹ ಸಿಹಿ ಪಕ್ಕ ಖಾದ್ಯಗಳೊಂದಿಗೆ, ಅಥವಾ ದಾಲ್, ಕಡಲೆ, ಆಡಿನ ಮಾಂಸ, ಮೀನು ಅಥವಾ ಕೋಳಿಮಾಂಸದ ಕರಿಗಳೊಂದಿಗೆ ಬಡಿಸಲಾಗುತ್ತದೆ. ಭಟ್ಕಳದಲ್ಲಿ, ಪುಟ್ಟುವನ್ನು ತುಪ್ಪ ಹಾಗೂ ಸಕ್ಕರೆ ಅಥವಾ ಪಾಯಾದಂತಹ ಪಕ್ಕ ಖಾದ್ಯಗಳೊಂದಿಗೆ ಬಡಿಸಲಾಗುತ್ತದೆ.

ಪುಟ್ಟು ಮುಖ್ಯವಾಗಿ ಉರುಟಾಗಿ ರುಬ್ಬಿದ ಅಕ್ಕಿ, ತೆಂಗಿನಕಾಯಿ ತುರಿ, ಸ್ವಲ್ಪ ಉಪ್ಪು ಮತ್ತು ನೀರನ್ನು ಹೊಂದಿರುತ್ತದೆ. ಹಲವುವೇಳೆ ಜೀರಿಗೆಯನ್ನು ಸೇರಿಸಲಾಗುತ್ತದೆ, ಆದರೆ ಇತರ ಸಂಬಾರ ಪದಾರ್ಥಗಳನ್ನೂ ಸೇರಿಸಬಹುದು. ಶ್ರೀಲಂಕಾದಲ್ಲಿ ಪುಟ್ಟುವನ್ನು ಸಾಮಾನ್ಯವಾಗಿ ಗೋಧಿ ಹಿಟ್ಟು ಅಥವಾ ಕೆಂಪಕ್ಕಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಪುಟ್ಟು&oldid=991374" ಇಂದ ಪಡೆಯಲ್ಪಟ್ಟಿದೆ