ನಿರುಪಮ ರಾಜೇಂದ್ರ

ವಿಕಿಪೀಡಿಯ ಇಂದ
Jump to navigation Jump to search
ನಿರುಪಮ ಮತ್ತು ರಾಜೇಂದ್ರ
Nirupam Rajendra.JPG
Born
Occupationಅಭಿನವ ಡ್ಯಾಂಸ್ ಕಂಪನಿಯಲ್ಲಿ ನಿರ್ದೇಶಕರು
Websitewww.abhinavadancecompany.com

ನಿರುಪಮ ಮತ್ತು ರಾಜೇಂದ್ರ ಭಾರತೀಯ ಸಾಂಸ್ಕೃತಿಕ ನರ್ತಕರು. ಇವರು ಭರತನಾಟ್ಯ ಹಾಗು ಕಥಕ್ ನೃತ್ಯ ರೂಪಗಳ ರಾಯಭಾರಿಗಳು. ಇವರು ೧೯೯೪ರಲ್ಲಿ ಅಭಿನವ ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿ ನಿರ್ದೇಶಿಸುತ್ತಿದ್ದಾರೆ.[೧]

ವೃತ್ತಿ ಮತ್ತು ಜೀವನ[ಬದಲಾಯಿಸಿ]

ಕಥಕ್ ಶೈಲಿಯಲ್ಲಿ ನಿರುಪಮ ಮತ್ತು ರಾಜೆಂದ್ರ ಇವರಿಗೆ ಗುರು ಡಾ|ಮಾಯಾ ರಾವ್, ಪದ್ಮಭೂಷಣ ಕುಮುದಿನಿ ಲಖಿಯ, ಗುರು ಅರ್ಜುನ್ ಮಿಸ್ರ ಇವರಿಂದ ವಿದ್ಯಾಭ್ಯಾಸವಾಗಿದ್ದು, ಇದರ ಜೊತೆ ಭರತನಾಟ್ಯದಲ್ಲಿ ನಿರುಪಮಾರಿಗೆ ಗುರು ನರ್ಮದಾ, ಸುಂದರಿ ಸಂತಾನಮ್, ಪದ್ಮಭೂಷಣ್ ಕಲಾನಿಧಿ ನಾರಯಣ್, ಪದ್ಮಭೂಷಣ್ ಪದ್ಮ ಸುಬ್ರಹ್ಮಣ್ಯಮ್ ರವರ ಮಾರ್ಗದರ್ಶನ ದೊರಕಿದೆ.[೨] ಇವರಿಬ್ಬರು ೧೯೯೪ರಲ್ಲಿ ಅಭಿನವ ಡ್ಯಾಂಸ್ ಕಂಪನಿ ಹಾಗು ಅಭಿನವ ಸ್ಕೂಲ್ ಆಫ್ ಡ್ಯಾಂಸ್ ಇವುಗಳನ್ನು ಸ್ಥಾಪಿಸಿ ನಿರ್ದೇಶಿಸುತ್ತ ನಡೆಸಿಕೊಂದು ಬರುತ್ತಿದ್ದಾರೆ. ತಮ್ಮ ಶಾಲೆಯಲ್ಲಿ ನೂರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗು ಕಥಕ್ ನೃತ್ಯರೂಪಗಳ ವಿದ್ಯಾದಾನ ಮಾದುತ್ತಾ, ಕಂಪನಿಯ ಮೂಲಕ ಹಲವಾರು ನೃತ್ಯ-ಸಂಚಿಕೆಗಳನ್ನು ನಿರ್ಮಿಸಿದ್ದಾರೆ.[೩]ಇದಲ್ಲದೆ ಇವರು ಭಾರತದ ಜತೆ ಸುಮಾರು ೫೫ ದೇಶಗಳಲ್ಲಿ ನೃತ್ಯಕಾರ್ಯಕ್ರಮಗಳನ್ನು ನೀಡಿ, ಕಾರ್ಯಶಾಲೆಗಳನ್ನು ನಡೆಸಿ ಭಾರತೀಯ ಸಂಸ್ಕೃತಿಯನ್ನು ಮುನ್ನಡೆಸುತ್ತಿದ್ದಾರೆ. [೪][೫]

ನೃತ್ಯ ಸಂಚಿಕೆಗಳು[ಬದಲಾಯಿಸಿ]

ಅಭಿನವ ಡ್ಯಾಂಸ್ ಕಂಪನಿಯ ಮೂಲಕ ಹಲವಾರು ನೃತ್ಯ-ಸಂಚಿಕೆಗಳನ್ನು ನಿರ್ಮಿಸಿದ್ದಾರೆ.[೬] ಇದರಲ್ಲಿ ಕಥಕಶೈಲಿಯಲ್ಲಿ ರಾಸಲೀಲ, ವರ್ಷ, ಯುಗಲ್, ಮೀರಾ ಮಾಧುರಿ ಹಾಗು ಭರತನಾಟ್ಯದಲ್ಲಿ ಲಾಸ್ಯರಂಜನಿ, ಕಾಳಿಂಗರತ್ನ, ಕಾಲ್ ಆಫ್ ದ ಫ್ಲೂಟ್ ಇತ್ಯಾದಿ.[೭] ಇವರ ಎಲ್ಲ ಸಂಚಿಕೆಗಳಿಗೆ ಶತಾವಧಾನಿ, ಡಾ. ಆರ್ ಗಣೇಶ್, ಪ್ರವೀನ್ ಡಿ ರಾವ್, ಪ್ರವೀಣ್ ಗೋಡ್ಖಿಂಡಿ, ಅನೂರು ಅನಂತಕೃಷ್ಣ ಶರ್ಮ, ತಿರುಮಲೆ ಶ್ರೀನಿವಾಸ್ ಹಾಗು ವಿನೋದ್ ಕುಮರ್ ಇವರ ಸಹಕಾರವಿದೆ.[೮]

ಪ್ರಶಸ್ತಿ-ಪುರಸ್ಕಾರಗಳು[ಬದಲಾಯಿಸಿ]

  • ಕರ್ನಾಟಕ ಕಲಾಶ್ರೀ ೨೦೧೧ - ಕರ್ನಾಟಕ ರಾಜ್ಯ
  • ಶ್ರೀಕೃಷ್ಣವಿಠ್ಠಲಾನುಗ್ರಹ ಪ್ರಶಸ್ತಿ - ಉಡುಪಿ ಕೃಷ್ಣ ಮಠ
  • ಒಲ್ಕಹಮ ಗವರ್ನರ್ ಮತ್ತು ತುಲ್ಸ ಮೇಯರ್ ಇವರಿಂದ ಪುರಸ್ಕಾರ - ೨೦೦೬ ಹಾಗು ೨೦೦೮
  • ಹಾನರರ್ಯ್ ಪಾವ್ಲ್ ಹ್ಯಾರಿಸ್ ಫೆಲ್ಲೊಶಿಪ್ - ೨೦೦೪
  • ಕಲಾ ಅರತಿ ರತ್ನ ಪ್ರಶಸ್ತಿ - ೨೦೦೧
  • ನಾಟ್ಯ ಮಯೂರಿ ನಿರುಪಮ - ೧೯೯೮[೯]
  • ನಾಟ್ಯ ಪ್ರವೀಣ ರಾಜೇಂದ್ರ - ೧೯೯೮[೧೦][೧೧]

ಉಲ್ಲೇಖಗಳು[ಬದಲಾಯಿಸಿ]