ವಿಷಯಕ್ಕೆ ಹೋಗು

ನೀನಾದೆ ನಾ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀನಾದೆ ನಾ ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು[]. ಈ ಧಾರಾವಾಹಿಯು 2023ರ ಮೇ 16ರಿಂದ 30 ಆಗಸ್ಟ್ 2024ರವರೆಗೆ ಪ್ರಸಾರವಾಯಿತು[] . ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಖೇಲಘೋರ್ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ಈ ಧಾರಾವಾಹಿಯಲ್ಲಿ ದಿಲೀಪ ಶೆಟ್ಟಿ ಮತ್ತು ಖುಷಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ[] .

ನೀನಾದೆ ನಾ (ಕನ್ನಡ ಧಾರಾವಾಹಿ)
ಟೈಟಲ್ ಕಾರ್ಡ್
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುರವಿಚಂದ್ರ ಕುಣಿಗಲ್
ನಟರುದಿಲೀಪ್ ಆರ್. ಶೆಟ್ಟಿ, ಖುಷಿ ಶಿವು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ರವಿ ಜೋಶಿ
ಸಂಕಲನಕಾರರುದರ್ಶನ್ ಭಟ್ ಮತ್ತಿಘಟ್ಟ
ಸಮಯ20-23 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವಂದನಾ ಮೀಡಿಯಾ ಕ್ರಿಯೇಶನ್
ಪ್ರಸಾರಣೆ
ಮೂಲ ವಾಹಿನಿಸ್ಟಾರ್ ಸುವರ್ಣ
ಮೂಲ ಪ್ರಸಾರಣಾ ಸಮಯ16 ಮೇ 2023 – 30 ಆಗಸ್ಟ್ 2024[]
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳು ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ


ಕಥಾ ಹಂದರ

[ಬದಲಾಯಿಸಿ]

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಕಥಾ ನಾಯಕಿ 'ವೇದಾ ಸತ್ಯಮೂರ್ತಿ' ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಇರುತ್ತಾಳೆ. 'ವೇದಾ' ನೇರ ನಡೆಯನ್ನು ಹೊಂದಿರುತ್ತಾಳೆ. ಕಥಾ ನಾಯಕ 'ವಿಕ್ರಮ' ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಎಲ್ಲ ಕೆಲಸ ಮಾಡುತ್ತಾನೆ. ಅದೇ ವಿಕ್ರಮನಿಗೆ ಆಚಾರ-ವಿಚಾರಗಳ ಬಗ್ಗೆ ಆಸಕ್ತಿ ಇಲ್ಲ. ಪದವಿ ಪಡೆದಿದ್ದರೂ ಕೂಡ ರೌಡಿ ತರ ಗೂಂಡಾಗಿರಿ ಮಾಡುತ್ತಾ ಊರು ಸುತ್ತುತ್ತಾ ಇರುತ್ತಾನೆ. ಈತನ ಅಪ್ಪನಿಗೂ ಇವನ ಮೇಲೆ ಕೋಪವಿರುತ್ತೆ.

ವೇದಾಳಿಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಆಸೆ ಇರುತ್ತೆ. ಆದರೆ, ಕಥಾ ನಾಯಕ ವಿಕ್ರಮ್ ಒಂದು ದಿನ ದೇವರ ಸನ್ನಿಧಾನದಲ್ಲಿ ವೇದಾಳಿಗೆ ತಾಳಿ ಕಟ್ಟುತ್ತಾನೆ. ವೇದಾ ಮತ್ತು ವಿಕ್ರಮ ಇಬ್ಬರು ಗುಣದಲ್ಲಿ ತದ್ವಿರುದ್ಧ. ಇವರ ಮನಸ್ಸುಗಳು ಹೇಗೆ ಒಂದಾಗುತ್ತದೆ ಎಂಬುವುದೇ ಧಾರಾವಾಹಿಯ ಕಥಾ ಹಂದರವಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಮುಖ್ಯಪಾತ್ರಗಳು

[ಬದಲಾಯಿಸಿ]
  • ದಿಲೀಪ್ ಶೆಟ್ಟಿ: ವಿಕ್ರಮ ಪಾತ್ರದಲ್ಲಿ, ಕಥಾ ನಾಯಕನಾಗಿ. ವೇದಾ ಗಂಡನಾಗಿ.
  • ಖುಷಿ ಶಿವು[]: ವೇದಾ ಪಾತ್ರದಲ್ಲಿ, ಕಥಾ ನಾಯಕಿಯಾಗಿ. ವಿಕ್ರಮ್ ಹೆಂಡತಿಯಾಗಿ.

