ವಿಷಯಕ್ಕೆ ಹೋಗು

ಆಗ್ರಾರ್ ಚರ್ಚ್

ನಿರ್ದೇಶಾಂಕಗಳು: 12°54′52.3″N 75°03′07.2″E / 12.914528°N 75.052000°E / 12.914528; 75.052000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪವಿತ್ರ ಸಂರಕ್ಷಕ ಚರ್ಚು ಆಗ್ರಾರ್ ಇಂದ ಪುನರ್ನಿರ್ದೇಶಿತ)

12°54′52.3″N 75°03′07.2″E / 12.914528°N 75.052000°E / 12.914528; 75.052000

Agrar Church
ಪವಿತ್ರ ಸಂರಕ್ಷಕ ಚರ್ಚು, ಅಗ್ರಾರ್
Agrar Church is located in Karnataka
Agrar Church
Agrar Church
12°54′52″N 75°03′07″E / 12.914523°N 75.052004°E / 12.914523; 75.052004
Denominationರೋಮನ್ ಕಥೋಲಿಕ (Latin rite)
History
Founded೧೭೦೨
Administration
Parishಪವಿತ್ರ ಸಂರಕ್ಷಕ ಚರ್ಚು
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು
Provinceರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು
Clergy
Archbishopಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ವಂ. ಬೆಂಜಮಿನ್ ಪಿಂಟೊ
ಪವಿತ್ರ ಸಂರಕ್ಷಕ ಚರ್ಚು  ಎಂಬುದು ಅಗ್ರಾರ್ ಚರ್ಚು ರೋಮನ್ ಕಥೋಲಿಕ ಚರ್ಚು ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದ್ದು, ಐತಿಹಾಸಿಕ ಪ್ರದೇಶವಾದ ಬಂಟ್ವಾಳ ದಲ್ಲಿದೆ. ಇದರ ಚರ್ಚ್ ನಿರ್ಮಾಣ ೧೭೦೨ರಲ್ಲಿ ಆಗಿದ್ದು,[] ಇದಕ್ಕೂ ಮೊದಲೇ ಇಲ್ಲಿ ಚರ್ಚ್ ನಿರ್ಮಾಣವಾಗಿತ್ತು ಎಂದು ನಂಬಿಕೆ ಇದೆ. ಇದು ದಕ್ಷಿಣ ಕನ್ನಡದಲ್ಲಿರುವ ಅತ್ಯಂತ ಹಳೇಯ ಚರ್ಚುಗಳಲ್ಲಿ ಒಂದಾಗಿದೆ. ಈ ಚರ್ಚು ಮಂಗಳೂರು ರೋಮನ್ ಕಥೋಲಿಕ ಧರ್ಮಪ್ರಾಂತ್ಯದ ಅಧಿನಕ್ಕೊಳಪಟ್ಟಿದೆ. ಪ್ರಸ್ತುತ ವಂ. ಬೆಂಜಮಿನ್ ಪಿಂಟೊ ಅವರು ಚರ್ಚ್ ಧರ್ಮಗುರುಗಳಾಗಿ ಸೇವೆ  ಸಲ್ಲಿಸುತ್ತಿದ್ದಾರೆ.

ಇತಿಹಾಸ

[ಬದಲಾಯಿಸಿ]

