ವಿಷಯಕ್ಕೆ ಹೋಗು

ಪಾರ್ವತಿ ಜಿ.ಐತಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ವತಿ ಗಂಗಾಧರ ಐತಾಳ ಇವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎನ್ನುವ ಹಳ್ಳಿಯಲ್ಲಿ ೧೯೫೭ ಜುಲೈ ೨೩ರಂದು ಜನಿಸಿದರು. ೧೯೮೧ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೨೦೧೨ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.

ವೃತ್ತಿ

ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ ೧೯೮೮ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ

ಶ್ರೀಮತಿ ಪಾರ್ವತಿ ಗಂಗಾಧರ ಐತಾಳರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉಧ್ಯೋಗದೊಂದಿಗೆ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳ ಭಾಷೆಯನ್ನು ಕಲಿತು, ಕನ್ನಡದೊಂದಿಗೆ ಹಿಂದಿ, ಇಂಗ್ಲಿಷ್, ಮಲಯಾಳ, ತುಳು ಭಾಷೆಗಳನ್ನು ಕಲಿತು ಪಂಚಭಾಷಾಪ್ರವೀಣೆಯಾಗಿದ್ದಾರೆ.

ಸ್ವತಂತ್ರ ಸಾಹಿತ್ಯ

[ಸೂಕ್ತ ಉಲ್ಲೇಖನ ಬೇಕು]

  • ಹೊನ್ನ ಬೆಳಕೆ ಬಾ (ಕವನ ಸಂಕಲನ)
  • ಅಚಲಾ(ಕಥಾ ಸಂಕಲನ)
  • ನಾಟಕ ನೋಡು ಬಾ ಪ್ರೇಕ್ಷಕ ( ನಾಟಕ ವಿಮರ್ಶೆ)
  • ಎಂ.ಟಿ.ವಾಸುದೇವನ್ ನಾಯರ್-ಬದುಕು ಬರೆಹ
  • ತಂತ್ರಗಾರ್ತಿ(ಮಕ್ಕಳ ನಾಟಕ)
  • ಒಡಲ ಬೆಂಕಿ(ಕಾದಂಬರಿ)
  • ಸಮಕ್ಷಮ(ಲೇಖನ ಸಂಕಲನ)
  • ಸಮಕಾಲಿಕ(ಲೇಖನ ಸಂಕಲನ)
  • ಕಡಲತೀರದ ಮರಳು(ಲೇಖನ ಸಂಕಲನ)
  • ಕೃತಿ ನೋಟ(ಪುಸ್ತಕ ವಿಮರ್ಶೆಗಳು)
  • ಶಿವರಾಮ ಕಾರಂತರುಡೆ ಎಳುತ್ತುಂ ಜೀವಿತವುಂ( ಮಲೆಯಾಳದಲ್ಲಿ)
  • ನವಕರ್ನಾಟಕ ಪ್ರಕಾಶನದ 'ವಿಶ್ವಮಾನ್ಯರು'ಮಾಲಿಕೆಯಲ್ಲಿ ಒಂಬತ್ತು ಕೃತಿಗಳು(ಕಯ್ಯಾರ ಕಿಞ್ಞಣ್ಣ ರೈ, ವಿಲಿಯಂ ಷೇಕ್ಸ್ ಪಿಯರ್, ನಾರಾಯಣ ಗುರು, ಎ.ಕೆ.ಗೋಪಾಲನ್, ಅಚ್ಯುತ ಮೆನನ್, ಇ.ಎಂ.ಎಸ್.ನಂಬೂದಿರಿಪ್ಪಾಡ್, ಕಾರ್ನಾಡ್ ಸದಾಶಿವ ರಾವ್, ಡಾ.ರಾಜೇಂದ್ರಪ್ರಸಾದ್, ಡಾ.ರಾಧಾಕೃಷ್ಣನ್)
  • ಸುಟ್ಟ ಗಾಯದ ಕಲೆಗಳು(ಕಥಾಸಂಕಲನ)
  • ಕಾರಂತ್ ಅಂಡ್ ತಕಳಿ(ಇಂಗ್ಲಿಷ್ ನಲ್ಲಿ)
  • ಸ್ಟಡೀಸ್ ಇನ್ ಕಂಪೇರಿಟಿವ್ ಲಿಟರೇಚರ್, ಟ್ರಾನ್ಸ್ ಲೇಶನ್ ಅಂಡ್ ಬಿಯೋಂಡ್(ಇಂಗ್ಲಿಷ್ ನಲ್ಲಿ)
  • ಇಂಟರ್ಯಾಕ್ಷನಲ್(ಇಂಗ್ಲಿಷ್ ಪ್ರಬಂಧಗಳು)
  • ದಿನ ಸಾಂಗ್ ಬರ್ಡ್ ಆಫ್ ಉಳ್ಳೂರ್(ಮೋನೋಗ್ರಾಫ್)
  • K
  • ಕ್ಕಿ[]

ಸ್ತ್ರೀ ಪ್ರಧಾನ ಕೃತಿ

'ಜೀವಿಕ್ಯಾನ ಮರನ್ನು ಪೋಯ ಸ್ತ್ರೀ' ಕಾದಂಬರಿ ಕನ್ನಡಕ್ಕೆ 'ಬದುಕಲು ಮರೆತು ಸ್ತ್ರೀ 'ಎಂದು ಅನುವಾದಿಸಿದ್ದಾರೆ.

