ಪರ್ಮಿಂದರ್ ವಿರ್
ಪರ್ಮಿಂದರ್ ವಿರ್[೧] ಅವರು ಒಬ್ಬ ಆಂಗ್ಲೋ-ಭಾರತೀಯ[೨] ಉದ್ಯಮಿ, ಸಿನೆಮಾ ತಯಾರಕರು, ಹಾಗೂ ಕಿರುತೆರೆಯ ಧಾರಾವಾಹಿ ನಿರ್ಮಾಪಕರಾಗಿದ್ದಾರೆ. ಇವರು ಸಿನೆಮಾ ಹಾಗೂ ಕಿರೆತೆರೆಯ ನಿರ್ಮಾಪಕರಾಗಿ ೨೦ ವರ್ಷಗಳ ವೃತ್ತಿಬದುಕನ್ನು ನಿರ್ವಹಿಸಿರುತ್ತಾರೆ. ಅದರೊಂದಿಗೆ ಇವರು ದೂರದರ್ಶನ ಕಾರ್ಯಕ್ರಮಗಳನ್ನು ಆಯೊಜಿಸಿರುತ್ತಾರೆ. ಇವರಿಗೆ ಮೋಬೋ ಪ್ರಶಸ್ತಿ ಹಾಗೂ ಎಮ್ಮಾ ಪ್ರಶಸ್ತಿಗಳು ದೊರಕಿವೆ. ಇವರು ಜೂನ್ ೨೦೧೫ರಿಂದ ಟೋನಿ ಎಲುಮೇಲು ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ಸಲ್ಲಿಸುತ್ತಿದ್ದಾರೆ.
ಜನನ
[ಬದಲಾಯಿಸಿ]ಪರ್ಮಿಂದರ್ ವಿರ್ ಅವರು ೧೯೫೫ರಲ್ಲಿ ಪಂಜಾಬ್ ನಲ್ಲಿ ಜನಿಸಿದರು.
ಜೀವನ
[ಬದಲಾಯಿಸಿ]ವೈಯಕ್ತಿಕ ಜೀವನ
[ಬದಲಾಯಿಸಿ]ಪರ್ಮಿಂದರ್ ವಿರ್ ಅವರು ೧೯೮೫ರಲ್ಲಿ ಸಿನೆಮಾ ತಯಾರಕರಾದ ಜುಲಿಯನ್ ಹೆನ್ರಿಕ್ ಎಂಬವರನ್ನು ಮದುವೆಯಾದರು. ಇವರಿಗೆ ಮಾಲ ಹೆನ್ರಿಕ್ ಹಾಗೂ ಅನುರಾಧಾ ಹೆನ್ರಿಕ್ ಎಂಬ ಇಬ್ಬರು ಪುತ್ರಿಯರಿದ್ದಾರೆ.
ನೇಮಕಾತಿ
[ಬದಲಾಯಿಸಿ]೧೯೯೬ ಮೇಯಲ್ಲಿ ಪರ್ಮಿಂದರ್ ವಿರ್ ಅವರು ಕಾರ್ಲ್ಟೋನ್ ಟೆಲಿವಿಶನ್ ನ ಡೈವರ್ಸಿಟಿ ಅಡ್ವೈಸರ್ ಆಗಿ ನೇಮಕಾತಿ ಪಡೆದುಕೊಂಡರು. ಅದರೊಂದಿಗೆ ಇವರು ಬಹಳ ಖಾಸಗಿ ಹಾಗೂ ಸರಕಾರಿ ವಲಯಗಳಿಗೆ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ಸಿನೆಮಾ
[ಬದಲಾಯಿಸಿ]ಇವರು ೧೯೯೮ರಲ್ಲಿ ಬೇಬಿ ಮದರ್[೩] ಎಂಬ ಸಿನೆಮಾವನ್ನು ನಿರ್ಮಾಪಿಸಿದ್ದಾರೆ.
ಟೋನಿ ಎಲುಮೇಲು ಫೌಂಡೇಶನ್
[ಬದಲಾಯಿಸಿ]ಪರ್ಮಿಂದರ್ ವಿರ್ ಅವರು ಇತ್ತೀಚೆಗೆ ಟೋನಿ ಎಲುಮೇಲು ಫೌಂಡೇಶನ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಇವರು ತಮ್ಮ ಜವಾಬ್ದಾರಿಯನ್ನು ತುಂಬಾ ಅಚ್ಛುಕಟ್ಟಾಗಿಯೂ ಹಾಗೂ ತಮ್ಮ ಸಂಸ್ಥೆಯ ಬೆಳವಣಿಗೆಯನ್ನು ಕಾಪಾಡಿಕೊಂಡಿರುತ್ತಾರೆ.