ನಾಣ್ಯ/ಧನಮಾನಕದ ಚಿಹ್ನೆ
This article contains Unicode currency signs. Without proper rendering support, you may see question marks, boxes, or other symbols instead of currency signs. |
ನಾಣ್ಯ/ಧನಮಾನಕದ ಚಿಹ್ನೆ ಯು ಸಾಮಾನ್ಯವಾಗಿ ಧನಮಾನಕದ ಹೆಸರಿನ ಬದಲಿಗೆ ಬಳಸುವ ಶೀಘ್ರಲಿಪಿ ಚಿತ್ರಕ ಚಿಹ್ನೆಯಾಗಿದೆ. ವಿಶೇಷವಾಗಿ ಹಣದ ಪ್ರಮಾಣವನ್ನು ಉಲ್ಲೇಖಿಸುತ್ತದೆ. ಅಂತರರಾಷ್ಟ್ರೀಯವಾಗಿ, ISO 4217 ಸಂಕೇತಗಳನ್ನು ಧನಮಾನಕದ ಚಿಹ್ನೆಗಳ ಬದಲಿಗೆ ಬಳಸಲಾಗುತ್ತದಾದರೂ, ಆಯಾ ರಾಷ್ಟ್ರಗಳಲ್ಲಿ ಧನಮಾನಕ ಚಿಹ್ನೆಯು ಪ್ರಧಾನವಾಗಿ ಬಳಕೆಯಲ್ಲಿರುತ್ತವೆ. ವಿಶ್ವದ ಬಹುತೇಕ ಧನಮಾನಕಗಳು ಯಾವುದೇ ನಿಗದಿತ ಚಿಹ್ನೆಯನ್ನು ಹೊಂದಿಲ್ಲ.
ಧನಮಾನಕದ ಚಿಹ್ನೆಯನ್ನು ಹೊಂದುವುದು ಈಗ ಅಂತರರಾಷ್ಟ್ರೀಯ ಧನಮಾನಕಗಳಲ್ಲಿ ಪ್ರತಿಷ್ಠೆಯ ವಿಷಯವಾಗಿದೆ. ಭಾರತವು ತನ್ನ ರೂಪಾಯಿಗೆ ೨೦೧೦ ಇಲ್ಲಿ ₹ ಚಿಹ್ನೆಯನ್ನು ಪ್ರಸ್ತುತಪಡಿಸಿದರು. ಐರೋಪ್ಯ ಆಯೋಗವು ಯೂರೋದ ಯಶಸ್ಸಿಗೆ ಯೂರೋ ಚಿಹ್ನೆಯ ಜಾಗತಿಕ ಮನ್ನಣೆಯೂ ಭಾಗಶಃ ಕಾರಣ ಎಂದು ಭಾವಿಸಿದೆ.[೧]
ಬಳಕೆ
[ಬದಲಾಯಿಸಿ]ಧನಮಾನಕದ ಮೊತ್ತವನ್ನು ಬರೆಯುವಾಗ ಚಿಹ್ನೆಯ ಸ್ಥಳವು ಧನಮಾನಕಗಳ ಮೇರೆಗೆ ವ್ಯತ್ಯಾಸಗೊಳ್ಳುತ್ತದೆ. ಅನೇಕ ಧನಮಾನಕಗಳು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಹಾಗೂ ಆಂಗ್ಲ-ಭಾಷಿಕ ವಿಶ್ವಗಳು, ಅದನ್ನು ಮೊತ್ತಕ್ಕೆ ಮುಂಚೆ ಬಳಸಿದರೆ (e.g., £50.00 ); ಉಳಿದ ಅನೇಕ ರಾಷ್ಟ್ರಗಳು ಅದನ್ನು ಮೊತ್ತದ ನಂತರ ಬಳಸುತ್ತವೆ (e.g., 50.00 S₣ ); ಹಾಗೂ, ಫ್ರೆಂಚರ ಫ್ರಾಂಕ್ ಹಾಗೂ ಪೋರ್ಚುಗೀಸರ ಎಸ್ಕುಡೊಗಳನ್ನು ಅವು ನಿಷೇಧಗೊಳ್ಳುವ ಮುಂಚೆ ದಶಮಾಂಶ ಸ್ಥಾನದಲ್ಲಿ ಬಳಸಲಾಗುತ್ತಿತ್ತು (i.e., 50$00 ಅಥವಾ 12₣34 ). ರಾಷ್ಟ್ರೀಯ ಮಾನಕವಿಲ್ಲದಿರುವ ರಾಷ್ಟ್ರಗಳಲ್ಲಿ, (€) ಚಿಹ್ನೆಯನ್ನು ಮೊತ್ತಕ್ಕೆ ಮುಂಚೆ ಬಳಸುವ ವ್ಯವಸ್ಥೆಯಾದ, ಮಾನಕೀಕರಿಸಿದ ಐರೋಪ್ಯ ಪ್ರಮುಖ ಸ್ಥಾನೀಕರಣವನ್ನು ಬಳಸಲಾಗುತ್ತದೆ. ಆದಾಗ್ಯೂ, ಅನೇಕ ಐರೋಪ್ಯ ವಲಯದ ರಾಷ್ಟ್ರಗಳು ಪರ್ಯಾಯ ವಿಧಾನಗಳನ್ನು ರೂಪಿಸಿಕೊಂಡಿವೆ ಅಥವಾ ನಿರ್ವಹಿಸಿಕೊಂಡಿವೆ.