ಅಗ್ರಾರ್ ಎಂದರೆ ಬ್ರಾಹ್ಮಣರ, ಹಳ್ಳಿ ಎಂದರ್ಥ, ಮತ್ತು ಈ ಪದವು ಕನ್ನಡದ ಅಗ್ರಹಾರ ಎಂಬ ಮೂಲ ಪದದಿಂದ ರಚಿತವಾಗಿದೆ. ಒಂದು ಕಾಲಕ್ಕೆ ಇದು ಮಂಗಳುರು ಧರ್ಮಪ್ರಾಂತ್ಯದ, ಬಂಟ್ವಾಳದಿಂದ ಚಾರ್ಮಾಡಿಯ ಗಡಿ ಭಾಗದವರೆಗೂ ನೇತ್ರವಾತಿ ನದಿತೀರದಿಂದ ಗುರುಪುರ ನದಿತೀರದ ಗಡಿ ಭಾಗಗಳಿಗೆ ಬಹು ವ್ಯಾಪಕವಾದ ಚರ್ಚ್ ಆಗಿತ್ತು. ೧೭೦೨ರಲ್ಲಿ ವಂ. ಮಿಗ್ಯುಯೆಲ್ ಡಿ'ಮೆಲ್ಲೊ ಅವರು ಬಂಟ್ವಾಳ ಚರ್ಚ್ ನಿರ್ಮಿಸಿದುದರ ಮೊದಲೇ ಈ ಚರ್ಚ್ ಅಸ್ಥಿತ್ದಲ್ಲಿತ್ತು ಎಂದು ಹೇಳಲಾಗುತ್ತಿದೆ. ಆದರೂ ಅಗ್ರಾರ್ನಲ್ಲಿ ಮೊದಲೇ ಚರ್ಚ್ ಇತ್ತು ಎಂದು ಸೂಚಿಸುವ ಮೂಲ ಅಸ್ಥಿತ್ವದ ಬಗ್ಗೆ ವಿವರಣೆ ನೀಡುವ ದಾಖಲೆಗಳು ಲಭ್ಯವಾಗಿಲ್ಲ. ೧೭೫೧ರಲ್ಲಿ ವಂ. ಜೋಸ್ ಡಿ'ಕೋಸ್ತಾ ಧರ್ಮಗುರು ಗಳಾಗಿ ಇಲ್ಲಿ ಸೇವೆ ಸಲ್ಲಿಸಿದ್ದರು. ಟಿಪ್ಪು ಸುಲ್ತಾನ್ ಇಲ್ಲಿಯ ಮೊದಲ ಚರ್ಚನ್ನು ಕೆಡವಿದ್ದ. ಬಂಧಮುಕ್ತಗೊಂಡ ಕ್ರಿಶ್ಚಿಯನ್ನರ ಪುನರಾಗಮನದಿಂದಾಗಿ ಮೊದಲಿನ ಅಡಿಪಾಯದ ಸ್ಥಳದಲ್ಲೇ ಮಗದೊಂದು ಚರ್ಚ್ ಕಟ್ಟಡವನ್ನು ನಿರ್ಮಿಸಿದರು. ೧೮೦೧ಕ್ಕೂ ಮೊದಲು ಇಲ್ಲಿ ಸೇವೆ ಸಲ್ಲಿಸಿರುವ ಧರ್ಮಗುರುಗಳ ಕಾಲಾನುಕ್ರಮಣಿಕೆಯ ಪಟ್ಟಿ ಲಭ್ಯವಿಲ್ಲ. ೧೮೮೯ರಲ್ಲಿ ವಂ. ಕಾಮಿಲ್ ಬಾರೆಟ್ಟೊ ಅವರಿಂದಾಗಿ ಚರ್ಚ್ ಪುನಃನಿರ್ಮಿತಗೊಂಡು, ವಿಸ್ತರಿತಗೊಂಡು, ಮತ್ತೆ ನವೀಕರಣಗೊಂಡಿತು. ೧೯೦೨ರಲ್ಲಿ ಬ್ರ ಮೊಸ್ಕೇನ್ಹಿ ಯೆ.ಸ., ಇವರು ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಿದರು. Fr. ಆರ್.ಎಫ್.ಸಿ. ಮಸ್ಕರೇನ್ಹಸ್ ಅವರು ಚರ್ಚ್ ನಿವಾಸವನ್ನು ೧೯೧೪ರಲ್ಲಿ ನಿರ್ಮಿಸಿದರು. ೨೦೦೨ರ ತೃತೀಯ ಶತಮಾನೋತ್ಸವ ಸಂದರ್ಭದಲ್ಲಿ ಚರ್ಚನ್ನು ಮತ್ತೆ ನವೀಕರಿಸಲಾಯ್ತು.

ಹೊಸ ಚರ್ಚುಗಳಾದ ೧೮೮೫ರ ನಿರ್ಮಿತಗೊಂಡ ಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ, ಜನವರಿ, ೧೮೯೩ರಲ್ಲಿ ಅಸ್ತಿತ್ವ ಪಡೆದ ಯೇಸುವಿನ ಪವಿತ್ರ ಹೃದಯದ ಚರ್ಚ್ ಮಡಂತ್ಯಾರ್, ಮೇ ೧, ೧೯೨೬ರಲ್ಲಿ ರಚಿತಗೊಂಡ ಸಿದ್ಧಕಟ್ಟೆಯ ಚರ್ಚ್, ಮೇ ೨೫, ೧೯೩೦ರಲ್ಲಿ ನಿರ್ಮಾಣಗೊಂಡ ನಿರ್ಕಾನ್ ಚರ್ಚ್, ೨೨ ಮೇ ೧೯೩೮ರಲ್ಲಿ ಅಸ್ಥಿತ್ವಕ್ಕೆ ಬಂದ ಅಲ್ಲಿಪಾದೆ ಚರ್ಚ್ ೧೯೩೯, ನವೆಂಬರ್ ೧ರಂದು ನಿರ್ಮಿಸಲ್ಪಟ್ಟ ಲೊರೆಟ್ಟೊ ಚರ್ಚ್, ೮ ಡಿಸೆಂಬರ್ ೧೯೯೪ರಲ್ಲಿ ಹೊಸದಾಗಿ ಜನ್ಮತಾಳಿದ ಫರ್ಲ ಚರ್ಚುಗಳು ಇದೇ ಚರ್ಚಿನಿಂದ ಬೇರ್ಪಡಿಸಲ್ಪಟ್ಟವುಗಳಾಗಿವೆ. ಅಗ್ರಾರ್ ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕ್ರಿಸ್ತ ಜ್ಯೋತಿ ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ಅಗ್ರಾರ್ ಚರ್ಚ್ ನಡೆಸುತ್ತಿದೆ.[]

ಜನಸಂಖ್ಯೆ

[ಬದಲಾಯಿಸಿ]

