ವಿಷಯಕ್ಕೆ ಹೋಗು

ಪಾಲಿಯೆಸ್ಟರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಉನ್ನತ-ಮೇಲ್ಮೈ ಪ್ರದೇಶದ ಪಾಲಿಯೆಸ್ಟರ್ ಫೈಬರ್‌ನಲ್ಲಿನ ಏಳು-ಲೋಬ್ ಇರುವ ಬೆಂಡ್‌ನ ಸೀಳುನೋಟದ ಎಸ್‌ಇಎಮ್ ಚಿತ್ರ
ಪಾಲಿಯೆಸ್ಟರ್‌ ಅಂಗಿಯ ಹತ್ತಿರದ ಚಿತ್ರ

ಪಾಲಿಯೆಸ್ಟರ್‌ ಎಂದರೆ ಪಾಲಿಮರ್‌ನ ಒಂದು ವರ್ಗ. ಇದು ಎಸ್ಟರ್ ಕ್ರಿಯಾಶೀಲ ಗುಂಪನ್ನು ತನ್ನ ಮುಖ್ಯ ಸರಣಿಯಲ್ಲಿ ಹೊಂದಿರುತ್ತದೆ. ಪಾಲಿಯೆಸ್ಟರ್‌ಗಳಲ್ಲಿ ಹಲವು ವಿಧಗಳಿವೆಯಾದರೂ, ಪಾಲಿಥೇಲಿನ್ ತೆರೆಪ್ತಲೇಟ್ (ಪಿಇಟಿ) ಎಂಬ ನಿರ್ಧಿಷ್ಟ ಬಗೆಯ ವಸ್ತುವಿಗೆ ’ಪಾಲಿಯೆಸ್ಟರ್‌’ ಎಂದು ಕರೆಯಲಾಗುತ್ತದೆ. ಸಸ್ಯಗಳ ಹೊರಭಾಗಕ್ಯುಟಿನ್‌, ಪಾಲಿಕಾರ್ಬೊರೇಟ್‌ ಹಾಗೂ ಪಾಲಿಬ್ಯುಟೈರೇಟ್‌ ರೀತಿಯ ಹಂತ ಹಂತದ ಪಾಲಿಮರೀಕರಣದ ಸಂಯೋಜನೆಗಳಂಥ ಪ್ರಕೃತಿಜನ್ಯ ರಾಸಾಯನಿಕಗಳಿಂದ ಈ ಪಾಲಿಯೆಸ್ಟರ್‌ ಸಮೃದ್ಧವಾಗಿರುತ್ತದೆ. ನೈಸರ್ಗಿಕ ಪಾಲಿಯೆಸ್ಟರ್‌ಗಳು ಹಾಗೂ ಕೆಲವು ಬಗೆಯ ಸಿಂಥೆಟಿಕ್‌ ಅಥವಾ ಸಂಯೋಜಿತ ಪಾಲಿಯೆಸ್ಟರ್‌ಗಳು ಪರಿಸರದಲ್ಲಿ ತುಂಬಾ ಸುಲಭವಾಗಿ ಕೊಳೆತುಹೋಗುವಂಥವುಗಳು ಆದರೆ ಬಹುತೇಕ ಸಿಂಥೆಟಿಕ್‌ ಅಥವಾ ಸಂಯೋಜಿತ ಪಾಲಿಯೆಸ್ಟರ್‌ಗಳು ಕೊಳೆಯುವ ಗುಣವನ್ನು ಹೊಂದಿಲ್ಲ.

ತಾನು ಹೊಂದಿದ ರಾಸಾಯನಿಕ ಸ್ವರೂಪಕ್ಕೆ ಅನುಗುಣವಾಗಿ ಪಾಲಿಯೆಸ್ಟರ್‌ ಥರ್ಮೋಪ್ಲಾಸ್ಟಿಕ್‌ ಅಥವಾ ಥರ್ಮೋಸೆಟ್‌ ಆಗಿಯೂ ರೂಪ ತಾಳಬಹುದು. ಆದಾಗ್ಯೂ, ಜನಪ್ರಿಯ ಹಾಗೂ ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಲಿಯೆಸ್ಟರ್‌ಗಳೆಂದರೆ ಥರ್ಮೋಪ್ಲಾಸ್ಟಿಕ್‌ಗಳು.[]

ಪಾಲಿಯೆಸ್ಟರ್‌ ದಾರ ಅಥವಾ ನೂಲಿನಿಂದ ನೇಯಲ್ಪಟ್ಟ ಬಟ್ಟೆಯನ್ನು ಹೆಚ್ಚಾಗಿ ವಸ್ತ್ರಗಳು ಹಾಗೂ ಗೃಹಾಲಂಕಾರಕ್ಕೆ ಬಳಸಲಾಗುತ್ತಿದೆ. ಶರ್ಟ್‌ಗಳಿಂದ ಹಿಡಿದು ಪ್ಯಾಂಟ್‌ಗಳ ತನಕ, ಜಾಕೇಟ್‌ನಿಂದ ಹಿಡಿದು ಟೋಪಿಗಳು, ಬೆಡ್‌ಶೀಟ್‌ಗಳು, ರಕ್ಷಣಾ ಬೆಲ್ಟ್‌ಗಳು,ಹೊದಿಕೆಗಳು ಹಾಗೂ  ಸರ್ವಾಲಂಕೃತ ಪೀಠೋಪಕರಣಗಳವರೆಗೆ ಪ್ರತಿಯೊಂದರಲ್ಲೂ ಇಂದು ಪಾಲಿಯೆಸ್ಟರ್‌‌ನ ಛಾಪಿದೆ.  ಟಯರ್ ತಯಾರಿಕೆ ಹಾಗೂ ಬಲವರ್ಧನೆಗೆ, ಕನ್ವೇಯರ್ ಬೆಲ್ಟ್‌ ತಯಾರಿಕೆಗೆ ಬಳಸುವ ಬಟ್ಟೆಗಳ ತಯಾರಿಕೆಯಲ್ಲಿ, ಸೇಫ್ಟಿ ಬೆಲ್ಟ್‌ಗಳಿಗೆ, ಲೇಪಿತ ಬಟ್ಟೆಗಳಲ್ಲಿ ಹಾಗೂ ಅಪಾರ ಪ್ರಮಾಣದ ವಿದ್ಯುತ್‌ ಶಾಖವನ್ನು ಹೀರಿಕೊಳ್ಳಬಲ್ಲ ಪ್ಲಾಸ್ಟಿಕ್‌ನ ಬಲವರ್ಧನೆಯಲ್ಲಿ  ಕೈಗಾರಿಕಾ ಪಾಲಿಯೆಸ್ಟರ್‌ ಬಟ್ಟೆಗಳು, ನೂಲುಗಳು ಹಾಗೂ ದಾರಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ.  ತಲೆದಿಂಬುಗಳಲ್ಲಿ ಶಾಖವಾಹಕವನ್ನಾಗಿ, ಕಂಫರ್ಟರ್‌ಗಳಾಗಿ ಮತ್ತು ಪೀಠೋಪಕರಣಗಳ ಮೆತ್ತೆಯಾಗಿಯೂ ಈ ಪಾಲಿಯೆಸ್ಟರ್‌ ವಸ್ತ್ರಗಳು ಬಳಕೆಯಾಗುತ್ತಿವೆ.

