ನೆಬ್ಬೂರು ನಾರಾಯಣ ಭಾಗವತ

ವಿಕಿಪೀಡಿಯ ಇಂದ
Jump to navigation Jump to search
ನೆಬ್ಬೂರು ನಾರಾಯಣ ಭಾಗವತ
ನಾರಾಯಣ
Nebbooru Narayana Bhagavatha.jpg
ನೆಬ್ಬೂರು ನಾರಾಯಣ ಭಾಗವತರು
Born(೧೯೩೬-೧೨-೧೪)೧೪ ಡಿಸೆಂಬರ್ ೧೯೩೬
ಶಿರಸಿ, ಉತ್ತರಕನ್ನಡ,ಕರ್ನಾಟಕ.
Diedಜೂನ್ ೧೧, ೨೦೧೯(2019-06-11) (aged ೮೨)
Nationalityಭಾರತ
Occupationಯಕ್ಷಗಾನ ಕಲಾವಿದ (ಭಾಗವತ)
Years active1956–2019
Known forಯಕ್ಷಗಾನ ಹಿನ್ನೆಲೆ ಗಾಯನ
Awardsರಾಜ್ಯೋತ್ಸವ ಪ್ರಶಸ್ತಿ

ನೆಬ್ಬೂರು ನಾರಾಯಣ ಭಾಗವತರು {೧೪ ಡಿಸೆಂಬರ್ ೧೯೩೬ - ೧೧ ಮೇ ೨೦೧೯) ಯಕ್ಷಗಾನದ ಅಗ್ರಮಾನ್ಯ ಸಾಲಿನ ಭಾಗವತರು. ಇವರು ಬಡಗುತಿಟ್ಟು ಶೈಲಿಯ ಯಕ್ಷಗಾನದಲ್ಲಿ ಭಾಗವತರಾಗಿದ್ದು ಅನೇಕ ದಶಕಗಳ ಕಾಲ ಸೇವೆ ಸಲ್ಲಿಸಿದವರು.[೧][೨] ಹಾಡುಗಾರಿಕೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡವರು. ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರ ಗರಡಿಯಲ್ಲಿ ಬೆಳೆದ ಇವರು ಪ್ರಸಿದ್ಧ ಇಡಗುಂಜಿ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಭಾಗವತರಾಗಿದ್ದವರು. ಯಕ್ಷಗಾನದಲ್ಲಿ 'ಶ್ರೀರಾಮ ನಿರ್ಯಾಣ', 'ಶ್ರೀಕೃಷ್ಣ ಸಂಧಾನ'ದ ಪದ್ಯಗಳು ಸೇರಿದಂತೆ ಅವರ ಕಂಠದಿಂದ ಹೊರಹೊಮ್ಮಿದ ಪದ್ಯಗಳು ನೆಬ್ಬೂರರ ಶೈಲಿಯೆಂದೇ ಪ್ರಸಿದ್ಧಿಯನ್ನು ಪಡೆದಿದ್ದವು. ಯಕ್ಷರಂಗದ ಮೇರು ಪ್ರತಿಭೆಗಳಾಗಿದ್ದ ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಸಾಕಷ್ಟು ಪ್ರತಿಭೆಗಳಿಗೆ ಇವರು ಜೊತೆಗಾರರಾಗಿದ್ದರು. ಸಾಹಿತ್ಯಶುದ್ಧಿ ಮತ್ತು ಮಧುರ ಧ್ವನಿಯು ಇವರ ಭಾಗವತಿಕೆಯ ಪ್ರಮುಖ ಅಂಶಗಳಾಗಿದ್ದವು.

ಹಿನ್ನೆಲೆ, ಜೀವನ[ಬದಲಾಯಿಸಿ]

ಉತ್ತಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೆಬ್ಬೂರಿನ ಕೃಷಿ ಕುಟುಂಬದ ದೇವರು ಹೆಗಡೆ ಹಾಗೂ ಗಣಪಿ ಅವರ ಎರಡನೇ ಪುತ್ರನಾಗಿ ೧೬ ಡಿಸೆಂಬರ್ ೧೯೩೬ಲ್ಲಿ ಜನಿಸಿದರು.[೧] ಬಡತನದಿಂದಾಗಿ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಸ್ಥಗಿತಗೊಳಿಸಿರು.

