ಟ್ರಿಲಿಯನ್
ಗೋಚರ
ಟ್ರಿಲಿಯನ್ ಎನ್ನುವುದು ಹತ್ತರ ಘಾತಗಳ ಸಂಖ್ಯಾ ಪದ್ಧತಿಯಲ್ಲಿನ ಒಂದು ಸಂಖ್ಯೆ. ಈ ಹತ್ತರ ಘಾತಗಳ ಸಂಖ್ಯಾ ಪದ್ಧತಿಗಳಲ್ಲಿ ಸಣ್ಣ ಮತ್ತು ದೊಡ್ಡ ಮಾನಕ ಪದ್ಧತಿಗಳು ಎಂಬ ಎರಡು ವ್ಯವಸ್ಥೆಗಳಿದ್ದು ಈ ಎರಡೂ ವ್ಯವಸ್ಥೆಗಳಲ್ಲಿ ಟ್ರಿಲಿಯನ್ ಶಬ್ದದ ಮೌಲ್ಯ ಬೇರೆಯೇ ಆಗಿದೆ.
- ಸಣ್ಣ ಮಾನಕ ಪದ್ಧತಿಯನ್ನು ಅನುಸರಿಸುವ ಇಂಗ್ಲೀಷ್ ಮಾತನಾಡುವ ದೇಶಗಳಲ್ಲಿ ಟ್ರಿಲಿಯನ್ ಎಂದರೆ ೧,೦೦೦,೦೦೦,೦೦೦,೦೦೦ ಅಂದರೆ ೧೦ರ ಮುಂದೆ ೧೨ ಸೊನ್ನೆಗಳು ಅಥವಾ ಹತ್ತರ ಹನ್ನೆರಡನೇ ಘಾತಸಂಖ್ಯೆ
- ದೊಡ್ಡ ಮಾನಕ ಪದ್ಧತಿಯನ್ನು ಅನುಸರಿಸುವ ಕಾಂಟಿನೆಂಟಲ್ ಯುರೋಪ್ ಮತ್ತಿತರ ದೇಶಗಳಲ್ಲಿ ಟ್ರಿಲಿಯನ್ ಎಂದರೆ ೧,೦೦೦,೦೦೦,೦೦೦,೦೦೦,೦೦೦,೦೦೦ ಅಂದರೆ ೧೦ರ ಮುಂದೆ ೧೮ ಸೊನ್ನೆಗಳು ಅಥವಾ ಹತ್ತರ ಹದಿನೆಂಟನೇ ಘಾತಸಂಖ್ಯೆ.
ಅಮೇರಿಕವು ಸಣ್ಣ ಮಾನಕ ಪದ್ಧತಿಯನ್ನು ಅನುಸರಿಸುತ್ತದೆ. ಯುನೈಟೆಡ್ ಕಿಂಗ್‌ಡಂ ದೇಶವು ೧೯ ಮತ್ತು ೨೦ ನೇ ಶತಮಾನದ ಬಹುಭಾಗ ದೊಡ್ಡ ಮಾನಕ ಪದ್ಧತಿಯನ್ನು ಅನುಸರಿಸುತ್ತಿದ್ದ ಕಾರಣ ಈ ಪದ್ದತಿಗಳಿಗೆ ಕ್ರಮವಾಗಿ ಬ್ರಿಟಿಷ್ ಮತ್ತು ಅಮೇರಿಕನ್ ಸಂಖ್ಯಾ ಪದ್ದತಿಗಳು ಎಂದೂ ಹೆಸರು.
ಆದರೆ ೧೯೭೪ ರಿಂದ ಯನೈಟೆಡ್ ಕಿಂಗ್ ಡಂ ದೇಶವು ಕೂಡ ಸಣ್ಣ ಮಾನಕ ಪದ್ಧತಿಯನ್ನು ಅನುಸರಿಸುತ್ತಿದೆ. ಭಾರತ, ಬಾಂಗ್ಲಾ, ನೇಪಾಳ ಮತ್ತು ಪಾಕಿಸ್ತಾನ ದೇಶಗಳು ಇವೆರಡರಲ್ಲಿ ಯಾವುದನ್ನೂ ಬಳಸುವುದಿಲ್ಲ.