ಇತರ ನೂಲುಗಳಾದ ಉಣ್ಣೆ ಹಾಗೂ ಹತ್ತಿಗಳಿಂದ ನೇಯಲಾದ ಬಟ್ಟೆಗಳಿಗೆ ಹೋಲಿಸಿದರೆ ಸಿಂಥೆಟಿಕ್ ಬಟ್ಟೆಗಳು ಕಡಿಮೆ ಪ್ರಾಕೃತಿಕ ಎಂಬುದು ಕೆಲವರ ಅಂಬೋಣ. ಆದರೆ, ಪಾಲಿಯೆಸ್ಟರ್‌ ಬಟ್ಟೆಗಳು ಹಲವು ರೀತಿಯ ಪ್ರಯೋಜನಗಳನ್ನು ಹೊಂದಿವೆ. ಪ್ರಾಕೃತಿಕ ನೂಲಿನಿಂದ ನೇಯಲ್ಪಟ್ಟ ಬಟ್ಟೆಗಳಿಗೆ ಹೋಲಿಸಿದರೆ ಪಾಲಿಯೆಸ್ಟರ್‌ ಬಟ್ಟೆಗಳಿಗೆ ಸುಕ್ಕು/ಮಡಿಕೆ ನಿರೋಧದ ಗುಣಗಳು ಹೆಚ್ಚು. ಪರಿಣಾಮವಾಗಿ, ಪಾಲಿಯೆಸ್ಟರ್‌ ಬಟ್ಟೆಯನ್ನು ಪ್ರಾಕೃತಿಕ ಬಟ್ಟೆಗಳ ಜೊತೆಗೆ ನೇಯ್ದು ಎರಡೂ ಬಟ್ಟೆಯ ಗುಣಗಳನ್ನು ಒಳಗೊಂಡ ಉತ್ಕೃಷ್ಟ ಮಟ್ಟದ ಇನ್ನೊಂದು ಬಟ್ಟೆಯನ್ನು ತಯಾಸಲಾಗುತ್ತದೆ. ಸಸ್ಯಜನ್ಯ ಬಟ್ಟೆಗಳಿಗಿಂತ ಅತ್ಯುತ್ತಮ ಗುಣಮಟ್ಟದ, ನೀರು, ಗಾಳಿ ಹಾಗೂ ಪ್ರಾಕೃತಿಕ ಪ್ರತಿರೋಧದ ಗುಣವುಳ್ಳ ಉತ್ಕೃಷ್ಟ ಮಟ್ಟದ ಬಟ್ಟೆಗಳನ್ನು ಪಾಲಿಯೆಸ್ಟರ್‌ಗಳಿಂದಲೂ ತಯಾರಿಸಬಹುದಾಗಿದೆ.

ಪ್ಲಾಸ್ಟಿಕ್ ಬಾಟಲಿಗಳು, ಫಿಲ್ಮುಗಳು, ಟಾರ್ಪಲಿನ್‌, ನಾವೆಗಳು, ದ್ರವರೂಪಿ ಕ್ರಿಸ್ಟಲ್‌ ಪ್ರದರ್ಶನಗಳು, ಪೂರ್ಣಲೇಖಗಳು, ಫಿಲ್ಟರ್‌ಗಳು, ಕೆಪ್ಯಾಸಿಟರ್‌ಗಳಿಗೆ ಡೈಎಲೆಕ್ಟ್ರಿಕ್‌ ಫಿಲ್ಮ್‌ಗಳು, ತಂತಿಗಳಿಗೆ ಹಾಗೂ ಅವಾಹಕ ಟೇಪುಗಳಿಗೆ ಫಿಲ್ಮು ಆವಾಹಕಗಳು ಮುಂತಾದ ಉಪಕರಣಗಳ ತಯಾರಿಕೆಯಲ್ಲಿ ಪಾಲಿಯೆಸ್ಟರ್‌ಗಳನ್ನು ಬಳಸಲಾಗುತ್ತದೆ.

ಕೈಗಾರಿಕೆಗಳ ಬಳಕೆಗಾಗಿ ಪ್ರಪ್ರಥಮವಾಗಿ ಬಳಕೆಯಾದ ದ್ರವರೂಪಿ ಕ್ರಿಸ್ಟಲಿನ್ ಪಾಲಿಯೆಸ್ಟರ್‌ಗಳಲ್ಲಿ ದ್ರವರೂಪಿ ಕ್ರಿಸ್ಟಲಿನ್‌ ಪಾಲಿಮರ್ ಕೂಡ ಒಂದು. ಅವುಗಳನ್ನು ಅವುಗಳು ಹೊಂದಿರುವ ಶಾಖ ನಿಯಂತ್ರಣ ಸಾಮರ್ಥ್ಯ ಹಾಗೂ ಯಂತ್ರ ಸಾಮರ್ಥ್ಯಗಳ ಕಾರಣದಿಂದಾಗಿ ಬಳಸಲಾಗುತ್ತಿದೆ. ಈ ಎಲ್ಲಾ ಗುಣಗಳಿಂದಾಗಿಯೇ ಅವುಗಳನ್ನು ಜೆಟ್‌ ಎಂಜಿನ್‌ಗಳಲ್ಲಿ ಸವಕಲು ಸೀಲ್ ಆಗಿಯೂ ಬಳಸಲಾಗುತ್ತದೆ.

ಉತ್ತಮ ಗುಣಮಟ್ಟದ ಮರದ ಉತ್ಪನ್ನಗಳಾದ ಗಿಟಾರ್, ಪಿಯಾನೋ ಹಾಗೂ ವಾಹನಗಳ ಒಳವಿನ್ಯಾಸಗಳಿಗೆ ಅಂತಿಮ ರೂಪ ಕೊಡುವಲ್ಲಿಯೂ ಪಾಲಿಯೆಸ್ಟರ್‌ಗಳ ಪಾತ್ರ ಮಹತ್ವದ್ದು. ತಮ್ಮ ಉತ್ಪನ್ನಗಳಿಗೆ ಅಂತಿಮ ರೂಪ ಕೊಡಲು ಪಾಲಿಯೆಸ್ಟರ್‌ಗಳನ್ನು ಬಳಸುವ ಕಂಪನಿಗಳಲ್ಲಿ ಬರ್ನ್ಸ್‌ ಗಿಟಾರ್‌ಗಳು, ರೋಲ್ಸ್ ರಾಯ್ಸ್ ಹಾಗೂ ಸನ್‌ಸೀಕರ್ ಕಂಪನಿಗಳು ಮುಖ್ಯವಾದವುಗಳು. ಸಿಂಪಡನೆಗೆ ಬಳಸುವ ಪಾಲಿಯೆಸ್ಟರ್‌ಗಳ ಥಿಕ್ಸೊಟ್ರಾಫಿಕ್ ಗುಣಗಳಿಂದಾಗಿ (ಅಲುಗಾಡಿಸಿದಾಗ ದ್ರವರೂಪ ತಾಳುವ ಹಾಗೂ ಇನ್ನುಳಿದ ಸಮಯದಲ್ಲಿ ಅರೆ-ಘನರೂಪದ ಧರಿಸಿರುವ ಗುಣ) ಅವುಗಳನ್ನು ತೆರೆದ ಗ್ರೈನ್‌ ಟಿಂಬರ್‌ಗಳ ಮೇಲೆ ಬಳಸಬಹುದಾಗಿದೆ. ಅವುಗಳು ತುಂಬಾ ಸಲೀಸಾಗಿ ವುಡ್ ಗ್ರೈನ್‌ಗಳನ್ನು ತುಂಬುತ್ತವೆಯಾದ್ದರಿಂದ ಹೈ-ಬಿಲ್ಡ್‌ ಫಿಲ್ಮ್ ಥಿಕ್‌ನೆಸ್‌ ಅನ್ನು ಹೊರ ಕವಚದಲ್ಲಿ ಬಳಸಲಾಗುತ್ತದೆ. ಬಾಳಿಕೆ ಬರುವ ರೀತಿಯಲ್ಲಿ ಅಂತಿಮ ರೂಪ ನೀಡುವ ನಿಟ್ಟಿನಲ್ಲಿ ಪಾಲಿಯೆಸ್ಟರ್‌ ಅನ್ನು ಪಾಲಿಶ್‌ ಮಾಡಲಾಗುತ್ತದೆ.

ಪ್ರಕಾರಗಳು

[ಬದಲಾಯಿಸಿ]

ಥರ್ಮೋಪ್ಲಾಸ್ಟಿಕ್‌ಗಳ ರೂಪದಲ್ಲಿರುವ ಪಾಲಿಯೆಸ್ಟರ್‌ಗಳನ್ನು ತುಸು ಶಾಖಕ್ಕೊಳಪಡಿಸಿದರೆ ಸಾಕು ಅವುಗಳು ತಮ್ಮ ಆಕಾರವನ್ನು ಬದಲಾಯಿಸಬಹುದು. ಆತ್ಯಂತಿಕ ತಾಪಮಾನದಲ್ಲಿ ಕರಗಬಹುದಾದ ಪಾಲಿಯೆಸ್ಟರ್‌ಗಳು ಬೆಂಕಿಯ ಜ್ವಾಲೆಗಳ ಎದುರು ಸಂಕುಚಿತಗೊಳ್ಳುತ್ತವೆ ಹಾಗೂ ಅಗ್ನಿಸ್ಪರ್ಶದಿಂದಾಗಿ ತನ್ನನ್ನೇ ತಾನು ನಾಶಪಡಿಸಿಕೊಳ್ಳುತ್ತದೆ. ಬೇರೆ ಕೈಗಾರಿಕಾ ಬಟ್ಟೆಗಳಿಗೆ ಹೋಲಿಸಿದರೆ, ಪಾಲಿಯೆಸ್ಟರ್‌ ಅತಿ ಹೆಚ್ಚು ಜಿಗುಟು ಗುಣ, ಇ-ಮಾಡ್ಯುಲಸ್‌ ಗುಣ ಹೊಂದಿರುವ, ಹಾಗೆಯೇ ಅತಿ ಕಡಿಮೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವುಳ್ಳ ಹಾಗೂ ಅತಿ ಕಡಿಮೆ ಸುಕ್ಕುಗಟ್ಟುವ ಸಾಮರ್ಥ್ಯವನ್ನು ಹೊಂದಿದೆ.