ಯಕ್ಷಗಾನ ಕ್ಷೇತ್ರ[ಬದಲಾಯಿಸಿ]

 • ಬಾಲ್ಯದಿಂದಲೇ ಯಕ್ಷಗಾನದ ಸೆಳೆತಕ್ಕೊಳಗಾಗಿ 1956-57ರ ಸಮಯದಲ್ಲಿ ಕೆರೆಮನೆ ಮೇಳ ಸೇರಿದರು. ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಸಿಸಿದರು. ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಭಾಗವತರು ಕೆರೆಮನೆ ಮೇಳದಲ್ಲಿದ್ದಾಗ ಅವರ ಜತೆ ಸಂಗೀತಗಾರನಾಗಿ ಕಾರ್ಯ ನಿರ್ವಹಿಸಿದರು.[೩]
 • ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳದಮಯಂತಿ, ಹರಿಶ್ಚಂದ್ರ, ರಾಮನಿರ್ಯಾಣ, ಲವಕುಶದಂತಹ ಪ್ರಸಂಗಗಳನ್ನು ಹೇಳುವುದರಲ್ಲಿ ಪ್ರಸಿದ್ಧರು.
 • ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಐದು ದಶಕ, ಸಾಲಿಗ್ರಾಮ ಮೇಳದಲ್ಲಿ ಐದುವರ್ಷ, ಅಮೃತೇಶ್ವರಿ ಮೇಳದಲ್ಲಿ ೧ ವರ್ಷ, ಪಂಚಲಿಂಗೇಶ್ವರ ಮತ್ತು ದೇವರು ಹೆಗಡೆಯವರ ಮೇಳದಲ್ಲಿ ತಲಾ ಒಂದೊಂದು ವರ್ಷ ಹಾಗೂ ಗುಂಡಬಾಳಾ ಮೇಳದಲ್ಲಿ ಎರಡು ವರ್ಷಗಳ ಕಾಲ ಭಾಗವತರಾಗಿ ಕಲಾವ್ಯವಸಾಯ ಮಾಡಿದ್ದಾರೆ.[೪]
 • ಕೆರಮನೆ ತಂಡದೊಂದಿಗೆ ಬಹ್ರೈನ್, ಸಿಂಗಾಪುರ, ಬಾಂಗ್ಲಾ, ಅಮೆರಿಕಾ, ಚೀನಾ, ಇಂಗ್ಲೆಂಡ್, ನೇಪಾಳ, ಸ್ಪೇನ್, ಫ್ರಾನ್ಸ್, ಲಾವೋಸ್ ಮುಂತಾದ ವಿದೇಶಗಳಲ್ಲಿ ಭಾಗವತಿಕೆ ಮಾಡಿದ್ದಾರೆ.

ಪ್ರಶಸ್ತಿ ಸನ್ಮಾನಗಳು[೫][ಬದಲಾಯಿಸಿ]

 • ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯೮[೧]
 • ಬಿ.ವಿ. ಆಚಾರ್ಯ ಪ್ರಶಸ್ತಿ,
 • ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ೨೦೦೨[೧]
 • ಶೇಣಿ ಪ್ರಶಸ್ತಿ, ೨೦೦೬
 • ಶ್ರೀರಾಮ ವಿಠ್ಠಲ ಪ್ರಶಸ್ತಿ,
 • ರಾಜ್ಯೋತ್ಸವ ಪ್ರಶಸ್ತಿ,
 • ಸಾರ್ತ ಪ್ರಶಸ್ತಿ,
 • ದೇರಾಜೆ ಪ್ರಶಸ್ತಿ,
 • ಕುರಿಯಾ ವಿಠ್ಠಲ ಶಾಸ್ತ್ರಿ ಪ್ರಶಸ್ತಿ
 • ಕೆರೆಮನೆ ಶಂಭು ಹೆಗಡೆ ವಜ್ರಮಹೋತ್ಸವ ಪ್ರಶಸ್ತಿ,
 • ನಾವುಡ ಪ್ರಶಸ್ತಿ.
 • ಉಪ್ಪೂರು ಪ್ರಶಸ್ತಿ
 • ಕಾರ್ಕಡ ಉಡುಪ ಪ್ರಶಸ್ತಿ[೬]


 • ಅವರ ಅಭಿಮಾನಿಗಳು ‘ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನ’ ಸ್ಥಾಪಿಸಿ ಕಲೆ-ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಾಗವತರ ಆತ್ಮಕಥನ ‘ನೆಬ್ಬೂರು ನಿನಾದ’ 2007ರಲ್ಲಿ ಪ್ರಕಟವಾಗಿದೆ. ಡಾ. ಜಿ.ಎಸ್. ಭಟ್ಟ ಅವರು ಇದರ ಸಂಪಾದಕರು. ಶ್ರೀ ನೆಬ್ಬೂರರ ಷಷ್ಟ್ಯಬ್ಧ ಅಭಿನಂದನ ಸಮಿತಿ ಶಿರಸಿ ಇದರ ಪ್ರಕಾಶಕರು.[೭]
 • ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ನೆಬ್ಬೂರರ ಬದುಕು ಮತ್ತು ಹಾಡುಗಾರಿಕೆಯನ್ನು ಚಿತ್ರೀಕರಿಸಿ ದಾಖಲಿಸಿದೆ.[೧]

ನಿಧನ[ಬದಲಾಯಿಸಿ]

ನೆಬ್ಬೂರು ನಾರಾಯಣ ಭಾಗವತ ಅವರು ೧೧ಮೇ೨೦೧೯ ಶನಿವಾರ ಹೃದಯಾಘಾತದಿಂದ ಶಿರಸಿ ಸಮೀಪದ ಹಣಗಾರು ಸ್ವನಿವಾಸದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.[೮]

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]