ವಿಷಯಕ್ಕೆ ಹೋಗು

ನನ್ನಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನಯ

[ಬದಲಾಯಿಸಿ]
ನನ್ನಯ
ನನ್ನಯ
ಜನನ೧೧ನೆ ಶತಮಾನ
ರಾಜಮಂಡ್ರಿ
ವೃತ್ತಿಸಾಹಿತಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವಿ

ನನ್ನಯ (తెలుగు:నన్నయ) 11ನೇ ಶತಮಾನದ ತೆಲುಗು ಮಹಾನ್ ಕವಿಗಳಲ್ಲೊಬ್ಬರು. ಅವರು ಟಿಕ್ಕಣ ಮತ್ತು ಎರ್ರನ ಎಂಬ ಇತರ ಎರಡು ಪ್ರಸಿದ್ಧ ಕವಿಗಳ ಸಮಕಾಲೀನರು. ಈ ಮೂರು ಕವಿಗಳು ಒಟ್ಟಿಗೆ ಕವಿತ್ರಯ ಎಂದು ಪ್ರಸಿದ್ದರಾಗಿದ್ದಾರೆ. ಅವರ ಪೂರ್ಣ ಹೆಸರು ನನ್ನಯ ಭಟ್ಟಾಚಾರ್ಯ, ಇವರನ್ನು ತೆಲುಗಿನ ಆದಿಕವಿ ಎಂದು ಕರೆಯಲಾಗುತ್ತದೆ. ನನ್ನಯ ತೆಲುಗು ಸಾಹಿತ್ಯ ಇತಿಹಾಸದ ಹೆಗ್ಗುರುತು, ತೆಲುಗಿನ ಮೊದಲ ಸಾಹಿತಿ ಎಂದು ಪರಿಗಣಿಸಲಾಗುತ್ತದೆ. ಕ್ರಿ.ಶ.೧೦೩೦ರಲ್ಲಿ ಆಂಧ್ರ ಮಹಾಭಾರತ ಬರೆದರು. ಮುಂದುವರಿದ ಮತ್ತು ಸುವ್ಯವಸ್ಥಿತ ಭಾಷೆ ಬಳಸಿದ್ದ ಆಂಧ್ರ ಮಹಾಭಾರತ ತೆಲುಗು ಸಾಹಿತ್ಯದ ಆರಂಭವಾಗಿರಲಿಲ್ಲ ಎಂದು ಸೂಚಿಸುತ್ತದೆ. ದುರದೃಷ್ಟವಶಾತ್, ನನ್ನಯರವರ ಮುಂಚೆ ಇದ್ದ ಯಾವುದೇ ತೆಲುಗು ಸಾಹಿತ್ಯವು ಲಭ್ಯವಿಲ್ಲ. ಇವರು ಆಂಧ್ರ ಮಹಾಭಾರತವನ್ನು ಚಂಪೂ ಶೈಲಿಯಲ್ಲಿ ರಚಿಸಿದ್ದಾರೆ. ನನ್ನಯನವರು ಚಾಲುಕ್ಯರ ರಾಜ ರಾಜರಾಜ ನರೇಂದ್ರರ ವಿನಂತಿಯಂತೆ ತೆಲುಗಿಗೆ ಸಂಸ್ಕೃತದ ಮಹಾಭಾರತವನ್ನು ಭಾಷಾಂತರಿಸಲು ಪ್ರಾರಂಭಿಸಿದರು. ನನ್ನಯನ ಸಮಯದಲ್ಲಿ ಎಲ್ಲಾ ತೆಲುಗು ಸಾಹಿತ್ಯ, ವ್ಯಾಕರಣ, ಶಬ್ದಭಂಡಾರವನ್ನು ವಿಶ್ಲೇಷಿಸಲಾಯಿತು. ಸಂಸ್ಕೃತ ಭಾಷೆಯನ್ನು, ಹಾಗೂ ಕನ್ನಡ ಸಾಹಿತ್ಯ ಮತ್ತು ಶಬ್ದಕೋಶವನ್ನು ಬಿಡುಗಡೆ ಮಾಡಿದರು. ಆದ್ದರಿಂದ ಒಂದು ವಿಶಿಷ್ಟ ಸಾಹಿತ್ಯ, ವ್ಯಾಕರಣವನ್ನು ಅವರು ಅಭಿವೃದ್ಧಿಪಡಿಸಿದರು.