ಥರ್ಮೋಸೆಟ್ಟಿಂಗ್‌ ಪಾಲಿಯೆಸ್ಟರ್‌ಗಳನ್ನು ಎರಕ ಹೊಯ್ಯುಲು ಹಾಗೂ ಕೀಮೋ ಜೋಡನೆಯ ಪಾಲಿಯೆಸ್ಟರ್‌ ರಾಳವನ್ನು ಫೈಬರ್‌ಗ್ಲಾಸ್‌ ಲ್ಯಾಮಿನೇಟ್ ರಾಳವನ್ನಾಗಿ ಹಾಗೂ ಲೋಹವಲ್ಲದ ಆಟೋ-ಬಾಡಿ ಫಿಲ್ಲರ್‌ಗಳಾಗಿ ಬಳಸಲಾಗುತ್ತಿದೆ. ಫೈಬರ್‌ಗ್ಲಾಸ್‌ನಿಂದ ಮಾಡಲ್ಪಟ್ಟ ಅಪರ್ಯಾಪ್ತ ಪಾಲಿಯೆಸ್ಟರ್‌ಗಳನ್ನು ಕಾರುಗಳ ಒಳವಿನ್ಯಾಸದಲ್ಲಿ ಹಾಗೂ ನಾವೆಗಳು ಅಥವಾ ದೋಣಿಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ತಮ್ಮ ರಾಸಾಯನಿಕ ಸರಣಿಯಲ್ಲಿನ ಸಂಯೋಜನೆಗೆ ಅನುಗುಣವಾಗಿ ಪಾಲಿಯೆಸ್ಟರ್‌ಗಳನ್ನು:

ಮುಖ್ಯ ಸರಣಿಯ ಸಂಯೋಜನೆ ಪುನರಾವರ್ತನೆಗೊಳ್ಳುತ್ತಿರುವ ಘಟಕಗಳ ಸಂಖ್ಯೆ ಪಾಲಿಯೆಸ್ಟರ್‌ಗಳ ಉದಾಹರಣೆಗಳು ತಯಾರಿಕೆ ಪದ್ಧತಿಯ ಉದಾಹರಣೆಗಳು
ಅಲಿಫ್ಯಾಟಿಕ್ ಹೋಮೋಪಾಲಿಮರ್ ಪಾಲಿಗ್ಲೈಕೊಲೈಡ್‌ ಅಥವಾ ಪಾಲಿಗ್ಲೈಕೊಲಿಕ್ ಆಮ್ಲ (PGA) ಗ್ಲೈಕೊಲಿಕ್ ಆಮ್ಲಪಾಲಿಕಂಡೆನ್ಸೇಶನ್
ಪಾಲಿಲ್ಯಾಕ್ಟಿಕ್‌ಆಮ್ಲ (PLA)
ಪಾಲಿಕ್ಯಾಪ್ರೋಲ್ಯಾಕ್ಟೋನ್‌ (PCL) ಕ್ಯಾಪ್ರೋಲ್ಯಾಕ್ಟೋನ್‌ನರಿಂಗ್-ಓಪನಿಂಗ್ ಪಾಲಿಮರೈಸೇಶನ್
ಕೊಪಾಲಿಮರ್‌ ಪಾಲಿಇಥೈಲಿನ್‌ಅಡಿಪೇಟ್‌ (PEA)
ಪಾಲಿಹೈಡ್ರೋಕ್ಸಿ‌ಅಲ್ಕನೋಏಟ್ (PHA)
ಸೆಮಿ-ಅರೊಮ್ಯಾಟಿಕ್ ಕೊಪಾಲಿಮರ್‌ ಪಾಲಿಇಥೈಲಿನ್‌ ಟೆರೆಫ್ಟಲೇಟ್‌ (PET) ಎಥಿಲಿನ್ ಗ್ಲೈಕೋಲ್‌ ಜೊತೆಗಿನ ಟೆರೆಪ್ತಾಲಿಕ್‌ ಆಮ್ಲದ ಪಾಲಿಕಂಡೆನ್ಸೇಶನ್‌
ಪಾಲಿಬುಟೈಲಿನ್ ಟೆರೆಫ್ತಲೇಟ್ (PBT) 2,3-ಬ್ಯುಟಾಅನಾಡಯೋಲ್‌ ನೊಂದಿಗಿನ ಟೆರೆಪ್ತಾಲಿಕ್‌ ಆಮ್ಲದ ಪಾಲಿಕಂಡೆನ್ಸೇಶನ್‌
ಪಾಲಿಟ್ರೈಮೆಥೈಲಿನ್ ಟೆರೆಫ್ತಲೇಟ್ (PTT) 1,3-ಪ್ರೊಪನೆಡೈಯಾಲ್‌ ನೊಂದಿಗಿನ ಟೆರೆಪ್ತಾಲಿಕ್‌ ಆಮ್ಲದ ಪಾಲಿಕಂಡೆನ್ಸೇಶನ್‌
ಪಾಲಿಇಥೈಲಿನ್‌ ನೆಪ್ತಲೇಟ್ (PEN) ಒಂದು ಅಥವಾ ಹೆಚ್ಚಿನ ನೆಪ್ತಾಲಿನ್‌ ಡೈಕಾರ್ಬಾಕ್ಸಿಲಿಕ್‌ ಆಮ್ಲಗಳ‍ ಜೊತೆಗಿನ ಎಥಿಲಿನ್ ಗ್ಲೈಕೋಲ್‌‌ನ ಪಾಲಿಕಂಡೆನ್ಸೇಶನ್‌
ಅರೋಮ್ಯಾಟಿಕ್ಟ್ಟ್ ಕೊಪಾಲಿಮರ್‌ ವೆಕ್ಟ್‌ರನ್‌

ಪಾಲಿಯೆಸ್ಟರ್‌‌ನ ಆರೋಮ್ಯಾಟಿಕ್‌ ಭಾಗಗಳು ಹೆಚ್ಚಿದಂತೆ ಅವುಗಳ ಗ್ಲಾಸ್‌ ಟ್ರಾನ್ಸಿಷನ್‌ ತಾಪಮಾನ, ಕರಗುವ ತಾಪಮಾನ, ಥರ್ಮಲ್‌ ದೃಢತೆ, ರಾಸಾಯನಿಕ ದೃಢತೆಗಳು ಕೂಡ ಹೆಚ್ಚುತ್ತವೆ.

ಪಾಲಿಕ್ಯಾಪ್ರೊಲಾಕ್ಟೇನ್ ಡಿಯೋಲ್(ಪಿಸಿಎಲ್‌) ಹಾಗೂ ಪಾಲಿಥಿಲೀನ್‌ ಅಡಿಪೇಟ್‌ ಡಿಯೋಲ್‌ಗಳಾಗಿ ಮಾರ್ಪಾಟು ಹೊಂದುವ ಸಾಮರ್ಥ್ಯ ಕೂಡ ಪಾಲಿಯೆಸ್ಟರ್‌ಗಿದೆ. ಆಗ ಅವುಗಳನ್ನು ಪ್ರಿಪಾಲಿಮರ್‌ಗಳಾಗಿ ಬಳಸಲಾಗುತ್ತದೆ.

