ನದಿ ರೀವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

Sterna aurantia
River tern (Sterna aurantia).jpg
Chambal River, India
Conservation status
Scientific classification e
Unrecognized taxon (fix): Sterna
ಪ್ರಜಾತಿ:
S. aurantia
Binomial name
Sterna aurantia
(J.E. Gray, 1831)
ನದಿ ರೀವ
Chambal River, India
Scientific classification edit
Kingdom: Animalia
Phylum: Chordata
Class: Aves
Order: Charadriiformes
Family: Laridae
Genus: Sterna
Species:
S. aurantia
Binomial name
Sterna aurantia

(J.E. Gray, 1831)
ಅವಯಸ್ಕ
ವಯಸ್ಕ ಮತ್ತು ಅವಯಸ್ಕ

ಭಾರತೀಯ ನದಿ ರೀವ ಅಥವಾ ರಿವರ್‌ ಟರ್ನ್ (Sterna aurantia) ಲಾರಿಡೆ ಕುಟುಂಬಕ್ಕೆ ಸೇರಿದ ಮೀನನ್ನೇ ಆಹಾರವನ್ನಾಗಿ ಅವಲಂಬಿಸಿದ ನದಿವಾಸಿ ಸ್ಥಳೀಯ ಹಕ್ಕಿ . ಇದು ಇರಾನ್ ಪೂರ್ವದಿಂದ ಭಾರತೀಯ ಉಪಖಂಡ ವನ್ನೂ ಒಳಗೊಂಡಂತೆ ಮ್ಯಾನ್ಮಾರ್‌ನಿಂದ ಥೈಲ್ಯಾಂಡ್‌ ವರೆಗೂ ಪ್ರಸಿರಿಸಿದೆ. ಅಷ್ಟೇನೂ ಸಾಮಾನ್ಯವಾಗಿ ಕಾಣಸಿಗದ ಈ ಹಕ್ಕಿ,  ಕೆರೆ-ಕಟ್ಟೆ-ಸರೋವರ -ನದಿಯಂತಹ ಸಿಹಿನೀರನ ಪ್ರದೇಶಗಳಲ್ಲಿ, ಅಪರೂಪಕ್ಕೆ ಉಬ್ಬರವಿಳಿತವಿರುವ ಸಮುದ್ರದ ತೊರೆಗಳಲ್ಲಿಯೂ ಕಾಣಸಿಗುತ್ತವೆ.

ನಿರ್ಜನ ನದಿಯ ಮರಳುದಂಡೆಯಲ್ಲಿ ಮಾರ್ಚ್‌ -ಮೇ ತಿಂಗಳ ಅವಧಿಯಲ್ಲಿ ವಂಶಾಭಿವೃದ್ಧಿ ನಡೆಸುತ್ತವೆ. ಮರಳು ಅಥವಾ ಬಂಡೆಗಳ ಮೇಲೆ ನೇರವಾಗಿ, ಮೂರು ಹಸುರು-ಬೂದು ಬಣ್ಣದಿಂದ ಹಿಡಿದು ಮಾಸಲು ಬಣ್ಣವಿರತುವ, ಕಂದು ಗೆರೆ ಅಥವಾ ಮಚ್ಛೆಯಿಂದಾವೃತ್ತ ಮೊಟ್ಟೆಗಳನ್ನಿಡುತ್ತವೆ.

