ವಿಷಯಕ್ಕೆ ಹೋಗು

ನೆಯ್ಯಪ್ಪಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಯ್ಯಪ್ಪಮ್ ತುಪ್ಪದಲ್ಲಿ ಕರಿಯಲಾದ ಅಕ್ಕಿ ಆಧಾರಿತ ಸಿಹಿ ತಿನಿಸಾಗಿದೆ. ನೆಯ್ಯಪ್ಪಮ್ ತನ್ನ ಮೂಲಗಳನ್ನು ದಕ್ಷಿಣ ಭಾರತದ ರಾಜ್ಯವಾದ ಕೇರಳದಲ್ಲಿ ಹೊಂದಿದೆ. ಈ ಹೆಸರು ಎರಡು ಶಬ್ದಗಳಿಂದ ವ್ಯುತ್ಪನ್ನವಾಗಿದೆ ನೆಯ್ ಅಂದರೆ "ತುಪ್ಪ" ಮತ್ತು ಅಪ್ಪಂ ಅಂದರೆ ದೋಸೆಯಂಥದ್ದು.

ನೆಯ್ಯಪ್ಪಮ್‍ನ್ನು ಸಾಮಾನ್ಯವಾಗಿ ಅಕ್ಕಿ ಹಿಟ್ಟು (ಪರ್ಯಾಯವಾಗಿ ರವೆ ಅಥವಾ ಸೆಮಲೀನ), ಬೆಲ್ಲ, ತುಪ್ಪದಲ್ಲಿ ಕರಿದ ಕೊಬ್ಬರಿ (ತುಂಡುಗಳು ಅಥವಾ ತುರಿ), ತುಪ್ಪ, ಏಲಕ್ಕಿ ಮತ್ತು ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಚಹಾ ಕುಡಿಯುವಾಗಿನ ತಿಂಡಿಯಾಗಿ ಸಂಜೆಯ ಹೊತ್ತು ಬಡಿಸಲಾಗುತ್ತದೆ. ನೆಯ್ಯಪ್ಪಮ್‍ನ್ನು ಅನೇಕ ಸಾಂಪ್ರದಾಯಿಕ ಸೇಂಟ್ ಥಾಮಸ್ ಕ್ರಿಶ್ಚಿಯನ್ (ಸಿರಿಯನ್ ಕ್ರಿಶ್ಚಿಯನ್) ಚರ್ಚ್‌ಗಳು ಮತ್ತು ಹಿಂದೂ ದೇವಸ್ಥಾನಗಳಲ್ಲಿ ನೈವೇದ್ಯವಾಗಿ ಕೂಡ ಬಡಿಸಲಾಗುತ್ತದೆ.[][][] ಉನ್ನಿ ಅಪ್ಪಂ ಇದರ ಒಂದು ವಿಧವಾಗಿದ್ದು ಇದರಲ್ಲಿ ಕಳಿತ ಚೂರ್ಣಮಾಡಿದ ಬಾಳೆಹಣ್ಣುಗಳನ್ನು ಹಿಟ್ಟಿಗೆ ಸೇರಿಸಿ ಉಂಡೆಯಾಕಾರದ ತುಂಡುಗಳನ್ನು ಮಾಡಿ ಕರಿಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Peppertrail". Archived from the original on 29 ಜೂನ್ 2016. Retrieved 16 June 2016.
  2. "Newly-weds fulfil their wishes with faith". Archived from the original on 24 ಜೂನ್ 2016. Retrieved 16 June 2016.
  3. "Sweet Hindu Offerings Fit For The Gods In India - Neyyappam - Ammini Ramachandran". 7 February 2014. Archived from the original on 11 ಜೂನ್ 2016. Retrieved 16 June 2016.