ಕೈಗಾರಿಕೆ

[ಬದಲಾಯಿಸಿ]

ಮೂಲಗಳು

[ಬದಲಾಯಿಸಿ]

ಪಾಲಿಮರ್ ಅಂದರೆ ಅದು ಸಿಂಥೆಟಿಕ್‌ ಪಾಲಿಮರ್. ಅದನ್ನು ಶುದ್ಧ ಟೆರೆಪ್ತಲಿಕ್ ಆಮ್ಲ(ಪಿಟಿಎ) ಅಥವಾ ಡೈಮಿಥೇಲ್ ಇಸ್ಟರ್ ಡೈಮಿಥೇಲ್ ಟೆರೆಪ್ತಾಲೇಟ್‌ (ಡಿಎಮ್‌ಟಿ) ಹಾಗೂ ಮೊನೊಎಥಿಲೀನ್‌ ಗ್ಲೈಕೋಲ್ (ಎಮ್‌ಇಜಿ) ಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಉತ್ಪಾದನೆಯಾದ ಪ್ಲಾಸ್ಟಿಕ್‌ ಉತ್ಪನ್ನಗಳ ಶೇ.18ರಷ್ಟು ಮಾರುಕಟ್ಟೆ ಷೇರುಗಳಲ್ಲಿ ಪಾಲಿಮರ್ ಮೂರನೇ ಸ್ಥಾನದಲ್ಲಿದೆ. ಪಾಲಿಎಥಿಲೀನ್‌(33.5%) ಹಾಗೂ ಪಾಲಿಪ್ರೊಮಿಲೀನ್‌ (19.5%) ನಂತರದ ಸ್ಥಾನದ ಪಾಲಿಮರ್‌ನದು.

ಮುಖ್ಯ ಕಚ್ಛಾ ಸಾಮಗ್ರಿಗಳನ್ನು ಈ ಕೆಳಗಿನಂತೆ ವಿವರಿಸಬಹುದು:

  • ಶುದ್ಧೀಕೃತ ಟೆರೆಪ್ತಾಲಿಕ್‌ ಆಮ್ಲ – PTA – CAS-No.: 100-21-0
ಪರ್ಯಾಯ: 1,4 ಬೆಂಜಿನ್‌ಡೈಕಾರ್ಬಾಕ್ಸಿಲಿಕ್‌ ಆಮ್ಲ,
ಮೊತ್ತ ಸೂತ್ರ; C6H4(COOH)2 , ಅಣು ಭಾರ: 166,13
  • ಡೈಮೆಥೈಲ್‌ಟೆರೆಫ್ತಲೇಟ್‌ – DMT- CAS-No: 120-61-6
ಪರ್ಯಾಯ: 1,4 ಬೆಂಜಿನ್‌ಡೈಕಾರ್ಬಾಕ್ಸಿಲಿಕ್‌ ಆಮ್ಲ ಡೈಮೆಥೈಲ್‌ ಎಸ್ಟರ್‌
ಮೊತ್ತ ಸೂತ್ರ C6H4(COOCH3)2 , ಅಣು ಭಾರ: 194,19
  • Mono ಎಥಿಲಿನ್ ಗ್ಲೈಕೋಲ್‌ – MEG – CAS No.: 107-21-1
ಪರ್ಯಾಯ: 1,2 ಈಥೇನ್‌ಡಯಾಲ್
ಮೊತ್ತ ಸೂತ್ರ: C2H6O2 , ಅಣು ಭಾರ: 62,07

ಪಿಟಿಎ[], ಡಿಎಂಟಿ[] ಹಾಗೂ ಎಮ್‌ಇಜಿ[] ಗಳಿಗೆ ಬೇಕಾದ ಪಾಲಿಯೆಸ್ಟರ್‌‌ನ ಕಚ್ಛಾ ಸಾಮಗ್ರಿಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು INCHEM "Chemical Safety Information from Intergovernmental Organizations" ವೆಬ್‌ ಪೇಜ್‌ನಲ್ಲಿ ಕಾಣಬಹುದು.

ಪಾಲಿಮರ್‌ಗಳನ್ನು ಅತಿ ಹೆಚ್ಚಿನ ಅಣು ತೂಕದ ಪಾಲಿಮರ್‌ಗಳನ್ನಾಗಿ ಮಾರ್ಪಡಿಸಲು ಒಂದು ಕ್ರಿಯಾವರ್ಧಕದ ಅವಶ್ಯಕತೆ ಇದೆ. ಸಾಮಾನ್ಯವಾಗಿ ಬಳಸುವ ಕ್ರಿಯಾವರ್ಧಕವೆಂದರೆ ಆಂಟಿಮೊನಿ ಟ್ರೈಯಾಕ್ಸೈಡ್‌(ಅಥವಾ, ಆಂಟಿಮೊನಿ ಟ್ರೈಎಸಿಟೇಟ್‌):

ಆಂಟಿಮೊನಿ ಟ್ರೈಆಕ್ಸೈಡ್‌- ಎಟಿಒ-ಸಿಎಎಸ್‌ ಸಂಖ್ಯೆ: 1309-64-4 ಸಮಾನಾರ್ಥ:ನಾನ್‌, ಮೋಲ್‌ ತೂಕ: 291,51 ಒಟ್ಟು ಸೂತ್ರ: Sb2O3

2008ರಲ್ಲಿ 10 000t ಗೂ ಅಧಿಕ Sb2O3 ಅನ್ನು ಸುಮಾರು 49 Mio t ಅಷ್ಟು ಪಾಲಿಥೇಲಿನ್‌ ಟೆರೆಪ್ತಾಲೇಟ್‌ ಅನ್ನು ಬಳಸಲಾಗಿತ್ತು.

ಪಾಲಿಯೆಸ್ಟರ್‌ ಅನ್ನು ಈ ಕೆಳಗಿನಂತೆ ವಿವರಿಸಬಹುದು:

ಪಾಲಿಥೇಲಿನ್‌ ಟೆರೆಪ್ತಾಲೇಟ್‌ ಸಿಎಎಸ್‌-ಸಂಖ್ಯೆ: 25038-59-9 ಸಮಾನಾರ್ಥ/ಸಂಕ್ಷಿಪ್ತರೂಪಗಳು: ಪಾಲಿಯೆಸ್ಟರ್‌, ಪಿಇಟಿ, ಪಿಇಎಸ್‌ ಒಟ್ಟು ಸೂತ್ರ: H-[C10H8O4]-n=60-120 OH, ಮೋಲ್‌ ಘಟಕ ತೂಕ: 192,17

ಪಾಲಿಯೆಸ್ಟರ್‌ಗೆ ದಕ್ಕಿರುವ ಪ್ರಾಮುಖ್ಯತೆಗೆ ಹಲವು ಕಾರಣಗಳಿವೆ:

  • ತುಲನಾತ್ಮಕವಾಗಿ ತುಂಬಾ ಸುಲಭವಾಗಿ ದೊರೆಯುವ ಕಚ್ಛಾ ಸಾಮಗ್ರಿಗಳೆಂದರೆ ಪಿಟಿಎ ಮತ್ತು ಡಿಎಮ್‌ಟಿ ಹಾಗೂ ಎಮ್‌ಇಜಿ
  • ಪಾಲಿಯೆಸ್ಟರ್‌ ಸಿಂಥೆಸಿಸ್‌ನದು ತುಂಬಾ ಚೆನ್ನಾಗಿ ಅರ್ಥ ಮಾಡಲ್ಪಟ್ಟ ಹಾಗೂ ವಿವರಿಸಲ್ಪಟ್ಟ ಸರಳವಾದ ರಾಸಾಯನಿಕ ಕ್ರಿಯೆ.
  • ಪಾಲಿಯೆಸ್ಟರ್‌‌ನ ತಯಾರಿಕೆಯ ಸಂದರ್ಭದಲ್ಲಿ ಬಳಕೆಯಾಗುವ ಎಲ್ಲಾ ರೀತಿಯ ಕಚ್ಚಾ ಸಾಮಗ್ರಿಗಳು ಹಾಗೂ ಉಪ ಉತ್ಪನ್ನಗಳ ವಿಷಯುಕ್ತತೆಯ ಮಟ್ಟ ತೀರಾ ಕಡಿಮೆ.
  • ಪರಿಸರದ ಆರೋಗ್ಯಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಪಿಇಟಿ ಅನ್ನು ನಿರ್ಬಂಧಿತ ಪ್ರದೇಶದಲ್ಲೂ ತಯಾರು ಮಾಡಲು ಸಾಕಷ್ಟು ಸಾಧ್ಯತೆಗಳಿವೆ.
  • ಪಾಲಿಯೆಸ್ಟರ್‌‌ನ ಅತ್ಯಮೂಲ್ಯ ಹಾಗೂ ಅತ್ಯುನ್ನತ ಗುಣಮಟ್ಟದ ಯಾಂತ್ರಿಕ ಹಾಗೂ ರಾಸಾಯನಿಕ ಪ್ರಯೋಜನಗಳು.
  • ಮರುಬಳಕೆಯ ಅವಕಾಶ
  • ಪಾಲಿಯೆಸ್ಟರ್‌‌ನ ತಯಾರಿಕೆಯ ಮಧ್ಯದ ಹಂತದಲ್ಲಿ ಹಾಗೂ ಅಂತಿಮ ಹಂತದಲ್ಲಿ ತಯಾರಾಗುವ ಉತ್ಪನ್ನಗಳ ಹಲವು ಬಗೆಗಳು.

