ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ
ಗೋಚರ
ಮಂಗಳೂರು ವಿಶ್ವವಿದ್ಯಾನಿಲಯ ದ ಒಂಭತ್ತನೇ ಕುಲಪತಿಗಳಾಗಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ಜೂನ್ ೩, ೨೦೧೯ ರಂದು ಹುದ್ದೆಯನ್ನು ಅಲಂಕರಿಸಿದರು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ತೌಳವ ಕುಲಪತಿ ಇವರಾಗಿದ್ದಾರೆ.[೧]
ವಿದ್ಯಾಭ್ಯಾಸ
[ಬದಲಾಯಿಸಿ]P.S.Yadapadithaya | |
---|---|
ಜನನ | Dakshina Kannada, India | 25 April 1958
ಶಿಕ್ಷಣ | Mangalore University, Mangalore |
ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಕೊಕ್ಕಡ ಸಮೀಪದ ಪಾಲಾಲೆ ಇವರ ಹುಟ್ಟೂರು. ಇಲ್ಲಿನ ಕೆಳಮಧ್ಯಮ ವರ್ಗದ ಕೃಷಿಕ-ಅರ್ಚಕ ಕುಟುಂಬದ ನಾರಾಯಣ ಯಡಪಡಿತ್ತಾಯ ಹಾಗೂ ಭವಾನಿ ದಂಪತಿಯ ಪುತ್ರರು. ಕೊಕ್ಕಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಪೂರೈಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ತಂಡದಲ್ಲಿ ಪ್ರಥಮ ರಾಂಕ್ ನೊಂದಿಗೆ ಮಂಗಳೂರು ಪಯನಿರ್ ಚಿನ್ನದ ಪದಕದೊಂದಿಗೆ ೧೯೮೨ ರಲ್ಲಿ ಎಮ್.ಕಾಂ. ಪದವಿ ಪಡೆದರು.
ವೃತ್ತಿ ಜೀವನ
[ಬದಲಾಯಿಸಿ]ಅಲಂಕರಿಸಿದ ಹುದ್ದೆಗಳು
[ಬದಲಾಯಿಸಿ]ಪ್ರಶಸ್ತಿ
[ಬದಲಾಯಿಸಿ]ಸಂಶೋಧನೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]