ಪರಮಾಣು ಗಡಿಯಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
NIST-F1 ಅಮೆರಿಕದ NIST ಸಂಸ್ಠೆಯಲ್ಲಿರುವ ಸೀಸಿಯಮ್ ಪರಮಾಣು ಗಡಿಯಾರ.ಇದರ ಚಂಚಲತೆ(uncertainty)ಯ ಪ್ರಮಾಣ ಕೇವಲ 5.10-16 (as of 2005).

ಪರಮಾಣು ಗಡಿಯಾರಎಂದರೆ ಅಣು ಅಥವಾ ಪರಮಾಣು ಹೊರಸೂಸುವ ಇಲ್ಲವೇ ಹೀರಲ್ಪಡುವ ವಿದ್ಯುತ್ಕಾಂತೀಯ ಅಲೆ(Electromagnetic wave)ಗಳ ಆವೃತಿ(Frequency)ಯನ್ನು ಅಳೆಯುವ ಒಂದು ಸಾಧನ. ಇಂತಹ ಪರಮಾಣು ಗಡಿಯಾರಗಳಲ್ಲಿ ಈ ರೀತಿಯ ಆವೃತಿಗಳು ಅತ್ಯಂತ ನಿಖರವಾಗಿರುತ್ತದೆ.ಈ ರೀತಿಯ ಪರಮಾಣು ಗಡಿಯಾರಗಳ ನಿಖರತೆಯ ಪ್ರಮಾಣ ಎಷ್ಟಿರುತ್ತವೆ ಎಂದರೆ ಕೆಲವು ಗಡಿಯಾರಗಳು ಸುಮಾರು ಎಂಟು ಲಕ್ಷ ವರ್ಷಗಳಲ್ಲಿ ಕೇವಲ ಒಂದು ಸೆಕೆಂಡ್‌ಗಳಷ್ಟು ಹೆಚ್ಚು ಕಡಿಮೆಯಾಗಬಹುದು.ಇಂತಹ ಗಡಿಯಾರಗಳಲ್ಲಿ ಸೀಸಿಯಮ್,ಜಲಜನಕದ ಪರಮಾಣುಗಳನ್ನು ಅಥವಾ ಅಮೋನಿಯದ ಅಣುಗಳನ್ನು ಉಪಯೋಗಿಸುತ್ತಾರೆ.