ವಿಷಯಕ್ಕೆ ಹೋಗು

ಪಿನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಧಿ ಹಿಟ್ಟು, ಖೋವಾ ಮತ್ತು ಒಣಫಲಗಳಿಂದ ತಯಾರಿಸಲಾದ ಪಿನ್ನಿ ಖಾದ್ಯ

ಪಿನ್ನಿ ಒಂದು ಬಗೆಯ ಪಂಜಾಬಿ ಮತ್ತು ಉತ್ತರ ಭಾರತೀಯ ಪಾಕಶೈಲಿಯ ಖಾದ್ಯ. ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ತಿನ್ನಲಾಗುತ್ತದೆ. ಇದನ್ನು ಭೋಜನ ನಂತರ ತಿನ್ನುವ ಸಿಹಿ ತಿನಿಸಾಗಿ ಬಡಿಸಲಾಗುತ್ತದೆ. ಇದನ್ನು ದೇಸಿ ತುಪ್ಪ,[] ಗೋಧಿ ಹಿಟ್ಟು, ಬೆಲ್ಲ ಮತ್ತು ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ಕೂಡ ಬಳಸಬಹುದು. ಉದ್ದಿನ ಹಿಟ್ಟಿನ ಪಿನ್ನಿ ಪಿನ್ನಿಯ ಒಂದು ವಿಧವಾಗಿದೆ.[]

ಘಟಕಾಂಶಗಳು

[ಬದಲಾಯಿಸಿ]

ಹೆಚ್ಚಿನ ರುಚಿಗಾಗಿ, ಪಿನ್ನಿಯಲ್ಲಿ ಖೋವಾವನ್ನು ಬಳಸಲಾಗುತ್ತದೆ.[] ಪಿನ್ನಿ ದೀರ್ಘ ಕಾಲದವರೆಗೆ ಹಾಳಾಗುವುದಿಲ್ಲ ಮತ್ತು ಇವನ್ನು ತಣ್ಣಗಾಗಿಸುವುದು ಅಗತ್ಯವಿಲ್ಲ. ಪಿನ್ನಿಗಳ ಮೇಲೆ ಕುಟ್ಟಿದ ಏಲಕ್ಕಿ ಪುಡಿಯನ್ನು ಉದುರಿಸಲಾಗುತ್ತದೆ ಮತ್ತು ಸಾಧ್ಯವಾದರೆ ಬಿಸಿಯಾಗಿ ಚಹಾದೊಂದಿಗೆ ಅಥವಾ ಬಿಸಿ ಕ್ಷೀರೋತ್ಪನ್ನಗಳೊಂದಿಗೆ ಬಡಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "The Exquisite World of Indian Cuisine". p. 37. Retrieved 20 December 2014.
  2. "Companionship and Sexuality: Based on Ayurveda and the Hindu Tradition". Books.google.com. Retrieved 20 December 2014.
  3. "Mama's Punjabi Recipes — Atte Ki Pinni (Sweet Wheat Flour Balls) - Indo American News". Indoamerican-news.com. Retrieved 15 December 2017.
  4. "Pinni recipes". Khanapakana.com. Archived from the original on 1 ಅಕ್ಟೋಬರ್ 2020. Retrieved 15 December 2017.
"https://kn.wikipedia.org/w/index.php?title=ಪಿನ್ನಿ&oldid=1060514" ಇಂದ ಪಡೆಯಲ್ಪಟ್ಟಿದೆ