ನನ್ನಯನ ಮಹಾಭಾರತದಲ್ಲಿ ಜಾನಪದ-ಸಾಹಿತ್ಯ ಬಳಸಲ್ಪಟ್ಟಿದೆ. ಅವರು ತೆಲುಗು ಸಾಹಿತ್ಯದಲ್ಲಿ ಸಂಸ್ಕೃತ ಸಂಪ್ರದಾಯ ಅಂದರೆ ಮಾರ್ಜ್ಜ ತಂದರು. ಆದ್ದರಿಂದ, ಅವರ ಬರಹಗಳಲ್ಲಿ ತೆಲುಗು ಪದಗಳಿಗಿಂತ ಹೆಚ್ಚು ಸಂಸ್ಕೃತ ಪದಗಳು ಒಳಗೊಂಡಿದ್ದವು. ನನ್ನಯನ ಮಹಾಭಾರತವು ಮಹರ್ಷಿಯ ಮಹಾಕಾವ್ಯದ ಕೇವಲ ಅನುವಾದ ಅಲ್ಲ; ಅವರ ಸಂಯೋಜನೆಯಲ್ಲಿ ಸ್ವಂತಿಕೆಯ ಬಹಿರಂಗ. ಆದ್ದರಿಂದ, ಇದು ತೆಲುಗು ಭಾಷೆಯ ಶ್ರೇಷ್ಠ ಸಾಹಿತ್ಯ ತುಣುಕುಗಳಲ್ಲ್ಲಿ ಒಂದಾಯಿತು.

ತೆಲುಗಿನಲ್ಲಿ ನನ್ನಯ ಬರೆದ ಮಹಾಭಾರತ ಪೂರ್ಣಗೊಂಡಿಲ್ಲ. ಅವರು ಆದಿ ಪರ್ವ, ಸಭಾ ಪರ್ವ ಮತ್ತು ವನ ಪರ್ವ‍ವೆಂಬ ಮೂರು ಭಾಗವಾಗಿ ಬರೆದರು. ಅನೇಕ ಕಾರಣಗಳಿಗಾಗಿ ಈ ಅಪೂರ್ಣ ಕೆಲಸ ನೀಡಲಾಯಿತು. ನಂತರ 13 ನೇ ಶತಮಾನದಲ್ಲಿ ತೆಲುಗು ಮಹಾಭಾರತದ ಈ ಅಪೂರ್ಣ ಆವೃತ್ತಿಯನ್ನು ತಿಕ್ಕಣ್ಣ ಮತ್ತು ಎರ್ರನ್ನ ಎಂಬ ಇನ್ನೆರಡು ಕವಿಗಳು ಪೂರ್ಣಗೊಳಿಸಿದರು. ಆದ್ದರಿಂದ, ಅದನ್ನು ಪೂರ್ಣಗೊಳಿಸಲು ಒಟ್ಟು 3೦೦ಕ್ಕೂ ಹೆಚ್ಚು ವರ್ಷ ಬೇಕಾಯಿತು.

ನನ್ನಯ ಸಂಸ್ಕೃತ ಮಹಾಭಾರತದ ಆದಿ, ಸಭಾ ಮತ್ತು ಅರಣ್ಯ ಅಧ್ಯಾಯಗಳ ಬಗ್ಗೆ 142 ಪದ್ಯಗಳನ್ನು ಅನುವಾದ ಮಾಡಿದ್ದಾರೆ. ಅವರು ಮೂಲ ಆವೃತ್ತಿಗೆ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಹಲವಾರು ಅಂಶಗಳನ್ನು ಸೇರ್ಪಡಿಸಿದ್ದಾರೆ.

ಇದಲ್ಲದೆ, ನನ್ನಯ ಭಟ್ಟಾಚಾರ್ಯ ತೆಲುಗು ವ್ಯಾಕರಣವನ್ನು ಬರೆದ ಮೊದಲ ಕವಿ. ಅವರು 'ಆಂಧ್ರ ಶಬ್ಧ ಚಿಂತಾಮಣಿ'ಯನ್ನು ಸಂಸ್ಕೃತದಲ್ಲಿ ಬರೆದ್ದಿದರು. ಅವರು ಹನ್ನೊಂದನೇಯ ಶತಮಾನದ ಮೊದಲ ತೆಲುಗು ಕವಿ ಹಾಗು ತೆಲುಗು ಅನುವಾದಕರಾಗಿ ಗುರುತಿಸಿಕೊಂಡಿದ್ದಾರೆ. ನನ್ನಯರವರು ಬರೆದಿರುವ ಆಂಧ್ರ ಶಬ್ಧ ಚಿಂತಾಮಣಿ ಪುಸ್ತಕಕ್ಕೂ ಮುಂಚೆ ಯಾವುದೇ ತೆಲುಗು ವ್ಯಾಕರಣ ಪುಸ್ತಕ ಪ್ರಕಟವಾಗಿಲ್ಲ.