ಪಟ್ಟಿ.1ರಲ್ಲಿ ಪ್ರಪಂಚದಾದ್ಯಂತ ಉತ್ಪಾದನೆಯಾಗುವ ಪಾಲಿಯೆಸ್ಟರ್‌‌ನ ಒಂದು ಅಂದಾಜು ಪ್ರಮಾಣವನ್ನು ನೀಡಲಾಗಿದೆ. ಟೆಕ್ಸ್‌ಟೈಲ್‌ ಪಾಲಿಯೆಸ್ಟರ್‌,ಬಾಟಲಿ ಪಾಲಿಯೆಸ್ಟರ್‌ ರಾಸಾಯನಿಕ ರಾಳ, ಫಿಲ್ಮ್ ಪಾಲಿಯೆಸ್ಟರ್‌ಗಳನ್ನು ಹೆಚ್ಚಾಗಿ ಪ್ಯಾಕೇಜಿಂಗ್‌ಗೆ ಬಳಸಿದರೆ ಸ್ಪೆಷಾಲಿಟಿ ಪಾಲಿಯೆಸ್ಟರ್‌ಗಳನ್ನು ಎಂಜಿನೀಯರಿಂಗ್ ಪ್ಲಾಸ್ಟಿಕ್‌ ತಯಾರಿಸಲು ಬಳಸುತ್ತಾರೆ. ಈ ಪಟ್ಟಿಯ ಪ್ರಕಾರ, 2010 ಕ್ಕಿಂತ ಮೊದಲು ಪ್ರಪಂಚದ ಪಾಲಿಯೆಸ್ಟರ್‌ ಉತ್ಪಾದನೆಯ ಪ್ರಮಾಣ ವರ್ಷವೊಂದಕ್ಕೆ 50 ಮಿಲಿಯನ್‌ ಟನ್‌ ಮೀರಿರಬಹುದು ಎಂದು ಅಂದಾಜು ಮಾಡಲಾಗಿದೆ.

ಕೋಷ್ಠಕ 1: ಜಾಗತೀಕ ಪಾಲಿಯೆಸ್ಟರ್ ಉತ್ಪಾದನೆ

ಪ್ರತಿ ವರ್ಷಕ್ಕೆ ಮಾರುಕಟ್ಟೆ ಗಾತ್ರ
ಉತ್ಪನ್ನ ಪ್ರಕಾರ 2002 [Mio t/a] 2008 [Mio t/a]
ಟೆಕ್ಸ್‌ಟೈಲ್‌-PET 20 39
ರೇಸಿನ್‌, ಬಾಟಲ್/A-PET 9 16
ಫಿಲ್ಮ್-PET 1.2 1.5
ವಿಶೇಷ ಪಾಲಿಯೆಸ್ಟರ್‌ 1 2.5
ಒಟ್ಟು 31.2 49

ಕಚ್ಚಾ ಸಾಮಗ್ರಿಗಳ ಉತ್ಪಾದಕ

[ಬದಲಾಯಿಸಿ]

ಕಚ್ಚಾ ಸಾಮಗ್ರಿಗಳಾದ ಪಿಟಿಎ, ಡಿಎಮ್‌ಟಿ ಹಾಗೂ ಎಮ್‌ಇಜಿಗಳನ್ನು ಹೆಚ್ಚಾಗಿ ದೊಡ್ಡ ಪ್ರಮಾಣದ ರಾಸಾಯನಿಕ ತಯಾರಕ ಕಂಪನಿಗಳು ತಯಾರಿಸುತ್ತವೆ. ’ಪಿಟಿಎ’ ಯ ತಯಾರಿಕೆಗೆ ಮೂಲವಸ್ತುವಾಗಿ (ಬೇಸ್‌ ಮೆಟೀರಿಯಲ್‌) ಇಂಥ ರಾಸಾಯನಿಕ ತಯಾರಿಕಾ ಕಂಪನಿಗಳ ಕಚ್ಚಾ ತೈಲ ಪರಿಷ್ಕರಣಾ ಘಟಕದಲ್ಲಿ ದೊರೆಯುವ ’ಪಿ -ಕ್ಸೈಲೀನ್‌’ ಅನ್ನೂ ಹಾಗೂ ’ಎಮ್‌ಇಜಿ’ ತಯಾರಿಕೆಗೆ ಮೂಲವಸ್ತವಾಗಿ ’ದ್ರವರೂಪಿ ಪೆಟ್ರೋಲಿಯಂ ಅನಿಲ’ವನ್ನೂ (ಎಲ್‌ಪಿಜಿ) ಬಳಸಲಾಗುತ್ತದೆ.

’ಪಿಟಿಎ’ ತಯಾರಿಸುವ ದೊಡ್ಡ ಪ್ರಮಾಣದ ಕಂಪನಿಗಳೆಂದರೆ, ಬಿಪಿ, ರಿಲಯನ್ಸ್‌, ಸಿನೊಪೆಕ್‌, ಎಸ್‌ಕೆ- ಕೆಮಿಕಲ್ಸ್‌, ಮಿತ್ಸುಇ ಹಾಗೂ ಈಸ್ಟ್‌ಮ್ಯಾನ್‌ ಕೆಮಿಕಲ್ಸ್‌. ಎಮ್‌ಇಜಿ ತಯಾರಿಕೆ ಪ್ರಪಂಚದಾದ್ಯಂತ ಸುಮಾರು 10 ತಯಾರಕರ ಕೈಯಲ್ಲಿದೆ. ಅವುಗಳಲ್ಲಿ ಸೆಬಿಕ್‌ ನಂತರದ ಸ್ಥಾನ ’ಡೌ’ನ ಎಮ್‌ಇಗ್ಲೋಬಲ್‌ ಹಾಗೂ ’ಪಿಐಸಿ ಕುವೈತ್” ಕಂಪನಿಗಳು.

ಪ್ರಪಂಚದ ಅತ್ಯಂತ ದೊಡ್ಡ ಪ್ರಮಾಣದ ಪಾಲಿಯೆಸ್ಟರ್‌ ತಯಾರಕ ಕಂಪನಿಗಳು ಇಂತಿವೆ:

ಅರ್ಟೇನಿಯಸ್‌, ಅದ್ವಾನ್ಸಾ, ಡಿಎಕೆ, ಡುಪೊಂಟ್‌, ಈಸ್ಟ್‌ಮ್ಯಾನ್‌, ಹ್ಯೂಸಂಗ್‌, ಹುವಿಸ್‌, ಇಂಡೋರಾಮಾ, ಇನ್ವಿಸ್ತಾ, ಜಿಯಾಂಗ್ಸು ಹೆಂಗ್ಲಿ ಕೆಮಿಕಲ್‌ ಫೈಬರ್, ಜಿಯಾಂಗ್ಸು ಸಂಫಾಂಗ್ಸಿಯಾನ್‌ ಇಂಡಸ್ಟ್ರೀ, ಎಮ್‌&ಜಿ ಗ್ರೂಪ್‌, ಮಿತ್ಸುಯಿ, ಮಿತ್ಸುಬಿಶಿ, ನಾನ್‌ ಯಾ ಪ್ಲಾಸ್ಟಿಕ್ಸ್, ರೀಶ್‌ಹೋಲ್ಡ್‌, ರಿಲಯನ್ಸ್‌, ರಾಂಗ್‌ಶೆಂಗ್‌, ಸೆಬಿಕ್‌, ತೆಜಿನ್‌, ತೊರೆ, ಟ್ರೆವಿರಾ, ಟುಂಟೆಕ್ಸ್‌, ವೆಲ್‌ಮ್ಯಾನ್‌, ಯಿಝೆಂಗ್‌ ಸಿನೊಪೆಕ್‌ ಹಾಗೂ ಝೆಜಿಯಾಂಗ್‌ ಹೆಂಗಿ ಪೊಲಿಮರೈಸೇಷನ್‌.

