ವಿಷಯಕ್ಕೆ ಹೋಗು

ನ್ಯೂ ಜೀಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನ್ಯೂಜಿಲ್ಯಾ೦ಡ್ ಇಂದ ಪುನರ್ನಿರ್ದೇಶಿತ)
ನ್ಯೂಜಿಲೆಂಡ್
New Zealand
Aotearoa
Flag of New Zealand
Flag
Coat of arms of New Zealand
Coat of arms
Anthem: "God Defend New Zealand"
Location of New Zealand
Capitalವೆಲ್ಲಿಂಗ್ಟನ್
Largest cityಆಕ್ಲೆಂಡ್
Official languagesಇಂಗ್ಲಿಷ್ (98%)
ಮಾವೊರಿ (4.2%)
ನ್ಯೂಜಿಲೆಂಡ್ ಸಂಕೇತ ಭಾಷೆ (0.6%)
Demonym(s)New Zealander
Governmentಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
ರಾಣಿ ಎಲಿಜಬೆತ್ - ೨
ಆನಂದ್ ಸತ್ಯಾನಂದ್
ಹೆಲೆನ್ ಕ್ಲಾರ್ಕ್
ಸ್ವಾತಂತ್ರ್ಯ 
ಯು.ಕೆ. ಯಿಂದ
• ಅಧೀನ ಪ್ರಾಂತ್ಯ
ಸೆಪ್ಟೆಂಬರ್ 26 1907
• ಪೂರ್ಣ ಸ್ವಾತಂತ್ರ್ಯ
ನವೆಂಬರ್ 25, 1947
ಡಿಸೆಂಬರ್ 13, 1986
• Water (%)
2.1
Population
• ಸೆಪ್ಟೆಂಬರ್ 2007 estimate
4,239,300 (122ನೆಯದು (೨೦೦೭))
• 2006 census
4,143,279
GDP (PPP)2006 estimate
• Total
$110.296 ಬಿಲಿಯನ್ (58ನೆಯದು)
• Per capita
$27,220 (28ನೆಯದು)
GDP (nominal)2006 estimate
• Total
$103.873 billion (53ನೆಯದು)
• Per capita
$29,698 (27ನೆಯದು)
Gini (1997)36.2
medium
HDI (2007)Increase 0.943
Error: Invalid HDI value · 19ನೆಯದು
Currencyನ್ಯೂಜಿಲೆಂಡ್ ಡಾಲರ್ (NZD)
Time zoneUTC+12 (NZST)
• Summer (DST)
UTC+13 (NZDT)
(Sep to Apr)
Calling code64
ISO 3166 codeNZ
Internet TLD.nz

ನ್ಯೂಜಿಲೆಂಡ್ ನೈಋತ್ಯ ಶಾಂತ ಮಹಾಸಾಗರದಲ್ಲಿನ ಒಂದು ದ್ವೀಪಸಮೂಹ ರಾಷ್ಟ್ರ. ನ್ಯೂಜಿಲೆಂಡ್ ಪ್ರಮುಖವಾಗಿ ಉತ್ತರ ದ್ವೀಪ ಅಥವಾ ತೆ ಇಕ-ಅ-ಮೌಇ ಮತ್ತು ದಕ್ಷಿಣ ದ್ವೀಪ ಅಥವಾ ಟೆ Waipounamuಗಳೆಂಬ ಎರಡು ದೊಡ್ಡ ದ್ವೀಪಗಳನ್ನು ಹಾಗೂ ಇತರ ಹಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ಆಸ್ಟ್ರೇಲಿಯಾದ ಆಗ್ನೇಯಕ್ಕೆ ಟಾಸ್ಮನ್ ಸಮುದ್ರದಾಚೆ ೨೦೦೦ ಕಿ.ಮೀ. ದೂರದಲ್ಲಿರುವ ನ್ಯೂಜಿಲೆಂಡ್‌ನ ಉತ್ತರದ ನೆರೆರಾಷ್ಟ್ರಗಳೆಂದರೆ ನ್ಯೂ ಕ್ಯಾಲೆಡೋನಿಯ, ಫಿಜಿ ಮತ್ತು ಟೋಂಗಾ. ಇದು ಮಾನವರು ನೆಲೆಸಬಹುದಾದ ಕೊನೆಯ ಭೂ ಸ್ಥಳವಾಗಿದೆ. ತನ್ನ ದೀರ್ಘ ಪ್ರತ್ಯೇಕತೆ ಸಮಯದಲ್ಲಿ ಈ ದೇಶ ಪ್ರಾಣಿ, ಶಿಲೀಂಧ್ರ ಮತ್ತು ಸಸ್ಯ ಜೀವನದ ಒಂದು ವಿಶಿಷ್ಟ ಜೀವವೈವಿಧ್ಯವನ್ನು ಅಭಿವೃದ್ಧಿ ಪಡಿಸಿತ್ತು . ದೇಶದ ವಿವಿಧ ಲಕ್ಷಣ ಮತ್ತು ಚೂಪಾದ ಪರ್ವತ ಶಿಖರಗಳಾದ ದಕ್ಷಿಣ ಆಲ್ಪ್ಸ್, ಭೂಮಿ ಮತ್ತು ಜ್ವಾಲಾಮುಖಿ ಸ್ಫೋಟಗಳ ಚಲನೆಯಿಂದ ಮೇಲ್ಮೈ ಉಬ್ಬುವಿಕೆಗೆ ಹೆಚ್ಚು ಬದ್ಧವಾಗಿರುತ್ತದೆ . ವೆಲ್ಲಿಂಗ್ಟನ್ ನ್ಯೂಜಿಲ್ಯಾಂಡ್ ನ ರಾಜಧಾನಿ, ಹಾಗೂ ಆಕ್ಲೆಂಡ್ ನ್ಯೂಜಿಲ್ಯಾಂಡ್ ನಲ್ಲೆ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ.[]