ರಾಜಕೀಯ ಕಾರಣಕ್ಕಾಗಿ

[ಬದಲಾಯಿಸಿ]

ವಾತಾಪಿ ಆಡಳಿತಗಾರನಾದ (ಕರ್ನಾಟಕ ಬಾದಾಮಿ) ಚಾಲುಕ್ಯ ರಾಜವಂಶದ ಪುಲಕೇಸಿನ್ II (609-642), ವೆಂಗಿ ಪ್ರದೇಶವನ್ನು (ಆಂಧ್ರ) ವಶಪಡಿಸಿಕೊಂಡ. ವೆಂಗಿ ಪ್ರದೇಶಕ್ಕೆ ವೈಸ್ರಾಯ್‍ಯಾಗಿ ತನ್ನ ಸಹೋದರನಾದ ವಿಷ್ಣುವರ್ಧನನನ್ನು ಕಳುಹಿಸಿದ. ನಂತರ 634 ರಲ್ಲಿ, ವಿಷ್ಣುವರ್ಧನ ಸ್ವತಃ ಸ್ವತಂತ್ರ ಘೋಷಿಸಿದ ಮತ್ತು ಐದು ಶತಮಾನಗಳ ಕಾಲ ಆಂಧ್ರಪ್ರದೇಶದಲ್ಲಿ ಪೂರ್ವ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಪೂರ್ವ ಚಾಲುಕ್ಯ ರಾಜವಂಶದ ರಾಜರಾಜ ನರೇಂದ್ರನು ಕ್ರಿ.ಶ.1022 ರಲ್ಲಿ ಸಿಂಹಾಸನವನ್ನು ಏರುತ್ತಾನೆ. ರಾಜರಾಜ ನರೇಂದ್ರ, ಚೋಳನ ಸಮಯದಲ್ಲಿದ್ದ ವಿಝ್ ಕನ್ನಡ ಭಾಷೆ, ಎರಡು ಸಾಹಿತ್ಯ ಕೃತಿಗಳನ್ನ್ನು ಹಾಗೂ ವಿಕ್ರಮಾರ್ಜುನ ವಿಜಯ-ಈಗಾಗಲೇ ಕರ್ನಾಟಕದಲ್ಲಿದ್ದ ಸಂಸ್ಕೃತ ಮಹಾಭಾರತದ ಕಥೆಯನ್ನು ಜನಪ್ರಿಯಗೊಳಿಸಿದ. ಮಹಾಭಾರತದ ಕನ್ನಡ ಅನುವಾದಗಳು ಏಳನೇಯ ಮತ್ತು ಎಂಟನೇಯ ಶತಮಾನಗಳಲ್ಲೇ ಲಭ್ಯವಿದ್ದವು. ಆದರೆ, ಪುರಾಣ ತೆಲುಗಿನಲ್ಲಿ ಸಿಗುತ್ತಿರಲಿಲ್ಲ. ಬ್ರಾಹ್ಮಣರು ದೇವಾಲಯಗಳು ಮತ್ತು ನ್ಯಾಯಾಲಯಗಳಲ್ಲಿ ಸಂಸ್ಕೃತ ಮಹಾಭಾರತದ ಪ್ರವಚನೆಯನ್ನು ನೀಡುತ್ತಿದ್ದರು.

ಪೂರ್ವ ಚಾಲುಕ್ಯ ರಾಜವಂಶದವರು ಜೈನ ಧರ್ಮ ಮತ್ತು ಶೈವ ಧರ್ಮವನ್ನು (ವೀರ ಶೈವ) ಬೆಂಬಲಿಸಿದರು. ರಾಜರಾಜ ನರೇಂದ್ರ ಶೈವ ಧರ್ಮದವರಾಗಿದ್ದರು. ಅವರು ಬ್ರಾಹ್ಮಣರನ್ನು, ಸಂಸ್ಕೃತ ಭಾಷೆ ಮತ್ತು ಧರ್ಮವನ್ನು ಗೌರವಿಸುತ್ತಿದ್ದರು. ಒಂದು ಸಾವಿರ ವರ್ಷಗಳ ಮುಂಚಿತವಾಗಿ, ಬೌದ್ಧಧರ್ಮ ಮತ್ತು ಜೈನ್ ಧರ್ಮ ತಮ್ಮ ಧರ್ಮೋಪದೇಶದ ಮತ್ತು ಬೋಧನೆಗಳ ಮೂಲಕ ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಅತ್ಯಂತ ಜನಪ್ರಿಯವಾಯಿತು. ಆದ್ದರಿಂದ ರಾಜರಾಜ ನರೇಂದ್ರ ತನ್ನ ಗುರುಗಳೂ, ಸಲಹೆಗಾರರೂ ಮತ್ತು ಆಸ್ಥಾನ ಕವಿಗಳಾದ ನನ್ನಯ ಭಟ್ಟಾರಕರಿಗೆ ಸಂಸ್ಕೃತ ಮಹಾಭಾರತವನ್ನು ತೆಲುಗಿಗೆ ಭಾಷಾಂತರಿಸುವಂತೆ ವಿನಂತಿಸಿದರು.