ಮಲೆಯಾಳದ ಹತ್ತು ಕಥೆಗಾರ್ತಿಯರು'ಎಂಬ ಕೃತಿಯಲ್ಲಿ ಮಲೆಯಾಳದ ಹತ್ತು ಮಂದಿ ಪ್ರಸಿದ್ಧ ಕಥೆಗಾರ್ತಿಯರ ಒಂದೊಂದು ಕಥೆಗಳು ಮತ್ತು ಸಂದರ್ಶನಗಳಿವೆ.

ಮಲೆಯಾಳದ ಪ್ರಸಿದ್ಧ ಪೆಣ್ ಕಥೆಗಳು ಎಂಬ ಕೃತಿ

ಮಹಿಳಾ ಚಿಂತನೆಯ ವಿಭಿನ್ನ ನೆಲೆಗಳು ಎಂಬ ಲೇಖನ ಸಂಕಲನ ಪ್ರಕಟಿಸಿದ್ದಾರೆ.

ಪ್ರಕಟಣೆಗಳು

[ಸೂಕ್ತ ಉಲ್ಲೇಖನ ಬೇಕು]

ಕನಸು ಮತ್ತು ವಾಸ್ತವ

ಅನುವಾದಿತ ಸಾಹಿತ್ಯ

.ಗುರುದಕ್ಷಿಣೆ(ಮಕ್ಕಳ ನಾಟಕ ಮೂಲ : ಜಿ.ಶಂಕರ ಪಿಳ್ಳೆ

ದುರ್ಬೀಜ

  • ಮಂಜು (ಮಲೆಯಾಳಂ ಮೂಲ ಕಾದಂಬರಿ : ಎಂ.ಟಿ.ವಾಸುದೇವನ್ ನಾಯರ್)
  • ಯುಗಾಂತ ಮತ್ತು ಇತರ ಕತೆಗಳು (ಸಣ್ಣ ಕತೆಗಳು ,ಮಲೆಯಾಳಂ ಮೂಲ  : ಎಂ.ಟಿ.ವಾಸುದೇವನ್ ನಾಯರ್)
  • ಬದುಕಲು ಮರೆತ ಸ್ತ್ರೀ (ಮಲೆಯಾಳಂ ಮೂಲ  : ವೆಟ್ಟೂರು ರಾಮನ್ ನಾಯರ್)
  • ಮಲಯಾಳದ ೧೦ ಕಥೆಗಾರ್ತಿಯರು (ಮಲೆಯಾಳಂ ಮೂಲ  : ಡಾ|ಶ್ರೀದೇವಿ ಕೆ.ನಾಯರ್)
  • ಅಶ್ಕರ ಕಥೆಗಳು (ಹಿಂದಿ ಮೂಲ: ಉಪೇಂದ್ರನಾಥ ಅಶ್ಕ
  • ಬರುವೆ ನಾ ಮತ್ತೊಮ್ಮೆ ಎಂದಾದರೂ... (ಹಿಂದಿ ಮೂಲ ಕಾದಂಬರಿ:ಡಾ| ಧರ್ಮೇಂದ್ರ ಗುಪ್ತ)
  • ಪ್ರಿನ್ಸಿಪಾಲ್ ಪರಶುರಾಮ (ಹಿಂದಿ ಮೂಲ ನಾಟಕ: ಜಿ.ಜೆ.ಹರಿಜಿತ)
  • ಇದು ಯೂನಿವರ್ಸಿಟಿ (ಇಂಗ್ಲಿಶ್ ಮೂಲ ನಾಟಕ:ಜಿ.ಜೆ.ಹರಿಜಿತ)
  • ಬಿನ್ನೆ (ತುಳು)(ಇಂಗ್ಲಿಶ್ ಮೂಲ ನಾಟಕ:ಜಿ.ಜೆ.ಹರಿಜಿತ)
  • ಸುಳ್ಳು ಮುಳ್ಳು (..ಹಿಂದಿ ಮೂಲ ಬ್ರಿಜ್ ಭೂಷಣ್ ಗುಪ್ತ)
  • ಮಲೆಯಾಳದ ಹತ್ತು ಕಥೆಗಾರ್ತಿಯರು
  • ಆಲಾಹಳಹೆಣ್ಣುಮಕ್ಕಳು(ಮೂಲ ಸಾರಾ ಜೋಸೆಫ್)
  • ನೀರ್ ಮಾದಳ ಹೂಬಿಟ್ಟ ಕಾಲ(ಮೂಲ ಮಲೆಯಾಳ ಕಮಲಾದಾಸ್)
  • ಕಾರ್ಮುಗಿಲು ಕೋಲ್ಮಿಂಚು ( ಕಿರು ಕಾದಂಬರಿಗಳು. ಮಲೆಯಾಳ ಮೂಲ ಮಲಯಾಟ್ಟೂರು ಮತ್ತು ಝಕಾರಿಯಾ)
  • ರೈಲು ಭೂತ ಮತ್ತು ಇತರ ನಾಟಕಗಳು (ಇಂಗ್ಲಿಷ್ ಮೂಲ : ಆರ್ನೋಲ್ಡ್ ರಿಡ್ಲೆ)