ಪಾಲಿನೆಸಿಯನ್ನರು 1250-1300 CE ರಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆಸಿ ಒಂದು ವಿಶಿಷ್ಟ ಮಾವೊರಿ ಸಂಸ್ಕೃತಿಯನ್ನು ಬೆಳೆಸಿದರು. ಅಬೆಲ್ ಟ್ಯಾಸ್ಮನ್ , ಒಬ್ಬ ಡಚ್ ಪರಿಶೋಧಕ, 1642 CE ರಲ್ಲಿ ನ್ಯೂಜಿಲ್ಯಾಂಡ್ ನ್ನು ಕ೦ಡುಹಿಡಿದ ಮೊದಲ ಯುರೋಪಿಯನ್. 1840 ರಲ್ಲಿ , ನ್ಯೂಜಿಲ್ಯಾಂಡ್ ನ್ನು ಬ್ರಿಟಿಷ್ ರ ವಸಾಹತು ಮಾಡುವ ವೈಟಾಂಗಿಯ ಒಡಂಬಡಿಕೆಗೆಬ್ರಿಟಿಷ್ ರಾಜಪ್ರಭುತ್ವ ಹಾಗೂ ಮಾವೊರಿ ಸಹಿಮಾಡಿದರು. ಇಂದು, 4.5 ಮಿಲಿಯನ್ ನ್ಯೂಜಿಲ್ಯಾಂಡ್ ಜನಸಂಖ್ಯೆಯ ಬಹುಭಾಗವು ಯುರೋಪಿಯನ್ ಮೂಲವಾಗಿದೆ; ಸ್ಥಳೀಯ ಮಾವೊರಿಯೆನ್ನರು, ಏಷ್ಯನ್ನರು ಮತ್ತು ಪೆಸಿಫಿಕ್ ದ್ವೀಪದವರು ದೇಶದ ದೊಡ್ಡ ಅಲ್ಪಸಂಖ್ಯಾತರು. ಇದನ್ನು ಪ್ರತಿಬಿಂಬಿಸುವಂತೆ , ನ್ಯೂಜಿಲ್ಯಾಂಡ್ ನ ಸಂಸ್ಕೃತಿಯನ್ನು ಮುಖ್ಯವಾಗಿ ಮಾವೊರಿ ಮತ್ತು ಆರಂಭಿಕ ಬ್ರಿಟಿಷ್ ವಸಾಹತುಗಾರರಿ೦ದ ಪಡೆಯಲಾಗಿದೆ . ದೇಶದ ಅಧಿಕೃತ ಭಾಷೆಯಾಗಿ ಇಂಗ್ಲೀಷ್, ಮಾವೊರಿ ಮತ್ತು ನ್ಯೂಜಿಲ್ಯಾಂಡ್ ಇಂಗ್ಲೀಷ್ ಭಾಷೆಯ ಜೊತೆ , ಸೈನ್ ಲಾಂಗ್ವೇಜ್ ಇವೆ. ದೇಶದ ಆರ್ಥಿಕತೆ ಐತಿಹಾಸಿಕವಾಗಿ ಉಣ್ಣೆ ರಫ್ತಿನ ಪ್ರಾಬಲ್ಯದಿ೦ದಾಗಿದೆ, ಆದರೆ ಪ್ರವಾಸೋದ್ಯಮದ ಜೊತೆಗೆ ಡೈರಿ ಉತ್ಪನ್ನಗಳು, ಮಾಂಸ, ಮತ್ತು ವೈನ್ ರಫ್ತುಗಳು ಇಂದು ಗಮನಾರ್ಹವಾಗಿದೆ . ದೇಶದಲ್ಲಿನ ಶಾಸನಬದ್ಧ ಅಧಿಕಾರ, ಚುನಾಯಿತ, ಏಕ ಸಭೆಯ ಪಾರ್ಲಿಮೆಂಟಿನ ವಶದಲ್ಲಿದೆ, ಆದರೆ ದೇಶದ ರಾಜಕೀಯ ಶಕ್ತಿ ಪ್ರಧಾನಿ ನೇತೃತ್ವದ ಸಂಪುಟದಲ್ಲಿದೆ, ಪ್ರಸ್ತುತ ಜಾನ್ ಕೀ ಅವರ ಸಂಪುಟದಲ್ಲಿದೆ. ರಾಣಿ ಎಲಿಜಬೆತ್ II ದೇಶದ ಮುಖ್ಯಸ್ಥರಾಗಿರುತ್ತಾರೆ ಮತ್ತು ಗವರ್ನರ್ ಜನರಲ್ ಪ್ರತಿನಿಧಿಸುತ್ತಾರೆ. ಜೊತೆಗೆ, ನ್ಯೂಜಿಲ್ಯಾಂಡ್ ನ್ನು 11 ಪ್ರಾದೇಶಿಕ ಮಂಡಳಿಗಳನ್ನಾಗಿ ಮತ್ತು ಸ್ಥಳೀಯ ಆಡಳಿತಾತ್ಮಕ ಉದ್ದೇಶಗಳಿಗೆ 67 ಪ್ರಾದೇಶಿಕ ಅಧಿಕಾರಿಗಳ ಸಂಘಟಿತವಾಗಿದೆ. ನ್ಯೂಜಿಲ್ಯಾಂಡ್ ಸಾಮ್ರಾಜ್ಯವು ಟೊಕೆಲಾವ್ (ಅವಲಂಬಿತ ಪ್ರದೇಶ)ನ್ನು ಒಳಗೊಂಡಿದೆ ; ಕುಕ್ ದ್ವೀಪಗಳು ಮತ್ತು ನಿಯು ( ಸ್ವಯ೦ಆಡಳಿತದ ನ್ಯೂಜಿಲ್ಯಾಂಡ್ ಮುಕ್ತ ಸಹಯೋಗದ ರಾಜ್ಯಗಳು ); ಮತ್ತು ರಾಸ್ ಡಿಪೆಂಡೆನ್ಸಿ ಅಂಟಾರ್ಟಿಕಾದಲ್ಲಿರುವ ನ್ಯೂಜಿಲ್ಯಾಂಡ್ ನ ಪ್ರಾದೇಶಿಕ ಹಕ್ಕಾಗಿದೆ. ನ್ಯೂಜಿಲ್ಯಾಂಡ್ ವಿಶ್ವಸಂಸ್ಥೆಯ ರಾಷ್ಟ್ರಗಳ, ಕಾಮನ್ವೆಲ್ತ್ , ANZUS ಇದು ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋ-ಆಪರೇಶನ್ ಅಂಡ್ ಡೆವಲಪ್ಮೆಂಟ್ , ಫೆಸಿಫಿಕ್ ದ್ವೀಪಗಳಲ್ಲಿ ವೇದಿಕೆ ಮತ್ತು ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ, ಸದಸ್ಯತ್ವವನ್ನು ಹೊಂದಿದೆ.

ಉಲ್ಲೇಖಗಳು

[ಬದಲಾಯಿಸಿ]