ನನ್ನಯ ಭಟ್ಟಾರಕ ಗಂಭೀರವಾಗಿ ಸವಾಲನ್ನು ತೆಗೆದುಕೊಂಡಿದರು. ಅವರು, ಆ ಸಮಯದಲ್ಲಿ ಬಳಕೆಯಲ್ಲಿ ಇದ್ದ ಎಲ್ಲಾ ತೆಲುಗು ಶಬ್ದಕೋಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಸಂಸ್ಕೃತ ಶಬ್ದಸಂಪತ್ತು ಪರಿಚಯಿಸಿದರು, ಮತ್ತು ಈಗಾಗಲೇ ಚೆನ್ನಾಗಿ ಅಭಿವೃದ್ಧಿ ಹೊಂದ್ದಿದ್ದ ಕನ್ನಡ ಸಾಹಿತ್ಯ ಗುಣಲಕ್ಷಣಗಳನ್ನು ತಿಳಿದುಕೊಂಡರು. ಹೀಗಾಗಿ ಅವರು ಒಂದು ವಿಶಿಷ್ಟ ಸಾಹಿತ್ಯಿಕ ಶೈಲಿಯ ವ್ಯಾಕರಣವನ್ನು ಅಭಿವೃದ್ಧಿಪಡಿಸಿದರು. ನನ್ನಯ ಸಂಸ್ಕೃತ ಮಹಾಭಾರತದ ಆದಿ, ಸಭಾ ಮತ್ತು ಅರಣ್ಯ ಅಧ್ಯಾಯಗಳ ಬಗ್ಗೆ 142 ಪದ್ಯಗಳನ್ನು ಅನುವಾದ ಮಾಡಿದ್ದಾರೆ. ಆದರೆ, ಅವರು ಮೂಲ ಉಳಿದುಕೊಳ್ಳುವಂತೆ ಮಾಡಲಿಲ್ಲ. ಅವರು ತಮ್ಮದೇ ಆದ ಶೈಲಿಯಲ್ಲಿ ಆಂಧ್ರ ಮಹಾಭಾರತವನ್ನು ರಚಿಸಲಾರಂಭಿಸಿದರು. ಅವರು ತುಂಬಾ ಬದಲಾವಣೆಯನ್ನು ತಂದರು. ಅವರ ಭಾಷೆ ತುಂಬಾ ಸಂಸ್ಕೃತೀಕರಣವಾಗಿತ್ತು.

ನನ್ನಯ ಪ್ರಾರಂಭಿಸಿದ ಕೆಲಸವನ್ನು ಟಿಕ್ಕಣ ಮತ್ತು ಎರ್ರನ ಪೂರ್ಣಗೊಳಿಸಿದರು. ಇದ್ದಕ್ಕೆ ಸುಮಾರು ೩೦೦ ವರ್ಷ ಬೇಕಾಯಿತು. 3 ನೇ ಅಧ್ಯಾಯದ (ಅರಣ್ಯಾ ಪರ್ವಮ್) ಕೆಲಸಮಾಡುವಾಗ ನನ್ನಯ ಸತ್ತು ಹೋದರು. ಟಿಕ್ಕಣ ತಮ್ಮ ಕೆಲಸವನ್ನು ನಾಲ್ಕನೇ ಅಧ್ಯಾಯದಿಂದ ಪ್ರಾರಂಭಿಸಿದರು. ಯೆರ್ರಪ್ರಗಡರವರು ನನ್ನಯರವರ ಮೂರನೇ ಅಧ್ಯಾಯವನ್ನು ಪೂರ್ಣಗೊಳಿಸಿದರು. ಈ ಅವಧಿಯನ್ನು 'ಅನುವಾದಗಳ ಅವಧಿ' ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಹಲವಾರು ಸಂಸ್ಕೃತ ಗ್ರಂಥಗಳನ್ನು ತೆಲುಗಿಗೆ ಭಾಷಾಂತರಿಸಲಾಗಿದೆ.[]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ತೆಲುಗು ಕವಿಗಳು". Archived from the original on 2015-08-20. Retrieved 2015-11-04.
"https://kn.wikipedia.org/w/index.php?title=ನನ್ನಯ&oldid=1161097" ಇಂದ ಪಡೆಯಲ್ಪಟ್ಟಿದೆ