ಪದ್ಮಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪದ್ಮಾಸನದಲ್ಲಿ ಧ್ಯಾನನಿರತನಾದ ಶಿವ

ಪದ್ಮಾಸನವು[೧] ಕುಳಿತು ಮಾಡುವ, ಅಡ್ಡಕಾಲಿನ ಒಂದು ಆಸನ. ಇದರಲ್ಲಿ ಪ್ರತಿ ಪಾದವನ್ನು ಅದರ ವಿರುದ್ಧ ತೊಡೆಯ ಮೇಲೆ ಇರಿಸಲಾಗುತ್ತದೆ. ಇದು ಪ್ರಾಚೀನ ಭಾರತದ ಧ್ಯಾನಾಭ್ಯಾಸಗಳಲ್ಲಿ ಹುಟ್ಟಿಕೊಂಡಿತು. ಇದು ಒಂದು ಪ್ರಾಚೀನ ಆಸನವಾಗಿದ್ದು, ಯೋಗ, ಹಿಂದೂ, ಜೈನ ಹಾಗೂ ಬೌದ್ಧ ಚಿಂತನಶೀಲ ಸಂಪ್ರದಾಯಗಳಲ್ಲಿ ಸಾಮಾನ್ಯವಾಗಿ ಧ್ಯಾನಕ್ಕಾಗಿ ಬಳಸಲ್ಪಡುತ್ತದೆ. ಈ ಆಸನವು ಕಮಲ/ಪದ್ಮವನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಬಂಧಿತ ಧ್ಯಾನಾಭ್ಯಾಸದ ಮೂಲಕ ಸರಿಯಾಗಿ ಉಸಿರಾಡಲು ಪ್ರೋತ್ಸಾಹಿಸುತ್ತದೆ ಮತ್ತು ದೈಹಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ.

ಹಿಂದೂ ಧರ್ಮದ ಧ್ಯಾನನಿರತ ತಪಸ್ವಿ ದೇವತೆಯಾದ ಶಿವ, ಬೌದ್ಧ ಧರ್ಮದ ಸ್ಥಾಪಕನಾದ ಗೌತಮ ಬುದ್ಧ, ಮತ್ತು ಜೈನ ಧರ್ಮದಲ್ಲಿನ ತೀರ್ಥಂಕರರನ್ನು ಪದ್ಮಾಸನದಲ್ಲಿ ಚಿತ್ರಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Budilovsky, Joan; Adamson, Eve (2000). The complete idiot's guide to yoga (2 ed.). Penguin. p. 204. ISBN 978-0-02-863970-3. Retrieved 11 April 2011.
"https://kn.wikipedia.org/w/index.php?title=ಪದ್ಮಾಸನ&oldid=903934" ಇಂದ ಪಡೆಯಲ್ಪಟ್ಟಿದೆ