ವಿಷಯಕ್ಕೆ ಹೋಗು

ನಿಕೊಲೆ ಕರಮ್ಜಿ಼ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಕೊಲೆ ಕರಮ್ಜಿ಼ನ್
Portrait of Karamzin by Vasily Tropinin, 1818.
ಜನನ12 December [O.S. 1 December] 1766
Znamenskoye, Simbirsk Governorate, Imperial Russia
ಮರಣ3 June [O.S. 22 May] 1826
Saint Petersburg, Imperial Russia
ವೃತ್ತಿWriter, historian, poet

ಪ್ರಭಾವಿತರು
  • Fyodor Dostoevsky


ನಿಕೊಲೆ ಕರಮ್ಜಿ಼ನ್ : 1765-1826. ರಷ್ಯನ್ ಸಾಹಿತಿ. ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಫ್ರೀ ಮೇಸನರ ಪ್ರಭಾವಕ್ಕೆ ಒಳಗಾದ. ರಷ್ಯನ್ ಪ್ರವಾಸಿಯ ಪತ್ರಗಳು ಎಂಬ ಈತನ ಪುಸ್ತಕ ಹೊಸ ವಿಶಾಲ ಸಂಸ್ಕೃತ ಮನೋಭಾವವನ್ನು ವ್ಯಕ್ತಪಡಿಸಿತು. ಮಾಸ್ಕೊ ಪತ್ರಿಕೆ, ಯುರೋಪಿನ ದೂತ ಎನ್ನುವ ಮಾಸಪತ್ರಿಕೆಗಳನ್ನು ಈತ ನಡೆಸಿದ. ಮಾಸ್ಕೊ ಪತ್ರಿಕೆಯ ಪ್ರಕಟಣೆ (1791) ಸೂಕ್ಷ್ಮ ಸಂವೇದನಾ ಪಂಥದ ನಾಂದಿ ಎನ್ನಬಹುದು. ಇವನ ಸಾಹಿತ್ಯ ಬಾಳುವಂಥದಲ್ಲವಾದರೂ ಹೊಸದೊಂದು ಮನೋಧರ್ಮವನ್ನು ಪ್ರಸಾರಗೊಳಿಸಿ ಸಾರ್ಥಕವೆನಿಸಿತು. ಮನುಷ್ಯನ ಸಹಜಪ್ರವೃತ್ತಿಗಳು ಒಳ್ಳೆಯವು ಅಲ್ಲದೆ ಸುಖಕ್ಕೆ ಸಾಧನ ಎನ್ನುವ ದೃಷ್ಟಿ ಇವನದು. ಇವನ ಸಂಸ್ಕೃತಿ ಈ ಅಭಿಪ್ರಾಯಕ್ಕೆ ಮೆರುಗನ್ನು ನೀಡಿತು. ಇವನ ಕಾದಂಬರಿಗಳು ಸತ್ತ್ವಯುತವಾಗಿಲ್ಲವೆನ್ನಬೇಕು. ಉದ್ದೇಶಪುರ್ವಕವಾದ ಕಲೆಯನ್ನು ಸೇರಿಸಿ ಕಥೆಗೆ ಸಾಹಿತ್ಯದ ಪಟ್ಟವನ್ನು ಕಟ್ಟಿದವನೀತ. ಸಾಹಿತ್ಯದ ಭಾಷೆಯಲ್ಲಿ ಲಾಮನೋಸಫ್ ಉಳಿಸಿಕೊಂಡಿದ್ದ ಚರ್ಚ್ಸ್ಲವೊಕ್ ಅಂಶವನ್ನು ತ್ಯಜಿಸಿ, ಅಧುನಿಕ ಭಾವನೆಗಳು ಮತ್ತು ಭಾವಗಳಿಗೆ ಫ್ರೆಂಚ್ ಪದಗಳನ್ನು ಭಾಷಾಂತರ ಮಾಡಿಕೊಂಡು ಬಳಸುವುದು,

ವಾಕ್ಯವಿನ್ಯಾಸದಲ್ಲಿಯೂ ಶೈಲಿಯಲ್ಲಿಯೂ ಫ್ರೆಂಚ್ ಮಾದರಿಗಳನ್ನನುಸರಿಸುವುದು, ಸುಲಲಿತವಾದ ಶೈಲಿ-ಇವು ಕರಮ್ಜಿನ್‍ನ ಮುಖ್ಯ ಯೋಜನೆಗಳು. ಈ ಚಳವಳಿ ರೂಸೊ ಪ್ರತಿಪಾದಿಸಿದ್ದ ನವಸೂಕ್ಷ್ಮಸಂವೇದನಾ ಪಂಥಕ್ಕೆ ಬೆಂಬಲ ನೀಡಿತು. ಇವನ ಅತ್ಯುತ್ತಮ ಕೃತಿ ರಷ್ಯ ದೇಶದ ಚರಿತ್ರೆ (1811). ಸತ್ತ್ವಪೂರ್ಣವೂ ನಿರಾಡಂಬರವೂ ಆದ ತರ್ಕ ಇದನ್ನು ಉತ್ತಮ ಸಾಹಿತ್ಯಕೃತಿಯನ್ನಾಗಿ ಮಾಡಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: