ವಿಷಯಕ್ಕೆ ಹೋಗು

ಪವನ್ ಸೆಹ್ರಾವತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪವನ್ ಸೆಹ್ರಾವತ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಪವನ್ ಕುಮಾರ್ ಸೆಹ್ರಾವತ್
ಅಡ್ಡ ಹೆಸರು(ಗಳು)ಹೈ-ಫ್ಲೈಯರ್
ರಾಷ್ರೀಯತೆಭಾರತೀಯ
ನಾಗರಿಕತ್ವಭಾರತೀಯ
ಜನನ (1995-07-09) ೯ ಜುಲೈ ೧೯೯೫ (ವಯಸ್ಸು ೨೯), ನವದೆಹಲಿ
ನಿವಾಸಬವಾನಾ, ದೆಹಲಿ, ನವದೆಹಲಿ
ಶಿಕ್ಷಣದೆಹಲಿ ವಿಶ್ವವಿದ್ಯಾಲಯ
ಆಲ್ಮ ಮಾಟರ್ದೆಹಲಿ ವಿಶ್ವವಿದ್ಯಾಲಯ
ಉದ್ಯೋಗಕಬಡ್ಡಿ ಆಟಗಾರ
ಉದ್ಯೋಗದಾತಭಾರತೀಯ ರಿಸರ್ವ್ ಬ್ಯಾಂಕ್
ಎತ್ತರ೧೭೯ ಸೆಂ.ಮೀ
ತೂಕ೮೫ ಕೆಜಿ
ಇತರ ಆಸಕ್ತಿಗಳುಸಂಗೀತ, ಬ್ಯಾಡ್ಮಿಂಟನ್
Sport
ದೇಶಭಾರತ
ಕ್ರೀಡೆಕಬಡ್ಡಿ
ಲೀಗ್ಪ್ರೊ ಕಬಡ್ಡಿ ಲೀಗ್
ತಂಡಬೆಂಗಳೂರು ಬುಲ್ಸ್ (೨೦೧೬), (೨೦೧೮–೨೦೨೧)

ಗುಜರಾತ್ ಜೈಂಟ್ಸ್ (೨೦೧೭)
ತಮಿಳ್ ತಲೈವಾಸ್ (೨೦೨೨)

ತೆಲುಗು ಟೈಟಾನ್ಸ್ (೨೦೧೩)

ಪವನ್ ಕುಮಾರ್ ಸೆಹ್ರಾವತ್ ಒಬ್ಬ ಭಾರತೀಯ ಕಬಡ್ಡಿ ಆಟಗಾರ. ಅವರು ಪ್ರಸ್ತುತ ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟಾನ್ಸ್‌ಗಾಗಿ ಆಡುತ್ತಾರೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪ್ರತಿನಿಧಿಸುವ ಭಾರತೀಯ ಕಬಡ್ಡಿ ಆಟಗಾರ.[] ಒಂಬತ್ತನೇ ಸೀಸನ್‌‍ನಲ್ಲಿ ತಮಿಳ್ ತಲೈವಾಸ್ ಅವರನ್ನು ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪವನ್‍ರವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾದರು.[] ಹತ್ತನೇ ಸೀಸನ್‌‍ನಲ್ಲಿ, ತೆಲುಗು ಟೈಟಾನ್ಸ್ ಅವರನ್ನು ೨.೬೦ ಕೋಟಿಗೆ ಖರೀದಿಸಿತು ಮತ್ತು ಇದರೊಂದಿಗೆ, ಅವರು ಮತ್ತೊಮ್ಮೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು.[]

ಆರಂಭಿಕ ಜೀವನ

[ಬದಲಾಯಿಸಿ]

ಪವನ್ ಸೆಹ್ರಾವತ್‍ರವರು ೯ ಜುಲೈ ೧೯೯೬ ರಂದು ದೆಹಲಿಯಲ್ಲಿ ಜನಿಸಿದರು. ಅವರಿಗೆ ೨೭ ವರ್ಷ. ಅವರ ತಂದೆಯ ಹೆಸರು ರಾಜಬೀರ್ ಸಿಂಗ್ ಸೆಹ್ರಾವತ್.[] ಅವರು ಬವಾನಾದ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು.

ವೃತ್ತಿ

[ಬದಲಾಯಿಸಿ]

ಪ್ರೊ ಕಬಡ್ಡಿ ಲೀಗ್

[ಬದಲಾಯಿಸಿ]
ಆರಂಭಿಕ ಸೀಸನ್‍ಗಳು

ಪವನ್ ಪ್ರೊ ಕಬಡ್ಡಿ ಲೀಗ್ ನ ಮೂರನೇ ಸೀಸನ್‍ನಲ್ಲಿ ಬೆಂಗಳೂರು ಬುಲ್ಸ್‌ಗೆ ಪಾದಾರ್ಪಣೆ ಮಾಡಿದರು. ಅವರು ೧೩ ಪಂದ್ಯಗಳಲ್ಲಿ ಆಡಿದರು ಮತ್ತು ೪೫ ಅಂಕಗಳೊಂದಿಗೆ ತನ್ನ ತಂಡದ ಪ್ರಮುಖ ರೈಡ-ಪಾಯಿಂಟ್ ಸ್ಕೋರರ್ ಆಗಿ ಪಂದ್ಯವನ್ನು ಮುಗಿಸಿದರು.[] ಪವನ್ ಸೀಸನ್ ೪ ರಲ್ಲಿ ಹತ್ತು ಪಂದ್ಯಗಳನ್ನು ಆಡಿದರು ಮತ್ತು ೩೩ ದಾಳಿಗಳಿಂದ ಕೇವಲ ೧೧ ಅಂಕಗಳನ್ನು ಗಳಿಸಿದರು.[] ಸೀಸನ್ ೫ ರಲ್ಲಿ ಪವನ್‍ರವರನ್ನು ಗುಜರಾತ್ ಜೈಂಟ್ಸ್ ಆಯ್ಕೆ ಮಾಡಿಕೊಂಡರು ಮತ್ತು ಮುಖ್ಯವಾಗಿ ಇರವರನ್ನು ಬೆಂಚ್ ಆಫ್ ಇಂಪ್ಯಾಕ್ಟ್ ರೈಡರ್ ಆಗಿ ಬಳಸಿಕೊಂಡರು. ಅವರು ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳನ್ನು ಆಡಿದರು ಮತ್ತು ಹತ್ತು ಅಂಕಗಳನ್ನು ಗಳಿಸಿದರು.[]

ಬ್ರೇಕ್ ಥ್ರೂ ಮತ್ತು ಪ್ರಮುಖ ಆಟಗಾರ

ಪವನ್ ಸೀಸನ್ ೬ ರಲ್ಲಿ ಪುನಃ ಬೆಂಗಳೂರು ಬುಲ್ಸ್‌ಗೆ ಮರಳಿದರು. ಅವರು ತಮಿಳ್ ತಲೈವಾಸ್ ವಿರುದ್ಧದ ಮೊದಲ ಪಂದ್ಯದಲ್ಲಿ ೨೦ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು. ಅವರು ತಮ್ಮ ಮೊದಲ ಐದು ಪ್ರದರ್ಶನಗಳಲ್ಲಿ ನಾಲ್ಕು ಸೂಪರ್ ೧೦ ಗಳನ್ನು ಗಳಿಸಿದರು. ಅವರು ಅಂತಿಮವಾಗಿ ೧೩ ಸೂಪರ್ ೧೦ ಗಳ ೨೭೨ ಅಂಕಗಳೊಂದಿಗೆ ಪಂದ್ಯವನ್ನು ಮುಗಿಸಿದರು.[] ಪವನ್ ಕ್ವಾಲಿಫೈಯರ್ ೧ ಪಂದ್ಯದಲ್ಲಿ ೧೩ ರೈಡ್ ಪಾಯಿಂಟ್‌ಗಳನ್ನು ಮತ್ತು ಗುಜರಾತ್ ಜೈಂಟ್ಸ್ ವಿರುದ್ಧದ ಫೈನಲ್‌ನಲ್ಲಿ ೨೨ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು ಮತ್ತು ಇದರಿಂದ ಬೆಂಗಳೂರು ಬುಲ್ಸ್ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು.[] ಪವನ್‍ರವರು ಲೀಗ್‌ನ ಅತ್ಯಂತ ಮೌಲ್ಯಯುತ ಆಟಗಾರ ಎಂಬ ಕಿರೀಟವನ್ನು ಪಡೆದರು.[][]

