ನಿಪ್ಪಟ್ಟು
ನಿಪ್ಪಟ್ಟು ದಕ್ಷಿಣ ಭಾರತದ ಒಂದು ಕರಿದ ಲಘು ಆಹಾರವಾಗಿದೆ. ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜಯಂತಿ ಹಬ್ಬದ ಅವಧಿಯಲ್ಲಿ ತಯಾರಿಸಲಾಗುತ್ತದೆ. ಈ ಖಾದ್ಯದ ಉಪ್ಪಿರುವ ಮತ್ತು ಸಿಹಿ ರೂಪಗಳಿವೆ. ಇದನ್ನು ತಮಿಳುನಾಡಿನಲ್ಲಿ "ತಟ್ಟೈ" ಎಂದು ಮತ್ತು ಆಂಧ್ರಪ್ರದೇಶ/ತೆಲಂಗಾಣದಲ್ಲಿ "ಚೆಕ್ಕಲು" ಎಂದು ಕರೆಯಲಾಗುತ್ತದೆ.
ಘಟಕಾಂಶಗಳು
[ಬದಲಾಯಿಸಿ]ಸಾಮಾನ್ಯವಾದ ಘಟಕಾಂಶಗಳೆಂದರೆ ಅಕ್ಕಿ ಹಿಟ್ಟು, ಉದ್ದಿನ ಬೇಳೆ, ಕಡಲೇಕಾಯಿ, ಹುರಿಗಡ್ಲೆ, ಕಡಲೆ ಮತ್ತು ಇತರ ರುಚಿಕಾರಕಗಳು. ಇವೆಲ್ಲವನ್ನು ಅವುಗಳ ಅನುಕ್ರಮವಾದ ಪ್ರಮಾಣಗಳಲ್ಲಿ ಬೆರೆಸಿ ಹಿಟ್ಟು ಕಲಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಬೆಣ್ಣೆ, ಶುಂಠಿ ಮತ್ತು ಮಸಾಲೆಯಂತಹ ವಿವಿಧ ರುಚಿಗಳಲ್ಲಿ ಲಭ್ಯವಿದೆ.[೧] ಸೇಲಂ, ತಮಿಳುನಾಡು ಅದರ 'ತಟ್ಟುವಡೈ ಸೆಟ್'ಗಳಿಗಾಗಿ ಪರಿಚಿತವಾಗಿದೆ. ಇದನ್ನು ನಿಪ್ಪಟ್ಟನ್ನು ಬಳಸಿ (ಸ್ಯಾಂಡ್‍ವಿಚ್‍ನಲ್ಲಿನ ಬ್ರೆಡ್‍ನಂತೆ) ಮಧ್ಯದಲ್ಲಿ ಬೀಟ್‍ರೂಟ್, ಗಜ್ಜರಿಯಂತಹ ವಿವಿಧ ತರಕಾರಿಗಳು, ಚಟ್ನಿ ಮತ್ತು ಎಣ್ಣೆಗಳನ್ನು ತುಂಬಿ ತಯಾರಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Foods, Tredy. "thattuvadai". Tredy Foods (in ಇಂಗ್ಲಿಷ್). Retrieved 2019-12-03.
- Traditional Cuisine of Tamil Brahmins in Kerala. ISBN 978-81-264-7121-8