ಪಾದಚಾರಿ
ಪಾದಚಾರಿ ಎಂದರೆ ಪಾದದ ಸಹಾಯದಿಂದ ಪ್ರಯಾಣಿಸುತ್ತಿರುವ ವ್ಯಕ್ತಿ, ಉದಾಹರಣೆಗೆ ನಡೆಯುತ್ತಿರುವುದು ಅಥವಾ ಓಡುತ್ತಿರುವುದು.[೧] ಆಧುನಿಕ ಕಾಲದಲ್ಲಿ,, ಈ ಪದವು ಸಾಮಾನ್ಯವಾಗಿ ರಸ್ತೆ ಅಥವಾ ಕಲ್ಲುಹಾಸಿನ ಮೇಲೆ ನಡೆಯಿತ್ತಿರುವವನನ್ನು ಸೂಚಿಸುತ್ತದೆ, ಆದರೆ ಐತಿಹಾಸಿಕವಾಗಿ ಇದು ಸನ್ನಿವೇಶವಾಗಿರಲಿಲ್ಲ.
ಹಲವುವೇಳೆ ರಸ್ತೆಗಳು ಪಾದಚಾರಿ ಸಂಚಾರಕ್ಕಾಗಿ ಗೊತ್ತುಪಡಿಸಿದ ಕಾಲುದಾರಿಯನ್ನು ಹೊಂದಿರುತ್ತವೆ. ರಸ್ತೆಯೊಂದಿಗೆ ಸಂಬಂಧಿಸಿರದ ಕಾಲುದಾರಿಗಳೂ ಇರುತ್ತವೆ; ಇವುಗಳಲ್ಲಿ ಮುಖ್ಯವಾಗಿ ವಿಹಾರಿಗಳು, ಪಾದಯಾತ್ರಿಗಳು ಅಥವಾ ಗಿರಿಸಂಚಾರಿಗಳಿಂದ ಬಳಸಲ್ಪಡುವ ನಗರ ಒಳದಾರಿಗಳು ಮತ್ತು ಗ್ರಾಮೀಣ ಮಾರ್ಗಗಳು ಕೂಡ ಸೇರಿವೆ. ಪರ್ವತಮಯ ಅಥವಾ ಅರಣ್ಯವಿರುವ ಪ್ರದೇಶಗಳಲ್ಲಿನ ಕಾಲುದಾರಿಗಳನ್ನು ಟ್ರೇಲ್‍ಗಳು ಎಂದೂ ಕರೆಯಬಹುದು. ಕೆಲವು ಕಾಲುದಾರಿಗಳನ್ನು ಪಾದಚಾರಿಗಳು ಕುದುರೆಗಳು ಮತ್ತು ಸೈಕಲ್ಲುಗಳೊಂದಿಗೆ ಹಂಚಿಕೊಳ್ಳುತ್ತಾರೆ: ಈ ದಾರಿಗಳನ್ನು ಬ್ರಿಡಲ್‍ವೇ ಎಂದು ಕರೆಯಬಹುದು. ನಡೆಯುವವರು ಬಳಸುವ ಇತರ ಕಿರುದಾರಿಗಳಿಗೆ ವಾಹನಗಳೂ ಪ್ರವೇಶಿಸಬಹುದು. ಯಾವುದೇ ಕಾಲುದಾರಿಯಿಲ್ಲದ ಅನೇಕ ರಸ್ತೆಗಳು ಕೂಡ ಇವೆ.
ಉಲ್ಲೇಖಗಳು
[ಬದಲಾಯಿಸಿ]