ದಶಮಾಂಶ ವಿಯೋಜಕವೂ ಸಹಾ ರಾಷ್ಟ್ರದ ಸ್ಥಳೀಯ ಮಾನಕಗಳ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಅನೇಕ ವೇಳೆ ಯುನೈಟೆಡ್ ಕಿಂಗ್‌ಡಮ್ ಬೆಲೆಪಟ್ಟಿಗಳಲ್ಲಿ ಮಧ್ಯ ಬಿಂದುವನ್ನು ದಶಮಾಂಶ ಚಿಹ್ನೆಯಾಗಿ ಬಳಸುತ್ತದದಾದರೂ (e.g., '£5·52'), ಮುದ್ರಣದಲ್ಲಿ ಬಳಸುವುದಿಲ್ಲ. ಅಲ್ಪವಿರಾಮವನ್ನು (e.g., '5,00 €') ಇತರೆ ರಾಷ್ಟ್ರಗಳಲ್ಲಿ ಪ್ರಧಾನ ವಿಯೋಜಕವಾಗಿ ಬಳಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾನಕಗಳ ಬಗೆಗಿನ ಮಾಹಿತಿಗಾಗಿ ನೋಡಿ ದಶಮಾಂಶ ವಿಯೋಜಕ.
ವಿನ್ಯಾಸ
[ಬದಲಾಯಿಸಿ]ಹಳೆಯ ಧನಮಾನಕ ಚಿಹ್ನೆಗಳು ಅನೇಕ ವೇಳೆ ಹಿಂದಿನ ಧನಮಾನಕಗಳ ಮೇಲೆ ಆಧಾರಿತವಾಗಿ ಸಾವಕಾಶವಾಗಿ ವಿಕಾಸಗೊಂಡಿದ್ದವು. ಬಹುಶಃ ಎಂಟರ ವಿಭಾಗವನ್ನು 8 ಸಂಕೇತಿಸುವಂತೆ ಡಾಲರ್/ಪೆಸೊ ಚಿಹ್ನೆಯನ್ನು ಸ್ಪಾನಿಷ್ ಡಾಲರ್ ಮೂಲದ್ದೆಂದು ನಂಬಲಾಗಿದೆಯಾದರೂ, ಪೌಂಡ್/ಲಿರಾ ಚಿಹ್ನೆಯು, ತೂಕವನ್ನು ಲ್ಯಾಟಿನ್‌ನಲ್ಲಿ ಕರೆಯುವಂತೆ ಲಿಬ್ರಂ ಅನ್ನು ಸೂಚಿಸುವ Lನಿಂದ ವಿಕಾಸಗೊಂಡಿದೆ. ಹೊಸದಾಗಿ ಅವಿಷ್ಕರಿಸಲಾದ ಧನಮಾನಕಗಳು ಹಾಗೂ ನವೀನ ಚಿಹ್ನೆಗಳನ್ನು ಅಳವಡಿಸಿಕೊಳ್ಳುತ್ತಿರುವ ಧನಮಾನಕಗಳು ತಮ್ಮ ಪರಿಗ್ರಾಹಕರನ್ನು ಸೂಚಿಸುವಂತೆಯೇ ಇವೆ. ಯೂರೋ ಚಿಹ್ನೆಯು ಐರೋಪ್ಯ ನಾಗರೀಕತೆಯನ್ನು, ಯೂರೋಪ್ ಹಾಗೂ ಸ್ಥಿರತೆಯನ್ನು ಸಂಕೇತಿಸುತ್ತಿದ್ದರೆ, ಭಾರತವೂ ಕೂಡ ಭಾರತೀಯ ಸಂಸ್ಕೃತಿಯನ್ನು ಸೂಚಿಸುವಂತಹಾ ಚಿಹ್ನೆಯ ಹುಡುಕಾಟದಲ್ಲಿದೆ.[೧]