ಸೆಹ್ರಾವತ್ ಅವರು ಬುಲ್ಸ್ ಅನ್ನು ಸೀಸನ್ ೭ ರಲ್ಲಿ ತಮ್ಮ ಎರಡನೇ ಪ್ಲೇಆಫ್ ಪ್ರದರ್ಶನಕ್ಕೆ ಮುನ್ನಡೆಸಿದರು ಮತ್ತು ೩೫೩ ಅಂಕಗಳೊಂದಿಗೆ ಲೀಗ್‌ನ ಅಗ್ರ ಸ್ಕೋರರ್ ಆಗಿ ಸೀಸನ್‍ನನ್ನು ಮುಗಿಸಿದರು. ಅವರು ಹರಿಯಾಣ ಸ್ಟೀಲರ್ಸ್ ವಿರುದ್ಧ ೩೯ ರೇಡ್ ಅಂಕಗಳನ್ನು ಗಳಿಸಿ ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್‌ಗಳನ್ನು ಗಳಿಸಿದರು.[] ಸೀಸನ್ ೮ ರಲ್ಲಿ ೩೨೦ ಅಂಕಗಳನ್ನು ಗಳಿಸಿದ ಪವನ್ ಅತ್ಯಂತ ಯಶಸ್ವಿ ರೈಡರ್ ಆದರು.[]

ಗಾಯ ಮತ್ತು ಪುನರಾಗಮನ

ಒಂಬತ್ತನೇ ಸೀಸನ್‌ನಲ್ಲಿ ಪವನ್‍ರವರನ್ನು ತಮಿಳ್ ತಲೈವಾಸ್ ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪ್ರೊ ಕಬ್ಬಡಿ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು.[] ಅವರು ಗುಜರಾತ್ ಜೈಂಟ್ಸ್ ವಿರುದ್ಧದ ಸೀಸನ್‌ನ ಮೊದಲ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದರು,ಇದು ಅವರ ಸೀಸನ್‌ನ್ನು ಕೊನೆಗೊಳಿಸಿತು.[೧೦]

ಹತ್ತನೇ ಸೀಸನ್‌ಗೆ ಮೊದಲು, ಪವನ್‍ರವರನ್ನು ತಮಿಳು ತಲೈವಾಸ್ ಬಿಡುಗಡೆ ಮಾಡಿತು ಮತ್ತು ಅವರು ಹರಾಜು ಪೂಲ್‌ಗೆ ಹೋದರು.[೧೧] ಹರಾಜಿನಲ್ಲಿ ಪವನ್ ಅವರನ್ನು ತೆಲುಗು ಟೈಟಾನ್ಸ್ ₹ ೨.೬೦ ಕೋಟಿಗಳ ದಾಖಲೆಯ ಒಪ್ಪಂದಕ್ಕೆ ಖರೀದಿಸಿತು.[೧೨] ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ ಸೀಸನ್ ೧೦ ರಲ್ಲಿ ಇದುವರೆಗೆ ೫ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು ೫೩ ಅಂಕಗಳನ್ನು ಗಳಿಸಿದ್ದಾರೆ ಮತ್ತು ಲೀಗ್‌ನ ಮೂರನೇ ಅತ್ಯಂತ ಯಶಸ್ವಿ ರೈಡರ್ ಆಗಿದ್ದಾರೆ.[೧೩]

ಅಂತರರಾಷ್ಟ್ರೀಯ ವೃತ್ತಿ

[ಬದಲಾಯಿಸಿ]

ಪವನ್ ೨೦೧೯ ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಭಾರತದ ರಾಷ್ಟ್ರೀಯ ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.[೧೪] ಅವರು ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ೨೦೨೩ ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.[೧೫]

ಸಾಧನೆಗಳು

[ಬದಲಾಯಿಸಿ]

ಪ್ರಶಸ್ತಿಗಳು

[ಬದಲಾಯಿಸಿ]

