ಪಿ.ಬಿ.ಕಲ್ಲಾಪುರ

ವಿಕಿಪೀಡಿಯ ಇಂದ
Jump to navigation Jump to search

ಪ್ರಹ್ಲಾದ ಭೀಮರಾವ ಕಲ್ಲಾಪುರ ಇವರು ೧೯೪೩ ಫೆಬ್ರುವರಿ ೨೫ರಂದು ಜನಿಸಿದರು. ಇವರು ಧಾರವಾಡದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಅನೇಕ ವೈದ್ಯಕೀಯ ಹಾಗು ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.


ಪ್ರವೃತ್ತಿ[ಬದಲಾಯಿಸಿ]

ವೃತ್ತಿಯಿಂದ ವೈದ್ಯರಾದ ಡಾ|ಕಲ್ಲಾಪುರ ಇವರಿಗೆ ಅನೇಕ ಹವ್ಯಾಸಗಳಿವೆ. ಕನ್ನಡ ಪತ್ರಿಕೆಗಳ ಸಾಹಿತ್ಯವಿಭಾಗಕ್ಕೆ ಇವರು ನೂರಾರು ಹರಟೆಗಳನ್ನು ನೀಡಿದ್ದಾರೆ , ನೀಡುತ್ತಲೆ ಇದ್ದಾರೆ ; ವೈದ್ಯಕೀಯ ಲೇಖನಗಳನ್ನು ರಚಿಸಿದ್ದಾರೆ. ಆದರೆ ಯಾವುದೆ ಸಂಕಲನವನ್ನು ಹೊರತರುವ ಗೋಜಿಗೆ ಹೋಗಿಲ್ಲ!


Burns’ Association of Indiaದ ಧಾರವಾಡ ಶಾಖೆಯ ಸಹಕಾರ್ಯದರ್ಶಿಯಾದ ಇವರ ಸಂದರ್ಶನಗಳು ದೂರದರ್ಶನ ಹಾಗು ಆಕಾಶವಾಣಿ ಮುಖಾಂತರ ಪ್ರಸಾರವಾಗಿವೆ. ಧಾರವಾಡ,ಹುಬ್ಬಳ್ಳಿಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.


ಧಾರವಾಡದಲ್ಲಿ ಪ್ರತಿ ವರ್ಷದ ಎಪ್ರಿಲ್ ತಿಂಗಳ ಮೊದಲನೆಯ ರವಿವಾರದಂದು ಡಾ| ಕಲ್ಲಾಪುರ ಹಾಗು ಗೆಳೆಯರ ಹಾಸ್ಯಕೂಟವು ನಡೆಯಿಸಿಕೊಡುವ ಹಾಸ್ಯಸಂಜೆ ಉಚಿತ ಕಾರ್ಯಕ್ರಮವು ಧಾರವಾಡದ ಒಂದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ.


೧೯೮೭ರಲ್ಲಿ ಕರ್ನಾಟಕಸರಕಾರವು ಪ್ರಕಟಿಸಿದ ಭಾರತದ ಗೆಸೆಟಿಯರ್ ದಲ್ಲಿ “ವೈದ್ಯಕೀಯ ಹಾಗು ಸಾರ್ವಜನಿಕ ಸೇವೆಗಳು” ವಿಭಾಗವನ್ನು ಅಚ್ಚುಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿಕೊಟ್ಟಿದ್ದು ಡಾ: ಕಲ್ಲಾಪುರ ಅವರ ಮಹತ್ವದ ಸಾಧನೆಗಳಲ್ಲೊಂದು.