ವಿಷಯಕ್ಕೆ ಹೋಗು

ಪಕ್ಕೆಲುಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವನ ಪಕ್ಕೆಲುಬು ಗೂಡು

ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಪಕ್ಕೆಲುಬುಗಳು ಅಕ್ಷೀಯ ಅಸ್ಥಿಪಂಜರದ ಭಾಗವಾಗಿರುವ ಪಕ್ಕೆಲುಬು ಗೂಡನ್ನು ರೂಪಿಸುವ ಉದ್ದನೆಯ ಬಾಗಿರುವ ಮೂಳೆಗಳಾಗಿವೆ. ಬಹುತೇಕ ಚತುಷ್ಪಾದಿಗಳಲ್ಲಿ, ಪಕ್ಕೆಲುಬುಗಳು ಎದೆಯನ್ನು ಆವರಿಸಿರುತ್ತವೆ. ಇವು ಶ್ವಾಸಕೋಶಗಳು ವಿಸ್ತರಿಸುವುದಕ್ಕೆ ಅವಕಾಶ ನೀಡಿ ಎದೆಕುಹರವನ್ನು ವಿಸ್ತರಿಸುವ ಮೂಲಕ ಉಸಿರಾಟವನ್ನು ಸುಗಮವಾಗಿಸುತ್ತವೆ. ಇವು ಶ್ವಾಸಕೋಶಗಳು, ಹೃದಯ ಮತ್ತು ಎದೆಗೂಡಿನ ಇತರ ಆಂತರಿಕ ಅಂಗಗಳನ್ನು ರಕ್ಷಿಸುವ ಕಾರ್ಯನಿರ್ವಹಿಸುತ್ತವೆ. ಕೆಲವು ಪ್ರಾಣಿಗಳಲ್ಲಿ, ವಿಶೇಷವಾಗಿ ಹಾವುಗಳಲ್ಲಿ, ಪಕ್ಕೆಲುಬುಗಳು ಇಡೀ ದೇಹಕ್ಕೆ ಆಧಾರ ಹಾಗೂ ರಕ್ಷಣೆಯನ್ನು ಒದಗಿಸಬಹುದು.

ಮಾನವರಲ್ಲಿ, ಪಕ್ಕೆಲುಬುಗಳನ್ನು ಚಪ್ಪಟೆ ಮೂಳೆಗಳೆಂದು ವರ್ಗೀಕರಿಸಲಾಗುತ್ತದೆ. ಇವು ದೇಹದಲ್ಲಿ ಸಾಮಾನ್ಯವಾಗಿ ರಕ್ಷಣಾತ್ಮಕ ಪಾತ್ರವನ್ನು ಹೊಂದಿರುತ್ತವೆ. ಮನುಷ್ಯರು ೨೪ ಪಕ್ಕೆಲುಬುಗಳನ್ನು ೧೨ ಜೋಡಿಗಳಲ್ಲಿ ಹೊಂದಿರುತ್ತಾರೆ. ಎಲ್ಲವೂ ಹಿಂಬದಿಯಲ್ಲಿ ಎದೆಗೂಡು ಕಶೇರು ಖಂಡಕ್ಕೆ ಜೋಡಣೆಯಾಗಿರುತ್ತವೆ. ಇವು ಜೋಡಣೆಯಾಗಿರುವ ಕಶೇರುಖಂಡದ ಪ್ರಕಾರ ಇವನ್ನು ೧ ರಿಂದ ೧೨ ರವರೆಗಿನ ಸಂಖ್ಯೆಯಿಂದ ಗುರುತಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  • Clinically Oriented Anatomy, 4th ed. Keith L. Moore and Robert F. Dalley. pp. 62–64