ಪಾಲಿಯೆಸ್ಟರ್‌ ಪ್ರಕ್ರಿಯೆಗೊಳಿಸುವಿಕೆ

[ಬದಲಾಯಿಸಿ]

ದ್ರವೀಕರಣದ ಘಟ್ಟದ ಮೊದಲ ಹಂತದ ಪಾಲಿಮರ್ ತಯಾರಿಕೆಯ ನಂತರ ತಯಾರಿಕೆಯ ಪ್ರಕ್ರಿಯೆ ಟೆಕ್ಸ್‌ಟೈಲ್‌ ಅನ್ವಯಿಕತೆ ಹಾಗೂ ಪ್ಯಾಕೇಜಿಂಗ್‌ ಅನ್ವಯಿಕತೆಯಾಗಿ ವರ್ಗೀಕರಣ ಹೊಂದುತ್ತದೆ. 2 ನೇ ಚಿತ್ರದಲ್ಲಿ ಟೆಕ್ಸ್‌ಟೈಲ್‌ ಹಾಗೂ ಪ್ಯಾಕೇಜಿಂಗ್‌ ಪಾಲಿಯೆಸ್ಟರ್‌ಗಳ ಪ್ರಮುಖ ಅನ್ವಯಿಕತೆಯ ವಿವರಣೆ ಇದೆ.

ಪಟ್ಟಿ 2: ಟೆಕ್ಸ್‌ಟೈಲ್ ಹಾಗೂ ಪ್ಯಾಕೇಜಿಂಗ್ ಪಾಲಿಯೆಸ್ಟರ್‌ ಅನ್ವಯಿಕತಾ ಪಟ್ಟಿ

ಪಾಲಿಯೆಸ್ಟರ್‌ – ಆಧಾರಿತ ಪಾಲಿಮರ್ (ದ್ರವೀಕರಣ ಅಥವಾ ಕಿರುಗುಂಡು)
ಟೆಕ್ಸ್‌ಟೈಲ್‌ ಪ್ಯಾಕೇಜಿಂಗ್‌
ಸ್ಟ್ಯಾಪಲ್‌ ಫೈಬರ್ (ಪಿಎಸ್‌ಎಫ್‌) ಸಿಎಸ್‌ಡಿ, ನೀರು, ಬೀರು, ಜ್ಯೂಸ್‌, ಡಿಟರ್ಜೆಂಟ್‌ಗಳು ಬಾಟಲಿಗಳು
ಪಿಒವೈ, ಡಿಟಿವೈ, ಎಫ್‌ಡಿವೈ ಫಿಲಮೆಂಟ್‌ಗಳು ಎ-ಪಿಇಟಿ ಫಿಲ್ಮ್‌
ತಾಂತ್ರಿಕ ನೂಲು ಹಾಗೂ ಟೈರು ಹುರಿ ಥರ್ಮೋಫಾರ್ಮಿಂಗ್‌
ನೇಯಲಾಗದ ಹಾಗೂ ಸ್ಪನ್‌ಬಾಂಡ್‌ ಬಿಒ-ಪಿಇಟಿ ಬೈಆಕ್ಸಿಯಲ್‌ ಓರಿಯಂಟೆಡ್‌ ಫಿಲ್ಮ್‌
ಮಾನೋ-ಫಿಲಮೆಂಟ್‌ ಪಟ್ಟಿಗಳು

ಸಂಕೇತಾಕ್ಷರಗಳು: ಪಿಎಸ್‌ಎಫ್‌ = ಪಾಲಿಯೆಸ್ಟರ್‌ ಸ್ಟ್ಯಾಪಲ್‌ ಫೈಬರ್; ಪಿಒವೈ= ಪಾರ್ಷಿಯಲಿ ಓರಿಯಂಟೆಡ್‌ ಯಾರ್ನ್; ಡಿಟಿವೈ= ಡ್ರಾ ಟೆಕ್ಚರರ್ಡ್‌ ಯಾರ್ನ್‌; ಎಫ್‌ಡಿವೈ= ಫುಲ್ಲೀ ಡ್ರಾನ್‌ ಯಾರ್ನ್‌; ಸಿಎಸ್‌ಡಿ= ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್; ಎ-ಪಿಇಟಿ= ಅಮಾರ್ಫಸ್ ಪಾಲಿಯೆಸ್ಟರ್‌ ಫಿಲ್ಮ್; ಬಿಒ-ಪಿಇಟಿ= ಬೈಆಕ್ಸಿಯಲ್ ಓರಿಯಂಟೆಡ್‌ ಪಾಲಿಯೆಸ್ಟರ್‌ ಫಿಲ್ಮ್;

ಪಾಲಿಯೆಸ್ಟರ್‌ ಮಾರುಕಟ್ಟೆಯ ಅತ್ಯಂತ ಚಿಕ್ಕ ಭಾಗ (<< 1 ಮಿಲಿಯನ್‌ ಟನ್‌/ವಾರ್ಷಿಕ) ಎಂಜಿನಿಯರಿಂಗ್ ಪ್ಲಾಸ್ಟಿಕ್‌ ಹಾಗೂ ಮಾಸ್ಟರ್ ಬ್ಯಾಚ್‌ ತಯಾರಿಕೆಗೆ ವಿನಿಯೋಗವಾಗುತ್ತದೆ.

ಹೆಚ್ಚಿನ ಸಾಮರ್ಥ್ಯದ ದ್ರವೀರೂಪ ಪಾಲಿಯೆಸ್ಟರ್‌ ಅನ್ನು ಉತ್ಪಾದಿಸುವ ನಿಟ್ಟಿನಲ್ಲಿ ಅಗಾಧ ಉತ್ಪಾದನಾ ಪ್ರಕ್ರಿಯೆ ಹಂತಗಳಾದ ಸ್ಟಾಪಲ್‌ ಫೈಬರ್ (ನೇಯ್ದ ನೂಲುದಾರವೊಂದಕ್ಕೆ 50-300 t/d) ಅಥವಾ ಪಿಒವೈ/ಎಫ್‌ಡಿವೈ (ಸುಮಾರು 10 ನೇಯ್ಗೆಯ ಯಂತ್ರಗಳಲ್ಲಿ 600 t/d ವರೆಗೆ) ಹೆಚ್ಚೆಚ್ಚು ಸಮತಲ, ಏಕೀಕೃತ, ನೇರ ಪ್ರಕ್ರಿಯೆಗಳಾಗಬೇಕಾಗುತ್ತವೆ. ಎಂದರೆ ಇದರರ್ಥ, ದ್ರವೀಕರಣಗೊಂಡ ಪಾಲಿಮರ್ ಅನ್ನು ಪೆಲೆಟೈಸ್‌ ಮಾಡದೇ ನೇರವಾಗಿ ಟೆಕ್ಸ್‌ಟೈಲ್ ಫೈಬರ್ ಅಥವಾ ಫಿಲಾಮೆಂಟ್‌ಗಳಾಗಿ ರೂಪಾಂತರಿಸಬಹುದು. ತೈಲ ಸರಣಿ -> ಬೆಂಜಿನ್‌ -> PX -> PTA -> PET melt -> ಫೈಬರ್ / ಫಿಲಮೆಂಟ್ ಅಥವಾ ಬಾಟಲಿ ಶ್ರೇಣಿಯ ರಾಳ ಪ್ರಕ್ರಿಯೆಯ ಪ್ರಾರಂಭದಲ್ಲಿ ದೊರೆಯುವ ಕಚ್ಚಾ ತೈಲ ಅಥವಾ ಬಟ್ಟಿ ಇಳಿಸುವಾಗ ದೊರೆಯುವ ಉತ್ಪನ್ನಗಳ ಪ್ರಾರಂಭಿಕ ಹಂತದಲ್ಲಿ ತಯಾರಾಗುವ ಪಾಲಿಯೆಸ್ಟರ್‌ ಸಂಪೂರ್ಣವಾಗಿ ಸಮತಟ್ಟಾದ ಏಕೀಕೃತಗೊಂಡ ಕುರಿತು ನಾವೀಗ ಮಾತನಾಡುತ್ತಿದ್ದೇವೆ. ಈ ನಡುವೆ ಏಕ ಉತ್ಪಾದನಾ ಘಟಕದಲ್ಲಿ ಜರುಗುವ ಕಡಿಮೆ ಅಡೆತಡೆಗಳನ್ನು ಹೊಂದಿದ ಪ್ರಕ್ರಿಯೆಗಳಲ್ಲಿ ಈ ಬಗೆಯ ಏಕೀಕೃತ ಪ್ರಕ್ರಿಯೆ ತನ್ನಷ್ಟಕ್ಕೆ ತಾನೇ ಸ್ಥಾಪನೆಯಾಗುತ್ತದೆ. ತಮ್ಮ INETGREX ಪ್ರಕ್ರಿಯೆಯ ಹೆಸರಿನಲ್ಲಿ ಈಸ್ಟ್‌ ಮ್ಯಾನ್‌ ಕೆಮಿಕಲ್ಸ್‌ PX ರಿಂದ PET ರಾಳದೊಂದಿಗೆ ಸರಣಿಯನ್ನು ಮುಕ್ತಾಯ ಮಾಡುವ ಮೂಲಕ ಹೊಸದೊಂದು ಸಾಧ್ಯತೆಗೆ ನಾಂದಿ ಹಾಡಿತು. ಈ ಬಗೆಯ ಸಮತಲದ, ಏಕೀಕೃತ ಉತ್ಪಾದನೆಗಳ ಸಾಮರ್ಥ್ಯವೇನೆಂದರೆ, >1000 t/d ಹಾಗೂ 2500 t/d ಅನ್ನು ಸುಲಭವಾಗಿ ತಲುಪಬಹುದು.