ಇತರೆ ಪಾತ್ರಗಳು

[ಬದಲಾಯಿಸಿ]
  • ಸ್ವಾತಿ: ಜಯಲಕ್ಷ್ಮೀ ಪಾತ್ರದಲ್ಲಿ. ಜಗನ್ನಾಥ್ ಹೆಂಡತಿಯಾಗಿ, ವಿಷ್ಣು, ವೆಂಕಿ ಮತ್ತು ವಿಕ್ರಮ್ ತಾಯಿಯಾಗಿ.
  • ನಾಗೇಶ್ ಯಾದವ್: ಜಗನ್ನಾಥ್ ಪಾತ್ರದಲ್ಲಿ. ವಿಷ್ಣು, ವೆಂಕಿ ಮತ್ತು ವಿಕ್ರಮ್ ತಂದೆಯಾಗಿ.
  • ಭವ್ಯಶ್ರೀ ಪೂಜಾರಿ: ಶೈಲೂ ಪಾತ್ರದಲ್ಲಿ, ವೆಂಕಿ ಹೆಂಡತಿಯಾಗಿ.
  • ವಿನಾಯಕ್ ಜೋಶಿ: ವೆಂಕಿ ಪಾತ್ರದಲ್ಲಿ, ಶೈಲೂ ಗಂಡನಾಗಿ. ವಿಕ್ರಮ್ ಎರಡನೇ ಅಣ್ಣನಾಗಿ.
  • ಅನಿಕಾ ಸಿಂಧ್ಯಾ: ಚೈತ್ರ ಪಾತ್ರದಲ್ಲಿ, ವೇದಾ ಅತ್ತಿಗೆಯಾಗಿ.
  • ವಿಶಾಲ್ ಭಾರಾಧ್ವಾಜ್: ಲೋಕೆಶ್ ಪಾತ್ರದಲ್ಲಿ, ವೇದಾ ಅಣ್ಣನಾಗಿ.
  • ಜ್ಯೋತಿ ಬಂಟ್ವಾಳ್: ಅಂಬುಜಾ ಪಾತ್ರದಲ್ಲಿ, ವೇದಾ ಮತ್ತು ಲೋಕೆಶ್ ತಾಯಿಯಾಗಿ.

ರೂಪಾಂತರಗಳು

[ಬದಲಾಯಿಸಿ]
ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು Ref(s)
ಬಂಗಾಳಿ Khelaghor

খেলাঘর
30 ನವೆಂಬರ್ 2020 ಸ್ಟಾರ್ ಜಾಸ್ಲ 4 ಸೆಪ್ಟಂಬರ್ 2022 ಮೂಲ
ತಮಿಳು Thendral Vanthu Ennai Thodum

தென்றல் வந்து என்னை தொடும்
16 August 2021 ಸ್ಟಾರ್ ವಿಜಯ್ ಪ್ರಸಾರವಾಗುತ್ತಿದೆ ರೀಮೆಕ್ []
ಕನ್ನಡ Neenadena

ನೀನಾದೆ ನಾ
16 ಮೇ 2023 ಸ್ಟಾರ್ ಸುವರ್ಣ []

ಉಲ್ಲೇಖಗಳು

[ಬದಲಾಯಿಸಿ]
  1. "ಸೀರಿಯಲ್ ಪ್ರಿಯರಿಗೆ ಮತ್ತೊಂದು ಹೊಚ್ಚ ಹೊಸ ಧಾರಾವಾಹಿ 'ನೀನಾದೆ ನಾ': ಎಲ್ಲಿ? ಯಾವಾಗ?". 12 ಮೇ 2023. ಫಿಲ್ಮಿಬೀಟ್ ಕನ್ನಡ.
  2. "ನೀನಾದೆ ನಾ ಧಾರಾವಾಹಿ ಮುಕ್ತಾಯ ಆದರೂ ಗುಡ್ ನ್ಯೂಸ್ ಇದೆ ಮರ್ರೆ; ಇದು ಕನ್ನಡ ಕಿರುತೆರೆಯಲ್ಲೇ ಅಪರೂಪ!". ವಿಜಯ ಕರ್ನಾಟಕ. Retrieved 29 Aug 2024.
  3. "ದಿಲೀಪ್‌ ಶೆಟ್ಟಿ, ಖುಷಿ ನಟನೆಯ ನೀನಾದೆ ನಾ ಸೀರಿಯಲ್;‌ ರಮೇಶ್‌ ಅರವಿಂದ್‌ ನಿರ್ಮಾಣ". ವಿಜಯ ಕರ್ನಾಟಕ. Retrieved 11 ಮೇ 2023.
  4. "ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ!". ಸುವರ್ಣ ನ್ಯೂಸ್. Retrieved Aug 28, 2024.
  5. "ನೀನಾದೆ ನಾ ಸೀರಿಯಲ್ ನ ಬಬ್ಲಿ ಹುಡುಗಿ ಖುಷಿ, ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 31 ಆಗಸ್ಟ್ 2023.
  6. "Vijay TV serial promo shows forced marriage, Tamil Nadu cop reminds them of law". Hindustan Times. 26 ಜುಲೈ 2021. Archived from the original on 27 ಜುಲೈ 2021.
  7. "New Serial 'Neenadena' to premiere today". Times of India. 16 May 2023.