ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ನೆಫ್ಟ್) ಎನ್ನುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ವಹಿಸುವ ಎಲೆಕ್ಟ್ರಾನಿಕ್ ಹಣ ವರ್ಗಾವಣೆಯ ವ್ಯವಸ್ಥೆಯಾಗಿದೆ. ನವೆಂಬರ್ ೨೦೦೫ ರಲ್ಲಿ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ ಅನ್ನು ಟೆಕ್ನಾಲಜಿ ಡೆವಲಪ್‌ಮೆಂಟ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್ಸ್ ಸ್ಥಾಪಿಸಿತು.[೧] ನೆಫ್ಟ್ ಟೆಕ್ನಾಲಜಿ ಡೆವಲಪ್‌ಮೆಂಟ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್ಸ್ ನಿರ್ವಹಿಸುತ್ತದೆ.

೧೬ ಡಿಸೆಂಬರ್ ೨೦೧೯ ರಿಂದ , ೪೮ ಅರ್ಧ-ಗಂಟೆಯ ಬ್ಯಾಚ್‌ಗಳು ಪ್ರತಿದಿನ ಬೆಳಿಗ್ಗೆ ೦೦.೩೦ ರಿಂದ ೦೦.೦೦ ರ ನಡುವೆ ರಜಾದಿನಗಳು ಅಥವಾ ಇತರವುಗಳನ್ನು ಲೆಕ್ಕಿಸದೆ ಸಂಭವಿಸುತ್ತವೆ.[೨]

೩೦ ನವೆಂಬರ್ ೨೦೧೯ ರ ಪ್ರಕಾರ ನೆಫ್ಟ್ ಸೌಲಭ್ಯಗಳು ದೇಶಾದ್ಯಂತ ೨೧೬ ಬ್ಯಾಂಕ್‌ಗಳ ೧,೪೮,೪೭೭ ಶಾಖೆಗಳಲ್ಲಿ ಅಥವಾ ಕಚೇರಿಗಳಲ್ಲಿ ಮತ್ತು ನೆಫ್ಟ್ ಸಕ್ರಿಯಗೊಳಿಸಿದ ಬ್ಯಾಂಕ್‌ಗಳ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿದೆ.

ನೆಫ್ಟ್ ಅನ್ನು ಬಳಸಿಕೊಂಡು ವರ್ಗಾವಣೆ ಮಾಡಬಹುದಾದ ನಿಧಿಯ ಮೊತ್ತಕ್ಕೆ ಯಾವುದೇ ಕನಿಷ್ಠ ಅಥವಾ ಗರಿಷ್ಠ ಮಿತಿಯಿಲ್ಲ.[೩]

ಕಾರ್ಯ ವಿಧಾನ[ಬದಲಾಯಿಸಿ]

ನೆಫ್ಟನ ವಿವರವಾದ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ:

