ನುಗ್ಗಿಕೇರಿ ಹನುಮಂತ ದೇವಾಲಯ
ನುಗ್ಗಿಕೇರಿ ಹನುಮಂತ ದೇವಾಲಯವು[೧] ಕರ್ನಾಟಕದ ಧಾರವಾಡದಿಂದ ೭.೫ ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ಬರುತ್ತಾರೆ. ಶನಿವಾರ ಹನುಮಂತ ದೇವರ ವಿಶೇಷ ದಿವಸವಾಗಿರುವುದರಿಂದ ಈ ಸ್ಥಳಕ್ಕೆ ಹೆಚ್ಚಿನ ಭಕ್ತರು ಭೇಟಿ ಕೊಡುತ್ತಾರೆ.
ಭೂಗೋಳ
[ಬದಲಾಯಿಸಿ]ನುಗ್ಗಿಕೇರಿ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ೪೩೭ ಕಿ.ಮಿ, ಮೈಸೂರಿನಿಂದ ೫೨೦ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೭.೫ ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಧಾರವಾಡಕ್ಕೆ ಅಥವಾ ಹುಬ್ಬಳ್ಳಿಗೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು.
ಇತಿಹಾಸ
[ಬದಲಾಯಿಸಿ]ಈ ದೇವರನ್ನು ನುಗ್ಗಿಕೇರಿ ಗ್ರಾಮದಲ್ಲಿನ ನುಗ್ಗಿಕೇರಿ ದೇಸಾಯಿ ಕುಟುಂಬದ ಹಿರಿಯ ಸದಸ್ಯರು ಪೂಜಿಸುತ್ತಿದ್ದಾರೆಂದು ನಂಬಲಾಗಿದೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೀ ವ್ಯಾಸತೀರ್ಥರು ಇಲ್ಲಿನ ಬಲಭೀಮ ದೇವರ ಪ್ರತಿಷ್ಟಾಪನೆಯನ್ನು ಮಾಡಿದ್ದಾರೆಂದು ನಂಬಲಾಗಿದೆ.
ವಿಶೇಷತೆ
[ಬದಲಾಯಿಸಿ]ಪ್ರತಿ ವರ್ಷ ಚೈತ್ರ ಶುದ್ಧ ಪೂರ್ಣಿಮೆಯ ಹನುಮಂತ ಜಯಂತಿಯಂದು ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ನುಗ್ಗಿಕೇರಿ ಹನುಮಂತ ದೇವಾಲಯ | |
---|---|
ಸಾಮಾನ್ಯ ಮಾಹಿತಿ | |
ನಿರ್ದೇಶಾಂಕ | 15°N 75°E / 15°N 75°E |