ಇದರಲ್ಲಿ ವ್ಯಾಪಾರಿ ಸಮುದಾಯದ ಕಾಣ್ಕೆಗಳು (ಯೂರೋ ಸ್ಥಿರತೆಯನ್ನು ಸೂಚಿಸಲು ಎರಡು ಗೆರೆಗಳನ್ನು ಹೊಂದಿದೆ) ಹಾಗೂ ಗಣಕದಲ್ಲಿ ಈ ಚಿಹ್ನೆಯನ್ನು ಹೇಗೆ ಚಿತ್ರಿಸಲಾಗುತ್ತದೆ ಎಂಬುದೂ ಸೇರಿದಂತೆ ಇನ್ನೂ ಅನೇಕ ವಿಚಾರಗಳಿರುತ್ತವೆ. ಹೊಸ ಚಿಹ್ನೆಯೊಂದನ್ನು ಬಳಸಬೇಕೆಂದರೆ, ಅದನ್ನು ಚಿತ್ರಿಸುವ ತಂತ್ರಾಂಶವು ಸುಧಾರಣೆಗೊಳ್ಳಬೇಕಾಗುತ್ತದೆ, ಕೀಲಿಮಣೆಗಳು ಬದಲಾಗಬೇಕಾಗುತ್ತದೆ ಅಥವಾ ಚಿಹ್ನೆಯನ್ನು ಮೂಡಿಸಲು ಶೀಘ್ರಕೀಲಿಗಳನ್ನು ಸೇರಿಸಬೇಕಾಗುತ್ತದೆ. ಯೂರೋ ಚಿಹ್ನೆಯನ್ನು ಹೇಗೆ ಮೂಡಿಸಬಹುದು ಎಂಬುದರ ಬಗ್ಗೆ ಪರಿಗಣಿಸದಿರುವ ಬಗ್ಗೆ EU ಒಕ್ಕೂಟವನ್ನು ಟೀಕಿಸಲಾಗುತ್ತಿದೆ[೧] (ಇದು ಸಾಧಾರಣ ಬಳಕೆಗಿಂತ ಬಹುಮಟ್ಟಿಗೆ ಅಗಲವಾಗಿರುವುದರಿಂದ, ಅದರ ಬಹಳಷ್ಟು ರೂಪಗಳು ಮೊಟಕುಗೊಳಿಸಿದ ಅಗಲದ ಆವೃತ್ತಿಗಳಾಗಿವೆ).
ಉದಾಹರಣೆಗಳು
[ಬದಲಾಯಿಸಿ]- ¤ ಸಾಮಾನ್ಯ ಧನಮಾನಕ ಚಿಹ್ನೆ (ಸರಿಯಾದ ಚಿಹ್ನೆ ಲಭ್ಯವಿಲ್ಲದಿದ್ದಾಗ ಬಳಸುವ ಚಿಹ್ನೆ)
- ฿ ಥಾಯ್ ರಾಷ್ಟ್ರದ ಬಾಹ್ತ್ ಚಿಹ್ನೆ
- Bs ವೆನೆಜ್ಯುವೆಲನ್ ಬೊಲಿವರ್ ಹಾಗೂ ಬೊಲಿವಿಯನ್ ಬೊಲಿವಿಯಾನೋ
- Br ಬೆಲಾರಸ್ನ ರೂಬಲ್ ಚಿಹ್ನೆ
- ₵ ಘಾನಾದ ಸೆಡಿ ಚಿಹ್ನೆ
- ¢ ಸೆಂಟ್ ಚಿಹ್ನೆ (ಡಾಲರ್ ಹಾಗೂ ಇತರ ಕೆಲ ಧನಮಾನಕ ಚಿಹ್ನೆಗಳ ಉಪವಿಭಾಗ)
- ₡ ಕಾಲನ್ ಚಿಹ್ನೆ (ಕೋಸ್ಟರಿಕಾ ಹಾಗೂ ಎಲ್ ಸಾಲ್ವಡಾರ್ಗಳಲ್ಲಿ ಬಳಕೆಯಲ್ಲಿದೆ)
- ₫ ವಿಯೆಟ್ನಾಮಿನ ಡಾಂಗ್ ಚಿಹ್ನೆ
- € ಯೂರೋ ಚಿಹ್ನೆ
- ƒ ನೆದರ್ಲೆಂಡ್ಸ್ ಆಂಟಿಲಿಯನ್ ಗಿಲ್ಡರ್ ಹಾಗೂ ಅರುಬನ್ ಫ್ಲಾರಿನ್ ಚಿಹ್ನೆ. ಹಿಂದೆ ಡಚ್ ಗಿಲ್ಡರ್ಗೆ ಬಳಸಲಾಗುತ್ತಿತ್ತು – ಇದನ್ನೂ ನೋಡಿ ಫ್ಲಾರಿನ್.
- Ft ಹಂಗೆರಿಯ ಫಾರಿಂಟ್ ಚಿಹ್ನೆ
- Rs. ಪಾಕಿಸ್ತಾನದ ರೂಪಾಯಿ ಚಿಹ್ನೆ
- Rs. ಭಾರತೀಯ ರೂಪಾಯಿ ಚಿಹ್ನೆ
- ₲ ಪೆರುಗ್ವೆಯ ಗುವರಾನಿ ಚಿಹ್ನೆ
- ₭ ಲಾವೊ ಕಿಪ್ ಚಿಹ್ನೆ
- kr ಡ್ಯಾನಿಷ್ ಕ್ರೋನ್, ನಾರ್ವೆಯನ್ ಕ್ರೋನ್, ಸ್ವೀಡಿಷ್ ಕ್ರೋನಾ, ಐಸ್ಲೆಂಡಿಕ್ ಕ್ರೋನಾ ಹಾಗೂ ಎಸ್ಟೋನಿಯನ್ ಕ್ರೂನ್ಗಳಿಗೆ ಸಂಕ್ಷಿಪ್ತ ರೂಪ
- £ ಪೌಂಡ್/ಲಿರಾ ಚಿಹ್ನೆ
- ₥ ಮಿಲ್ ಚಿಹ್ನೆ (ಸೆಂಟ್ನ ಸಾವಿರದ / ಒಂದನೇ-ಹತ್ತರಷ್ಟು ಭಾಗ)
- ₦ ನೈಜೀರಿಯನ್ ನೈರಾ ಚಿಹ್ನೆ
- ₱ ಫಿಲಿಪ್ಪೀನ್ ಪೆಸೊ ಚಿಹ್ನೆ
- P ಬೋಟ್ಸ್ವಾನಾ ಪುಲಾ ಚಿಹ್ನೆ
- Q ಗ್ವಾಟೆಮಾಲನ್ ಕ್ವೆಟ್ಜಾಲ್ ಚಿಹ್ನೆ
- R ದಕ್ಷಿಣ ಆಫ್ರಿಕಾದ ರಾಂಡ್ ಚಿಹ್ನೆ
- Rp ಇಂಡೋನೇಷ್ಯನ್ ರುಪಯ್ಯ ಚಿಹ್ನೆ
- ৲ ರುಪೀ ಮಾರ್ಕ್ (ಬಂಗಾಳ)
- ৳ ರುಪೀ ಚಿಹ್ನೆ (ಬಂಗಾಳ)
- R$ ಬ್ರೆಜಿಲಿಯನ್ ರಿಯಲ್ ಚಿಹ್ನೆ
- [[S/.]] ಪೆರುವಿನ ಸಾಲ್ ಚಿಹ್ನೆ
- $ ಡಾಲರ್/ಪೆಸೊ ಚಿಹ್ನೆ (ಡಾಲರ್ (ಅಥವಾ ಅದೇ ರೀತಿಯದ್ದನ್ನು) ಬಳಸುವ ರಾಷ್ಟ್ರಗಳು ಬಳಸುತ್ತವೆ: US, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್, ನಿಕರಾಗುವಾ, ಹಾಂಗ್ಕಾಂಗ್, ಸಿಂಗಪೂರ್ ಹಾಗೂ ಟೊಂಗ ಅಥವಾ ಪೆಸೊ: ಅರ್ಜೆಂಟಿನಾ, ಕ್ಯೂಬಾ ಹಾಗೂ ಮೆಕ್ಸಿಕೊ. ಕೆಲ ರಾಷ್ಟ್ರಗಳಲ್ಲಿ, ಇದನ್ನು ಲಂಬ ರೇಖೆಗಳ ಮೂಲಕ ಚಿತ್ರಿಸಲಾಗುತ್ತದೆ , ಇದನ್ನು ಸಿಫ್ರಾವೊ ಎಂದು ಕರೆಯಲಾಗುತ್ತದೆ. ಅವುಗಳೆಂದರೆ ಬ್ರೆಜಿಲ್, ಕೇಪ್ ವರ್ಡೆ ಹಾಗೂ ಚಿಲಿ. C$ಯಂತೆ ಧನಮಾನಕಗಳ ನಡುವೆ ಸ್ಪಷ್ಟತೆಗಾಗಿ ಆಂಗ್ಲ ಅಕ್ಷರವನ್ನು ಪೂರ್ವಪ್ರತ್ಯಯವಾಗಿ ಸಹಾ ಹೊಂದಿರುತ್ತದೆ)
