ವಿಷಯಕ್ಕೆ ಹೋಗು

ಪದ್ಮಾವತಿ ಬಂದೋಪಾಧ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಾವತಿ ಬಂದೋಪಾಧ್ಯಾಯ (ನವೆಂಬರ್ ೪, ೧೯೪೪) ಭಾರತೀಯ ವಾಯುಸೇನೆಯ ಪ್ರಥಮ ಮಹಿಳಾ ಏಯರ್ ಮಾರ್ಶಲ್. ಭಾರತೀಯ ಸೇನೆಯಲ್ಲಿ ಮೂರು ನಕ್ಷತ್ರಗಳ ಗೌರವ ಪಡೆದ ದ್ವಿತೀಯ ಮಹಿಳೆ.

ವೃತ್ತಿ

[ಬದಲಾಯಿಸಿ]

ಪದ್ಮಾವತಿಯವರು ಆಂಧ್ರ ಪ್ರದೇಶತಿರುಪತಿಯಲ್ಲಿ ೧೯೪೪ರಲ್ಲಿ ಜನಿಸಿದರು. ಅವರು ದೆಹಲಿಯಲ್ಲಿ ಬೆಳೆದರು ಮತ್ತು ಅಲ್ಲಿಯ ಕಿರೋರಿ ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ೧೯೬೮ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿದರು. ತಮ್ಮ ಸಹೋದ್ಯೋಗಿ ಎಸ್. ಎನ್. ಬಂದೋಪಾಧ್ಯಾಯರನ್ನು ಮದುವೆಯಾದರು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸೇವೆ ಮಾಡಿದ್ದಕ್ಕೆ ಅವರಿಗೆ ವಿಶಿಷ್ಟ ಸೇವಾ ಪದಕ ನಿಡಿ ಗೌರವಿಸಲಾಯಿತು. ಪದ್ಮಾವತಿ ಬಂದೋಪಾಧ್ಯಾಯ ಅವರು ಉತ್ತರ ಧ್ರುವದಲ್ಲಿ ಸಂಶೋಧನೆ ಮಾಡಿದ ಪ್ರಥಮ ಮಹಿಳೆಯಾಗಿದ್ದಾರೆ. ಅವರು ೨೦೦೨ರಲ್ಲಿ ಉಪ ಏಯರ್ ಮಾರ್ಶಲ್ ಪದವಿಗೇರಿದ ಪ್ರಥಮ ಮಹಿಳೆಯಾದರು[],[]. ಪದ್ಮಾವತಿ ಬಂದೋಪಾಧ್ಯಾಯ ಅವರು ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2006-05-27. Retrieved 2015-03-07.
  2. "ಆರ್ಕೈವ್ ನಕಲು". Archived from the original on 2014-03-16. Retrieved 2015-03-07.