ಈ ಮೇಲೆ ಪ್ರಸ್ತಾಪಿಸಿರುವ ದೊಡ್ಡ ಪ್ರಮಾಣದ ಸ್ಟ್ಯಾಪಲ್ ಫೈಬರ್ ಅಥವಾ ನೂಲುಗಳಿಗೂ ಹೊರತಾಗಿ, ಸುಮಾರು ಹತ್ತು ಸಾವಿರ ಚಿಕ್ಕ-ಪುಟ್ಟ ಪ್ರಕ್ರಿಯಾ ಘಟಕಗಳೂ ಇದ್ದು ಪ್ರಪಂಚದಾದ್ಯಂತ ಸುಮಾರು 10,000 ಘಟಕಗಳು ಪಾಲಿಯೆಸ್ಟರ್‌ ಅನ್ನು ತಯಾರಿಸುವ ಹಾಗೂ ಮರುಬಳಕೆ ಮಾಡುವ ಘಟಕಗಳಿವೆ ಎಂಬುದನ್ನು ಇದರಿಂದಲೇ ಅರ್ಥ ಮಾಡಿಕೊಳ್ಳಬಹುದು. ಹಾಗೆಂದು ಇದೇ ಅಂತಿಮ ಪಟ್ಟಿಯಲ್ಲ. ಎಂಜಿನಿಯರಿಂಗ್ ಹಾಗೂ ಪ್ರಾಸೆಸಿಂಗ್‌ ಯಂತ್ರಗಳನ್ನು ಒಳಗೊಂಡ ಪೂರೈಕೆ ಕೈಗಾರಿಕೆಯಿಂದು ಹಿಡಿದು ಕೆಲವು ವಿಶೇಷ ವಸ್ತುಗಳಾದ ಸ್ಟೆಬಿಲೈಸರ್ ಹಾಗೂ ಬಣ್ಣಗಳ ತನಕದ ನಾನಾ ಬಗೆಯ ಕಂಪನಿಗಳನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಅಗಾಧ ಪ್ರಮಾಣದ ಕೈಗಾರಿಕೆಯಾಗಿ ಬೆಳೆಯುತ್ತಿರುವ ಇದು ಜಾಗತಿಕ ಮಟ್ಟದಲ್ಲಿ ವರ್ಷಕ್ಕೆ ಶೇ. 4-8 ರಷ್ಟು ಬೆಳವಣಿಗೆ ಹೊಂದುತ್ತಿದೆ. ಪಾಲಿಯೆಸ್ಟರ್‌ ಉದ್ಯಮದ ಕುರಿತ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು [7] ರಲ್ಲಿ ಕಾಣಬಹುದು. ಅಲ್ಲಿ “ಪಾಲಿಯೆಸ್ಟರ್‌ ಉದ್ಯಮದಲ್ಲಿ ಯಾರು ಏನನ್ನು ಉತ್ಪಾದಿಸುತ್ತಿದ್ದಾರೆ” ಎಂಬುದರ ಕುರಿತ ಮಾಹಿತಿಯು ಕಾಲ ಕಾಲಕ್ಕೆ ಅಭಿವೃದ್ಧಿ ಅಥವಾ ಸುಧಾರಣೆ ಹೊಂದುತ್ತಿದೆ.

ಸಂಯೋಜನೆ

[ಬದಲಾಯಿಸಿ]

ಪಾಲಿಯೆಸ್ಟರ್‌‌ನ ಸಂಯೋಜನೆಯನ್ನು ಸಾಮಾನ್ಯವಾಗಿ ಪಾಲಿಕಂಡನ್ಸೇಷನ್ ಪರಿಣಾಮದಿಂದ ಸಾಧಿಸಲಾಗುತ್ತದೆ. “ಪಾಲಿಮರ್ ರಾಸಾಯನಿಕ ಶಾಸ್ತ್ರದಲ್ಲಿ ಕಂಡನ್ಸೇಷನ್‌ ಪರಿಣಾಮಗಳು” ಅನ್ನು ನೋಡಿ.

ಡೈಆಮ್ಲ ಜೊತೆಗಿನ ಡಿಯೋಲ್‌ನ ಪರಿಣಾಮದ ಕುರಿತ ಸಾಮಾನ್ಯವಾದ ಸಮೀಕರಣ ಇಂತಿದೆ: (n+1) R(OH)2 + n R´(COOH)2 ---> HO[ROOCR´COO]nROH + 2n H2O

ಅಝೆಯೊಟ್ರೊಪ್ ಈಸ್ಟರಿಫಿಕೇಷನ್‌

[ಬದಲಾಯಿಸಿ]

ಈ ಶಾಸ್ತ್ರೀಯ ವಿಧಾನದಲ್ಲಿ ಒಂದು ಆಲ್ಕೋಹಾಲ್ ಹಾಗೂ ಒಂದು ಕಾರ್ಬೊಕ್ಸಿಲಿಕ್‌ ಆಮ್ಲ ಗಳ ನಡುವಿನ ಪರಿಣಾಮದಿಂದ ಒಂದು ಕಾರ್ಬೊಕ್ಸಿಲಿಕ್‌ ಈಸ್ಟರ್ ರೂಪುಗೊಳ್ಳುತ್ತದೆ. ಒಂದು ಪಾಲಿಮರ್ ಅನ್ನು ಸಂಯೋಜಿಸಲು ಪರಿಣಾಮದಿಂದ ಸೃಷ್ಟಿಯಾದ ನೀರನ್ನು ಅಝೆಯೊಟ್ರೋಪ್ ಬಟ್ಟಿ ಇಳಿಸುವಿಕೆಯನ್ನು ಬಳಸಿಕೊಂಡು ಕಾಲ ಕಾಲಕ್ಕೆ ಖಾಲಿ ಮಾಡುತ್ತಿರಬೇಕಾಗುತ್ತದೆ.