  1. ಗ್ರಾಹಕರು ಫಲಾನುಭವಿಯ ವಿವರಗಳನ್ನು (ಹೆಸರು, ಬ್ಯಾಂಕ್, ಶಾಖೆಯ ಹೆಸರು, ಐಎಫ್‌ಎಸ್‌ಸಿ, ಖಾತೆಯ ವಿಧ ಮತ್ತು ಖಾತೆಯ ಸಂಖ್ಯೆ) ಮತ್ತು ರವಾನೆ ಮಾಡಬೇಕಾದ ಮೊತ್ತವನ್ನು ಒದಗಿಸುವ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡುತ್ತಾರೆ. ರವಾನೆದಾರನು ಅವರ ಬ್ಯಾಂಕ್ ಶಾಖೆಗೆ ತನ್ನ ಖಾತೆಯನ್ನು ಡೆಬಿಟ್ ಮಾಡಲು ಮತ್ತು ನಿಗದಿತ ಮೊತ್ತವನ್ನು ಫಲಾನುಭವಿಗೆ ರವಾನಿಸಲು ಅಧಿಕಾರ ನೀಡುತ್ತಾನೆ. ಈ ಸೌಲಭ್ಯವು ಆನ್‌ಲೈನ್ ಬ್ಯಾಂಕಿಂಗ್ ಮೂಲಕವೂ ಲಭ್ಯವಿದೆ. ಕೆಲವು ಬ್ಯಾಂಕ್‌ಗಳು ಎಟಿಎಂಗಳ ಮೂಲಕವೂ ನೆಫ್ಟ್‌‌‌ನ ಸೌಲಭ್ಯವನ್ನು ನೀಡುತ್ತವೆ.
  2. ಬ್ಯಾಂಕ್ ಶಾಖೆಯು ಸಂದೇಶವನ್ನು ಅದರ ಪೂಲಿಂಗ್ ಕೇಂದ್ರಕ್ಕೆ ಕಳುಹಿಸುತ್ತದೆ (ಇದನ್ನು ನೆಫ್ಟ್ ಸೇವಾ ಕೇಂದ್ರ ಎಂದೂ ಸಹ ಕರೆಯಲಾಗುತ್ತದೆ).
  3. ಪೂಲಿಂಗ್ ಕೇಂದ್ರವು ನೆಫ್ಟ್ ಕ್ಲಿಯರಿಂಗ್ ಸೆಂಟರ್‌ಗೆ ಸಂದೇಶವನ್ನು ಕಳಿಸುತ್ತದೆ(ಇದನ್ನು ನ್ಯಾಷನಲ್ ಕ್ಲಿಯರಿಂಗ್ ಸೆಲ್, ಭಾರತೀಯ ರಿಸರ್ವ್ ಬ್ಯಾಂಕ್, ಮುಂಬೈ ನಿರ್ವಹಿಸುತ್ತದೆ).
  4. ಕ್ಲಿಯರಿಂಗ್ ಸೆಂಟರ್ ಹಣ ವರ್ಗಾವಣೆ ವಹಿವಾಟುಗಳನ್ನು ಬ್ಯಾಂಕ್‌ವಾರು ವಿಂಗಡಿಸುತ್ತದೆ. ಮೂಲ ಬ್ಯಾಂಕ್‌ಗಳಿಂದ (ಡೆಬಿಟ್) ಹಣವನ್ನು ಸ್ವೀಕರಿಸಲು ಮತ್ತು ನಿರ್ದಿಷ್ಟ ಬ್ಯಾಂಕ್‌ಗಳಿಗೆ (ಕ್ರೆಡಿಟ್) ಹಣವನ್ನು ನೀಡಲು ಲೆಕ್ಕಪತ್ರ ನಮೂದುಗಳನ್ನು ಸಿದ್ಧಪಡಿಸುತ್ತದೆ. ನಂತರ, ಬ್ಯಾಂಕ್-ವಾರು ರವಾನೆ ಸಂದೇಶಗಳನ್ನು ತಮ್ಮ ಪೂಲಿಂಗ್ ಸೆಂಟರ್ (ಎನ್‌ಇಎಫ್‌ಟಿ ಸೇವಾ ಕೇಂದ್ರ) ಮೂಲಕ ನಿರ್ದಿಷ್ಟ ಬ್ಯಾಂಕ್‌ಗಳಿಗೆ ರವಾನಿಸಲಾಗುತ್ತದೆ.
  5. ನಿರ್ದಿಷ್ಟ ಬ್ಯಾಂಕ್‌ಗಳು ಕ್ಲಿಯರಿಂಗ್ ಸೆಂಟರ್‌ನಿಂದ ಆಂತರಿಕ ರವಾನೆ ಸಂದೇಶಗಳನ್ನು ಸ್ವೀಕರಿಸುತ್ತವೆ. ಫಲಾನುಭವಿ ಗ್ರಾಹಕರ ಖಾತೆಗಳಿಗೆ ಕ್ರೆಡಿಟ್ ಅನ್ನು ರವಾನಿಸುತ್ತವೆ.

ನೆಫ್ಟ್ ವಹಿವಾಟುಗಳ ಸೇವಾ ಶುಲ್ಕಗಳು[ಬದಲಾಯಿಸಿ]

ಶುಲ್ಕದ ರಚನೆಯು ಈ ಕೆಳಗಿನಂತಿರುತ್ತದೆ:

ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಆಂತರಿಕ ವಹಿವಾಟುಗಳು (ಫಲಾನುಭವಿಯ ಖಾತೆಗಳಿಗೆ ಜಮಾ ಮಾಡಲು):

  • ಫಲಾನುಭವಿಗಳಿಂದ ಯಾವುದೇ ಶುಲ್ಕವನ್ನು ಸಂಗ್ರಹಿಸಲಾಗಿವುದಿಲ್ಲ.