ನದಿ ರೀವಗಳು ವಂಶಾಭಿವೃದ್ಧಿಗಾಗಿ ಭದ್ರಾ ಅಣೆಕಟ್ಟಿನ ದ್ವೀಪದಲ್ಲಿ ಗುಂಪುಗೂಡಿರುವುದು

ನದಿ ರೀವ ಮಧ್ಯಮ ಗಾತ್ರದ ಹಕ್ಕಿ. 38-43 ಸೆಂ.ಮೀ ಉದ್ದವಿದ್ದು, ಮೇಲ್ಭಾಗ ಗಾಢ ಬೂದುಬಣ್ಣ, ಬಿಳಿಯ ಕೆಳಭಾಗ, ಬಳಕುವ ಸೀಳು ಬಾಲ, ಉದ್ದನೆಯ ಹಾರುರೆಕ್ಕೆಯ ತುದಿಗಳು ಚೂಪಾಗಿರುತ್ತವೆ. ಹಳದಿ ಕೊಕ್ಕು, ಕೆಂಪು ಕಾಲು; ಸಂತಾನ ಸಮಯದಲ್ಲಿ ತಲೆ ಕಪ್ಪು.   ಚಳಿಗಾಲದಲ್ಲಿ ತಲೆ ಬೂದುಬಿಳಿಯಾಗಿದ್ದು, ಚುಕ್ಕೆ ಗೆರೆಗಳಿಂದ ಆವೃತವಾಗಿರುತ್ತದೆ. ಈ ಸಮಯದಲ್ಲಿ ಕಣ್ಣಿನ ಮೇಲೆ ಕಪ್ಪು ಬಣ್ಣದ ಪಟ್ಟಿ ಇದ್ದು, ಕೊಕ್ಕಿನ ತುದಿ ತೆಳು ಬೂದುಬಣ್ಣದ್ದಾಗಿರುತ್ತದೆ.

ಹಾರಾಟದಲ್ಲಿ ಮಗ್ನ ನದಿ ರೀವ
Photograph of a river tern catching a fish on the wing
ಹಾರಾಡುತ್ತಾ ಮೀನಿನ ಬೇಟೆಯಲ್ಲಿ ನಿರತ ನದಿ ರೀವ

ಗಂಡು ಹೆಣ್ಣುಗಳನ್ನು ಕೇವಲ ನೋಟದಿಂದ ಗುರುತಿಸಲು ಸಾಧ್ಯವಿಲ್ಲ, ಒಂದೇ ರೀತಿ ಕಾಣುತ್ತವೆ. ಆದರೆ ಅವಯಸ್ಕ ಹಕ್ಕಿಗಳು ಕಂದು ಬಣ್ಣದ ತಲೆ, ಬೂದು-ಕಂದು ಮೇಲ್ಭಾಗ, ಬೂದು ಎದೆ, ಬಿಳಿ ಕೆಳಭಾಗ, ಮತ್ತು ಕಪ್ಪು ತುದಿಯಿರುವ ಹಳದಿ ಬಣ್ಣದ ಕೊಕ್ಕನ್ನು ಹೊಂದಿರುತ್ತವೆ.

ಇತರ ಸ್ಟರ್ನಾ (Sterna) ರೀವಗಳಂತೆ, ನದಿಗಳು, ಸರೋವರಗಳು ಮತ್ತು ಕೆರೆಕಟ್ಟೆಗಳಲ್ಲಿ ಮೀನು, ಕಠಿಣಚರ್ಮಿ, ಗೊದಮೊಟ್ಟೆ ಮತ್ತು ಜಲವಾಸಿ ಕೀಟಗಳನ್ನು ಧುಮುಕಿ ಹಿಡಿದು ಆಹಾರವನ್ನಾಗಿ ಸೇವಿಸುತ್ತವೆ. ಆವಾಸಸ್ಥಾನದ ಮಾಲಿನ್ಯದಿಂದಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ BirdLife International (2020). "Sterna aurantia". IUCN Red List of Threatened Species. 2020: e.T22694537A180171504. doi:10.2305/IUCN.UK.2020-3.RLTS.T22694537A180171504.en. Retrieved 19 November 2021. ಉಲ್ಲೇಖ ದೋಷ: Invalid <ref> tag; name "iucn status 19 November 2021" defined multiple times with different content
  • Birds of India by Grimmett, Inskipp and Inskipp'Seabirds: An Identification Guide by Harrison, Peter ISBN 0-7470-1410-8

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Taxonbar

"https://kn.wikipedia.org/w/index.php?title=ನದಿ_ರೀವ&oldid=1171898" ಇಂದ ಪಡೆಯಲ್ಪಟ್ಟಿದೆ