ಅವರಿಗೆ ೨೦೨೩ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.[೨೧][೨೨]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sportstar, Team. "Pro Kabaddi: Five moments when 'Hi-Flyer' Pawan Sehrawat scaled new heights". Sportstar.
  2. ೨.೦ ೨.೧ "PKL S9 Player Auctions Highlights: Pawan Sehrawat becomes most expensive player in PKL at 2.26 crore". ESPN. 5 August 2022. Retrieved 21 August 2022.
  3. "Pawan Sehrawat - Kabaddi Player - Telugu Titans" (in ಅಮೆರಿಕನ್ ಇಂಗ್ಲಿಷ್). 2023-10-11. Archived from the original on 2023-10-19. Retrieved 2023-10-17.
  4. "Pawan Sehrawat - Kabaddi Player - Telugu Titans" (in ಅಮೆರಿಕನ್ ಇಂಗ್ಲಿಷ್). 2023-12-14. Archived from the original on 2023-10-19. Retrieved 2023-12-20.
  5. ೫.೦ ೫.೧ ೫.೨ ೫.೩ ೫.೪ "Pawan Sehrawat Profile". vivo Pro Kabaddi League. Retrieved 2 October 2023.
  6. "Scorecard, Bulls vs Giants". Pro Kabaddi. Retrieved 24 June 2019.
  7. "Pawan Kumar Sehrawat emerges as Season 6's Most Valuable Player". Pro Kabaddi. Retrieved 24 June 2019.
  8. "Kumar and Sehrawat deliver for Bengaluru Bulls as they book their place in the final". Pro Kabaddi. Retrieved 24 June 2019.
  9. "Pro Kabaddi 2019: Pawan Sehrawat's Record-breaking Raiding Helps Bengaluru Bulls Crush Haryana Steelers". IBN. 2 October 2019. Retrieved 2 October 2023.
  10. "PKL 9: Pawan Sehrawat ruled out for the season". ESPN. 5 November 2022. Retrieved 2 October 2023.
  11. "Pawan enters auction pool, Pardeep surprisingly retained: Takeaways from PKL Season 10 retention list". ESPN. 8 August 2023. Retrieved 2 October 2023.
  12. "Telugu Titans secure Pawan Sehrawat for staggering Rs 2.60 Cr". Times of India. 10 October 2023. Retrieved 10 October 2023.
  13. Chhabria, Vinay (2023-12-17). "Pro Kabaddi Top Raider, Top Defender 2023: Most Raid Points, Most Tackle Points (Updated) after TEL vs DEL match". www.sportskeeda.com (in ಅಮೆರಿಕನ್ ಇಂಗ್ಲಿಷ್). Retrieved 2023-12-20.
  14. Viswanath, G. (12 December 2019). "Pawan Sehrawat: India was matchless at South Asian Games". Sportstar (in ಇಂಗ್ಲಿಷ್). Retrieved 1 February 2022.
  15. ೧೫.೦ ೧೫.೧ "Pawan Sehrawat helps India beat Iran to win gold in Asian Kabaddi Championship 2023". Sportstar. 30 June 2023. Retrieved 18 July 2023.
  16. "Pawan Kumar Sehrawat emerges as most valuable player of season 6". Pro Kabbadi. Retrieved 2 October 2023.
  17. "List of top 5 raiders in PKL Season 6". Business Standard. 4 January 2019. Retrieved 2 October 2023.
  18. "Top 5 raiders in Pro Kabaddi 2019". Business Standard. 17 October 2019. Retrieved 2 October 2023.
  19. "Sehrawat's 39 point performance powers Bengaluru Bulls into the playoffs". Pro Kabbadi. Retrieved 2 October 2023.
  20. Lakhina, Tanuj (18 December 2019). "South Asian Games 2019: We didn't get much competition, says raider Pawan Sehrawat after India win seventh straight gold". Firstpost. Archived from the original on 31 December 2019. Retrieved 31 December 2019.
  21. "Arjuna Awards 2023: President Murmu confers India's 2nd highest sports honour to cricketer Shami, archer Ojas Pravin Deotale". The Economic Times. 2024-01-09. ISSN 0013-0389. Retrieved 2024-01-16.
  22. "Full list of Arjuna Awards Winners 2023". India Today (in ಇಂಗ್ಲಿಷ್). Retrieved 2024-01-16.