- ₸ ಕಝಾಕಸ್ತಾನಿ ಟೆಂಗೆ ಚಿಹ್ನೆ
- ден ಮೆಸಡೊನಿಯನ್ ದಿನಾರ್
- ₮ ಮಂಗೋಲಿಯನ್ ಟೊಗ್ರಾಗ್ ಚಿಹ್ನೆ
- ₩ ಕೊರಿಯನ್ ವಾನ್ ಚಿಹ್ನೆ (ದಕ್ಷಿಣ ಹಾಗೂ ಉತ್ತರ ಕೊರಿಯಾಗಳೆರಡರಲ್ಲೂ ಬಳಸಲಾಗುತ್ತದೆ.)
- ¥ ಚೀನೀ ರೆನ್ಮಿನ್ಬಿ ಯುವಾನ್/ಜಪಾನೀ ಯೆನ್ ಚಿಹ್ನೆ
- zł ಪೋಲಿಷ್ ಝ್ಲಾಟಿ ಚಿಹ್ನೆ
- ₴ ಉಕ್ರೇನಿಯನ್ ಹ್ರಿವ್ನಿಯಾ ಚಿಹ್ನೆ
- ₪ ಇಸ್ರೇಲಿ ನವೀನ ಷೆಕೆಲ್ ಚಿಹ್ನೆ
- ៛ ಕಂಬೋಡಿಯನ್ ರಿಯೆಲ್ ಚಿಹ್ನೆ
- ریال ಇರಾನಿಯನ್ ರಿಯಾಲ್ ಚಿಹ್ನೆ
- руб ರಷ್ಯನ್ ರೂಬಲ್
- Kč ಝೆಕ್ ಕೊರುನಾ ಚಿಹ್ನೆ
- S₣ ಸ್ವಿಸ್ ಫ್ರಾಂಕ್ ಚಿಹ್ನೆ
- Д ಸರ್ಬಿಯನ್ ದಿನಾರ್ ಚಿಹ್ನೆ
- RM ಮಲೇಷಿಯಾದ ರಿಂಗ್ಗಿಟ್ ಚಿಹ್ನೆ
- ಅರ್ಮೇನಿಯನ್ ಡ್ರಾಮ್ ಚಿಹ್ನೆ
ಹಿಂದೆ ಬಳಸುತ್ತಿದ್ದ ಧನಮಾನಕ ಚಿಹ್ನೆಗಳು
[ಬದಲಾಯಿಸಿ]- ₳ ಅರ್ಜೆಂಟೀನಾದ ಆಸ್ಟ್ರಲ್ ಚಿಹ್ನೆ
- Cr$ ಬ್ರೆಜಿಲಿಯನ್ ಕ್ರುಜೇರೋ ಚಿಹ್ನೆ
- ₰ 1945ಕ್ಕೂ-ಹಿಂದಿನ ಜರ್ಮನ್ ರೇಷ್ಸ್ಮಾರ್ಕ್ ಫೆನ್ನಿಗ್ ಚಿಹ್ನೆ
- ₯ ಗ್ರೀಕ್ ಡ್ರಾಚ್ಮಾ ಚಿಹ್ನೆ
- ₠ ECU ಚಿಹ್ನೆ (ವ್ಯಾಪಕವಾಗಿ ಬಳಕೆಯಲ್ಲಿಲ್ಲ, ಹಾಗೂ; ಈಗ ಯೂರೋನ ಬಳಕೆಯಿಂದಾಗಿ ಇತಿಹಾಸಕ್ಕೆ ಸರಿದಿದೆ)
- ₣ ಫ್ರೆಂಚ್ ಫ್ರಾಂಕ್ ಚಿಹ್ನೆ (ಫ್ರಾನ್ಸ್ನಲ್ಲಿ ಹಿಂದೆ ಬಳಕೆಯಲ್ಲಿತ್ತು [ಬಹಳಷ್ಟು ಮಂದಿ "FF" ಎಂದೇ ಬರೆಯುತ್ತಿದ್ದರು], ಹಾಗೂ ಪ್ರಸ್ತುತ CFA ಹಾಗೂ CFP ಫ್ರಾಂಕ್ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ)
