ಪದ್ಮಾವತಿ ಬಂದೋಪಾಧ್ಯಾಯ
ಗೋಚರ
ಪದ್ಮಾವತಿ ಬಂದೋಪಾಧ್ಯಾಯ (ನವೆಂಬರ್ ೪, ೧೯೪೪) ಭಾರತೀಯ ವಾಯುಸೇನೆಯ ಪ್ರಥಮ ಮಹಿಳಾ ಏಯರ್ ಮಾರ್ಶಲ್. ಭಾರತೀಯ ಸೇನೆಯಲ್ಲಿ ಮೂರು ನಕ್ಷತ್ರಗಳ ಗೌರವ ಪಡೆದ ದ್ವಿತೀಯ ಮಹಿಳೆ.
ವೃತ್ತಿ
[ಬದಲಾಯಿಸಿ]ಪದ್ಮಾವತಿಯವರು ಆಂಧ್ರ ಪ್ರದೇಶದ ತಿರುಪತಿಯಲ್ಲಿ ೧೯೪೪ರಲ್ಲಿ ಜನಿಸಿದರು. ಅವರು ದೆಹಲಿಯಲ್ಲಿ ಬೆಳೆದರು ಮತ್ತು ಅಲ್ಲಿಯ ಕಿರೋರಿ ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ೧೯೬೮ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿದರು. ತಮ್ಮ ಸಹೋದ್ಯೋಗಿ ಎಸ್. ಎನ್. ಬಂದೋಪಾಧ್ಯಾಯರನ್ನು ಮದುವೆಯಾದರು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸೇವೆ ಮಾಡಿದ್ದಕ್ಕೆ ಅವರಿಗೆ ವಿಶಿಷ್ಟ ಸೇವಾ ಪದಕ ನಿಡಿ ಗೌರವಿಸಲಾಯಿತು. ಪದ್ಮಾವತಿ ಬಂದೋಪಾಧ್ಯಾಯ ಅವರು ಉತ್ತರ ಧ್ರುವದಲ್ಲಿ ಸಂಶೋಧನೆ ಮಾಡಿದ ಪ್ರಥಮ ಮಹಿಳೆಯಾಗಿದ್ದಾರೆ. ಅವರು ೨೦೦೨ರಲ್ಲಿ ಉಪ ಏಯರ್ ಮಾರ್ಶಲ್ ಪದವಿಗೇರಿದ ಪ್ರಥಮ ಮಹಿಳೆಯಾದರು[೧],[೨]. ಪದ್ಮಾವತಿ ಬಂದೋಪಾಧ್ಯಾಯ ಅವರು ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2006-05-27. Retrieved 2015-03-07.
- ↑ "ಆರ್ಕೈವ್ ನಕಲು". Archived from the original on 2014-03-16. Retrieved 2015-03-07.