ಆಲ್ಕೋಹಾಲಿಕ್ ಟ್ರಾನ್ಸ್‌ಈಸ್ಟರಿಫಿಕೇಷನ್‌

[ಬದಲಾಯಿಸಿ]
O \\ C - OCH3 + OH[ಓಲಿಗೋಮರ್‌2] / [ಓಲಿಗೋಮರ್‌1] O \\ C - O[ಓಲಿಗೋಮರ್‌2] + CH3OH / [ಓಲಿಗೋಮರ್‌1]
(ಈಸ್ಟರ್-ಟರ್ಮಿನೇಟೆಡ್‌ ಓಲಿಗೋಮರ್‌ + ಆಲ್ಕೋಹಾಲ್-ಟರ್ಮಿನೇಟೆಡ್‌ ಓಲಿಗೋಮರ್‌)   (ಬೃಹತ್ ಓಲಿಗೋಮರ್‌ + ಮಿಥೇನಾಲ್)

ಅಸಿಲೇಷನ್‌ (HCl ವಿಧಾನ)

[ಬದಲಾಯಿಸಿ]

ಆಮ್ಲ, ಆಮ್ಲ ಕ್ಲೋರೈಡ್‌ ರೂಪದಲ್ಲಿ ಪ್ರಾರಂಭವಾಗುತ್ತದೆ.ಹಾಗೆಯೇ, ಪಾಲಿಕಂಡೆನ್ಸೇಷನ್ ಪ್ರಕ್ರಿಯೆ ನೀರಿನ ಬದಲಿಗೆ ಹೈಡ್ರೋಕ್ಲೋರಿಕ್ ಆಮ್ಲ (HC1) ಹೊರ ಸೂಸುವಿಕೆಯೊಂದಿಗೆ ಮುಂದುವರಿಯುತ್ತದೆ. ದ್ರಾವಣ ಅಥವಾ ಎನಾಮಲ್‌ನ ರೂಪದಲ್ಲೂ ಈ ವಿಧಾನವನ್ನು ಮುಂದುವರಿಸಬಹುದು.

ಸಿಲಿಲ್ ವಿಧಾನ
HC1 ವಿಧಾನದ ವಿಭಿನ್ನ ಮಾರ್ಗವಾಗಿರುವ ಇದರಲ್ಲಿ, ಕಾರ್ಬೋಕ್ಸಿಲಿಕ್ ಆಮ್ಲ ಕ್ಲೋರೈಡ್ ಆಲ್ಕೋಹಾಲ್‌ನ ಟ್ರೈಮಿಥೈಲ್ ಸಿಲಿಲ್ ಈಥರ್‌ಗೆ ರೂಪಾಂತರ ಹೊಂದುತ್ತದೆ ಮಾತ್ರವಲ್ಲ ಅದರ ಪ್ರತಿಫಲವಾಗಿ ಟ್ರೈಮಿಥೈಲ್ ಸಿಲಿಲ್ ಕ್ಲೋರೈಡ್ ದೊರೆಯುತ್ತದೆ.

ಅಸಿಟೇಟ್‌ ವಿಧಾನ (ಈಸ್ಟರಿಫಿಕೇಷನ್‌)

[ಬದಲಾಯಿಸಿ]
ಸಿಲಿಲ್‌ ಅಸಿಟೇಟ್‌ ವಿಧಾನ

ರಿಂಗ್- ಓಪನಿಂಗ್ ಪಾಲಿಮರೈಸೇಷನ್‌

[ಬದಲಾಯಿಸಿ]

ಋಣ-ಆಯಾನಿಕವಾಗಿ(anionically),ಧನ ಆಯಾನಿಕವಾಗಿ(cationically), ಹಾಗೂ ಲೋಹಜೈವಿಕವಾಗಿ(metallorganically) ಕ್ರಿಯಾವರ್ಧನೆಯ ಮೂಲಕ ಸಾಧಾರಣ ಸ್ಥಿತಿಯಲ್ಲಿ ಲ್ಯಾಕ್ಟೋನ್‌ಗಳಿಂದ ಅಲಿಫಾಟಿಕ್ ಪಾಲಿಯೆಸ್ಟರ್‌ಗಳನ್ನು ಸಂಯೋಜಿಸಬಹುದು.

ಅಪರ್ಯಾಪ್ತ ಪಾಲಿಯೆಸ್ಟರ್‌ಗಳು ಹಾಗೂ ಸ್ಟೈರೇನ್‌ ಜೊತೆ ಸಂಯೋಜನೆ ಹೊಂದಿದಾಗ ಉತ್ಪತ್ತಿಯಾಗು ಥರ್ಮೋಸೆಟ್ಟಿಂಗ್‌ ರಾಳಗಳು ಸಾಮಾನ್ಯವಾಗಿ ಉಪಪಾಲಿಮರ್‌ಗಳೇ (ಕೊಪಾಲಿಮರ್) ಆಗಿರುತ್ತವೆ. ಪಾಲಿಯೆಸ್ಟರ್‌‌ನ ಪರ್ಯಾಪ್ತತೆ ಮಾಲೆಯಿಕ್ ಆಮ್ಲ ಅಥವಾ ಫ್ಯುಮರಿಕ್ ಆಮ್ಲಗಳ ಬಳಕೆಯ ಮೇಲೆ ಅವಲಂಬಿಸಿದೆ. ವಿನೈಲ್ ಈಸ್ಟರ್‌ಗಳಲ್ಲಿ ಪರ್ಯಾಪ್ತತೆ (Saturation) ಪಾಲಿಯೆಸ್ಟರ್‌‌ನ ಆಲ್ಕೋಹಾಲ್ ಗುಂಪಿನಲ್ಲಿ ಕಂಡು ಬರುತ್ತದೆ. ಅನ್‌ಸ್ಯಾಚುರೇಟೆಡ್ ಪಾಲಿಯೆಸ್ಟರ್‌‌ನ ದ್ವಿ-ಬಂಧ ಸ್ಟೈರೇನ್‌ ಜೊತೆ ಮೇಳೈಸಿ 3-D ಅಡ್ಡ-ಕೊಂಡಿಯುಳ್ಳು ರಚನೆಗೆ ಕಾರಣವಾಗುತ್ತದೆ. ಇದೇ ರಚನೆ ಕೆಲವೊಮ್ಮೆ ಥರ್ಮೋಸೆಟ್‌ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಎಕ್ಸೋ-ಥರ್ಮಿಕ್‌ ಪರಿಣಾಮದ ದೆಸೆಯಿಂದಾಗಿ ಪ್ರಾರಂಭಗೊಳ್ಳುವ ಈ ಅಡ್ಡ-ಕೊಂಡಿ, ಮಿಥೈಲ್‌ ಕೆಟೊನ್‌ ಪೆರಾಕ್ಸೈಡ್ ಅಥವಾ ಬೆಂಜೈಲ್‌ ಪೆರಾಕ್ಸೈಡ್‌ ರೀತಿಯ ಜೈವಿಕ ಪೆರಾಕ್ಸೈಡ್‌ ಅನ್ನು ಒಳಗೊಂಡಿರುತ್ತದೆ.

ಆರೋಗ್ಯದ ಮೇಲಾಗುವ ಪರಿಣಾಮ

[ಬದಲಾಯಿಸಿ]

1993ರಲ್ಲಿ ನಡೆದ ಅಧ್ಯಯನವೊಂದರಲ್ಲಿ ಪಾಲಿಯೆಸ್ಟರ್‌‌ನಿಂದ ತಯಾರಿಸಿದ ಒಳವಸ್ತ್ರಗಳನ್ನು ಅಳವಡಿಸಿದ ಗಂಡು ನಾಯಿಗಳ ವೀರ್ಯಾಣುಗಳ ಪ್ರಮಾಣ ಗಮನಾರ್ಹವಾಗಿ ಕುಂಠಿತಗೊಂಡಿದ್ದು ಬೆಳಕಿಗೆ ಬಂತು.[]

ಟಿಪ್ಪಣಿಗಳು

[ಬದಲಾಯಿಸಿ]
  1. Rosato, Dominick V.; Rosato, Donald V.; Rosato, Matthew V. (2004), Plastic product material and process selection handbook, Elsevier, p. 85, ISBN 9781856174312.
  2. "PTA" (PDF). Archived from the original (PDF) on 2011-10-21. Retrieved 2010-07-12.
  3. "DMT" (PDF). Archived from the original (PDF) on 2012-09-18. Retrieved 2010-07-12.
  4. MEG
  5. http://dx.doi.org/10.1007/BF00296839

ಉಲ್ಲೇಖಗಳು

[ಬದಲಾಯಿಸಿ]
  • ಟೆಕ್ಸ್‌ಟೈಲ್ಸ್ , ಲೇಖಕರು ಸಾರಾ ಕಡೋಲ್ಫ್ ಮತ್ತು ಅನ್ನಾ ಲ್ಯಾಂಗ್‌ಫರ್ಡ್. 8ನೇ ಆವೃತ್ತಿ, 1998.

ಬಾಹ್ಯ ಕೊಂಡಿಗಳು

[ಬದಲಾಯಿಸಿ]