ಮೂಲ ಬ್ಯಾಂಕ್ ಶಾಖೆಗಳಲ್ಲಿ ಬಾಹ್ಯ ವಹಿವಾಟುಗಳು (ರವಾನೆದಾರರಿಗೆ ಶುಲ್ಕಗಳು):

  • ಜನವರಿ ೧, ೨೦೨೦ ರ ಪ್ರಕಾರ ಆನ್‌ಲೈನ್‌ನಲ್ಲಿ ಮಾಡಿದ ನೆಫ್ಟ್ ಹಣ ವರ್ಗಾವಣೆಗಳಿಗೆ ಉಳಿತಾಯ ಬ್ಯಾಂಕ್ ಖಾತೆದಾರರಿಂದ ಯಾವುದೇ ಶುಲ್ಕವನ್ನು ವಿಧಿಸದಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
  • ಇತರ ವಹಿವಾಟುಗಳಿಗೆ, ಅಂದರೆ ಆಫ್‌ಲೈನ್ ವಹಿವಾಟುಗಳಿಗೆ (ನೆಫ್ಟ್ ಫಾರ್ಮ್ ಮೂಲಕ ಬ್ಯಾಂಕ್ ಶಾಖೆಯಲ್ಲಿ) ಚಾಲ್ತಿ ಅಥವಾ ಇತರ ಖಾತೆಗಳ ಮೂಲಕ ಮಾಡಿದ ವಹಿವಾಟುಗಳಿಗೆ ವಿಧಿಸಬಹುದಾದ ಗರಿಷ್ಠ ಶುಲ್ಕಗಳು -

-₹ ೧೦,೦೦೦ ವರೆಗಿನ ವಹಿವಾಟುಗಳಿಗೆ : ₹ ೨.೫೦ ಮೀರಬಾರದು (+ ಜಿಎಸ್‌ಟಿ ಅನ್ವಯವಾಗುತ್ತದೆ)

-₹ ೧೦,೦೦೦ ಕ್ಕಿಂತ ಹೆಚ್ಛು ಮತ್ತು ₹ ೧ ಲಕ್ಷದವರೆಗಿನ ವಹಿವಾಟುಗಳಿಗೆ : ₹ ೫ ಲಕ್ಷ ಮೀರಬಾರದು (+ ಜಿಎಸ್‌ಟಿ ಅನ್ವಯವಾಗುತ್ತದೆ)

-₹ ೧ ಲಕ್ಷಕ್ಕಿಂತ ಹೆಚ್ಛು ಮತ್ತು ₹ ೨ ಲಕ್ಷದವರೆಗಿನ ವಹಿವಾಟುಗಳಿಗೆ: ₹ ೧೫ ಲಕ್ಷ ಮೀರಬಾರದು (+ ಜಿಎಸ್‌ಟಿ ಅನ್ವಯವಾಗುತ್ತದೆ)

-₹ ೨ ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ : ₹ ೨೫ ಲಕ್ಷ ಮೀರಬಾರದು (+ ಜಿಎಸ್‌ಟಿ ಅನ್ವಯವಾಗುತ್ತದೆ)

ಅಂಕಿಅಂಶಗಳು[ಬದಲಾಯಿಸಿ]

ಸೆಪ್ಟೆಂಬರ್ ೨೦೧೯ ರಲ್ಲಿ ₹೧,೮೧೧,೭೮೦.೯೦ ಕೋಟಿ ಮೌಲ್ಯದ ೨೧೬.೭೧ ಮಿಲಿಯನ್ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ ವಹಿವಾಟುಗಳು (೨೦೨೩ ರ ₹೨೩ ಟ್ರಿಲಿಯನ್ ಅಥವಾ ಯು.ಎಸ್ ಡಾಲರ್ ೨೮೧.೯೬ ಶತಕೋಟಿಗೆ ಸಮನಾಗಿದೆ).[೪] ೨೦೧೩-೨೦೧೫ ರವರೆಗೆ ೬೬೧ ಮಿಲಿಯನ್ ವಹಿವಾಟುಗಳನ್ನು ಮಾಡಲಾಗಿದ್ದು, ₹ ೪೪ ಟ್ರಿಲಿಯನ್ (ಯು.ಎಸ್ ಡಾಲರ್ ೪೫೦೦ ಕೋಟಿ ಮೌಲ್ಯದ)..[೫]

ಉಲ್ಲೇಖಗಳು[ಬದಲಾಯಿಸಿ]

  1. "Overview of Payment Systems in India". Reserve Bank of India. Archived from the original on 20 ಜನವರಿ 2015. Retrieved 24 January 2015.
  2. "Reserve Bank of India - Notifications". www.rbi.org.in. Retrieved 2019-12-11.
  3. "Reserve Bank of India". www.rbi.org.in. Retrieved 2019-12-11.
  4. "ECS - All Centres' Transaction Details for the month of August 2019" (PDF). rbidocs.rbi.org.in. RBI. Archived from the original on 11 ಡಿಸೆಂಬರ್ 2019. Retrieved 12 December 2019.{{cite web}}: CS1 maint: bot: original URL status unknown (link)
  5. "Digital India: Beyond an aspiration to an imperative", Business Today (business magazine), 26 February 2016 {{citation}}: Text "Business Today" ignored (help)