  • ಗುಡ್ ಅರ್ತ್( ಇಂಗ್ಲಿಷ್ ಮೂಲ : ನೋಬೆಲ್ ವಿಜೇತೆ ಪರ್ಲ್ ಎಸ್.ಬಕ್)
  • ಕಾಲವು ಅಳಿಸಿದ ಕಾಲ ಗುರುತುಗಳು (ಮಲೆಯಾಳ ಮೂಲ ಸಿ.ಹೆಚ್ ಮಾರಿಯತ್ತ್)
  • ಭೂಮಿಯಷ್ಟು ಬದುಕು(ಮಲೆಯಾಳ ಮೂಲ ಅರ್ಷಾದ್ ಬತೇರಿ)
  • ಬ್ರಹ್ಮಶ್ರೀ ನಾರಾಯಣ ಗುರು ( ಮಲೆಯಾಳ ಮೂಲ ಟಿ.ಭಾಸ್ಕರನ್)
  • ದೇವರ ಕಣ್ಣು (ಮಲೆಯಾಳ ಮೂಲ: ಎನ್.ಪಿ.ಮುಹಮ್ಮದ್)
  • ಮಲೆಯಾಳದ ಮಿನಿ ಕಥೆಗಳು (ಮೂಲ :ಪಾರಕ್ಕಡವು)
  • ಮಲೆಯಾಳದ ಪ್ರಸಿದ್ಧ ಪೆಣ್ ಕಥೆಗಳು ( ವಿವಿಧ ಕಥೆಗಾರ್ತಿಯರು)
  • ತಾಯ್ನಾಡಿನ ಕನಸು(ಮಲೆಯಾಳ ಮೂಲ : ಕೆ.ಪಿ.ಕೃಷ್ಣನ್ ಕುಟ್ಟಿ)
  • ನೆರಳು ಮರಗಳಿಲ್ಲದ ದಾರಿ(ಮಲೆಯಾಳ ಮೂಲ: ಕೆ.ಪಿ.ಸುಧೀರ)
  • ಮಾಧವಿ ಕಥನ ಕಾವ್ಯ (ಮಲೆಯಾಳ ಮೂಲ: ಓ.ಎನ್.ವಿ.ಕುರುಪ್)
  • ಇನ್ನೊಂದು ತುಂಬುಗಣ್ಣ ನಗು(ಮಲೆಯಾಳ ಕಾದಂಬರಿ ಮೂಲ: ಸಿ.ರಾಧಾಕೃಷ್ಣನ್)
  • ಗೋಪಿಕೋನ್ಮಾದಂ(ಕನ್ನಡದಿಂದ ಮಲೆಯಾಳಕ್ಕೆ ಅನುವಾದ)
  • ನಿಸಾರ್ ಕವಿತಗಳ್(ಕನ್ನಡದಿಂದ ಮಲೆಯಾಳಕ್ಕೆ ಅನುವಾದ)
  • ಕೆ.ವಿ.ತಿರುಮಲೇಶಿಂಡೆ ತೆರಞ್ಞೆಡುತ್ತ ಕವಿತಗಳ್(ಕನ್ನಡದಿಂದ ಮಲೆಯಾಳಕ್ಕೆ ಅನುವಾದ)
  • ಬಯಲಾಟಾಸ್ ಆಫ್ ನಾರ್ತ್ ಕರ್ನಾಟಕ (ಕನ್ನಡದಿಂದ ಇಂಗ್ಲಿಷಿಗೆ ಅನುವಾದ)

ಪ್ರಶಸ್ತಿಗಳು

[ಸೂಕ್ತ ಉಲ್ಲೇಖನ ಬೇಕು]

  1. ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ[]

ಉಲ್ಲೇಖ

  1. ಚಂದ್ರಗಿರಿ, ನಾಡೋಜ ಡಾ. ಸಾರಾ ಅಬೂಬಕ್ಕರ್, ಅಭಿನಂದನ ಗ್ರಂಥ, ಸಂಪಾದಕರು ಡಾ. ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಮೊದಲ ಮುದ್ರಣ ೨೦೦೯.
  2. "ಆರ್ಕೈವ್ ನಕಲು". Archived from the original on 2016-03-05. Retrieved 2016-03-10.