ಪಿಚ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಕ್ಕಿನ ಕಣ್ಣುಗಳಲ್ಲಿ ಪಿಚ್ಚು

ಪಿಚ್ಚು ಎಂದರೆ ನಿದ್ರೆಯ ಅವಧಿಯಲ್ಲಿ ಕಣ್ಣುಗಳು, ಮೂಗು, ಅಥವಾ ಬಾಯಿಯಿಂದ ಸ್ವಾಭಾವಿಕವಾಗಿ ಸ್ರವಿಸಲ್ಪಟ್ಟ ತೆಳುವಾದ ಲೋಳೆ.[೧] ಪಿಚ್ಚು ಕಣ್ಣುಗಳು ಅಥವಾ ಬಾಯಿಯ ಮೂಲೆಗಳಲ್ಲಿ, ರೆಪ್ಪೆಗಳ ಮೇಲೆ, ಅಥವಾ ಮೂಗಿನ ಕೆಳಗೆ ಒಣಗಿ ಹಕ್ಕಳೆಯಾಗಿ ಸಂಗ್ರಹಗೊಳ್ಳುತ್ತದೆ. ಇದು ಲೋಳೆ (ಕಣ್ಣುಗಳ ವಿಷಯದಲ್ಲಿ, ಕಾರ್ನಿಯಾ ಅಥವಾ ಆರ್ದ್ರಚರ್ಮದಿಂದ ಸ್ರವಿಸಲ್ಪಟ್ಟ ಮ್ಯೂಸಿನ್‍ನ್ನು ಹೊಂದಿರುತ್ತದೆ), ನಾಸಿಕಜನ್ಯ ಲೋಳೆ, ರಕ್ತಕೋಶಗಳು, ಚರ್ಮಕೋಶಗಳು, ಅಥವಾ ಕೊಳೆಯ ಸಂಯೋಜನೆಯಿಂದ ರೂಪಗೊಳ್ಳುತ್ತದೆ. ಕಣ್ಣಿನ ಪಿಚ್ಚು ವಿಶೇಷವಾಗಿ ಸಾಮನ್ಯವಾಗಿದೆ.

ವ್ಯಕ್ತಿಯು ಎಚ್ಚರವಾಗಿದ್ದಾಗ, ಕಣ್ಣುರೆಪ್ಪೆಯನ್ನು ಮಿಟುಕಿಸುವುದರಿಂದ ಪಿಚ್ಚು ನಾಸಿಕಅಶ್ರು ನಾಳದ ಮೂಲಕ ಕಣ್ಣೀರಿನ ಜೊತೆ ಹರಿದುಕೊಂಡು ಹೋಗುತ್ತದೆ. ಆದರೆ, ನಿದ್ರೆಯ ಅವಧಿಯಲ್ಲಿ ಈ ಕ್ರಿಯೆಯ ಅನುಪಸ್ಥಿತಿಯಿಂದ, ಸಣ್ಣ ಪ್ರಮಾಣದಲ್ಲಿ ಒಣ ಪಿಚ್ಚು ಕಣ್ಣಿನ ಮೂಲೆಗಳಲ್ಲಿ ಶೇಖರಣೆಯಾಗುತ್ತದೆ, ಹೆಚ್ಚು ಗಮನಾರ್ಹವಾಗಿ ಮಕ್ಕಳಲ್ಲಿ. ಅನೇಕ ಪರಿಸ್ಥಿತಿಗಳು ಕಣ್ಣಿನಲ್ಲಿ ಪಿಚ್ಚಿನ ಉತ್ಪತ್ತಿಯನ್ನು ಹೆಚ್ಚಿಸಬಲ್ಲವು. ಅಲರ್ಜಿಕ್ ಕಂಜಂಕ್ಟಿವೈಟಿಸ್‍ನ ಸಂದರ್ಭದಲ್ಲಿ, ಪಿಚ್ಚಿನ ಹೆಚ್ಚಳವು ಗಣನೀಯವಾಗಿರಬಹುದು, ಮತ್ತು ಅನೇಕ ಸಲ ನರಳುವವನು ಎದ್ದ ನಂತರ ಕಣ್ಣಿನ ಪ್ರದೇಶವನ್ನು ಸ್ವಚ್ಛಮಾಡಿಕೊಳ್ಳದೇ ಕಣ್ಣು ತೆಗೆಯುವುದನ್ನು ತಡೆಯುತ್ತದೆ. ಭಾರೀ ಪಿಚ್ಚಿನ ಹೆಚ್ಚಳದ ಸಂದರ್ಭದಲ್ಲಿ ಕೀವಿನ ಉಪಸ್ಥಿತಿಯು ಇತರ ಸೋಂಕುಗಳೊಂದಿಗೆ ಶುಷ್ಕ ಕಣ್ಣು ಅಥವಾ ಕೆಂಗಣ್ಣು ಬೇನೆಯನ್ನು ಸೂಚಿಸಬಹುದು.

ಶಿಶುಗಳಲ್ಲಿ, ಕಣ್ಣೀರು ನಾಳಗಳು ಒಮ್ಮೊಮ್ಮೆ ತೆರೆಯುವುದಿಲ್ಲ, ಪರಿಣಾಮವಾಗಿ ಕಣ್ಣೀರು ಹೆಚ್ಚಾಗಿ ಗಲ್ಲಗಳ ಮೇಲೆ ಹರಿಯುತ್ತದೆ ಮತ್ತು ಪಿಚ್ಚು ಅದರ ಸುತ್ತಲಿನ ಚರ್ಮದ ಮೇಲೆ ಸಂಗ್ರಹವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Rheum (discharge)". Memidex Dictionary/Thesaurus. 2009. Retrieved 2009-04-22.
"https://kn.wikipedia.org/w/index.php?title=ಪಿಚ್ಚು&oldid=888602" ಇಂದ ಪಡೆಯಲ್ಪಟ್ಟಿದೆ