- ₤ ಲಿರಾ ಚಿಹ್ನೆ (ಇಟಲಿ, ಸ್ಯಾನ್ ಮರಿನೊ ಹಾಗೂ ವ್ಯಾಟಿಕನ್ ಸಿಟಿಗಳಲ್ಲಿ ಹಿಂದೆ ಬಳಕೆಯಲ್ಲಿತ್ತು, ಹಾಗೂ ಕೆಲಕಾಲ ಮಾಲ್ಟಾದಲ್ಲಿ ಬಳಕೆಯಲ್ಲಿತ್ತು; ಇದನ್ನು GBPಯ ಬದಲಿಗೆ ಬಳಸಬಹುದೆಂದು ಅಥವಾ ಅದೇ ಇದೆಂದು ಗೊಂದಲ ಹುಟ್ಟಿಸಬಹುದಾಗಿದೆ)
- Lm ಮಾಲ್ಟಾ ಲಿರಾ ಚಿಹ್ನೆ
- Kčs ಝೆಕೊಸ್ಲಾವಾಕ್ ಕೊರುನಾ ಚಿಹ್ನೆ
- Sk ಸ್ಲೊವಾಕ್ ಕೊರುನಾ
- ℳ 1945ಕ್ಕೂ-ಹಿಂದಿನ ಜರ್ಮನ್ ರೀಚ್ಸ್ಮಾರ್ಕ್ ಚಿಹ್ನೆ
- ₧ ಸ್ಪ್ಯಾನಿಷ್ ಪೆಸೆಟಾ ಚಿಹ್ನೆ (ಸ್ಪೇನ್ ಹಾಗೂ ಅಂಡೊರ್ರಾಗಳಲ್ಲಿ ಹಿಂದೆ ಬಳಸಲಾಗುತ್ತಿತ್ತು. ಬಹಳಷ್ಟು ಮಂದಿ ಇದನ್ನು "pts" ಎಂದು ಬರೆಯಲು ಇಚ್ಛೆಪಡುತ್ತಾರೆ.)
- ƒ ಡಚ್ ಗಲ್ಡೆನ್ ಚಿಹ್ನೆ, ನೆದರ್ಲೆಂಡ್ಸ್ ಆಂಟಿಲಿಸ್ ಹಾಗೂ ಅರುಬಾದಲ್ಲಿ ಪ್ರಸ್ತುತ ಬಳಕೆಯಲ್ಲಿದೆ
- ₶ ಲಿವ್ರೆ ಟೂರ್ನಾಯಿಸ್ ಚಿಹ್ನೆ, ಮಧ್ಯಯುಗೀಯ ಫ್ರಾನ್ಸ್ನಲ್ಲಿ ಬಳಕೆಯಲ್ಲಿತ್ತು.
This article is missing information about Origins of currency signs and the common line-through-letter appearance.(August 2008) |
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ವೆಸ್ಟ್‌ಕಾಟ್, K. (2009) ಭಾರತವು ರೂಪಾಯಿಗೆ ಪ್ರತಿಷ್ಠೆಯ ಸಂಕೇತವನ್ನು ಕೋರುತ್ತಿದೆ, BBC 10 ಮಾರ್ಚ್ 2009, ಭೇಟಿ ನೀಡಿದ್ದು 1 ಸೆಪ್ಟೆಂಬರ್ 2009