ಚರ್ಚ್ ೩೧೧ ಕುಟುಂಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್ ೨೦೧೧ರ ಗಣತಿಯ ಪ್ರಕಾರ ೧೪೯೨ ಮಂದಿ ಸದಸ್ಯರನ್ನು ಹೊಂದಿದೆ.[]

ಮಹತ್ವ

[ಬದಲಾಯಿಸಿ]

ಇದು ಅತ್ಯಂತ ಹಳೇಯ ಚರ್ಚ್ ಆಗಿರುವದರಿಂದ, ಆಡಳಿತದ ಮೇಲ್ವಿಚಾರಣೆಯಲ್ಲಿ ಅನೇಕ ಸಂಘ-ಸಂಸ್ಥೆಗಳ ಹುಟ್ಟಿಗೆ ಕಾರಣಕರ್ತವಾಗಿದೆ. ಅಗ್ರಾರಿನ ಸಂ ಅನ್ನದ ಕಾನ್ವೆಂಟ್, ಅಗ್ರಾರಿನಲ್ಲಿ ಸಂ. ಅನ್ನರ ಬೆಂಗಳೂರು ಕಾನ್ವೆಂಟ್ , ಅಗ್ರಾರ್ ಪ್ರಾಥಮಿಕ ಶಾಲೆ, ಪವಿತ್ರ ಸಂರಕ್ಷಕ ಆಂಗ್ಲ ಮಾಧ್ಯಮ ಶಾಲೆ ಮತ್ತು ಕ್ರಿಸ್ತ ಜ್ಯೋತಿ ಪ್ರೌಢ ಶಿಕ್ಷಣ ಸಂಸ್ಥೆಗಳು ಅಗ್ರಾರ್ ಚರ್ಚನ್ನೇ ಪೋಷಿತಗೊಂಡು ಆಧಾರಿತವಾಗಿವೆ.[]

ಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ ಅಗ್ರಾರ್ ಚರ್ಚಿನ ಡಾಟರ್ ಚರ್ಚ್ ಆಗಿರುತ್ತದೆ.

ಈ ಚರ್ಚು ಬರೋಕ್ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿತಗೊಂಡಿದೆ. ಇದರ ವರ್ಣಚಿತ್ರಗಳು ಹಾಗೂ ಬಲಿಪೀಠದ ಸುಂದರವಾದ ಮತ್ತು ಹೆಸಾರಂತವಾದ ಯೇಸು ತನ್ನ ಶೀಷ್ಯರೊಂದಿಗೆ ಆಸೀನರಾದ ಚಿತ್ಣವನ್ನು ಬ್ರ. ಅಂಟೋನಿಯೊ ಮೊಸ್ಕೇನ್ಹಿ ಯೆ.ಸ. ಅವರ ಹಸ್ತಗಳಿಂದ ನಿರ್ಮಿತವಾಗಿದ್ದು ಅಲ್ಲದೇ ಇವರು ಮಂಗಳೂರುನಲ್ಲಿರುವ ಸಂ. ಅಲೋಷಿಯಸ್ ಚಾಪೆಲ್ ಅನ್ನು ವ್ಯಾಟಿಕನ್ ನಗರ ದಲ್ಲಿರುವ ಸಿಸ್ಟೈನ್ ಚಾಪೆಲ್ ಶೈಲಿಯಲ್ಲಿ ನಿರ್ಮಿಸಿದ್ದಾರೆ.

೧೯೦೨ರಲ್ಲಿ ಬ್ರ.ಅಂಟೋನಿಯೊ ಮೊಸ್ಕೇನ್ಹಿ ಯೆ.ಸ. ಅವರು ರಚಿಸಿದ ಗೋಡೆಗಳಲ್ಲಿನ ವರ್ಣಚಿತ್ರಗಳ ನೋಟ.

ಮಹನೀಯರು

[ಬದಲಾಯಿಸಿ]

ಹಲವಾರು ಧರ್ಮಗುರುಗಳು ಹಾಗೂ ಧರ್ಮಭಗಿನಿಯರನ್ನು ನಿರ್ಮಿಸಿದ ಖ್ಯಾತಿಗೆ ಈ ಚರ್ಚ್ ಸಾಕ್ಷಿಯಾಗಿದೆ. ಅದರಲ್ಲಿ ಕೆಲವು ಪ್ರಮುಖರು:

ಕ್ರಿಸ್ಮಸ್ ಸಂದರ್ಭದಲ್ಲಿ ಕಂಗೊಳಿಸುತ್ತಿರುವ ಅಗ್ರಾರ್ ಚರ್ಚ್ (ಮುಂಭಾಗದ ನೋಟ)
ಕ್ರಿಸ್ಮಸ್ ಸಂದರ್ಭದಲ್ಲಿ ಕಂಗೊಳಿಸುತ್ತಿರುವ ಅಗ್ರಾರ್ ಚರ್ಚ್ (ಪಾರ್ಶ್ವನೋಟ)

ಮುಂದೆ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "Agrar Parish". www.dioceseofmangalore.com. Archived from the original on 2017-04-08. Retrieved 2016-10-18.